ಅಧಿಕ ಬೆಲೆ ಇರುವ ವಿದೇಶೀ ಹಣ್ಣು – ರಾಂಬುಟಾನ್.

by | Jun 8, 2020 | Fruit Crop (ಹಣ್ಣಿನ ಬೆಳೆ), Rambutan (ರಾಂಬುಟಾನ್) | 0 comments

ಕೆಲವು ವಿದೇಶೀ ಹಣ್ಣಿನ ಬೆಳೆಗಳು ಬ್ರಿಟೀಷರ ಕಾಲದಲ್ಲಿ  (ಪೋರ್ಚುಗೀಸರಿಂದ) ಕೇರಳದ ಪಟ್ಟಣಂತಿಟ್ಟ ಪ್ರದೇಶದಲ್ಲಿ  ಪರಿಚಯಿಸಲ್ಪಟ್ಟಿತ್ತಂತೆ. ಅದನ್ನು ಕೆಲವು ಕೇರಳಿಗರು ಅಭಿವೃದ್ದಿಪಡಿಸಿದರು.  ಮತ್ತೆ ಕೆಲವರು ಹೊರ ದೇಶಗಳಿಂದ ಸಸಿ ಮೂಲ ತರಿಸಿ, ಬೇರೆ ಬೇರೆ ತಳಿಗಳಾಗಿ ಹೆಸರು ಕೊಟ್ಟು , ಈಗ ಇದನ್ನು ವಾಣಿಜ್ಯಿಕವಾಗಿ ಬೆಳೆಸುತ್ತಿದ್ದಾರೆ. ಅವುಗಳಲ್ಲಿ ಒಂದು ರಾಂಬುಟಾನ್ ಎಂಬ ಹಣ್ಣು. ಈ ಹಣ್ಣಿಗೆ ಸರಾಸರಿ ಕೊಳ್ಳುವ ಬೆಲೆ ರೂ.100 ಇದೆ.

 • ರಾಂಬುಟಾನ್ ಇದು ದಕ್ಷಿಣ ಏಶಿಯಾ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ, ಥೈಲಾಂಡ್ ಮೂಲದ  ವಿದೇಶೀ ಹಣ್ಣು.
 • ಇದನ್ನು ಈಗ ನಮ್ಮ ರಾಜ್ಯದಲ್ಲಿ  ಕರಾವಳಿ, ಮಲೆನಾಡು,  ನೆರೆಯ ಕೇರಳ, ತಮಿಳುನಾಡು, ಗೋವಾ ಮುಂತಾದ ಕಡೆಗಳಲ್ಲಿ ಕೆಲವು ರೈತರು ಬೆಳೆಸುತ್ತಿದ್ದಾರೆ.
 • ಇದು ಒಂದು ಋತುಮಾನದ ಹಣ್ಣಾಗಿದ್ದು, ಬೇಸಿಗೆಯ ಎಪ್ರೀಲ್ ತಿಂಗಳಿನಿಂದ  ಪ್ರಾರಂಭವಾಗಿ ಅಕ್ಟೋಬರ್   ತನಕವೂ ಇರುತ್ತದೆ.
 • ಇದರಲ್ಲಿ ಹಲವಾರು ತಳಿಗಳಿದ್ದು, ಕೆಲವು ಮಾತ್ರ ವಾಣಿಜ್ಯಿಕ ಬೇಸಾಯಕ್ಕೆ ಸೂಕ್ತವಾಗಿದೆ.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೇಸರ ಘಟ್ಟ  ಬೆಂಗಳೂರು ಇಲ್ಲಿನ ಹಣ್ಣಿನ ಬೆಳೆಗಳ ಸಂಶೋಧನಾ ಸಂಸ್ಥೆ,  ಮಡಿಕೇರಿಯ ಚೆಟ್ಟಳ್ಳಿಯಲ್ಲಿ ಈ ಹಣ್ಣಿನ ಬೆಳೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಹಲವಾರು ತಳಿ  (ಸುಮಾರು 50) ಮೂಲಗಳನ್ನು ಇವರು ಹೊಂದಿದ್ದಾರೆ. ಅಲ್ಲದೆ ಕೆಲವು  ಉತ್ತಮ ತಳಿಗಳನ್ನೂ ಸಹ ಬಿಡುಗಡೆ ಮಾಡಿದ್ದಾರೆ .

ರಾಂಬುಟಾನ್ ಒಳಗಿನ ಹಣ್ಣಿನ ಭಾಗ

ಏನಿದು ರಾಂಬುಟಾನ್:

 • ಚೆರಿ ಹಣ್ಣಿನ ತರಹವೇ ಇರುವ ಈ ಹಣ್ಣು ಹಳದಿ ಮತ್ತು ಕೆಂಪು ಬಣ್ಣದ ಸಿಪ್ಪೆಯಲ್ಲಿ ಒಳಗೆ ಜೆಲ್ಲಿ (jelly) ತರಹದ ತಿನ್ನುವ ಭಾಗವನ್ನು ಹೊಂದಿದೆ.
 • ಒಳ ಭಾಗದಲ್ಲಿರುವ ತಿನ್ನುವ ತಿರುಳು ಪಾರದರ್ಶಕವಾಗಿರುತ್ತದೆ. ರುಚಿ  ಸಿಹಿ ಯಾಗಿರುತ್ತದೆ.
 •   ಇದರ ವೈಜ್ಞಾನಿಕ ಹೆಸರು Nephelium lappaceum.
 • ತಿನ್ನುವ ಭಾಗದ ಒಳಗೆ ಬೀಜ ಇದ್ದು, ಕೆಲವು ತಳಿಗಳ  ತಿನ್ನುವ ಪಲ್ಪ್ ಬೀಜದಿಂದ ಪ್ರತ್ಯೇಕವಾಗುತ್ತದೆ.
 • ಕೆಲವು ಅಂಟಿಕೊಂಡಿರುತ್ತದೆ.  ಬೀಜದಿಂದ ತಿನ್ನುವ ಭಾಗ  ಬೇರ್ಪಡುವ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಹಳದಿ ಸಿಪ್ಪೆಯ ಹಣ್ಣು ರುಚಿ ಎಲ್ಲಾ ಒಂದೇ

 • ಚಿಲ್ಲರೆ ಮಾರಾಟಗಾರರಲ್ಲಿ ಕಿಲೋ ಗೆ 200- 250 ತನಕವೂ ಇದೆ.
 • ಆನ್ ಲೈನ್ ನಲ್ಲೂ ಇದರ ಹಣ್ಣುಗಳು ಮಾರಾಟಕ್ಕಿದ್ದು, 500 ರೂ. ತನಕವೂ ಮಾರಲ್ಪಡುತ್ತದೆ.
 • ಬೆಳೆಗಾರರಿಗೆ ಮಾರಾಟಗಾರರ ಅಂಗಡಿಗೆ  ಮಾರುವಾಗ ದೊರೆಯುವುದು 100-150 ರೂ. ಮಾತ್ರ.
 • ಮರವಾಗಿ ಬೆಳೆಯುತ್ತದೆ. ಚಿಗುರು ತುದಿಯಲ್ಲಿ ಹೂವಾಗಿ ಕಾಯಿಯಾಗುತ್ತದೆ.
 • ಬೆಳವಣಿಗೆಯನ್ನು  ನಿಯಂತ್ರಿಸಿದರೆ ಸ್ವಲ್ಪ ಕುಬ್ಜವಾಗಿಯೂ ಬೆಳೆಸಬಹುದು.
 • ಬೀಜದಿಂದ ಸಸ್ಯಾಭಿವೃದ್ದಿ ಮಾಡುವಾಗ ಗಂಡು- ಹೆಣ್ಣು ಆಗುವ ಸಾಧ್ಯತೆಗಳಿದ್ದು,  ಗಂಡು ಬರೇ ಹೂ ಬಿಡುತ್ತದೆ. ಕಾಯಿ ಬಿಡಲಾರದು.
 • ಹೆಣ್ಣು ದ್ವಿಲಿಂಗ ಹೂವುಗಳನ್ನು ಹೊಂದಿದ್ದು, ಹೂ ಬಿಟ್ಟು ಕಾಯಿಯಾಗುತ್ತದೆ.
 • ಗಂಡು ಗಿಡ ನಿರುಪಯುಕ್ತ.
 • ಇದು ಉಷ್ಟವಲಯದ ಹಣ್ಣಾಗಿದ್ದು,  ತಾಪಮಾನ 20 ರಿಂದ  35  ಡಿಗ್ರಿ ವರೆಗೆ ಇರುವಲ್ಲಿ  ಉತ್ತಮವಾಗಿ ಬೆಳೆಯುತ್ತದೆ.
 • ಬಿಸಿಲು ಬೇಕು.ಆಂಶಿಕ (25% ) ನೆರಳಿನಲ್ಲೂ  ಬರುತ್ತದೆ.
 • ಕೇರಳಿಗರ ಪ್ರಚಾರದ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಬೆಂಬಲದಿಂದ ಇದು  ಈಗ ಬಹಳ ಪ್ರಚಾರದಲ್ಲಿದೆ.

ತಳಿಗಳು:

ಕೆಂಪು ಸಿಪ್ಪೆಯ ರಾಂಬುಟಾನ್ ಹಣ್ಣು

 • ರಾಂಬುಟಾನ್ ನಲ್ಲಿ ವಾಣಿಜ್ಯಿಕ ಬೇಸಾಯಕ್ಕೆ ಹೊಂದುವ ಕೆಲವು ತಳಿಗಳಿವೆ.
 • ಇದನ್ನು ಮಾತ್ರ ಬೆಳೆಯುವುದು ಲಾಭದಾಯಕ.
 • ರಾಂಬುಟಾನ್ ನ ಸಸ್ಯಗಳು ಎಲ್ಲವೂ  ಏಕಪ್ರಕಾರ ಹೋಲಿಕೆ ಹೊಂದಿದೆ.
 • ಕಸಿ ವಿಧಾನದಲ್ಲಿ ಸಾಮಿಪ್ಯಕಸಿ, ಗೂಟಿ ಕಸಿ ಹಾಗೆಯೇ ಕಣ್ಣು ಕಸಿಯ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತದೆ.
 • ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕಣ್ಣು ಕಸಿಯ ಸಸ್ಯಗಳು.
 • ಎನ್ -18  ಎಂಬ ತಳಿ ಇದೆ. ಇದು ಗೊಂಚಲು ಗೊಂಚಲಾಗಿ ಕಾಯಿ ಬಿಡುತ್ತದೆ.

ಕೆಂಪು ಸಿಪ್ಪೆಯ ರಾಂಬುಟಾನ್ ಹಣ್ಣಿನ ಒಳ ಭಾಗ

 • ಹಣ್ಣು ಮರದಲ್ಲಿ ಹೆಚ್ಚು ಸಮಯದ ತನಕ ಉಳಿಯುತ್ತದೆ.
 • ಇದೊಂದು ಆಯ್ಕೆ ತಳಿಯಾಗಿದೆ. ಇದು ಕೆಂಪು ಸಿಪ್ಪೆಯ ಆಕರ್ಷಕ ನೋಟ ಹೊಂದಿದ  ಹಣ್ಣುಗಳನ್ನು ಕೊಡುತ್ತದೆ.

ಕೆಂಪು ಸಿಪ್ಪೆಯ ರಾಂಬುಟಾನ್ ಹಣ್ಣಿನ ಒಳ ಭಾಗ

ಇದಲ್ಲದೆ HG Malwana, HG School boy, HG Balling, HG Rongrien, HG Jarum Emas E – 35, King ಮುಂತಾದ ತಳಿಗಳು ವಾಣಿಜ್ಯ ಬೇಸಾಯಕ್ಕೆ ಸೂಕ್ತ (HG =Homegrown nusary Kerala)  E – 35 ಎಂಬುದು  ಹಳದಿ ಸಿಪ್ಪೆಯ ಹಣ್ಣು.ಕಿಂಗ್ ಇದು ದೊಡ್ದ ಗಾತ್ರದ ಹಣ್ಣು ಸರಾಸರಿ ಒಂದು ಹಣ್ಣು 50  ಗ್ರಾಂ ತೂಗುತ್ತದೆ.

 • ರಾಂಬುಟಾನ್ ಬೇಸಾಯ ಮತ್ತು ತಳಿ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡ  ಮಡಿಕೇರಿಯ ಚೆಟ್ಟಳ್ಳಿ ಹಣ್ಣಿನ ಬೆಳೆಗಳ ಸಂಶೋಧನಾ ಸಂಸ್ಥೆಯು Arka Coorg Arun,  Arka Coorg Pratib, Aril  ಎಂಬ ಮೂರು ತಳಿಗಳನ್ನು ವಾಣಿಜ್ಯ ಬೇಸಾಯಕ್ಕೆ ಸೂಕ್ತವೆಂದು ಬಿಡುಗಡೆ ಮಾಡಿದೆ.
 • ಆರ್ಕಾ ಕೂರ್ಗ್ ಅರುಣ್, ಇದು ಕೆಂಪು ಸಿಪ್ಪೆಯ ತಳಿ.   ತೀರಾ ಎತ್ತರಕ್ಕೆ ಬೆಳೆಯದ ಬೇಗ ( ಮಾರ್ಚ್) ಹಣ್ಣುಗಳಾಗುವ ತಳಿ.
 • ಒಂದು ಹಣ್ಣು 40-45 ಗ್ರಾಂ ತೂಗುತ್ತದೆ. ಇದಕ್ಕೆ ಬೀಜ ಇರುವುದಿಲ್ಲ.
 • ಅರ್ಕಾ ಕೂರ್ಗ್ ಪ್ರತಿಬ್ ಇದು ಹಳದಿ ಸಿಪ್ಪೆಯ ಹಣ್ಣು ಆಗಿದ್ದು,  ಅಧಿಕ ಇಳುವರಿ ಮತ್ತು  ಹೆಚ್ಚು ಎತ್ತರಕ್ಕೆ ಬೆಳೆಯದೆ ವಿಶಾಲವಾಗಿ ಬೆಳೆಯುವ ತಳಿಯಾಗಿದೆ.
 • ಫೆಬ್ರವರಿ ಮಾರ್ಚ್ ನಲ್ಲಿ ಹೂ ಬಿಟ್ಟು ಅಕ್ಟೋಬರ್ ಗೆ ಹಣ್ಣು ಆಗುತ್ತದೆ. ಮರಕ್ಕೆ 25-30  ಕಿಲೋ ಇಳುವರಿ.
 • ಅರಿಲ್ ಎಂಬುದು ಬಿಳಿ ಬಣ್ಣದ ಸಿಪ್ಪೆಯನ್ನು ಹೊಂದಿದ್ದು, ತುಂಬಾ ಸಿಹಿ ಮತ್ತು ರಸವನ್ನು ಹೊಂದಿದೆ. ಮರಕ್ಕೆ 1200-1500  ಕಾಯಿ ಇಳುವರಿ.

ರಾಂಬುಟಾನ್ ಬೀಜ

ಹಣ್ಣಿನಲ್ಲಿ ಆರೋಗ್ಯ ಗುಣ:

 • ಸುಮಾರು 10-15 ವರ್ಷಗಳ ಹಿಂದೆ ಹಣ್ಣು ಮಾರುವವರು ಈ ಹಣ್ಣು ಏನು ಎಂದು ಜನ ಕೇಳಿದಾಗ ಇದು ಹಾರ್ಟ್ ಗೆ ಒಳ್ಳೆಯದು ಕೊಂಡೋಗಿ ಎಂದು ಅಂಗಡಿಯವರು  ಹೇಳುತ್ತಿದ್ದರು.
 • ಈಗ ಸಂಶೋಧನಾ ಸಂಸ್ಥೆಗಳೂ ಇದನ್ನು ಹೇಳುತ್ತವೆ.
 • ಇದನ್ನು ಜೀವ ಸತ್ವದ ಹಣ್ಣು ಎಂದೇ ಬಿಂಬಿಸಲಾಗಿದೆ.
 • ವಿಟಮಿನ್ ಗಳು, ವಿಶೇಷವಾಗಿ(C Vitamin) ಹೇರಳವಾಗಿದೆ.
 • ಇದಲ್ಲದೆ ಹಲವಾರು ಪೋಷಕಾಂಶಗಳು ಇದರಲ್ಲಿ ಇವೆ ಎನ್ನಲಾಗುತ್ತದೆ.

ಹೇಗೆ ಬೆಳೆಸುವುದು:

 • ರಾಂಬುಟಾನ್ ಸಸಿಯನ್ನು ಬೀಜದಿಂದ ಸಸ್ಯಾಭಿವೃದ್ದಿ ಮಾಡುವುದು ಅತ್ಯಂತ ಸರಳವಾದರೂ ಇಲ್ಲಿರುವ ಏಕೈಕ ತೊಡಕು ಎಂದರೆ ಮಾತೃ ಗುಣ ಬಾರದೆ ಇರುವುದು.
 • ಈ ಸಮಸ್ಯೆ  ನಿವಾರಣೆಗಾಗಿ  ಕಸಿ ತಾಂತ್ರಿಕತೆಯ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತಿದೆ.
 • ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಆಗಬೇಕು.
 • ಜೌಗು ಸ್ಥಳದಲ್ಲಿ ಅಗುವುದಿಲ್ಲ. ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಸಬಹುದು.

ರಾಂಬುಟಾನ್ ಬೆಳೆ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡಿನಲ್ಲಿ ಬೆಳೆಯುತ್ತಿದ್ದು, ವಾತಾವರಣದ ತಾಪಮಾನ  ಕಡಿಮೆ ಇರುವ ಪ್ರದೇಶಗಳಲ್ಲೆಲ್ಲಾ  ಬೆಳೆಸಬಹುದು.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!