ರೈತರ ಆದಾಯ 60% ಹೆಚ್ಚಳವಾಗಿದೆ. ಹೇಗೆ?

by | Jul 22, 2022 | Government & Daily News (ಸರ್ಕಾರ ಮತ್ತು ದೈನಂದಿನ ಸುದ್ದಿ) | 0 comments

ಭಾತರ  ಸರಕಾರ 2022 ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿತ್ತು. ಆದರೆ ಮಹಾಮಾರಿ ಕೊರೋನಾ ಬಿಡದ ಕಾರಣ ಆ ಗುರಿ ಸ್ವಲ್ಪ ಮುಂದೆ ಹೋಗಿದೆ. ಆದರೂ ಲೆಕ್ಕಾಚಾರ ಹಾಕಿ ಸರಕಾರ ಹೇಳುತ್ತಿದೆ, 2012-13 6424 ಇದ್ದ ಕೃಷಿಕ ಕುಟುಂಬದ ಯಜಮಾನದ ಆದಾಯ 2018-19 ಕ್ಕೆ 10,218 ಕ್ಕೆ ಏರಿಕೆಯಾಗಿದೆ. ಇದರಂತೆ ಕೃಷಿಕನ ಆದಾಯ ಈಗಾಗಲೇ ಸುಮಾರು 60% ಹೆಚ್ಚಳವಾದಂತಾಗಿದೆ!

ಭಾರತ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೇಳಿಕೆಯಂತೆ ಸರಕಾರ ಹಾಕಿಕೊಂಡ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ರೈತ ಕುಟುಂಬದ ಆದಾಯ ಹೆಚ್ಚಳವಾಗುತ್ತಿದೆಯಂತೆ. ಆಡಳಿತಾರೂಢ ಸರಕಾರ ಪ್ರಾರಂಭದಿಂದಲೂ ರೈತರ ಆದಾಯ ಹೆಚ್ಚು ಮಾಡುವ ಯೋಜನೆಗಳನ್ನು ಅನುಷ್ಟಾನ ಮಾಡುತ್ತಾ ಬಂದಿದೆ. ಇದರ ಪರಿಣಾಮವೇ ರೈತ ಆದಾಯದ ಹೆಚ್ಚಳ. ಈ ಆದಾಯ ಹೆಚ್ಚಳಕ್ಕೆ ಭಾರತ ಸರಕಾರ ಪ್ರತೀ ರೈತ ಕುಟುಂಬಕ್ಕೆ ಕೊಡುವ ಕಿಸಾನ್ ಸಮ್ಮಾನ್ ನಿಧಿಯ ಕೊಡುಗೆಯೂ ಇದೆಯಂತೆ.

ರೈತರ ಆದಾಯ ಹೆಚ್ಚಳವೇ ಅಭಿವೃದ್ದಿ:

ಗ್ರಾಮೀಣ ಜನರ ಅದರಲ್ಲೂ ಕೃಷಿಕರ ಆದಾಯ ಹೆಚ್ಚಳವಾದರೆ ಅವರ ಖರೀದಿ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಇದರಿಂದ ಆರ್ಥಿಕ ಅಭಿವೃದ್ದಿ ಸಾಧ್ಯವಾಗುತ್ತದೆ. ಗ್ರಾಮೀಣ  ಸಣ್ಣ ಮಧ್ಯಮ ಸ್ಥರದ ಕೃಷಿಕರ ಆದಾಯ ಹೆಚ್ಚಳವಾದರೆ ದೇಶದ  ಆರ್ಥಿಕ ಅಡಿಪಾಯ ಗಟ್ಟಿಯಾಗುತ್ತದೆ. ಅದಕ್ಕಾಗಿಯೇ ಸರಕಾರ ಸಣ್ಣ , ಅತೀ ಸಣ್ಣ, ಮಧ್ಯಮ ಪ್ರಮಾಣದ ಕೃಷಿಕರ ಆರ್ಥಿಕ ಭದ್ರತೆಗೆ ಆದ್ಯತೆ ನೀಡುತ್ತದೆ.

2016 ರಲ್ಲಿ ಭಾರತ ಸರಕಾರದ ನ್ಯಾಶನಲ್ ಸಾಂಪ್ಲ್ ಸರ್ವೆ ಯಿಂದ ದೇಶದಲ್ಲಿ  ರೈತರ ಆದಾಯ ಹೇಗಿದೆ, ಎಂಬುದರ  ಸರ್ವೇ ಮಾಡಲಾಯಿತು.  ಅದರನ್ನು ಹೆಚ್ಚಿಸಲು ಏನೆಲ್ಲಾ ಮಾಡಬೇಕು ಎಂದು ತಿಳಿಯಲು ಕಮಿಟಿಯನ್ನು Ministerial Committee 2016 ರಲ್ಲಿ ರಚಿಸಲಾಯಿತು. ಅವರು  ಹಲವಾರು ಸುತ್ತಿನ ಮೀಟಿಂಗ್ ಗಳನ್ನು ನಡೆಸಿ ಸುಮಾರು ಏಳು ಅಂಶಗಳ  ಶಿಫಾರಸನ್ನು 2018  ಮಾಡಿತ್ತು, ಅದರಂತೆ ಸರಕಾರ ಅಭಿವೃದ್ದಿ, ಅನುದಾನ ಕಾರ್ಯಕ್ರಮಗಳನ್ನು ಕೈಗೊಂಡರೆ ದೇಶದ  ರೈತರ ಆದಾಯ ದ್ವಿಗುಣವಾಗಲು ಸಾಧ್ಯ ಎಂದಿದ್ದಾರೆ.

ಆದಾಯ ಹೆಚ್ಚಳಕ್ಕೆ ಕಮಿಟಿ ಶಿಫಾರಸುಗಳು:

 • ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಸಂಶೋಧನಾತ್ಮಕ ಪರಿಹಾರಗಳು.
 • ಪಶು ಸಂಗೋಪನೆ ಉತ್ತೇಜನ. ಹಸು, ಆಡು, ಕುರಿ, ಕೋಳಿ ಸಾಕಾಣೆ ಹೆಚ್ಚಿಸುವುದು.
 • ಸಂಪನ್ಮೂಲಗಳ ಮಿತ ಬಳಕೆ ಮತ್ತು ಅದರಲ್ಲಿ ಉಳಿತಾಯ ಮಾಡಿ ಖರ್ಚು ಕಡಿತ ಮಾಡುವುದು.
 • ಬೆಳೆ ಸಾಂದ್ರತೆ ಹೆಚ್ಚಿಸುವುದರ ಮೂಲಕ ಹೆಚ್ಚಿನ ಉತ್ಪಾದನೆ.
 • ಅಧಿಕ ಆದಾಯದ ಬೆಳೆಗಳನ್ನು ಪ್ರೋತ್ಸಾಹಿಸುವುದು(ಹಸುರು ಮನೆ ಬೇಸಾಯ ಇತ್ಯಾದಿ)
 • ರೈತರು ಬೆಳೆಯುವ ಬೆಳೆಗೆ ನ್ಯಾಯಯುತ ( ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ) ಬೆಲೆ ನಿರ್ಧಾರ.
 • ಕೃಷಿಯಲ್ಲಿ ಅನುತ್ಪಾದಕ ಮಾನವ ಸಂಪಮೂಲಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ
 • ಈ ಎಲ್ಲಾ ಕಾರ್ಯಕ್ರಮಗಳ ಅನುಷ್ಟಾನದಿಂದ ರೈತರ ಆದಾಯ ಹೆಚ್ಚಳವಾಗಲು ಸಾಧ್ಯ ಎಂಬುದು ನ್ಯಾಶನಲ್ ಸಾಂಪಲ್ ಸರ್ವೆ ಇವರ ಶಿಫಾರಸು. 

ಇದರ ಜೊತೆಗೆ Ministry of Statistics and Programme Implementation ಇವರು  Situation Assessment Survey (SAS)  ಮೂಲಕ 2018-19  ರ ಅವಧಿಯಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಸುತ್ತಿನ  ಅಧ್ಯಯನಗಳನ್ನು ಕೈಗೊಂಡಿತು.ಆ ಅಧ್ಯಯನದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲವು ಹೊಸ ಅಭಿವೃದ್ದಿ ಯೋಜನೆಗಳು, ಕೆಲವು ಬದಲಾವಣೆ ಮತ್ತು ಹೊಸ ನೀತಿ ನಿಯಮಗಳು ಅಗತ್ಯ ಎಂದು ಕಂಡುಕೊಳ್ಳಲಾಯಿತು.  ಅವುಗಳೆಂದರೆ,

ವೈಜ್ಞಾನಿಕ ಸಂಶೊಧನೆಗಳನ್ನು ಹುಡುಕಿ ಬೆಳೆ ಬೆಳೆಯುವ ಮಟ್ತಕ್ಕೆ ರೈತ ಬಂದಿದ್ದಾನೆ.
ವೈಜ್ಞಾನಿಕ ಸಂಶೊಧನೆಗಳನ್ನು ಹುಡುಕಿ ಬೆಳೆ ಬೆಳೆಯುವ ಮಟ್ತಕ್ಕೆ ರೈತ ಬಂದಿದ್ದಾನೆ.
 • ದೇಶದಾದ್ಯಂತ 10,000 ದಷ್ಟು ರೈತ ಉತ್ಪಾದಕ ಸಂಸ್ಥೆಗಳನ್ನು (FPO)ಸ್ಥಾಪಿಸಿ ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ಒದಗಿಸುವುದು. (ಕೃಷಿ ಅತ್ಮ ನಿರ್ಭರ ಭಾರತ)
 • ವಿಶೇಷ ಕೃಷಿ ಪೂರಕ ವ್ಯವಸ್ಥೆಗಳನ್ನು ಅನುಷ್ಟಾನಕ್ಕೆ ತರುವುದು, ಅದಕ್ಕಾಗಿ ಕೃಷಿ ಪೂರಕ ನಿಧಿಯಾಗಿ Agri Infrastructure Fund (AIF)  1 ಲಕ್ಷ ಕೊಟಿಯನ್ನು ಮೀಸಲಿಡುವುದು.
 • ರೈತರ ಖಾತೆಗೆ ಹಣದ ವರ್ಗಾವಣೆ PM-KISAN
 • ಬೆಳೆ ವಿಮಾ ಯೋಜನೆ Pradhan Mantri Fasal bhima Yojana (PMFBY),
 • ಕೃಷಿಕರ ನೀರಾವರಿ ಸಮಸ್ಯೆಗಳಿಗೆ ಸ್ಪಂದನೆ Pradhan Mantri Krishi Sinchayi Yojana  (PMKSY)
 • ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ. ಇದು ಉತ್ಪಾದನಾ ವೆಚ್ಚಕ್ಕಿಂತ 50% ಅಧಿಕ ಇರುವಂತೆ.
 • ಕೃಷಿ ಉತನಗಳನ್ನು ಸಂಗ್ರಹಣೆ ಮಾಡುವುದಕ್ಕಾಗಿ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಜೊತೆಗೆ ಹೊಸ ಸಂಗ್ರಹಣಾ ನೀತಿ AASHA Pradhan Mantri Annadata Aay Sanrakshan Abhiyan (PM-)
 • ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆ ಸಾಲ, ಬರೇ ಕೃಷಿಕರು ಮಾತ್ರವಲ್ಲ, ಮೀನು ಸಾಕಾಣಿಕೆದಾರರಿಗೂ ಇದನ್ನು ಒದಗಿಸುವುದು.
 • ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ National Mission for Sustainable Agriculture (NMSA), ಸ್ಥಾಪಿಸಿ ಅದರ ಮೂಲಕ ಹವಾಮಾನ ಬದಲಾವಣೆಯ ಸಂದರ್ಭದಲ್ಲೂ ಕೃಷಿಗೆ  ತೊಂದರೆ ಉಂಟಾಗದಂತೆ ಮಾಡುವುದು.
 • ಕೃಷಿ ಉತ್ಪನ್ನಗಳ ಮಾರುಕಟ್ಟೆ, ಸಾಗಾಟ ಮುಂತಾದ ಎಲ್ಲಾ ಕಡೆಗಳ ಎಲ್ಲಾ ಡಿಜಿಟಲೀಕರಣ.
 • ಡ್ರೋನು ತಂತ್ರಜ್ಞಾನವನ್ನು ಅಳವಡಿಸುವ ಮೂಲಕ  ಭಾರತದ  ಕೃಷಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವುದು.
 • ಕೃಷಿಕರು ಬರೇ ಕೃಷಿ ಮಾತ್ರವಲ್ಲದೆ ಜೇನು ಸಾಕಾಣೆ, ಮತ್ಸ್ಯ ಪಾಲನೆ, ಬಡ್ಡಿ ರಿಯಾಯಿತಿ, ಕೃಷಿ ಅರಣ್ಯ, ಬಿದಿರು ಬೆಳೆ ಅಭಿವೃದ್ದಿ, ( National bamboo mission) ಹೊಸ ತಂತ್ರಜ್ಞಾನದ ಜಲಾನಯನ ಅಭಿವೃದ್ದಿ ಇತ್ಯಾದಿಗಳನ್ನು ರಾಷ್ಟ್ರೀಯ ಗೋಕುಲ್ ಮಿಷನ್  ಮೂಲಕ ಅನುಷ್ಟಾನಗೊಳಿಸುವುದು.

ಸರಕಾರದ ಈ ಎಲ್ಲಾ ಯೋಜನೆ ಮತ್ತು ಸವಲತ್ತುಗಳನ್ನು ಕಳೆದ ನಾಲ್ಕು ವರ್ಷಗಳಿಂದ ಜ್ಯಾರಿಗೆ ತಂದಿದೆ. ಇದರ ಪರಿಣಾಮವಾಗಿ ರೈತರ ಆದಾಯ ಹಿಂದಿಗಿಂತ ಹೆಚ್ಚಳವಾಗಿದೆ. ವಾರ್ಷಿಕ 6000 ರೂ. ಪ್ರತೀ ರೈತರ ಖಾತೆಗೆ ಹಣ ವರ್ಗಾವಣೆ ಒಂದು ಉತ್ತಮ ಕೆಲಸ. ಹಾಗೆಯೇ ಬೆಳೆ ವಿಮೆ  ಎಂಬ ಯೋಜನೆ ಬಹುತೇಕ ರೈತರಿಗೆ ತುಂಬಾ ಅನುಕೂಲವನ್ನು ಮಾಡಿಕೊಟ್ಟಿದೆ. ಬಹುಷಃ ರೈತ  ಉತ್ಪಾದಕ ಸಂಸ್ಥೆಗಳು ಇಂದು ಹಳ್ಳಿ ಹಳ್ಳಿಯಲ್ಲಿ  ಚಾಪು ಮೂಡಿಸುತ್ತಿವೆ.ಸರಕಾರದ ಈ ಕಾರ್ಯಕ್ರಮಗಳ ಪ್ರಯೋಜನ ಪಡೆದವರು ಇದನ್ನು ಒಪ್ಪುತ್ತಾರೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!