ಭತ್ತದ ಬೆಳೆಗಾರರಿಗೆ ಭಾರತ ಸರಕಾರದ ಸಹಾಯ.    

ಭತ್ತದ ಬೆಳೆಗಾರರಿಗೆ ಭಾರತ ಸರಕಾರದ ಸಹಾಯ.

ಭಾರತ ಸರಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಕ್ಕಿ ಹಾಗೂ ಇತರ ಆಹಾರ ಧಾನ್ಯಗಳನ್ನು ಇನ್ನೂ ಐದು  ವರ್ಷದ ವರೆಗೆ ಉಚಿತವಾಗಿ ನೀಡಲು ಮುಂದಾಗಿದೆ. ಭತ್ತ ಗೋಧಿ ಮುಂತಾದ ಆಹಾರ ಬೆಳೆಗಳ  ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಈ ಕಾರಣದಿಂದ ಭತ್ತದ, ಗೋಧಿಯ ಬೆಲೆ ಹೆಚ್ಚಳವಾಗಿದೆ. ಇನ್ನೂ ಹೆಚ್ಚಳವಾಗಲಿದೆ. ಸರಕಾರದ ಯೋಜನೆ ರೈತಾಪಿ ವರ್ಗಕ್ಕೆ ಪರೋಕ್ಷವಾಗಿ ಲಾಭದಾಯಕವಾಗಿದೆ.

 ಕಳೆದ ವರ್ಷದಿಂದ ಭತ್ತದ ಬೆಲೆ ಏರಿಕೆ ಆದ ಕಾರಣದಿಂದಾಗಿ ಬೆಳೆ ಪ್ರದೇಶ ಹೆಚ್ಚಳವಾಗಲಾರಂಭಿಸಿದೆ. ಭತ್ತದ ಬೆಳೆಗಾರರು ಈ ತನಕ ಬೇಸಾಯ ಮಾಡಿ ನಷ್ಟವನ್ನೇ ಆನುಭವಿಸುತ್ತಿದ್ದವರು. ಈಗ ಭತ್ತ ಬೆಳೆದರೆ ನಷ್ಟವಿಲ್ಲ ಎಂಬ ಸ್ಥಿತಿಗೆ ಬಂದಿದ್ದಾರೆ.  ಅಕ್ಕಿಯ ಬೆಲೆ ಹೆಚ್ಚಳವಾಗಿ ಭತ್ತದ ಖರೀದಿ ದರದಲ್ಲೂ ಹೆಚ್ಚಳವಾದ ಕಾರಣ ಈಗ ಸ್ವಲ್ಪ ಬೆಳೆ ಲಾಭದಾಯಕವಾರಲಾರಂಭಿಸಿದೆ. ಅದಕ್ಕೆ ಪೂರಕವಾಗಿ ಭತ್ತದ ಬೇಸಾಯಕ್ಕೆ ಅನುಕೂಲವಾಗುವಂತೆ ಎಲ್ಲಾ  ಕೆಲಸಗಳಿಗೂ ಸಲ್ಲುವ ಯಂತ್ರ ಸಾಧನಗಳು ಬಂದುದು ಇನ್ನಷ್ಟು ಅನುಕೂಲಮಾಡಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು  ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿ ಇಟ್ಟುಕೊಂಡೋ ಏನೋ, ಉಚಿತ ಆಹಾರ ಸಾಮಾಗ್ರಿ ವಿತರಣೆಯನ್ನು ಮುಂದಿನ ಐದು ವರ್ಷಗಳ ಕಾಲ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸರಕಾರ ಉಚಿತವಾಗಿ ಅಕ್ಕಿ, ಬೇಳೆ ಕಾಳು ಗೋಧಿ ಮುಂತಾದ ಆಹಾರ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪೂರೈಕೆ ಮಾಡುವುದರಿಂದ ಬಡವರಿಗೆ ಆಹಾರ ಬಧ್ರತೆ ದೊರಕಿದಂತಾದರೆ, ಬೆಳೆಗಾರರಿಗೆ  ತಾವು ಬೆಳೆದ ಉತ್ಪನ್ನಕ್ಕೆ ಬೇಡಿಕೆಯೂ ಹೆಚ್ಚಳವಾಗಿ ಬೆಲೆ ಏರಿಕೆ ಆಗುತ್ತದೆ.

ಉಚಿತ ಆಹಾರ ಧಾನ್ಯ ವಿತರಣೆಯ ಲಾಭ:

 • ಜನರ ಕೈಯಲ್ಲಿ ಹಣದ ಚಲಾವಣೆ ಹೆಚ್ಚಾದರೆ, ಸರಕಾರಕ್ಕೆ ಲಾಭವಾಗುತ್ತದೆ.
 • ಹಾಗೆಯೇ ವ್ಯಾಪಾರ ವಹಿವಾಟು ಚುರುಕಾಗುತ್ತದೆ.
 • ಸರಕಾರಕ್ಕೆ ಕರದ ಮೂಲಕ ಆದಾಯ ಹೆಚ್ಚಳವಾಗುತ್ತದೆ.
 • ಹಾಗೆಯೇ ನಮ್ಮ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವುದರಿಂದ  ಬೆಳೆಗಾರರಿಗೆ ಲಾಭವಾಗುತ್ತದೆ.
 • ಸರಕಾರ ಉಚಿತವಾಗಿ ನೀಡುವ ಆಹಾರ ವಸ್ತುಗಳನ್ನು ಮಾರುಕಟ್ಟೆ ದರದಲ್ಲೇ ಖರೀದಿ ಮಾಡುತ್ತದೆ.
 • ಭಾರತ ಸರಕಾರ ಉಚಿತ ಆಹಾರ ಧಾನ್ಯ ವಿತರಣೆಗಾಗಿ ವಾರ್ಷಿಕ 2 ಟ್ರಿಲಿಯನ್ (1  ಟ್ರಿಲಿಯನ್ ಅಂದರೆ 1 ಲಕ್ಷ ಕೋಟಿ) ರೂಪಾಯಿಗಳನ್ನು ಅದಕ್ಕಾಗಿ ಬಳಕೆ ಮಾಡುತ್ತದೆ.
 • ಅದನ್ನು ಉಚಿತವಾಗಿ ನೀಡುವುದು ಸರಕಾರದ ಯೋಜನೆ ಅಷ್ಟೇ.
 • ಹೆಚ್ಚು ಹೆಚ್ಚು ಆಹಾರ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಹಂಚುವುದರಿಂದ ಅದು ತಿನ್ನಲು ಅಥವಾ ಇನ್ಯಾವುದೇ ಬಳಕೆಗೆ ಉಪಯೋಗವಾಗಿ ಅದರ ವಿನಿಯೋಗ ಆಗುತ್ತದೆ.
 • ಪ್ರತೀಯೊಬ್ಬನೂ ಹಣ ತೆತ್ತು ಖರೀದಿ ಮಾಡುವುದಾರರೆ ಅದಕ್ಕೆ ಇತಿ ಮಿತಿ ಇರುತ್ತದೆ.
 • ಹೆಚ್ಚಾಗಿ ಇದು ಮಿತ ಪ್ರಮಾಣದ ಖರೀದಿಯೇ ಆಗಿರುತ್ತದೆ.
 • ಬೇಡಿಕೆ ಸೃಷ್ಟಿಸುವ ಈ ಯೋಜನೆ ರೈತರ ಪಾಲಿಗೆ ಅನುಕೂಲಕರವಾಗುತ್ತದೆ.
ಭತ್ತಕ್ಕೆ ಬೆಲೆ ಹೆಚ್ಚಾದ ಕಾರಣ ರೈತರಲ್ಲಿ ಬೇಸಾಯದ ಹುರುಪು ಹೆಚ್ಚಾಗಿದೆ
ಭತ್ತಕ್ಕೆ ಬೆಲೆ ಹೆಚ್ಚಾದ ಕಾರಣ ರೈತರಲ್ಲಿ ಬೇಸಾಯದ ಹುರುಪು ಹೆಚ್ಚಾಗಿದೆ

ಕೆಲವರು ಉಚಿತವಾಗಿ ವಿತರಣೆ ಮಾಡುವ ಯೋಜನೆಯನ್ನು ಹಾಗೆ ಹೀಗೆ ಎನ್ನುತ್ತಾರೆ. ಸಣ್ಣ  ಪುಟ್ಟ ವ್ಯತ್ಯಯಗಳು ಆಗಬಹುದಾದರೂ ಒಟ್ಟಾರೆಯಾಗಿ ಇದು ಕೃಷಿ ಅರ್ಥ ವ್ಯವಸ್ಥೆಗೆ ಅನುಕೂಲ ಮಾಡಿಕೊಡುತ್ತದೆ. ಬೇಕಿದ್ದವನೂ ಬೇಡದವನೂ  ಇದನ್ನು ಪಡೆದೇ ಪಡೆಯುವ ಕಾರಣ ಖರ್ಚು ಅಥವಾ ಬಳಕೆ ಆಗುತ್ತದೆ.  ನಮ್ಮ ದೇಶದಲ್ಲಿ 800 ಮಿಲಿಯ ಜನ ಉಚಿತ ಆಹಾರ ಧಾನ್ಯಗಳ ಫಲಾನುಭವಿಗಳು ಇರುವ ಕಾರಣ ಇದು ಬೇಡಿಕೆಯ ಮೇಲೆ ಭಾರೀ ಒತ್ತಡವನ್ನು ಸೃಷ್ಟಿಸುತ್ತದೆ. ಆದ ಕಾರಣ ಖರೀದಿ ದರ ಏರಿಕೆಯಾಗುತ್ತದೆ. ರೈತರಿಗೆ ಅನುಕೂಲವಾಗುತ್ತದೆ.

ಸರಕಾರದ ಸ್ಟಾಕ್ ಕ್ಲೀಯರೆನ್ಸ್ ಸಹ ಆಗುತ್ತದೆ:

 • ಸರಕಾರ ಸಂಧಿಗ್ಧ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಆಹಾರ ಧಾನ್ಯಗಳನ್ನು ಉಗ್ರಾಣಗಳಲ್ಲಿ  (Food corporation of India) ಸಂಗ್ರಹ ಮಾಡಿಡುತ್ತವೆ.
 • ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಇವರು ಸರಕಾರ  ಘೋಷಿಸಿದ ಕನಿಶ್ಟ ಬೆಂಬಲ ಬೆಲೆಯಲ್ಲಿ ರೈತರಿಂದ ಆಹಾರದ ಧಾನ್ಯಗಳನ್ನು ಸಂಗ್ರಹಿಸುತ್ತದೆ.
 • ಇದನ್ನು ಕಾಲ ಕಾಲಕ್ಕೆ ಸರಿಯಾಗಿ ಖಾಲಿ ಮಾಡಿ ಹೊಸ ಸ್ಟಾಕುಗಳನ್ನು ಸಂಗ್ರಹಿಸಬೇಕಾಗುತ್ತದೆ.
 • ವಿಲೇವಾರಿ ಮಾಡಬೇಕಾದ ದಾಸ್ತಾನನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಹಂಚುವುದು ಸುಲಭವಾಗುತ್ತದೆ.
 • ಉಗ್ರಾಣಗಳಲ್ಲಿ  ದಾಸ್ತಾನು ಹೆಚ್ಚಾದಷ್ಟೂ ಅದು ಹಾಳಾಗಿ ನಷ್ಟವಾಗುತ್ತದೆ.
 • ಅದನ್ನು ಈ ರೀತಿ ವಿಲೇವಾರಿ ಮಾಡುವುದರಿಂದ ಉತ್ತಮ ಆಹಾರ ಧಾನ್ಯಗಳು ಸಾರ್ವಜನಿಕರಿಗೆ ಲಭ್ಯವಾಗುತ್ತದೆ.
 • ಸರಕಾರಕ್ಕೂ ದಾಸ್ತಾನು ಸುಲಭವಾಗುತ್ತದೆ.
 • ಹೆಚ್ಚಿನ ಅಧ್ಯಯನಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕಾರಣದಿಂದ ಬಡತನ ಹೇಗೆ ಕಡಿಮೆಯಾಗಿದೆ ಎಂಬುದರ ಬಗ್ಗೆಯೇ ನಡೆದಿವೆ.
 • ವಾಸ್ತವಾಗಿ ಇದು ರೈತರ ಉತ್ಪನ್ನಕ್ಕೆ ಬೇಡಿಕೆಯನ್ನೂ   ಹೆಚ್ಚಿಸಿಕೊಟ್ಟಿದೆ.
 • ಒಂದು ವೇಳೆ ಈ ರೀತಿಯ ವಿತರಣಾ ವ್ಯವಸ್ಥೆ ಇಲ್ಲದೇ ಹೋಗಿದ್ದರೆ, ರೈತರು ಬೆಳೆಯುವ ಅಕ್ಕಿ, ಗೋದಿ, ಬೇಳೆ ಕಾಳುಗಳಿಗೆ ಬೆಲೆ ಭಾರೀ ಕುಸಿತವಾಗುವ ಸಾಧ್ಯತೆಯೂ ಇದೆ.
 • ಸರಕಾರ ವರ್ಷದಿಂದ ವರ್ಷಕ್ಕೆ ಕನಿಶ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುತ್ತಾ ಬರುವ ಕಾರಣ ರೈತರಿಗೆ ಇದು ಅನುಕೂಲ.
 • 2013 ರಲ್ಲಿ  ಸರಕಾರದ ಕನಿಷ್ಟ ಬೆಂಬಲ ಬೆಲೆ  1345 ರೂ. ಇದ್ದುದು,  2022-23 ನೇ ಸಾಲಿಗೆ 2060 ರೂ. ಗಳಾಗಿವೆ.
 • ಹೀಗೇ ಏರುತ್ತಲೇ ಇದೆ.  ಸರಕಾರ ಈ ಬೆಲೆಗೆ ಭತ್ತ ಖರೀದಿ ಮಾಡುವಾಗ ಕೆಲವೊಮ್ಮೆ ತೆರೆದ ಮಾರುಕಟ್ಟೆಯಲ್ಲಿ ದರ ಮತ್ತೂ ಹೆಚ್ಚಳವಾಗುವುದೂ ಇದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಲಾಭ:

 • ಒಂದು ವೆಳೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಇಲ್ಲದಾಗಿದ್ದರೆ, ನಮ್ಮ ದೇಶದಲ್ಲಿ ಉತ್ಪಾದನೆ ಮಿಗತೆಯಾದಾಗ ಭಾರೀ ದರ ಕುಸಿತ ಉಂಟಾಗುತ್ತಿತ್ತು.
 • ಖರೀದಿದಾರರು ಲಾಭಕ್ಕಾಗಿ ಕೊಯಿಲಿನ ಸಮಯದಲ್ಲಿ ತೀರಾ ಕಡಿಮೆ ಬೆಲೆಗೆ ಖರೀದಿ ನಡೆಸಿ ರೈತರಿಗೆ ಅನ್ಯಾಯವಾಗುತ್ತಿತ್ತು.
 • ಈಗ ಅಂತಹ ಸಮಸ್ಯೆ ಇಲ್ಲದಾಗಿದೆ. ಇದು ಒಂದು ದೃಷ್ಟಿಯಲ್ಲಿ ರೈತರಿಗೆ ಆದ ಒಂದು ಅನುಕೂಲವೆಂದೇ ಹೇಳಬಹುದು.

ಸರಕಾರ ಉಚಿತವಾಗಿ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಬೇಕು. ಇದರಿಂದಾಗಿ ವಿಶೇಷವಾಗಿ ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗುತ್ತದೆ.ಆಹಾರ ಧಾನ್ಯಗಳು ಖರ್ಚಾದಷ್ಟೂ ಬೇಡಿಕೆ ಹೆಚ್ಚಾಗಿ, ಬೆಲೆ ಹೆಚ್ಚಳವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!