ಬೆಳೆ ವಿಮೆ – ಅಗತ್ಯವಾಗಿ ಮಾಡಿಸಿ.

ಬೆಳೆ ವಿಮೆಯ ನಿರೀಕ್ಷೆಯಲ್ಲಿ ರೈತ

ಭಾರತ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (PMPBY or WBCIS) ರೈತರು ತಪ್ಪದೇ ಮಾಡಿಸಿಕೊಳ್ಳಿ ಮತ್ತು ಪ್ರಯೋಜನವನ್ನು ಪಡೆಯಿರಿ.

ಕೃಷಿ ಮತ್ತು ಹವಾಮಾನ ಪರಸ್ಪರ ಹೊಂದಾಣಿಕೆಯಲ್ಲಿ ಮುಂದುವರಿದರೆ ಎಲ್ಲವೂ ಅನುಕೂಲಕರವಾಗಿಯೇ ಇರುತ್ತದೆ. ಆದರೆ ಯಾವ ರೈತನ ಕೈಯಲ್ಲೂ, ಯಾವ ಸರಕಾರದ ಕೈಯಲ್ಲೂ ಅದನ್ನು ಹೊಂದಾಣಿಕೆಗೆ ತರಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲವೂ ಸರಿ ಇರುತ್ತದೆ.ಇದು ನಮಗೆ ಅರಿವಿಗೆ ಬರುವುದಿಲ್ಲ. ಯಾವಾಗಲೂ ಏನೂ ಆಗಬಹುದು. ಆದ ಕಾರಣ ಎಷ್ಟೋ ನಷ್ಟ ಆಗುತ್ತದೆ.ಲಾಭವೂ ಆಗುತ್ತದೆ. ಹಾಗೆ ತಿಳಿದು ವಿಮೆಯನ್ನು ಮಾಡಿಸಿಬಿಡಿ.

  • ಸರಕಾರ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಜೂನ್ ತಿಂಗಳಲ್ಲಿ ಅಂತಿಮ ಗಡುವನ್ನು ನಿರ್ಧರಿಸುತ್ತದೆ.
  • ಈ ವರ್ಷದ ಬೆಳೆ ವಿಮೆಯ ಅಂತಿಮ ದಿನಾಂಕ ಜೂನ್ ಕೊನೆ ಆಗಿದ್ದು, ಆಯಾಯ ಜಿಲ್ಲೆಗಳಲ್ಲಿ ಬೇರೆ ಬೇರೆ  ದಿನಾಂಕವನ್ನು ನಿರ್ಧರಿಸಿದಂತೆ ಅದರ ಒಳಗೆ ನೊಂದಾಯಿಸಿಕೊಳ್ಳಿ.
  • ಎಲ್ಲಾ ಬೆಳೆಗಾರರೂ ವಿಮೆ ಮಾಡಿಸಿಕೊಳ್ಳಿ. ಏನಾದರೂ ಅತಿವೃಷ್ಟಿ, ಅನಾವೃಷ್ಟಿ ಮುಂತಾದ ತೊಂದರೆಗಳಾದರೆ ವಿಮೆಯು ನಿಮಗೆ ಹೆಗಲು ಕೊಡಬಹುದು.
ವಿಮೆಗೆ ಒಳಪಡುವ ಬೆಳೆ- Crop covered under insurance

ಕರ್ನಾಟಕದಲ್ಲಿ ಯಾವ ಬೆಳೆಗೆ ವಿಮೆ ಇದೆ:

  • ರಾಜ್ಯದ ಬೀದರ್ ನಿಂದ ಪ್ರಾರಂಭವಾಗಿ ಚಾಮರಾಜ ನಗರದ ತನಕ ಬೆಳೆಯುವ ಎಲ್ಲಾ ಎಣ್ಣೆ ಕಾಳು ಬೆಳೆ,
  • ಆಹಾರ ಬೆಳೆ, ಧಾನ್ಯದ ಬೆಳೆ,ತೋಟಗಾರಿಕಾ ಬೆಳೆ, ಸಾಂಬಾರ ಬೆಳೆ , ಹಣ್ಣು ಹಂಪಲು ಬೆಳೆಗಳು ಈ ವಿಮಾ ವ್ಯಾಪ್ತಿಯಲ್ಲಿ ಬರುತ್ತವೆ.
  • ಆಯಾ ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಗಳು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳನ್ನು ಸೇರಿಸಲಾಗಿದೆ ಅದಕ್ಕೆ ಎಷ್ಟು ವಿಮಾ ಮೊತ್ತ ನಿರ್ಧರಿಸಲಾಗಿದೆ ಎಂಬುದನ್ನು ತಿಳಿಸುತ್ತಾರೆ.
  • ಇದನ್ನು ಹೆಚ್ಚಿನವರು ಹಸ್ತ ಪ್ರತಿಯಲ್ಲಿ ಮುದ್ರಿಸಿ ಹಂಚಿರುತ್ತಾರೆ.
  • ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ತೋಟಗಾರಿಕಾ ಇಲಾಖೆ ಮತ್ತು ತಾವು ಸಾಲ ಇತ್ಯಾದಿ ಪಡೆದಿರುವ ಬ್ಯಾಂಕುಗಳಲ್ಲಿ ಈ ಬಗ್ಗೆ ವಿಚಾರಿಸಿ ವಿಮೆ ಮಾಡಿಸಿ.
ವಿಮೆ ಮಾಡುವವರಿಗೆ ಮಾಹಿತಿ – hand bill for insurer
ವಿಮೆ ಮಾಡುವವರಿಗೆ ಇಂತಹ ಮಾಹಿತಿ ಆಯಾ ಜಿಲ್ಲೆಯಲ್ಲಿ ಲಭ್ಯ

ವಿಮೆ ಕಡ್ದಾಯ ಅಲ್ಲ ಅದರೂ ಮಾಡಿಸಿ:

  • ವಿಮೆ ಮಾಡಿಸಲೇ ಬೇಕು ಎಂದಿಲ್ಲ. ಸಾಲ ಇಲ್ಲದವರೂ ಸಹ ವಿಮೆ ಮಾಡಿಸಬಹುದು.
  • ಮಾಡಿಸದೇ ಇದ್ದರೆ ಎನಾಗುತ್ತದೆ ಎಂದರೆ, ಶಾಲಾ ಮಕ್ಕಳು ನಾನು ಓದಲೇ ಇಲ್ಲ. ಈ ಬಾರಿ ಕಷ್ಟ ಎಂದು ಸಹಪಾಠಿಗಳಿಗೆ ಹೇಳಿಕೊಂಡು ಚೆನ್ನಾಗಿ ಓದಿ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿದಂತೆ ಆಗುತ್ತದೆ.
  • ನಮ್ಮ ಮಿತ್ರರಿಗೆ ಬೆಳೆ ವಿಮೆ ಪರಿಹಾರ ಬಂದಾಗ ನಿಮಗೆ ಯಾಕಪ್ಪಾ ಮಾಡಿಸಲಿಲ್ಲ ಎಂಬ ಕೊರಗು ಉಂಟಾಗುವುದು ಬೇಡ. 
  • ಕೆಲವು ಸಹಕಾರಿ ಸಂಘಗಳು ನಿಮಗೆ ಒತ್ತಾಯ ಮಾಡದೆ ಇರಬಹುದು.
  • ಕಾರಣ ಅವರಿಗೆ ಕೆಲಸ ಹಗುರವಾಗುತ್ತದೆ. ಹಾಗೆಂದು ನೀವು ಹಿಂಜರಿಯದಿರಿ.
Advertisement 13

ಎಲ್ಲಾ ಬೆಳೆಗಳಿಗೂ ವಿಮೆ ಮಾಡಿಸಿ:

  • ಅಡಿಕೆ ಬೆಳೆಗಾರರಲ್ಲಿ ಬರೇ ಅಡಿಕೆಗೆ ಮಾತ್ರವಲ್ಲ. ಕರಿಮೆಣಸಿಗೂ ವಿಮೆ ಇದೆ.
  • ಹಾಗೆಯೇ ತೆಂಗಿಗೂ ಇದೆ. ಇದೆಲ್ಲವನ್ನೂ ಸೇರಿಸಿ ವಿಮೆ ಮಾಡಿ.
  • ಯಾಕೆಂದರೆ ವ್ಯಾಪಕವಾಗಿ ಯಾವುದಾದರೂ ಒಂದು ಬೆಳೆಗೆ ಹಾನಿಯಾದರೆ ಆದು ನಿಮ ಆಯ್ಕೆಯಲ್ಲಿ ಇಲ್ಲದಿದ್ದರೆ ನಿಮಗೆ ವಿಮೆ ಲಭ್ಯವಾಗುವುದಿಲ್ಲ.
ಆನ್ ಲೈನ್ ನೊಂದಣೆಗೆ ಈ ಪುಠಕ್ಕೆ ಹೋಗಿ
ಆನ್ ಲೈನ್ ನೊಂದಣೆಗೆ ಈ ಪುಠಕ್ಕೆ ಹೋಗಿ

ವಿಮೆ ಒದಗಿಸುವ ಕಂಪೆನಿಗಳು:

  • Agriculture Insurance Company
  • Cholamandalam MS General Insurance Company
  • Reliance General Insurance Co. Ltd.
  • Bajaj Allianz
  • Future Generali India Insurance Co. Ltd.
  • HDFC ERGO General Insurance Co. Ltd.
  • IFFCO Tokio General Insurance Co. Ltd.
  • Universal Sompo General Insurance Company
  • ICICI Lombard General Insurance Co. Ltd.
  • Tata AIG General Insurance Co. Ltd.
  • SBI General Insurance
  • United India Insurance Co.  ಇವರಲ್ಲಿಯೂ ರೈತರು ತಮ್ಮ ಪಹಣಿ, ಅಧಾರ ಸಂಖ್ಯೆ, ಪಾಸ್ ಪುಸ್ತಕದ ಸಮೇತ ದಾಖಲೆಗಳೊಂದಿಗೆ ವಿಮೆಗೆ ನೊಂದಾಯಿಸಿಕೊಳ್ಳಬಹುದು.

ವಿಮೆ- ಯಾವುದಕ್ಕೆ ಇದೆ- ಯಾವುದಕ್ಕೆ ಇಲ್ಲ:

  • ಇಳುವರಿ ನಷ್ಟಗಳು (ಫಸಲು ಕೊಡುತ್ತಿರುವ  ಬೆಳೆಗಳು, ನಿರ್ದಿಷ್ಟ ಪ್ರದೇಶದ ಆಧಾರದ ಮೇಲೆ):
  • ತಡೆಗಟ್ಟಲಾಗದ ಪೂರ್ವಭಾವಿಯಾಗಿ  ಗೊತ್ತಿರದ ಅಪಾಯಗಳಾದ  ನೈಸರ್ಗಿಕ ಬೆಂಕಿ ಮತ್ತು ಮಿಂಚು , ಬಿರುಗಾಳಿ, ಆಲಿಕಲ್ಲು ಚಂಡಮಾರುತ, ಚಂಡಮಾರುತ, ಬಿರುಗಾಳಿ, ಸುಂಟರಗಾಳಿ ಇತ್ಯಾದಿ ಗಳಿಗೆ ವಿಮೆ ಇರುತ್ತದೆ.
  • ಪ್ರವಾಹ, ಪ್ರವಾಹ ಮತ್ತು ಭೂಕುಸಿತ ಬರ, ಶುಷ್ಕ, ಕೀಟಗಳು / ರೋಗಗಳು ಇತ್ಯಾದಿ  ವಿಮೆಗೆ ಒಳಪಟ್ಟಿರುತ್ತದೆ.
  • ಅಧಿಸೂಚಿತ ಪ್ರದೇಶದಲ್ಲಿ ಅಪಾಯದ ಮುನ್ನೆಚ್ಚರಿಕೆ ಇದ್ದರೂ  ಬಹುಪಾಲು ವಿಮೆ ಮಾಡಿದ ರೈತರು, ಬಿತ್ತನೆ / ಗಿಡ ನೆಡುವ ಉದ್ದೇಶ ಮತ್ತು ಉದ್ದೇಶಕ್ಕಾಗಿ ಖರ್ಚು ಮಾಡಿದ್ದರೆ ಅಂತಹ  ಸಂದರ್ಭಗಳಲ್ಲಿ, ಪ್ರತಿಕೂಲ ಹವಾಮಾನದಿಂದಾಗಿ ಬೆಳೆ ನಷ್ಟವಾದರೆ -ವಿಮೆ ಮಾಡಿದ 1.3 ರ ಗರಿಷ್ಠ 25% ವರೆಗಿನ ನಷ್ಟ ಪರಿಹಾರಕ್ಕೆ ರೈತರು ಅರ್ಹರಾಗಿರುತ್ತಾರೆ.
  • ಕೊಯಿಲೋತ್ತರ  ನಷ್ಟಗಳು (ವೈಯಕ್ತಿಕ ಕೃಷಿ ಆಧಾರ): ಕೊಯ್ಲು ಮಾಡಿದ ನಂತರ ಹೊಲದಲ್ಲಿ ಒಣಗಲು ಹಾಕಿದ  ಸ್ಥಿತಿಯಲ್ಲಿ ಇರಿಸಲಾಗಿರುವ ಬೆಳೆಗಳಿಗೆ ಚಂಡಮಾರುತ / ಚಂಡಮಾರುತದ ಮುಂತಾದ ಅಪಾಯಗಳ ಮುನ್ಸೂಚನೆಗೆ ವಿರುದ್ಧವಾಗಿ ದೇಶಾದ್ಯಂತ ಮಳೆ, ಅಕಾಲಿಕ ಮಳೆ, ಅಂದರೆ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಪ್ರವಾಹವು ಬಂದರೆ ಅದಕ್ಕೆ ವಿಮೆ ಅನ್ವಯವಗುತ್ತದೆ.
  • ಯುದ್ಧ ಮತ್ತು ಬಂಧಿತ ಅಪಾಯಗಳು, ಪರಮಾಣು ಅಪಾಯಗಳು, ಗಲಭೆಗಳು, ದುರುದ್ದೇಶಪೂರಿತ ಹಾನಿ, ಕಳ್ಳತನ, ದ್ವೇಷದ ಕ್ರಿಯೆ, ಮೇಯಿಸಿದ ಮತ್ತು / ಅಥವಾ ದೇಶೀಯ ಮತ್ತು / ಅಥವಾ ಕಾಡು ಪ್ರಾಣಿಗಳಿಂದ ನಾಶವಾಗುವುದು, ಕೊಯ್ಲು ನಂತರದ ನಷ್ಟದ ಸಂದರ್ಭದಲ್ಲಿ ಕೊಯ್ಲು ಮಾಡಿದ ಬೆಳೆ ಗಳಿಗೆ ವಿಮೆವ್ಯಾಪ್ತಿ ಇರುವುದಿಲ್ಲ. ಇದು ಸರಕಾರದ ಸುತ್ತೋಲೆ.

ವಿಮೆ ಮಾಡಿಸಲು ಏನೆಲ್ಲಾ ಬೇಕು:

  • ರೈತರು ಎಂದರೆ ಅವರ ಹೆಸರಿನಲ್ಲಿ ಭೂಮಿ ಇರಬೇಕು. ತಮ್ಮ ಭೂಮಿಯ ಪಹಣಿ ಪತ್ರ, ಆಧಾರ ಕಾರ್ಡು, ಹಾಗೂ ಬ್ಯಾಂಕು ಪಾಸ್ ಪುಸ್ತಕ ಸಮೇತ  ರೈತರು ವಿಮೆ ಮಾಡುವವರಿಗೆ ಕೊಡಬೇಕು.
  • ರೈತರೇ ಆನ್ ಲೈನ್ ಮೂಲಕ ತಮ್ಮ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ , ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಜಮಾ ಆಗುವಂತೆ ಪಾವತಿಸಲು ಸಾಧ್ಯ.
  • ಎಲ್ಲವೂ ಆನ್ ಲೈನ್ ಪಾವತಿ ಆಗಿರುತ್ತದೆ.

ಹವಾಮಾನ ಎಂಬುದು ಮುಂದಿನ ದಿನಗಳಲ್ಲಿ ನಮ್ಮ ನಿರೀಕ್ಷೆಯಂತೆ ಇರಲಾರದು. ಅತಿವೃಷ್ಟಿ, ಅನಾವೃಷ್ಟಿ ಮುಂತಾದವು ಇನ್ನು ಹೆಚ್ಚು. ಈಗಾಗಲೇ ಹವಾಮಾನ ಬದಲಾವಣೆಯಾಗಲಾರಭಿಸಿದ್ದು, ರೈತರು ತಮ್ಮ ಜೀವನದ ಶ್ರಮವನ್ನು ಕಳೆದು ಕೊಳ್ಳುವ ಬದಲಿಗೆ ಸ್ವಲ್ಪವಾದರೂ ನಷ್ಟವನ್ನು ಈ ವಿಮೆ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದು.

6 thoughts on “ಬೆಳೆ ವಿಮೆ – ಅಗತ್ಯವಾಗಿ ಮಾಡಿಸಿ.

    1. Relay it is main problem in our country. Revenue department should take some measures to set right this type of issues.
      ನಮ್ಮ ದೇಶದಲ್ಲಿ ಕಂದಾಯ ಇಲಾಖೆ ಮತ್ತು ಅಲ್ಲಿನ ವ್ಯವಸ್ಥೆಗಳು ಸಮರ್ಪಕವಾಗಿ ಮೇಲ್ದರ್ಜೆ ಏರಿಲ್ಲ. ಇದನ್ನು ಸರಿಪಡಿಸುವುದು ಅಗತ್ಯ.

  1. ಸರ್ ಹಿಂದಿನ ಅಂದರೆ 2020 ಬೆಳೆವಿಮೆ ನಮಗೆ ಇನ್ನೂ ಬಂದಿಲ್ಲ ಅದಕ್ಕೆನ ಮಾಡೊದು ಹೇಳಿ.

    1. ಯಾರಿಗೂ ಬಂದಿಲ್ಲ. ಇನ್ನು ಬರಬೇಕಷ್ಟೇ ನಿಮ್ಮ ಊರಿನಲ್ಲಿ ಕ್ಲೈಮ್ ಗೆ ಸಂಬಂಧಿಸಿದ ಇಲಾಖೆಯವರು ವರದಿ ಕೊಟ್ಟಿದ್ದಾರೆಯಾ ಎಂದು ವಿಚಾರಿಸಿದ್ದಿರಾ?

Leave a Reply

Your email address will not be published. Required fields are marked *

error: Content is protected !!