ಕೇಂದ್ರ ಕೃಷಿ ಬಜೆಟ್- 2022-23 – ನಮಗೆ ಏಷ್ಟು ಲಾಭವಿದೆ ಇದರಲ್ಲಿ?
ಕೇಂದ್ರ ಸರಕಾರ 2022-23 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಮಾಮೂಲಿನಂತೆ ಎಲ್ಲಾ ಕ್ಷೇತ್ರಗಳಿಗೂ ಬೇಜಾರಾಗದಂತೆ ಪ್ರಾಶಸ್ತ್ಯಗಳನ್ನು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಕೊಡಮಾಡಲ್ಪಟ್ಟ ಕೊಡುಗೆಗಳು ಮತ್ತು ಇದರಲ್ಲಿ ನಮಗೆ ಎಷ್ಟು ಲಾಭವಿದೆ ಎಂಬ ವಿವರಗಳು ಇಲ್ಲಿವೆ. ಭಾರತ ಕೃಷಿ ಆರ್ಥಿಕತೆಯ ಆಧಾರದಲ್ಲಿ ನಿಂತ ರಾಷ್ಟ್ರವಾಗಿದ್ದು, ಕೃಷಿ ಕ್ಷೇತ್ರ ಯಾವುದೇ ಆಡಳಿತ ನಡೆಸುವ ಸರಕಾರವಾದರೂ ಅದಕ್ಕೆ ಆದ್ಯತಾ ಕ್ಷೇತ್ರವಾಗಿರುತ್ತದೆ. ಕೃಷಿಕರಿಗೆ ಕೊಡುಗೆಗಳು ಬೇಕು. ಅದನ್ನು ಈ ತನಕ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ ಬೇರೆ ಬೇರೆ ರೂಪದಲ್ಲಿ…