ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ.

ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ

ಈ ವರ್ಷದ ಬರಗಾಲ ಪರಿಸ್ಥಿತಿ ಹೇಳತೀರದು. ಮೇ ತಿಂಗಳು ಬಂದರೂ ಬೇಸಿಗೆ ಮಳೆ (Summer rain)ಆಗಿಲ್ಲ. ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದರೂ ಬಹಳಷ್ಟು ಕಡೆ ತುಂತುರು ಮಳೆ ಮಾತ್ರ. ಕರಾವಳಿ, ಲೆನಾಡು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗಿದೆ. ಜನ ಇಂದು ಮಳೆ ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಿದ್ದಾರೆ. ಮೋಡಗಳು ಬರುತ್ತವೆ, ಹಾಗೆಯೇ ಮಾಯವಾಗುತ್ತವೆ. ಹಾಗಾದರೆ ಮಳೆ ಯಾವಾಗ ಪ್ರಾರಂಭವಾಗಬಹುದು?

ನವೆಂಬರ್ ತನಕ ಒಂದೊಂದು ಮಳೆಯಾಗುತ್ತಿತ್ತು. ಆ ನಂತರ ಹೋದದ್ದು ಮತ್ತೆ ಬರಲೇ ಇಲ್ಲ. ಎಲ್ಲೆಂದರಲ್ಲಿ ನೀರಿನ ಕೊರತೆ ಕಾಣಿಸುತ್ತಿದೆ. ಮಳೆಗಾಲದಲ್ಲಿ ಮಳೆ ಸಾಕಷ್ಟು ಆಗಿದೆ. ಆದರೆ ನದಿಗಳು, ಕೆರೆಗಳಲ್ಲಿ ನೀರು ಬತ್ತಿ ಹೋಗಿದೆ. ನೀರಿನ ಬಳಕೆ ಹೆಚ್ಚಾಗಿದೆ. ಮೂಲ ಕಡಿಮೆಯಾಗಿದೆ. ಈ ವರ್ಷದ ಬೇಸಿಗೆ ಎಂದರೆ ಸ್ವಲ್ಪ ಭಿನ್ನವೆಂದೇ ಹೇಳಬಹುದು. ಎಪ್ರೀಲ್ ತನಕವೂ ವಾತಾವರಣದಲ್ಲಿ ತೇವಾಂಶದ ಪ್ರಮಾಣ ವಾಡಿಕೆಗಿಂತ ಕಡಿಮೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ನಂತರ ಮಳೆ ಬಾರದಿದ್ದರೂ ಮರಮಟ್ಟುಗಳು ಹಚ್ಚ ಹಸುರಾಗಿರುತ್ತವೆ. ವಾತಾವರಣದಲ್ಲೇ ತೇವಾಂಶ ಇಲ್ಲದಿದ್ದರೆ ಈ ವರ್ಷದ ಪರಿಸ್ಥಿತಿಯಂತೆ ಆಗುತ್ತದೆ. ಮರಮಟ್ಟುಗಳೂ ಸಹ ಬಿಸಿಲ ಬೇಗೆಗೆ ಸೊರಗಿವೆ. ಇನ್ನು ತೋಟದ ಕಥೆಯಂತೂ ಹೇಳತೀರದು. ಕರಾವಳಿ ಮಲೆನಾಡಿನಲ್ಲಿ ಅಡಿಕೆ ತೋಟಗಳು ಭಾರೀ ಪ್ರಮಾಣದಲ್ಲಿ ಹಾಳಾಗಿದೆ. ಇರುವ ಹಳೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೊಸತು ಬಾವಿ ಕೊರೆಯಲು ರಿಗ್ ಲಾರಿಗಳಿಗೇ ಬಿಡುವಿಲ್ಲ. ಒಂದು ಬೋರ್ ಕೊರೆಯಬೇಕಾದರೆ ಕನಿಷ್ಟ 10 ದಿನ ಕಾಯುವ ಪರಿಸ್ಥಿತಿ ಉಂಟಾಗಿದೆ. ನೀರಿನ ಇಳುವರಿ ಯಾರಿಗೂ ತೃಪ್ತಿಕರವಾಗಿಲ್ಲ. ಪಂಪ್ ಇಳಿಸಲು ಮಾರಾಟಗಾರರಲ್ಲಿ ಪಂಪಿನ ಕೊರತೆ. ಒಂದು ಹೊಸ ಪಂಪು ಬೇಕಾದರೆ 5-6 ದಿನ ಕಾಯಬೇಕಾದ ಪರಿಸ್ಥಿತಿ ಇದೆ. ಸಾಮಾನ್ಯ ಪಂಪುಗಳು ಈಗಿನ ಬಾವಿಗಳಿಗೆ ಸಾಕಾಗದ ಸ್ಥಿತಿ ಇದೆ(ಅಧಿಕ ಹೆಡ್ ಪಂಪ್). ಮಳೆ ಬಾರದೆ ಇದ್ದರೆ ರೈತರ ಸ್ಥಿತಿ ಚಿಂತಾಜನಕ. ಕೆಲವು ಅಡಿಕೆ ತೋಟಗಳು ಸರಿಯಾಗಬೇಕಿದ್ದರೆ ಇನ್ನು 3 ವರ್ಷ ಬೇಕಾಗಬಹುದು. ಕೆಲವು ತೋಟಗಳಂತೂ ಇನ್ನು ಸರಿಮಾಡುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದೆ. ಇಂತಹ ಪರಿಸ್ಥಿತಿಯೊಳಗೆ ಮಳೆ ಯಾವಾಗ ಬರಬಹುದು, ಮಳೆ ಎಷ್ಟು ಬರಬಹುದು ಎಂಬುದೇ ಎಲ್ಲರ ಚಿಂತೆಯಾಗಿಬಿಟ್ಟಿದೆ.ಯಾವ ಯಾವ ಜಿಲ್ಲೆಯಲ್ಲಿ ಮಳೆ ಎಂದು ಪ್ರಾರಂಭವಾಗಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.


ಮಂಗಳೂರು –ಉಡುಪಿ:

 • ಕೆಲವು ವರದಿಗಳ ಪ್ರಕಾರ ಮಂಗಳೂರು -ಉಡುಪಿ ಜಿಲ್ಲೆಯಲ್ಲಿ ಮೇ. 23 ನೇ ತಾರೀಕಿನ ನಂತರ ಮಳೆ ಪ್ರಾರಂಭವಾಗಲಿದೆ.
 • 23-24-25-26-27 ದಿನಾಂಕಗಳಂದು ಸಾಧಾರಣ ಮಳೆಯ ಸೂಚನೆ ಇದೆ.
 • ನಂತರ 28 ಕ್ಕೆ ಬಿಡುವು ಇರಬಹುದು. ಆ ನಂತರ ಪ್ರತೀ ದಿನವೂ ಸಂಜೆ ಹೊತ್ತು ಅಲ್ಲಲ್ಲಿ ಮಳೆಯಾಗಬಹುದು.
 • ಜೂನ್ 12 ರ ನಂತರ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ನಂತರ ದಿನಾಲೂ ಮಳೆ ಬರುವ ಮುನ್ಸೂಚನೆ ಇದೆ.
 • ಸುಳ್ಯದ ಕುಕ್ಕೆ ಸುಭ್ರಹ್ಮಣ್ಯ, ಬೆಳ್ತಂಗಡಿಯ ನಾರಾವಿ ,ಕಾರ್ಕಳದ ಮಾಳ, ಕೊಲ್ಲೂರು, ಆಗುಂಬೆ, ಮುಂತಾದ ಕಡೆ ಇಂದಿನಿಂದಲೇ (17-05-2023) ಅಲ್ಪ ಸ್ವಲ್ಪ ಮಳೆ ಆಗುವ ಸಾದ್ಯತೆ ಇದೆ.


ಶಿವಮೊಗ್ಗ ಜಿಲ್ಲೆ:

 • ಶಿವಮೊಗ್ಗ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮಳೆ ಸಾಧ್ಯತೆ ತುಂಬಾ ಕಡಿಮೆ ಇದೆ.
 • ಮೇ ತಿಂಗಳ 19 ಮತ್ತು 22 ರಂದು ಕೆಲವು ಪ್ರದೇಶಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗಬಹುದು.
 • ಜೂನ್ ನಲ್ಲಿ 3-5-14-18 ದಿನಾಂಕಗಳಂದು, ಸಾಧಾರಣವಾಗಿ ಉತ್ತಮ ಮಳೆಯಾಗಬಹುದು.
 • ನಂತರ 21 ರಿಂದ ಪ್ರಾರಂಭವಾಗಿ ಹೆಚ್ಚಿನ ಎಲ್ಲಾ ದಿನಗಳಲ್ಲಿ ಮಳೆ ಮುನ್ಸೂಚೆನೆ ಕಾಣಿಸುತ್ತದೆ.
 • ಜುಲೈ ತಿಂಗಳು ಪೂರ್ತಿ ಮಳೆಯಾಗಲಿದ್ದು, ದಿನಾಂಕ 1-3-4-16-17 ರಂದು ಸ್ವಲ್ಪ ಕಡಿಮೆ ಮಳೆಯ ಸೂಚನೆ ಕಾಣಿಸುತ್ತದೆ.
 • ಅತ್ಯಧಿಕ ಮಳೆಯಾಗುವ ಹೊಸನಗರ, ನಿಟ್ಟೂರು, ಆಗುಂಬೆ ಮುಂತಾದ ಕಡೆ ಮೇ ತಿಂಗಳಲ್ಲಿ 31 ರಂದು ಸಾಧಾರಣ ಮಳೆ ಬರಬಹುದು.
 • ನಂತರ ಜೂನ್ ತಿಂಗಳಲ್ಲಿ 3-4 ಸಾಧಾರಣ ಮಳೆ 5 ಅಧಿಕ ಮಳೆ ಹಾಗೂ 15-16-17 ಸಾಧಾರಣ ಮಳೆ 19 ರ ನಂತರ ಅಧಿಕ ಮಳೆ ಬರುವ ಸೂಚನೆ ಇದೆ.


ಚಿಕ್ಕಮಗಳೂರು ಜಿಲ್ಲೆ
:

 • ಮೇ 30 -31, ಜೂನ್ 4-5-6-7-8-9-13-14-17-18-20-21-24-25-27 ರಂದು ಮಳೆ ಬರುವ ಮುನ್ಸೂಚನೆ ಇದೆ.
 • ಕೆಲವು ದಿನ 50% ದಷ್ಟು ಮಳೆ ಹಾಗೂ ಕೆಲವು ದಿನಗಳಲ್ಲಿ 70 % ದಷ್ಟು ಮಳೆಯಾಗಬಹುದು.
 • ಜುಲೈ ತಿಂಗಳಲ್ಲಿ ಪೂರ್ತಿ ಮಳೆ ಮುನ್ಸೂಚನೆ ಇದೆ.
 • ಶ್ರಿಂಗೇರಿ- ಕೊಪ್ಪ, ಬಾಳೆಹೊನ್ನೂರು ಮುಂತಾದ ಕಡೆಗಳಲ್ಲಿ ಮೇ ತಿಂಗಳು 19-20-22-23-28-30 ದಿನಾಂಕಗಳಂದು ಹಾಗೂ ಜೂನ್ ತಿಂಗಳಲ್ಲಿ 1-4-5-7-8-11-14-18-23-24 ದಿನಾಂಕಗಳಂದು ಮಳೆ ಮುನ್ಸೂಚನೆ ಇದೆ.
 • ಮೂಡಿಗೆರಯಲ್ಲಿ ಮೇ ತಿಂಗಳು 22-23-24-31 ಉತ್ತಮ ಮಳೆ ಬರಬಹುದು.
 • ಜೂನ್ ತಿಂಗಳಲ್ಲಿ 9 ತಾರೀಕಿನ ವರೆಗೆ ಸಾಧಾರಣ ಮಳೆ ನಂತರ ಪ್ರತೀ ದಿನ ಉತ್ತಮ ಮಳೆಯಾಗಲಿದೆ.
 • ತರೀಕೆರೆಯಲ್ಲಿ ಮೇ ತಿಂಗಳು 22-30 ರಂದು ಮಳೆಯಾಗಲಿದೆ.
 • ಜೂನ್ ತಿಂಗಳಲ್ಲಿ 7-14 ತಾರೀಕಿಗೆ ಸಾಧಾರಣ ಮಳೆ 20 ರ ನಂತರ ಉತ್ತಮ ಮಳೆಯಾಗುವ ಸಂಭವ ಇದೆ.


ದಾವಣಗೆರೆ ಜಿಲ್ಲೆ:

 • ದಾವಣಗೆರೆಯ ಸುತ್ತಮುತ್ತ ಮೇ ತಿಂಗಳಲ್ಲಿ 22-24 ಸಾಧಾರಣ ಮಳೆ 25-30-31 ಉತ್ತಮ ಮಳೆ ಮುನ್ಸೂಚನೆ ಇದೆ.
 • ಜೂನ್ ತಿಂಗಳಲ್ಲಿ 7-8-9-10-11 ಸಾಧಾರಣ ಮಳೆ, 14-15-16-17 ಉತ್ತಮ ಮಳೆ ಇದೆ. 26-27-29-30 ರಂದು ಸಹ ಮಳೆ ಇದೆ.


ಉತ್ತರಕನ್ನಡ ಜಿಲ್ಲೆ
;

 • ಜಿಲ್ಲೆಯ ಶಿರಸಿ, ಸಿದ್ದಾಪುರ ಯಲ್ಲಾಪುರ, ಮುಂತಾದ ಕಡೆಗಳಲ್ಲಿ ಮೇ ತಿಂಗಳು 22-29 ದಿನಾಂಕಗಳಂದು ಹಾಗೂ ಜೂನ್ ತಿಂಗಳು 7-8-9-14-15-16-18-19-20-21-22-23- 25-27-30 ದಿನಾಂಕಗಳಂದು ಮಳೆ ಮುಸೂಚನೆ ಇದೆ.
 • ಕರಾವಳಿಯ ಕುಮಟಾ, ಹೊನ್ನಾವರ, ಗೋಕರ್ಣ, ಕಾರವಾರಗಳಲ್ಲಿ ಮೇ ತಿಂಗಳು ದಿನಾಂಕ 21-22-25-27-28-29-30-31 ಹಾಗೂ
 • ಜೂನ್ ತಿಂಗಳಲ್ಲಿ ಮೊದಲ ಎರಡೂ ವಾರ ಸಾಧಾರಣ ಮಳೆಯೂ ನಂತರ ಉತ್ತಮ ಮಳೆಯೂ ಆಗಲಿದೆ.


ಚಿತ್ರದುರ್ಗ ಜಿಲ್ಲೆ:

 • ಚಿತ್ರದುರ್ಗದ ಚಳ್ಳಕೆರೆ ಸುತ್ತಮುತ್ತ ಮೇ ತಿಂಗಳಲ್ಲಿ 19 ರಂದು ಸಾಧಾರಣ ಮಳೆ,22-25-31 ಅಧಿಕ ಮಳೆ ಹಾಗೂ ಜೂನ್ ತಿಂಗಳಲ್ಲಿ 3-4-5-6 15-16 ತಾರೀಕುಗಳಂದು ಉತ್ತಮ ಮಳೆ 17-23 ಸಾಧಾರಣ ಮಳೆ ಯಾಗಲಿದೆ.
 • 25-26-27-28 ರಂದು ಉತ್ತಮ ಮಳೆಯ ಮುನ್ಸೂಚನೆ ಇದೆ.
 • ಹೊಸದುರ್ಗದಲ್ಲಿ ಮೇ ತಿಂಗಳಲ್ಲಿ ದಿನಾಂಕ 25-31 ರಂದು ಉತ್ತಮ ಮಳೆಯಾಗಬಹುದು.
 • ಜೂನ್ ತಿಂಗಳಲ್ಲಿ 2-3-5-6-7 ತಾರೀಕಿನಂದು ಉತ್ತಮ ಮಳೆಯೂ 8-9 ಸಾಧಾರಣ ಮಳೆಯೂ ನಂತರ ಮಳೆಯ ಲಕ್ಷಣ ಕಡಿಮೆ ಇರುತ್ತದೆ.


ಹಾವೇರಿ ಜಿಲ್ಲೆ:

 • ಹಾವೇರಿ ಸುತ್ತಮುತ್ತ ಮೇ ತಿಂಗಳಲ್ಲಿ 20 ಉತ್ತಮ ಮಳೆ ಹಾಗೂ 21-22 ಸಾಧಾರಣ ಮಳೆ ನಂತರ 31 ಉತ್ತಮ ಮಳೆಯ ಸೂಚನೆ ಇದೆ.
 • ಜೂನ್ ತಿಂಗಳಲ್ಲಿ 3 ತಾರೀಕಿಗೆ ಉತ್ತಮ ಮಳೆ 4ಕ್ಕೆ ಸಾಧಾರಣ ಮಳೆ 8-11 ಉತ್ತಮ ಮಳೆ ನಂತರ 26-27-28 ಸಾಧಾರಣ ಮಳೆಯ ಮುನ್ಸೂಚನೆ ಇದೆ.
 • ಗದಗದಲ್ಲಿ ಮೇ ತಿಂಗಳಲ್ಲಿ ದಿನಾಂಕ 20-25 ಸಾಧಾರಣ ಮಳೆಯೂ 31 ಉತ್ತಮ ಮಳೆಯೂ
 • ಜೂನ್ ತಿಂಗಳಲ್ಲಿ 2-3-5-6-7-8 ಸಾಧಾರಣ ಮಳೆ ಮತ್ತು 12 ರ ನಂತರ ಉತ್ತಮ ಮಳೆಯೂ ಆಗುವ ಸೂಚನೆ ಇರುತ್ತದೆ.


ಕೊಡಗು ಜಿಲ್ಲೆ:

 • ಕೊಡಗಿನ ಮಡಿಕೇರಿಯಲ್ಲಿ ಮೇ ತಿಂಗಳಲ್ಲಿ 19 ರಿಂದ 25 ತನಕ ಸಾಧಾರಣ ಮಳೆಯೂ 26 ರಿಂದ 31 ತನಕ ಉತ್ತಮ ಮಳೆಯಾಗಲಿದೆ.
 • ಜೂನ್ ತಿಂಗಳಲ್ಲಿ ಪ್ರಾರಂಭದಿಂದ 15 ತನಕ ಸಾಧಾರನ ಮಳೆ ನಂತರ ಪ್ರತೀ ದಿನ ಉತ್ತಮ ಮಳೆಯ ಮುನ್ಸೂಚನೆ ಇದೆ.
 • ಸಿದ್ದಾಪುರದಲ್ಲಿ ಮೇ ತಿಂಗಳ 23 ನೇ ತಾರೀಕಿಗೆ ಮಳೆ ಪ್ರಾರಂಭವಾಗಿ 26 ತನಕ ಸಾಧಾರಣ ಮಳೆಯೂ ನಂತರ 30-31 ಉತ್ತಮ ಮಳೆಯ ಸೂಚನೆ ಇದೆ.
 • ಜೂನ್ ತಿಂಗಳಲ್ಲಿ 11 ರ ತನಕ ಸಾಧಾರಣ ಮಳೆಯೂ 12 ರ ನಂತರ ಉತ್ತಮ ಮಳೆಯ ಮುನ್ಸೂಚನೆ ಇದೆ.
ಮಳೆ ಬಂದ ವಾತಾವರಣ


ಹಾಸನ ಜಿಲ್ಲೆ:

 • ಹಾಸನದ ಸಕಲೇಶಪುರದಲ್ಲಿ ಮೇ ತಿಂಗಳು ದಿನಾಂಕ 22-23-24 ರಂದು ಉತ್ತಮ ಮಳೆಯೂ,ನಂತರ 29-31 ಸಾಧಾರಣ ಮಳೆಯೂ ಆಗಲಿದೆ.
 • ಜೂನ್ ತಿಂಗಳಲ್ಲಿ 9 ನೇ ತಾರೀಕಿನ ತನಕ ಸಾಧಾರಣ ಮಳೆಯೂ 10 ರ ತರುವಾಯ ಉತ್ತಮ ಮಳೆಯೂ ಆಗುವ ಸೂಚನೆ ಇದೆ.
 • ಬೇಲೂರಿನಲ್ಲಿ ಮೇ ತಿಂಗಳ 22-31 ರಂದು ಉತ್ತಮ ಮಳೆಯಾಗಲಿದೆ.
 • ಜೂನ್ ತಿಂಗಳಲ್ಲಿ 1-3-4-5 -7 ಸಾಧಾರನ ಮಳೆಯೂ 9 ಕ್ಕೆ ಉತ್ತಮ ಮಳೆಯೂ ಬರಬಹುದು.
 • ಉಳಿದ ದಿನಗಳಲ್ಲಿ ಬಿಸಿಲಿನ ವಾತಾವಣ ಇರುತ್ತದೆ.


ಮೈಸೂರು ಜಿಲ್ಲೆ:

 • ಮೈಸೂರು ಸುತ್ತಮುತ್ತ ಮೇ ತಿಂಗಳ 19-20-23 ರಂದು ಸಾಧಾರಣ ಮಳೆಯಾಗಬಹುದು.
 • ಜೂನ್ ತಿಂಗಳಲ್ಲಿ 2-5-8-9 ಉತ್ತಮ ಮಳೆ ಹಾಗೂ 20 ರಂದು ಉತ್ತಮ ಮಳೆಯ ಮುನ್ಸೂಚನೆ ಇದೆ.
 • ಕೆ ಆರ್ ನಗರ ಸುತ್ತಮುತ್ತ ಮೇ ತಿಂಗಳಲ್ಲಿ ದಿನಾಂಕ 20 ರಂದು ಅಲ್ಲಲ್ಲಿ ಮಳೆಯಾಗಬಹುದು.
 • ಜೂನ್ ತಿಂಗಳಲ್ಲಿ ದಿನಾಂಕ 4-5 ಉತ್ತಮ ಮಳೆಯೂ ನಂತರ ಹೆಚ್ಚಿನ ದಿನಗಳಲ್ಲಿ ಬಿಸಿಲಿನ ವಾತಾವರಣ ಇದೆ.


ಚಾಮರಾಜನಗರ ಜಿಲ್ಲೆ:

 • ಇಲ್ಲಿ ಮೇ ತಿಂಗಳಲ್ಲಿ ಮಳೆ ಮುನ್ಸೂಚನೆ ಕಡಿಮೆ ಇದ್ದು ಅಲ್ಲಲ್ಲಿ ದಿನಾಂಕ 20-22 ರಂದು ಅಲ್ಪ ಸ್ವಲ್ಪ ಮಳೆಯಾಗಬಹುದು.
 • ಜೂನ್ ತಿಂಗಳಲ್ಲಿ 4-5 ತಾರೀಕಿಗೆ ಉತ್ತಮ ಮಳೆಯೂ ನಂತರ 16-20-26 ರಂದು ಅಲ್ಲಲ್ಲಿ ಸಾಧಾರಣ ಮಳೆ ಬರಬಹುದು.

ಮಳೆ ಮುನ್ಸೂಚನೆಯಲ್ಲಿ ಸಾಧಾರಣ ಮಳೆ ಎಂದು ಎಲ್ಲಾ ಕಡೆಗೂ ಬರುವ ಸಾಧ್ಯತೆ ಕಡಿಮೆ. ಸಾಮಾನ್ಯವಾಗಿ ಸಂಜೆ ಹೊತ್ತಿನಲ್ಲಿ ಬರಬಹುದಾದ ಮಳೆಯಾಗಿರುತ್ತದೆ. ಉತ್ತಮ ಮಳೆ ಬರುವ ದಿನಗಳಲ್ಲಿ ಇಡೀ ದಿನವೂ ಬರಬಹುದು. ಕರಾವಳಿಯ ಭಾಗಗಳಲ್ಲಿ ಮತ್ತು ಮಲೆನಾಡಿನ ಭಾಗಗಳಲ್ಲಿ ಜೂನ್ ಎರಡನೇ ವಾರದ ತರುವಾಯ ಮುಂಗಾರು ಮಳೆ ಪ್ರಾರಂಭವಾಗುವ ಸೂಚನೆ ಇರುವ ಕಾರಣ ದಿನವಿಡೀ ಮಳೆಯ ವಾತಾವರಣ ಇರುತ್ತದೆ. ಇಲ್ಲಿ ತಿಳಿಸಲಾದ ಮಾಹಿತಿಗಳು ಕೆಲವು ಮೂಲಗಳಿಂದ ಆಯ್ದ ಮಾಹಿತಿಯಾಗಿದ್ದು, ವಾತಾವರಣ ಸಂಭಂಧಿತವಾದ ಕಾರಣ ಕೆಲವು ವ್ಯತ್ಯಾಸಗಳು ಬರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!