ಕೇಂದ್ರ ಕೃಷಿ ಬಜೆಟ್- 2022-23 – ನಮಗೆ ಏಷ್ಟು ಲಾಭವಿದೆ ಇದರಲ್ಲಿ?

ಕೇಂದ್ರ ಬಜೆಟ್ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮ್

ಕೇಂದ್ರ ಸರಕಾರ 2022-23 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಮಾಮೂಲಿನಂತೆ ಎಲ್ಲಾ ಕ್ಷೇತ್ರಗಳಿಗೂ ಬೇಜಾರಾಗದಂತೆ ಪ್ರಾಶಸ್ತ್ಯಗಳನ್ನು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಕೊಡಮಾಡಲ್ಪಟ್ಟ ಕೊಡುಗೆಗಳು ಮತ್ತು ಇದರಲ್ಲಿ ನಮಗೆ ಎಷ್ಟು ಲಾಭವಿದೆ ಎಂಬ ವಿವರಗಳು ಇಲ್ಲಿವೆ.

ಭಾರತ ಕೃಷಿ ಆರ್ಥಿಕತೆಯ ಆಧಾರದಲ್ಲಿ ನಿಂತ ರಾಷ್ಟ್ರವಾಗಿದ್ದು, ಕೃಷಿ ಕ್ಷೇತ್ರ ಯಾವುದೇ ಆಡಳಿತ ನಡೆಸುವ ಸರಕಾರವಾದರೂ ಅದಕ್ಕೆ ಆದ್ಯತಾ ಕ್ಷೇತ್ರವಾಗಿರುತ್ತದೆ. ಕೃಷಿಕರಿಗೆ ಕೊಡುಗೆಗಳು ಬೇಕು. ಅದನ್ನು ಈ ತನಕ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ ಬೇರೆ ಬೇರೆ ರೂಪದಲ್ಲಿ ಕೊಡುತ್ತಾ ಬಂದಿವೆ. ಕೆಲವರು ವೈಯಕ್ತಿಕವಾಗಿ ಲಾಭವಾಗುವಂತೆ ಸೌಲಭ್ಯಗಳನ್ನು ಕೊಡುತ್ತಾ ಬಂದಿದ್ದಾರೆ. ಮತ್ತೆ ಕೆಲವು ಆಡಳಿತಾರೂಢ  ಸರಕಾರ ಸಮುದಾಯ ಆಧಾರಿತವಾಗಿ ಕೊಡುಗೆಗಳನ್ನು ನೀಡುವುದಕ್ಕೆ ಮುಂದಾಗಿವೆ. ಎಲ್ಲಾ ಸರಕಾರಗಳ ಉದ್ಡೇಶ ಕೃಷಿಕರಿಗೆ ಸ್ವಲ್ಪ ಸಿಹಿ ನೆಕ್ಕಿಸುವುದೇ ಆಗಿದೆ. ಇದನ್ನು ಯಾಕೆ ಇಲ್ಲಿ ಹೇಳುತ್ತಿದ್ದೇನೆ ಎಂದರೆ ನಮ್ಮ ಎಲ್ಲಾ ಸರಕಾರಗಳೂ ಕೃಷಿ ಕ್ಷೇತ್ರದ ಮೂಲಭೂತ ಅಗತ್ಯವನ್ನು ಸರಿಮಾಡಿಕೊಳ್ಳದೆ. ಪಂಚಾಂಗ ಬಿರುಕುಗೊಳಿಸಿ ಸೌಧ ಕಟ್ಟುತ್ತಾ ಬಂದಿವೆ. ಈ ಸಲದ ಕೇಂದ್ರ ಬಜೆಟ್ ಸಹ  ಇಂತದ್ದೇ ಎಂದರೂ ತಪ್ಪಾಗಲಾರದು. ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಹೆಚ್ಚು ನಿಧಿಯನ್ನೂ ಯಾವುದು ಕಡಿತವಾಗಿದೆ ಎಂಬುದನ್ನು ಈ ಲಿಂಕ್ ಮೂಲಕ ತಿಳಿಯಬಹುದು.

ಕೊಡುಗೆಗಳು ಯಾವುವು?

 • ನಮ್ಮ ದೇಶದ ಪ್ರಮುಖ ಆಹಾರ ಬೆಳೆಗಳಾದ ಅಕ್ಕಿ( ಭತ್ತ) ಮತ್ತು ಗೋಧಿಯನ್ನು ಎರಡೂ ಹಂಗಾಮಿನಲ್ಲೂ ಸಂಗ್ರಹಣೆ ಮಾಡುವರೇ 2.37 ಲಕ್ಷ ಕೊಟಿಯನ್ನು ಮೀಸಲಿಟ್ಟಿದ್ದು, ಇದರಿಂದ ಸುಮಾರು 1 ಕೋಟಿ ರೈತರಿಗೆ ಪ್ರಯೋಜನವಾಗಲಿದೆಯಂತೆ.
 • ರೈತರು ಇದರ ನೇರ ಪ್ರಯೋಜನವನ್ನು ಪಡೆಯಲಿದ್ದಾರಂತೆ. Rs. 2.37 lakh crore direct payment to 1.63 crore farmers ಈ ನಿಧಿಯಲ್ಲಿ ಕನಿಷ್ಟ  ಬೆಂಬಲ ಬೆಲೆಯಲ್ಲಿ  ಖರೀದಿ ನಡೆಸಲಾಗುತ್ತದೆಯಂತೆ.
ಬಹು ನಿರೀಕ್ಷೆಯ ಮೊದಿ ಸರಕಾರದ ಬಜೆಟ್
 • ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಉತ್ತೇಜನ. ಇದನ್ನು ದೇಶದಾದ್ಯಾಂತ ಉತ್ತೇಜಿಸುವ ಯೋಚನೆ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಗಂಗಾ ನದಿ ತಟದಲ್ಲಿ 5 ಕಿಲೋ ಮೀಟರ್ ಕಾರಿಡಾರ್ ನಲ್ಲಿ  ಇದನ್ನು ಮಾಡಲಾಗುತ್ತದೆಯಂತೆ.
 • ಅಲ್ಲಿನ ಅನುಭವದ ಆಧಾರದಲ್ಲಿ ಅದನ್ನು ಮುಂದುವರಿಸಲಿದೆ.
 • ಕೃಷಿ ವಿಶ್ವ ವಿಧ್ಯಾನಿಲಯಗಳ ಪಠ್ಯ ವಿಷಯಗಳಲ್ಲಿ ನೈಸರ್ಗಿಕ ಕೃಷಿ ಬಗ್ಗೆ ಪಾಠಗಳು ಇರಬೇಕು.
 • ಸ್ನಾತಕೋತ್ತರ ಕೊರ್ಸ್ ಗಳಲ್ಲಿ  ಸಾವಯವ ಕೃಷಿ ಅಥವಾ ನೈಸರ್ಗಿಕ ಕೃಷಿಯ ವಿಶೇಷ ಅಧ್ಯಯನಗಳು  ಇರಬೇಕು.
 • ವಿಷಯ ತಜ್ಞರುಗಳ ಸೃಷ್ಟಿಯಾದರೆ ಹೊಲದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗುತ್ತದೆ.
 • syllabus for postgraduate programmes in agricultural universities must include areas of organic farming, zero-budget farming, and natural farming. The universities are also encouraged to start independent courses on the subject (for instance, MSc organic farming). 
 • 2022 ನೇ ಇಸವಿಯನ್ನು ತೃಣಧಾನ್ಯಗಳ ವರ್ಷವನ್ನಾಗಿ ಘೋಷಿಸುವುದರೊಂದಿಗೆ , ದೇಶದಾದ್ಯಂತ ಅಧಿಕ ಪೌಷ್ಟಿಕಾಂಶ ಒಳಗೊಂಡ ತೃಣಧಾನ್ಯಗಳ ಬೆಳೆಗಳನ್ನು ಪ್ರೋತ್ಸಾಹಿಸಲಾಗುತ್ತದೆ.
 • ತೃಣ ಧಾನ್ಯಗಳು  ಸೂಪರ್ ಫೂಡ್ ಇದ್ದಂತೆ. ಇದು ಭಾರತದ ಸಾಂಪ್ರದಾಯಿಕ ಆಹಾರ.
 • ಇವು ದೇಶದ  ಜನತೆಯ ಆರೋಗ್ಯ ಮತ್ತು ಜ್ಞಾನವನ್ನು ಉತ್ತಮಪಡಿಸುವ ಆಹಾರಗಳು.
 • ತೃಣ ಧಾನ್ಯಗಳ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆಗೆ ಹೆಚ್ಚಿನ ಬೆಂಬಲ ಕೊಡುವುದು.
 • ಕೃಷಿ ವ್ಯವಸ್ಥೆಯಲ್ಲಿ  ಕೀಟನಾಶಕ, ರೋಗನಾಶಕ ಸಿಂಪರಣೆಗೆ ಡ್ರೋನುಗಳ ಬಳಕೆಗೆ ಉತ್ತೇಜನ.
 • ಡ್ರೋನುಗಳ ಮೂಲಕ ಕರಾರುವಕ್ಕಾಗಿ ಸಿಂಪರಣೆ, ಪರಿವೀಕ್ಷಣೆ ಇತ್ಯಾದಿ ಮಾಡಬಹುದು.
 • ಮಾನವ ಶ್ರಮ ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ.
 • ನದೀ ಜೋಡಣೆ: ಮಧ್ಯಪ್ರದೇಶದ ಬೆಟ್ವಾ BETWA ಮತ್ತು  ಕೆನ್ KEN   ಎಂಬ ಯಮೂನಾ ನದಿಗಳ ಉಪನದಿಗಳನ್ನು 221 ಕಿಲೋ ಮೀಟರ್ ಕಾಲುವೆಯ ಮೂಲಕ  ಜೋಡಿಸುವುದು.
 • ಇದರಿಂದ 9 ಲಕ್ಷ ಹೆಕ್ಟೇರಿಗೆ ನೀರಾವರಿ ಆಗುತ್ತದೆ. ಕುಡಿಯುವ ನೀರಿಗೆ ಮತ್ತು ವಿದ್ಯುತ್ ಉತ್ಪಾದನೆಗೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ.
 • ದೇಶದಾದ್ಯಂತ ಐದು ನದಿಗಳ ಜೋಡಣೆಯ ಪ್ರಸ್ತಾಪ ಇದೆ.
 • ಇದರಲ್ಲಿ ಕಾವೇರಿ ನದಿಗೆ ಗೋದಾವರಿಯ ನೀರನ್ನು ಸೇರಿಸುವುದೂ ಒಳಗೊಂಡಿದೆ.
 • ರೈತರಿಗೆ ಅದರಲ್ಲೂ ಹೈನುಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮಾಡಬಯಸುವವರಿಗೆ ಸಾಲ ಸೌಲಭ್ಯವನ್ನು ಹೆಚ್ಚಿಸಲಾಗಿದ್ದು.
 • ಕಳೆದ ವರ್ಷ 15 ಲಕ್ಷ ಕೋಟಿ ಇದ್ದುದನ್ನು ಈ ವರ್ಷ 16.5 ಲಕ್ಷ ಕೋಟಿಗೆ ಏರಿಸಲಾಗಿದೆ.
 • ಸೌರ ಶಕ್ತಿಯ ಬಳಕೆಗೆ ಒತ್ತು: ನೈಸರ್ಗಿಕ ಇಂಧನ ಮೂಲಗಳನ್ನುಹೆಚ್ಚು ಹೆಚ್ಚು ಬಳಸಬೇಕು.
 • ಅದರಲ್ಲೀ ಸೌರ ಶಕ್ತಿಯ ಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್ ನಲ್ಲಿ 19,500 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
 • ಇದರಲ್ಲಿ ಕೃಷಿಗೆ ಸೌರ ಶಕ್ತಿ ಬಳಕೆಯ ಪ್ರಸ್ತಾಪ ಇಲ್ಲ. ಸೌರ ಶಕ್ತಿ ಉತ್ಪಾದನೆಗೆ ಕೃಷಿಕರು ತಮ್ಮ ಹೊಲವನ್ನು ಒದಗಿಸಿದರೆ ಅವರಿಗೆ ಹೆಚ್ಚಿನ ವರಮಾನ ಸಿಗುತ್ತದೆ ಎಂಬ ಉಲ್ಲೇಖ ಇದೆ.
 • ಸೌರ ಶಕ್ತಿಬಳಕೆಯಿಂದ ವಾತಾವರಣದಲ್ಲಿ  ಇಂಗಾಲದ ಡೈ ಆಕ್ಸೈಡ್ ಸೇರಿಕೊಳ್ಳುವುದು ಕಡಿಮೆಯಾಗಲಿದೆ.
 • ಕೆಲವು ರಾಸಾಯನಿಕ ವಸ್ತುಗಳ ಕರವನ್ನು ಕಡಿಮೆ ಮಾಡಿದ್ದಾರೆ. ಕೆಲವನ್ನು ಹೆಚ್ಚಿಸಿದ್ದಾರೆ.
 • ಹಾಗಾಗಿ ಕೃಷಿಯಲ್ಲಿ ಬಳಕೆ ಮಾಡುವ ರಸ ಗೊಬ್ಬರ, ಕೀಟನಾಶಕ, ಇತ್ಯಾದಿಗಳಲ್ಲಿ ಕೆಲವು ದರ ಏರಿಕೆ  ಮತ್ತೆ ಕೆಲವು ಇಳಿಕೆ ಅಗಬಹುದು.
 • ಸಿಗಡಿ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಈ ಕೃಷಿಗೆ ಬೇಕಾಗುವ ಸಾಮಾಗ್ರಿಗಳ ಮೇಲಿನ ಕರವನ್ನು ಕಡಿಮೆ ಮಾಡಲಾಗಿದೆ.
 • ಸಣ್ಣ ನೀರಾವರಿ ಯೋಜನೆಗಳ ಅನುಷ್ಟಾನದ ಬಗ್ಗೆ ಪ್ರಸ್ತಾಪ ಇದ್ದು, ಹಿಂದಿನ ವರ್ಷದ ಬಜೆಟ್ ನಲ್ಲಿ ಅಪೂರ್ಣವಾದ, ರಿಪೇರಿ ಇತ್ಯಾದಿಗಳಿಗೆ ಹಣ ಮೀಸಲಿಡಲಾಗಿದೆ.
 • ಗ್ರಾಮೀಣ ಭಾಗದಲ್ಲಿ  ಕೃಷಿ ಸಂಬಂಧಿತ  ಉದ್ಯಮಗಳನ್ನು Startup ಪ್ರಾರಂಭಿಸುವರೇ ನಬಾರ್ಡ್ ಮೂಲಕ ಸಾಲ ಸೌಲಭ್ಯಗಳನ್ನು  ಒದಗಿಸುವ ಭರವಸೆ.
 • ಕೃಷಿಗೆ ಬೇಕಾಗುವ ಯಂತ್ರ ಸಾಧನ, ಮೌಲ್ಯವರ್ಧನೆ, ಸಂಸ್ಕರಣೆ ಇತ್ಯಾದಿಗಳನ್ನು  ಗ್ರಾಮೀಣ ಪ್ರದೇಶದಲ್ಲಿ ಮಾಡುವ ಆಸಕ್ತರಿಗೆ ಇದು ಉತ್ತಮ.
 • ಭೂ ವ್ಯವಹಾರ ಸರಳೀಕರಣ ಮಾಡಲು  ಮಾಹಿತಿ ತಂತ್ರಜ್ಞಾನ ಅಧಾರಿತವಾಗಿ ULPIN  Unique Land Parcel Identification Number  ಅಮೂಲಕ ಎಲ್ಲಾ ಭೂದಾಖಲೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.
 • ಇದರಂತೆ ಪ್ರತೀ ಸರ್ವೆ ನಂಬ್ರದ ಭೂಮಿಗೆ 14 ಸಂಖ್ಯೆಯ ನಂಬ್ರವನ್ನು ಕೊಡಲಾಗುತ್ತದೆ.
 • ಈ ನಂಬ್ರವನ್ನು ದಾಖಲಿಸಿದರೆ ಅದರ ಎಲ್ಲಾ ಜಾತಕ ಬಹಿರಂಗ ಆಗುವ ವ್ಯವಸ್ಥೆ.

ರೈತರ ನಿರೀಕ್ಷೆ ಏನಿತ್ತು?

 • ರೈತರು ನಮಗೇನು ಸಿಗುತ್ತದೆ ಎಂಬುದರ ಮೇಲೆಯೇ  ಕಣ್ಣಿಟ್ಟಿದ್ದರು.
 • ಕಿಸಾನ್ ಸಮ್ಮಾನ್ ನಿಧಿಯನ್ನು ಈಗಿರುವ 6000 ದಿಂದ 10,000 ಕ್ಕೆ ಏರಿಸಿಯಾರೇ ಎಂಬ ನಿರೀಕ್ಷೆಯಲ್ಲಿದ್ದರು.
 • ಆದರೆ ಅದು ಆಗಿಲ್ಲ. ಯಥಾಸ್ಥಿತಿಯಲ್ಲಿ ಮುಂದುವರಿದ್ದಿದೆ.
 • ಫಸಲ್ ಭಿಮಾ ಯೋಜನೆಯನ್ನು ಉನ್ನತೀಕರಣ ಮಾಡಬಹುದೇ ಎಂಬ ಆಶಯದಲ್ಲಿದ್ದರು.
 • ಆದರೆ ಆದು ಯಥಾಸ್ಥಿಯಲ್ಲಿ ಮುಂದುವರಿದಿದೆ.

ಹೊಗಳುವಂತದ್ದೂ ಇದೆ- ತೆಗಳುವಂತದ್ದೂ ಇದೆ:

 • ಭಾರತ ದೇಶದ ಕೃಷಿಕ ತನ್ನ ಅಗತ್ಯ ಸರಕಾರೀ ಕೆಲಸಗಳಿಗಾಗಿ ವರ್ಷದ 365 ದಿನದಲ್ಲಿ 10-15 ದಿನವನ್ನಾದರೂ ವ್ಯಯಿಸುತ್ತಾನೆ.
 • ಯಾವುದೇ ಸಾಲ, ಸವಲತ್ತುಗಳಿಗೆ ಪದೇ ಪದೇ ನಾನು ಇಂತಿಂತವ ಹೌದು ಎಂದು ಬೇರೆಯವರಿಂದ ಶಿಫಾರಸು ಪಡೆದೇ ಮುಂದುವರಿಯಬೇಕು.
 • ಬಹುಶಃ ಭಾರತದ  ರೈತನಿಗೆ ಒಂದು ಗುರುತು ಸಂಖ್ಯೆಯನ್ನು ನೀಡಿದರೆ ಆ ನಂಬ್ರ ಹಾಕಿದರೆ ಅವನ ಜಾತಕ ಸಿಗುವಂತಾಗುತ್ತದೆ ಎಂದರೆ ಇದು ನಿಜಕ್ಕೂ ಪ್ರಶಂಸಾರ್ಹ.
 • ನಮ್ಮ ಕಿಲುಬೆದ್ದ ಸರಕಾರಿ ವ್ಯವಸ್ಥೆ ಇದನ್ನು ಎಷ್ಟು ಪಾಲಿಸುತ್ತವೆಯೋ ನಂತರ ನೋಡಬೇಕು.
 • ಈ ಬಾರಿಯ  ಬಜೆಟ್ ನಲ್ಲಿ  ಕೆಲವೊಂದು ಅಂಶಗಳು ಸಮರ್ಪಕ ಅಧ್ಯಯನ ಇಲ್ಲದೆ ಮಾಡಿದಂತದ್ದು.
 • ಹಿಂದೆ ಹೇಳಿದಂತೆ ಸರಕಾರಕ್ಕೆ ನೈಸರ್ಗಿಕ ಕೃಷಿಯ ಬಗ್ಗೆ ಹೆಚ್ಚಿನ ಒಲವು ಕಂಡು ಬಂದಿದೆ.
 • ಇದು ಒಳ್ಳೆಯದೇ. ಆದರೆ ಸರಕಾರ ಇದನ್ನು ಕೈಗೆತ್ತಿಕೊಳ್ಳಬೇಕಾಗಿಲ್ಲ.
 • ರೈತರಿಗೆ ಇದು ಯಾಕೆ ಉತ್ತಮ, ಹೇಗೆ ಮಿತವ್ಯಯದಲ್ಲಿ ಮಾಡಬಹುದು ಎಂಬುದರ ತಿಳುವಳಿಕೆ  ನೀಡಿದರೆ ಸಾಕು.
 • ಕೃಷಿ ವ್ಯಾಸಂಗ ಮಾಡುವ ಪಠ್ಯಗಳಲ್ಲಿ ಸಾವಯವ ಕೃಷಿ ಬಗ್ಗೆ ಅಬ್ಯಾಸಗಳು ಇತ್ತು.
 • ಆದರೆ ಅದು ಆಯುರ್ವೇದ ಕಲಿತು ಅಲೋಪತಿ ಔಷದೋಪಚಾರ ಮಾಡಿದಂತಾಗಿತ್ತು.
 • ಯಾವುದೋ ತಜ್ಞರು ತಮ್ಮ ಲಾಭಕ್ಕಾಗಿ ಇದನ್ನು ಸರಕಾರದ ಮುಂದೆ ಇಟ್ಟಿರಬಹುದು.
 • ಸರಕಾರ ಕೈಹಾಕಿತು ಎಂದ ತಕ್ಷಣ ಅಲ್ಲಿ ವ್ಯಾವಹಾರಿಕತೆ ಬರುತ್ತದೆ.
 • ಈಗಾಗಲೇ ಸಕ್ಕರೆ ಕಾರ್ಖಾನೆಯ ತ್ಯಾಜ್ಯಗಳನ್ನು ಗೊಬ್ಬರ ತಯಾರಿಕಾ ಕಂಪೆನಿಗಳು ಬುಕ್ ಮಾಡಿ ಆಗಿವೆ. 2-3 ರೂ. ಗಳಿಗೆ ಸಿಗುತ್ತಿದ್ದ ಪ್ರೆಸ್ ಮಡ್ ಈಗ ಲಭ್ಯವಿಲ್ಲ.
 • ಇನ್ನು ಕೆಲವೇ ಸಮಯದಲ್ಲಿ ದ್ರವರೂಪದ ಜೈವಿಕ ಅಥವಾ ಇನ್ಯಾವುದೋ ಬೆಳೆ ಪೊಷಕಗಳನ್ನು ಮಾರುವ ಕಂಪೆನಿಗಳು ಹುಟ್ಟಿಕೊಳ್ಳುತ್ತವೆ.
 • ಇದರಿಂದ ರೈತನ ಜೇಬಿಗೆ ಹೆಚ್ಚುವರಿ ಹೊರೆಯಾಗುತ್ತದೆ.
 • ಕೊನೆಗೆ ಸೋತು ಮತ್ತೆ ರಾಸಾಯನಿಕಕ್ಕೇ ಬರುತ್ತಾನೆ.
 • ಇದು ಆಗದಂತೆ ನೈಸರ್ಗಿಕ,  ಅಥವಾ ಸಾವಯವ ಕೃಷಿಯನ್ನು ಪ್ರಚಾರ ಮಾಡಬೇಕು.  
 • ರೈತ ರಾಸಾಯನಿಕ ಬೇಡ ಎಂದು ಮರಳಿ ಸಾವಯವಕ್ಕೆ ಬಂದರೆ ಅದರಲ್ಲಿ  ಶಾಶ್ವತವಾಗಿ ಮುಂದುವರಿಯುವ ತರಹ ನೈಸರ್ಗಿಕ ಕೃಷಿ ಇರಬೇಕು.
 • ಅದರಲ್ಲಿ ನಷ್ಟವಾಗಿ ಮತ್ತೆ ರಾಸಾಯನಿಕಕ್ಕೆ ಹೋಗುವಂತಾಗಬಾರದು.

ಡ್ರೋನುಗಳ ಮೂಲಕ ಕೀಟ ನಾಶಕ ಸಿಂಪರಣೆ ಮುಂತಾದ ತಂತ್ರಜ್ಞಾನ ಭಾರತದಂತಹ ದೇಶಕ್ಕೆ ಹೇಳಿ ಮಾಡಿಸಿದ್ದಲ್ಲ. ಇಲ್ಲಿರುವ ಬಹುಸಂಖ್ಯೆಯ ಸಣ್ಣ ಮತ್ತು ಮಧ್ಯಮ ರೈತರ ಹೊಲದಲ್ಲಿ ಇದರ ಬಳಕೆ ಮಾಡಿ, ಧೀರ್ಘಾವಧಿಯಲ್ಲಿ ಕೆಲವು ಅನಾಹುತಗಳಿಗೆ ಕಾರಣವಾಗಬಹುದು. ಕೀಟನಾಶಕ – ರೋಗ ನಾಶಕ ಸಿಂಪರಣೆ ಇಲ್ಲದೆ ಬಳೆಯುವ ನಿರೋಧಕ ಶಕ್ತಿಯ ತಳಿಗಳ ಅಭಿವೃದ್ದಿಗೆ ಗಮನ ಹರಿಸಿದ್ದರೆ ಒಳ್ಳೆಯದಿತ್ತು

 • ನದಿಗಳ ಜೊಡಣೆ ಉತ್ತಮ. ಕೃಷಿ ನೀರಾವರಿಗೆ  ಇದರಿಂದ ತುಂಬಾ ಪ್ರಯೋಜನವಾಗಲಿದೆ.
 • ವರ್ಷವಿಡೀ ನದಿಯಲ್ಲಿ ನೀರು  ಇದ್ದರೆ  ಕೃಷಿಗೆ ಬಹಳಷ್ಟು ಲಾಭವಿದೆ.
 • ಅಕ್ಕಿ – ಭತ್ತ ಹಾಗೆಯೇ ಇನ್ನಿತರ ಬೆಳೆ ಬೆಳೆಯುವ ರೈತರಿಗೆ ಗರಿಷ್ಟ ಆದಾಯ ಬರುವಂತೆ ಸರಕಾರದ ಬೆಂಬಲ ಅಗತ್ಯ.
 • ಇಲ್ಲವಾದರೆ ಮುಂದೆ ಆಹಾರ ಬೆಳೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಈ ಬೆಳೆಗಳನ್ನು ಬೆಳೆಯುವವರಿಗೆ ನೆರವಾಗುವ ಸರಕಾರದ ಕ್ರಮ ಉತ್ತಮವೇ ಆಗಿದೆ.

ಇಷ್ಟಕ್ಕೂ ಸರಕಾರ ವೈಯಕ್ತಿಕವಾಗಿ ರೈತನಿಗೆ ಅನುಕೂಲವಾಗುವ ಯೋಜನೆಗಳನ್ನು  ಹಾಕಿಕೊಂಡಿಲ್ಲ. ಸಮುದಾಯಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಹಾಕಿಕೊಂಡಿದೆ. ರೈತರಿಗೆ.

Leave a Reply

Your email address will not be published. Required fields are marked *

error: Content is protected !!