ಕೇಂದ್ರ ಸರಕಾರದಿಂದ ರೈತರಿಗೆ 50,000 ರೂ. ಗ್ಯಾರಂಟಿ.

ಕೇಂದ್ರ ಸರಕಾರದಿಂದ ರೈತರಿಗೆ 50,000 ರೂ. ಗ್ಯಾರಂಟಿ.
[et_pb_section][et_pb_row][et_pb_column type=”4_4″][et_pb_text]

ಕರ್ನಾಟಕ ರಾಜ್ಯ ಸರಕಾರ 5 ಗ್ಯಾರಂಟಿಗಳನ್ನು ಜನತೆಗೆ ನೀಡಿದಂತೆ ಕೇಂದ್ರ ಸರಕಾರ ದೇಶದ ಸಮಸ್ತ ರೈತ ಬಾಂಧವರಿಗೆ ವರ್ಷಕ್ಕೆ 50000 ರೂ, ಗ್ಯಾರಂಟಿ ಕೊಡುಗೆಯನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕೆ ಬಡವರು, ಶ್ರೀಮಂತರು, ಮಹಿಳೆಯರು, ನಿರುದ್ಯೋಗಿಗಳು ಮುಂತಾದ ಶರ್ತಗಳಿಲ್ಲ. ರೈತರಾಗಿದ್ದರೆ ಸಾಕು ಅವರೆಲ್ಲಾ ಇದಕ್ಕೆ ಅರ್ಹರು.
ಕೇಂದ್ರ ಸರಕಾರ ಪ್ರಧಾನಮಂತ್ರಿ ಪ್ರಣಾಮ್ PM- PRANAM ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯ ಉದ್ದೇಶ ಸ್ವಾವಲಂಬಿ ಬದುಕು ನಡೆಸುವುದಾಗಿರುತ್ತದೆ.

ಕೃಷಿಕರು ಸ್ವಾವಲಂಭಿಗಳೇ ಆಗಿದ್ದರೂ ಸಹ ಕೆಲವು ಕೃಷಿ ಒಳಸುರಿಗಳಿಗಾಗಿ ಅವರು ಬೇರೆಯವರನ್ನು ಆಶ್ರಯಿಸಲೇ ಬೇಕಾಗಿದೆ.ಮುಖ್ಯವಾಗಿ ರಸಗೊಬ್ಬರಗಳು. ಎಲ್ಲಾ ರಸಗೊಬ್ಬರಗಳನ್ನೂ ನಾವು ವಿದೇಶಗಳಿಂದ ಆಮದು ಮಾಡಿಕೊಂಡು ಅದಕ್ಕೆ 50% ಕ್ಕೂ ಹೆಚ್ಚು ಸಹಾಯಧನವನ್ನು ನೀಡಿ ರೈತರಿಗೆ ಕೊಡುತ್ತಿದ್ದೇವೆ. ದೇಶವು ಪ್ರತೀ ವರ್ಷ ರಸಗೊಬ್ಬರ ಸಬ್ಸಿಡಿಗಾಗಿ 6.5 ಲಕ್ಷ ಕೋಟಿಗಳಷ್ಟು ವ್ಯಯಿಸುತ್ತದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಳವಾಗುತ್ತಲೇ ಇರುತ್ತದೆ. ಅದಕ್ಕನುಗುಣವಾಗಿ ಗೊಬ್ಬರಗಳ ಬೆಲೆ ಹೆಚ್ಚಳ ಮಾಡಿದರೆ ರೈತರಿಗೆ ಅನ್ಯಾಯವಾಗುತ್ತದೆ. ವರ್ಷಗಳು ಕಳೆದಂತೆ ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ. ಇದಕ್ಕೆ ಪರಿಹಾರ ನಾವು ಅವಲಂಬನೆಯನ್ನು ಕಡಿಮೆ ಮಾಡುವುದು. ಅದು ಹೇಗೆಂದರೆ ನಮ್ಮ ಹೊಲಕ್ಕೆ ಬೇಕಾಗುವ ಗೊಬ್ಬರಗಳನ್ನು ನಾವೇ ಉತ್ಪಾದಿಸುವುದು. ಆ ಮೂಲಕ ಕೃಷಿಯಲ್ಲಿ ಸ್ವಾವಲಂಬಿಗಳಾಗುವುದು.


ನಾವು ಬೆಳೆ ಪೋಷಣೆಗೆ ಗೊಬ್ಬರವಾಗಿ ರಸ ಗೂಬ್ಬರಗಳನ್ನು ಬಳಸಲು ಪ್ರಾರಂಭಮಾಡಿದ್ದು, ಕಳೆದ 50 ವರ್ಷಗಳ ಹಿಂದಿನಿಂದ. ಅದಕ್ಕೂ ಹಿಂದೆ ನಾವು ನಮ್ಮಲ್ಲೇ ಇರುವ ಮೂಲವಸ್ತುಗಳ ಮೂಲಕ ಕೃಷಿ ಮಾಡುತ್ತಿದ್ದೆವು. ಕೃಷಿ ಹೆಚ್ಚು ಮಾಡಿದರೆ ದನ, ಎಮ್ಮೆ, ಹೆಚ್ಚು ಹೆಚ್ಚು ಸಾಕುತ್ತಿದ್ದೆವು. ಈಗ ಕೃಷಿ ವಿಸ್ತರಣೆ ಮಾಡುವುದು ಹೆಚ್ಚಾಗಿದೆ. ಹಿಂದಿನ ಮೂಲವಸ್ತುಗಳ ಲಭ್ಯತೆಯೂ ಕಡಿಮೆಯಾಗಿದೆ. ಹಾಗಾಗಿ ರಸಗೊಬ್ಬರಗಳು ಅನಿವಾರ್ಯವಾಗಿವೆ. ರಸ ಗೊಬ್ಬರಗಳಿಗಾಗಿ ವ್ಯಯಿಸುವ ದುಡ್ಡಿನಲ್ಲಿ ಅರ್ಧ ಪಾಲು ಉಳಿತಾಯವಾದರೂ ನಮ್ಮ ರೈತರಿಗೆ ಇಂತಹ ಗ್ಯಾರಂಟಿ ಹಣವನ್ನು ನೀಡುವುದು ಸಾಧ್ಯ.


50000 ಪಡೆಯುವುದು ಹೇಗೆ?

 • ಪ್ರಧಾನಮಂತ್ರಿ ಪ್ರಣಾಮ್ ಯೋಜನೆ ಅಂದರೆ ಭೂಮಿಯ ಫಲವತ್ತತೆಯ ಪುನರ್ ಸ್ಥಾಪನೆ, ಸುಧಾರಣೆ ಪೋಷಣೆ ಮತ್ತು ಜಾಗೃತಿ ಕಾರ್ಯಕ್ರಮ. Program for Restoration Awareness Nurishment and Amelioration of Mother earth).
 • ಇದು ಈಗಿನ ಪರಿಸ್ಥಿತಿಗೆ ಅನಿವಾರ್ಯವೂ ಆಗಿರುತ್ತದೆ.
 • ಭೂ ಫಲವತ್ತತೆ ಕ್ಷೀಣವಾಗಿರುವುದು ಕೃಷಿಗೆ ಅತೀ ದೊಡ್ಡ ಸವಾಲಾಗಿದೆ.
 • ಇಂದಲ್ಲ ನಾಳೆ ನಾವು ಭೂಮಿಯ ಫಲವತ್ತತೆ ಹೆಚ್ಚಳಕ್ಕೆ ಗಮನ ಕೊಡಲೇ ಬೇಕು.
 • ಅದು ಸಾವಯವ ವಿಧಾನದ ಕೃಷಿ ಪದ್ದತಿಯಿಂದ ಮಾತ್ರ ಸಾಧ್ಯ.
 • ನಾವೆಲ್ಲಾ ಕೃಷಿ ಮಾಡುವ ಮಣ್ಣು ಎಂಬ ಮಾಧ್ಯಮ ಫಲವತ್ತಾಗಿರಬೇಕಾದರೆ ಅದಕ್ಕೆ ಸ್ಥೂಲ ಸಾವಯವ ಗೊಬ್ಬರ (BULK MANURE) ಕೊಡುತ್ತಾ ಇರಬೇಕಾಗುತ್ತದೆ.
 • ಮಣ್ಣು ಬೇಸಾಯ ಯೋಗ್ಯ ಆದುದೇ ಅದಕ್ಕೆ ಸಾವಯವ ವಸ್ತುಗಳು ನಿರಂತರವಾಗಿ ಸೇರ್ಪಡೆಯಾಗುತ್ತಾ ಬಂದಿರುವುದರಿಂದ.
 • ಸಾವಯವ ವಸ್ತುಗಳು ಮಣ್ಣಿನ ರಚನೆ ಸುಧಾರಿಸುತ್ತಾ ಸಸ್ಯಗಳಿಗೆ ಪೋಷಕಾಂಶವನ್ನೂ ಪೂರೈಕೆ ಮಾಡುತ್ತಾ ಇರುತ್ತದೆ.
 • ಮಳೆ, ಗಾಳಿಯೇ ಮುಂತಾದವುಗಳಿಂದ, ಸಸ್ಯಗಳು ಬೆಳವಣಿಗೆಗೆ ಬಳಕೆಮಾಡಿಕೊಂಡು ಈ ಪಲವತ್ತತೆ ವರ್ಷ ವರ್ಷ ಕ್ಷಿಣೀಸುತ್ತಾ ಬರುತ್ತದೆ.
 • ಅದನ್ನು ಮರು ಪೂರೈಕೆ ಮಾಡದಿದ್ದರೆ ಮಣ್ಣು ಬರಡಾಗುತ್ತದೆ.
 • ಅದೇ ಉದ್ದೇಶಕ್ಕಾಗಿ ಸಾವಯವ ವಸ್ತುಗಳನ್ನು ಕೃಷಿಗೆ ಅಗತ್ಯವಾಗಿ ಪೂರೈಕೆ ಮಾಡಬೇಕು ಎನ್ನುವುದು.
 • ಸರಕಾರ ತಜ್ಞರ ಮೂಲಕ ಅಧ್ಯಯನ ಮಾಡಿದ ಪ್ರಕಾರ ದೇಶದಾದ್ಯಂತ ಕೃಷಿಯ ಮೇಲೆ ಒತ್ತಡ ಹೆಚ್ಚಾಗಿ ಮಣ್ಣು ಸಾವಯವ ವಸ್ತುಗಳ ಕೊರತೆಯನ್ನು ಅನುಭವಿಸುತ್ತಿದೆ.
 • ಅದನ್ನು ಮರುಸ್ಥಾಪನೆಯ ಉದೇಶವೇ PM- PRANAN ಎಂಬ ಯೋಜನೆ.
 • ಇಲ್ಲಿ ಯಾರು ಸಾವಯವ ಕೃಷಿ ಮಾಡುತ್ತಾರೆಯೋ ಅವರೆಲ್ಲಾ ಆನ್ ಲೈನ್ ಮೂಲಕ ಇದಕ್ಕೆ ನೋಂದಣೆ ಮಾಡಿಕೊಳ್ಳಬಹುದು.
 • ರೈತರು, ರೈತರ ಸಂಘಟನೆಗಳು, ಪಂಚಾಯತುಗಳು, ಸ್ವ ಸಹಾಯ ಸಂಘಗಳು, ರೈತ ಉತ್ಪಾದಕ ಕಂಪೆನಿಗಳು ಈ ಯೋಜನೆಯಲ್ಲಿ ಸೇರಿಕೊಳ್ಳಬಹುದು.
 • ನೊಂದಣೆಯಾದ ರೈತರ ಹೊಲ ಮತ್ತು ಚಟುವಟಿಕೆಗಳ ಕುರಿತಾಗಿ ಸ್ಥಳೀಯವಾಗಿ ಪರಿಶೀಲನೆ ನಡೆಸಲು ವ್ಯವಸ್ಥೆ ಇರುತ್ತದೆ.
 • ಅರ್ಹ ರೈತರಿಗೆ PM KISAN ಯೋಜನೆಯ ಹಣ ಖಾತೆಗೆ ವರ್ಗಾವಣೆ ಆದಂತೆ ಈ ಯೋಜನೆಯ ಸಹಾಯಧನವನ್ನು ನೀಡಲಾಗುತ್ತದೆ.
 • ಕೇಂದ್ರ ಸರಕಾರವು ಈ ಯೋಜನೆಗಾಗಿ 368000 ಕೋಟಿ ಅನುದಾನವನ್ನು ಮೀಸಲಿಟ್ಟಿದೆ.
 • ಗೊಬ್ಬರ ಒಳಸುರಿಗೆ 30% ಸಹಾಯಧನ ಹಾಗೂ 70% ಸಹಾಯಧನವನ್ನು ಶಾಶ್ವತ ವ್ಯವಸ್ಥೆ ( ಗೊಬ್ಬರ ತಯಾರಿಕಾ ಪಿಟ್ ಗಳು, ಗೋಬರ್ ಗ್ಯಾಸ್ ಸ್ಥಾವರ , ಯಂತ್ರ ಸಾಧನ ಇತ್ಯಾದಿ)ಗಳಿಗೆ ಒದಗಿಸುತ್ತದೆ.
ಬೆಳೆಗೆ ನೀರುಣಿಸುತ್ತಿರುವ ರೈತ


ಯೋಜನೆಗೆ ಯಾರೆಲ್ಲಾ ಅರ್ಹರು:

 • ಭಾರತ ದೇಶದ ಎಲ್ಲಾ ಕೃಷಿಕರೂ ಈ ಯೋಜನೆಗೆ ಅರ್ಹರು. ಮುಖ್ಯವಾಗಿ ಸಾವಯವ ಕೃಷಿ, ನೈಸರ್ಗಿಕ ಕೃಷಿ , ಜೈವಿಕ ಕೃಷಿ ಕ್ರಮವನ್ನು ಅಳವಡಿಸಿಕೊಂಡಿರಬೇಕು.
 • ಹಸು ಸಾಕಣೆ ಮಾಡುವುದು ಅತ್ಯಗತ್ಯ. ಸಾಂಪ್ರದಾಯಿಕವಾಗಿ ಯಾವ ರೀತಿ ನಾವು ಕೃಷಿ ಮಾಡುತ್ತಿದ್ದೆವೋ ಅದೇ ಪ್ರಕಾರವಾಗಿ ಮಾಡಬೇಕು.
 • ಸಾಕಷ್ಟು ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಮಣ್ಣಿನ ಭೌತಿಕ, ಜೈವಿಕ ಮತ್ತು ರಾಸಾಯನಿಕ ಗುಣಧರ್ಮಗಳನ್ನು ಸುಧಾರಿಸಬೇಕು.
 • ಇದು ಮಣ್ಣಿಗೆ ನೀರು ಹಿಡಿದಿಡುವ ಶಕ್ತಿಯನ್ನು ಕೊಡುತ್ತದೆ. ಮಣ್ಣು ಸವಕಳಿ ತಡೆಯಲ್ಪಡುತ್ತದೆ.
 • ಹೆಚ್ಚು ಸಮಯದ ತನಕ ಕೃಷಿ ಮಾಡಲು ಮಣ್ಣು ಸಹಕಾರ ಕೊಡುತ್ತದೆ.
 • ಪ್ರತೀ ವರ್ಷ ನಮ್ಮ ಕೃಷಿ ಭೂಮಿಯಿಂದ ಹೆಕ್ಟೇರಿಗೆ 15.35 ಟನ್ ನಷ್ಟು ಫಲವತ್ತಾದ ಮೆಕ್ಕಲು ಮಣ್ಣು ಕೊಚ್ಚಣೆಯಾಗಿ ನೀರಿನ ಪಾಲಾಗುತ್ತದೆ ಎಂಬುದಾಗಿ National academy for agricultural sciences NASS ವರದಿ ಮಾಡಿದೆ.
 • ಇದರ ಜೊತೆಗೆ ಸುಮಾರು 5-8 ಟನ್ ನಷ್ಟು ಪೋಷಕಗಳೂ ನೀರು ಪಾಲಾಗುತ್ತದೆ.
 • ಪ್ರತೀ ವರ್ಷ ನಮ್ಮ ದೇಶದಲ್ಲಿ 120 ಮಿಲಿಯನ್ ಹೆಕ್ಟೇರಿನಷ್ಟು ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ.
 • ಇದನ್ನು ತಡೆದರೆ ನಾವು ಅರ್ಧಕ್ಕೂ ಹೆಚ್ಚು ರಸಗೊಬ್ಬರ ಬಳಕೆ ಕಡಿಮೆ ಮಾಡಬಹುದು.
 • ಕೃಷಿ ವೃತ್ತಿಯಲ್ಲಿ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ವಸ್ತುಗಳ ಮೂಲಕ ಮಣ್ಣು , ನೀರು ಸಂರಕ್ಷಣೆಗೆ ಆದ್ಯತೆ ನೀಡಿ ಕೃಷಿ ಮಾಡುವವರೆಲ್ಲಾ ಇದಕ್ಕೆ ಅರ್ಹರು.


ಉತ್ತಮ ಯೋಜನೆ:

 • ಕೃಷಿಯನ್ನು ನಿರಂತರವಾಗಿ ಮಾಡುತ್ತಾ ಇರಬೇಕಾದರೆ ಮಣ್ಣು ಸಹಕಾರ ಕೊಡಲೇ ಬೇಕು.
 • ಪ್ರಾರಂಭದ ಕೆಲವು ವರ್ಷಗಳಲ್ಲಿ ಮಣ್ಣು ರಸಗೊಬ್ಬರಕ್ಕೆ ಹೊಂದಾಣಿಕೆ ಆಗಬಹುದು.
 • ಆದರೆ ಅದು ನಿರಂತರ ಅಲ್ಲ. ಸಾವಯವ ಅಂಶ ಇಲ್ಲದಿದ್ದರೆ ಮಣ್ಣು ಕೃಷಿಗೆ ಸಹಕಾರ ಕೊಡಲಾರದು.
 • ಈ ದೂರದೃಷ್ಟಿಯನ್ನು ಇಟ್ಟುಕೊಂಡು ಮಾಡಲಾದ ಯೋಜನೆ ಇದು.
 • ಇಲ್ಲಿ ಯಾವ ಮಧ್ಯವರ್ತಿಗಳೂ ಇಲ್ಲದೆ ರೈತರಿಗೆ ನೇರ ಹಣದ ವರ್ಗಾವಣೆ ಇರುತ್ತದೆ.
 • ಎಲ್ಲಾ ರೈತರೂ ಒಂದೇ ಸಲ ಈ ಯೋಜನೆಯಂತೆ ಸಾವಯವ ಕೃಷಿಗೆ ಪರಿವರ್ತನೆ ಆಗಲು ಅಸಾಧ್ಯ.
 • ಸ್ವಲ್ಪ ಸ್ವಲ್ಪವೇ ಜನ ಬದಲಾವಣೆ ಮಾಡಿಕೊಳ್ಳುತ್ತಾ ಬಂದರೆ ಸರಕಾರ ರಸಗೊಬ್ಬರಗಳಿಗೆ ವ್ಯಯಿಸುವ ಕೋಟ್ಯಾಂತರ ರೂಪಾಯಿಗಳ ಸಬ್ಸಿಡಿಯನ್ನು ಉಳಿಸಿ ಅದನ್ನು ರೈತರಿಗೆ ಬೇರೆ ರೂಪದಲ್ಲಿ ನೀಡಬಹುದಾಗಿದೆ.
 • ಮಣ್ಣೂ ಶ್ರೀಮಂತವಾಗುತ್ತದೆ. ಕೃಷಿಕನೂ ಗೊಬ್ಬರದ ವಿಚಾರದಲ್ಲಿ ಸ್ವಾವಲಂಭಿಯಾಗುತ್ತಾನೆ.


ಕೇಂದ್ರ ಸರಕಾರ ರೈತರಿಗೆ ಅನುಕೂಲವಾಗುವ ಬೇರೆ ಬೇರೆ ಯೋಜನೆಗಳನ್ನು ಹಮ್ಮಿಕೊಂಡಿರುವುದು ನಮಗೆಲ್ಲಾ ಗೊತ್ತಿದೆ. ಯಾವ ಸರಕಾರವೂ ಮಾಡದ ವಾರ್ಷಿಕ 6000 ರೂ. ರೈತನ ಖಾತೆಗೆ ಹಣ ವರ್ಗಾವಣೆ ಮಾಡಿದೆ.ಪಸಲ್ ಭಿಮಾ ಯೋಜನೆ ಎಂಬ ಹವಾಮಾನ ಆಧರಿತ ಬೆಳೆ ವಿಮೆ ಜ್ಯಾರಿಗೆ ತಂದಿದೆ. ಹಾಗೆಯೇ ಸೌರ ಶಕ್ತಿ ಬಳಕೆ ಉತ್ತೇಜನಕ್ಕೆ PM KUSUM ಯೋಜನೆ ಮುಂತಾದವುಗಳನ್ನು ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.ಅಂತದ್ದೇ ಇದೂ ಒಂದು ಮುಂದಾಲೋಚನಾ ಯೋಜನೆ.

[/et_pb_text][/et_pb_column][/et_pb_row][/et_pb_section]

Leave a Reply

Your email address will not be published. Required fields are marked *

error: Content is protected !!