flood in channel

ಅಕಾಲಿಕ ಮಳೆ- ಮುಂದಿನ ತೊಂದರೆಗಳು ಮತ್ತು ಮುಂಜಾಗ್ರತೆ.

ಯಾರೂ ಗ್ರಹಿಸಿರದ ಈ ಸಮಯದಲ್ಲಿ ಮಳೆಯಾಗಿದೆ. ರೈತರಿಗೆ ಬಹಳ ತೊಂದರೆ ಆಗಿದೆ. ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಲ್ಲೆಲ್ಲಾ ಅಕಾಲಿಕ ಮಳೆಯಾಗುತ್ತಿದೆ.ಬರೇ ಕರ್ನಾಟಕ ಮಾತ್ರವಲ್ಲ  ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮುಂತಾದ ರಾಜ್ಯಗಳಲ್ಲಿಯೂ ಮಳೆ ಸುರಿಯುತ್ತಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಇದಕ್ಕೆ ಕಾರಣವಾಗಿದ್ದು, ಈ ಮಳೆ ಇನ್ನೂ ಮುಂದಿನ 3 ದಿನಗಳ ತನಕ ವೂ ಮುಂದುವರಿದು ಪ್ರಮಾಣ ಹೆಚ್ಚಾಗಲಿದೆ. The weather is expected to remain more or less the same for…

Read more

ತೆಂಗಿಗೆ ವಿಷ ಕೊಟ್ಟರೆ ಎಳನೀರು ಸಿಹಿಯಾಗುವುದೇ?

ತೆಂಗಿನ ಕಾಯಿಯ, ಎಳೆಕಾಯಿಯ   ನೀರು ಸಿಹಿಯಾಗಿರಲಿ ಅದರ ತಳಿ ಗುಣ ಕಾರಣ ಹೊರತು ಅದನ್ನು ಹೊರ ವಸ್ತುಗಳನ್ನು ಸೇರಿಸಿ ಸಿಹಿ ಮಾಡಲು ಸಾಧ್ಯವಿಲ್ಲ. ತೆಂಗಿನ ಕೆಲವು ತಳಿಗಳು ಸಿಹಿಯಾದ ಎಳನೀರನ್ನು ಕೊಡುತ್ತವೆ. ಮತ್ತೆ ಕೆಲವು ಸ್ವಲ್ಪ ಸಪ್ಪೆ. ಇದು ಯಾರೂ ಮಾಡುವುದು ಅಲ್ಲ. ಅದು ಅದರ ಅಂತರ್ಗತ ಗುಣ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಹೆಚ್ಚಿಸಲು ಸೂಕ್ಷ್ಮ ಪೊಷಕಾಂಶ ಮತ್ತು ಪೊಟ್ಯಾಶಿಯಂ ಬಳಕೆ ನೆರವಾಗುತ್ತದೆಯಾದರೂ  ಯಾವ ಕೀಟನಾಶಕ ರೋಗ ನಾಶಕ ಇದನ್ನು ಹೆಚ್ಚಿಸುವುದಿಲ್ಲ. ಇತ್ತೀಚೆಗೆ ಒಂದು ವಾಟ್ಸ್…

Read more
ಹಳ್ಳಿಯ ರೈತನಿಗೆ ಕೈ ಹಿಡಿದೀತೇ ನೇರ ಮಾರುಕಟ್ಟೆಯ ಪ್ರಯೋಜನ?

ಹಳ್ಳಿಯ ರೈತನಿಗೆ ಕೈ ಹಿಡಿದೀತೇ ನೇರ ಮಾರುಕಟ್ಟೆಯ ಪ್ರಯೋಜನ?

ಇದು ಟೀಕೆ ಅಲ್ಲ. ಅನಿಸಿಕೆ ಅಷ್ಟೇ. ರೈತರಿಗೆ ಅನುಕೂಲವಾಗುವುದಾದರೆ ಎಲ್ಲವೂ ಸ್ವಾಗತಾರ್ಹ.  ಒಮ್ಮೆ ನಮ್ಮ ಹಳ್ಳಿಯ ರೈತನ ಚಿತ್ರಣವನ್ನು ಯೋಚಿಸಿಕೊಳ್ಳಿ. ದೇಶದಲ್ಲಿ 70% ಕ್ಕೂ ಹೆಚ್ಚಿನವರು ಸಣ್ಣ ಮತ್ತು ಅತೀ ಸಣ್ಣ  ರೈತರು. ಹಾಗೆಯೇ ಇಷ್ಟೂ ಜನ ರೈತರೂ ಕಡಿಮೆ ವಿಧ್ಯಾವಂತರು. ಇವರಿಗೆ ನೇರ ಮಾರುಕಟ್ಟೆಯ ಅವಕಾಶವನ್ನು ಎಷ್ಟು ಜೀರ್ಣಿಸಿಕೊಳ್ಳಲು ಆದೀತೋ ಗೊತ್ತಿಲ್ಲ. ಆದರೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತದೆ ಸರಕಾರ. ನಾನು ಒಂದು ಕ್ವಿಂಟಾಲು ಹಣ್ಣು ಬೆಳೆದರೆ ಅದನ್ನು ಹೇಗಾದರೂ ಗ್ರಾಹಕರನ್ನು ಹುಡುಕಿ ಮಾರಾಟ ಮಾಡಬಹುದು….

Read more

ರೈತರು ಬುದ್ಧಿವಂತರಾಗದಿದ್ದರೆ ಉಳಿಗಾಲವಿಲ್ಲ. ತಿಳಿದಿರಲಿ.

ನಮ್ಮ ದೇಶದಲ್ಲಿ ಕೃಷಿಕರನ್ನು ಮಾತ್ರ ಯಾವ ರೀತಿಯಲ್ಲೂ ಮೋಸಮಾಡಬಹುದೇನೋ ಅನ್ನಿಸುತ್ತಿದೆ. ಕೃಷಿಕರಿಗೆ ಬೇಕಾಗುವ ಯಂತ್ರೋಪಕರಣ, ಗೊಬ್ಬರ, ಕೀಟ ನಾಶಕ, ಹೀಗೆ ಬೇಕಾಗುವ ಕೃಷಿ ಒಳಸುರಿ ಮಾರಾಟ ಮಾಡುವವರು ದಿನಕ್ಕೆ ಒಬ್ಬರಂತೆ ಸೃಷ್ಟಿಯಾಗುತ್ತಿದ್ದಾರೆ. ನಮಗೆ ಹೇಗಾದರೂ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ. ಅವರಿಗೆ ಇದೇ ಬಂಡವಾಳ. ಹೊಸ ಹೊಸ ಉತ್ಪನ್ನಗಳು. ಹೊಸ ಬಾಟಲಿಯಲ್ಲಿ ಅಧಿಕ ಬೆಲೆಯ ಹಳೇ ಸಾಮಾನುಗಳು ಅಷ್ಟೇ ಬದಲಾವಣೆ. ಕೃಷಿಕರ ವೀಕ್ ನೆಸ್-ಇನ್ನೊಬ್ಬರ ಬಂಡವಾಳ: ಕೃಷಿಕರಲ್ಲಿ ಬಹುತೇಕ ಎಲ್ಲರಿಗೂ ಪರಸ್ಪರ ನಂಬಿಕೆ ಕಡಿಮೆ. ಅದು ಒಳ್ಳೆಯದೇ?ಇದು…

Read more

ಬೆಳೆ ದಾಖಲೆ ಮಾಡಿಲ್ಲವೇ? ಮಾಡಿ. ಬಹಳ ಪ್ರಯೊಜನ ಇದೆ.

ರೈತರ ಹೊಲದಲ್ಲಿ ಯಾವ ಬೆಳೆ ಇದೆ, ಎಂಬುದನ್ನು ಅವರವರೇ ದಾಖಲೀಕರಣ ಮಾಡಿದರೆ ಅದೇ ಉತ್ತಮ. ಯಾಕೆಂದರೆ ಬೇರೆಯವರು ಮಾಡುವುದು ಎಷ್ಟಾದರೂ ಅಷ್ಟೇ. ಇದು ಇಂದು ಬೆಳೆ ದಾಖಲೀಕರಣ  ಮಾಡಿದಾಗ ತಿಳಿದ ಸಂಗತಿ. ಸ್ವಲ್ಪ ತರಬೇತಿ ಅಥವಾ ಸ್ವಲ್ಪ ಮೊಬೈಲ್ ಫೋನ್ ಬಳಕೆ ಗೊತ್ತಿದ್ದವರ ಸಹಾಯ ತೆಗೆದುಕೊಂಡರೆ ಇದನ್ನು ಯಾರೂ ಬಳಸಬಹುದು. ಸರಕಾರ ಈ ಕೆಲಸವನ್ನು ರೈತರ ತಲೆಗೇ ಹಾಕಿರುವುದು ಮತ್ತೇನಕ್ಕೂ ಅಲ್ಲ. ಈ ಕೆಲಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. GPS  ಸರಿಯಾಗಿ ಸಿಗಬೇಕು. ಕೆಲವೊಮ್ಮೆ ಬೇಗ ಆಗಬಹುದು….

Read more

ಹಲ್ಲಿಲ್ಲದ್ದ ರೈತನಿಗೆ ಕಡಲೆ ತಿನ್ನಿಸುವ ವೆಬಿನಾರ್ ಗಳು.

ಮಾರ್ಚ್ ತಿಂಗಳ ನಂತರ ಬಂದ ಒಂದು ಹೊಸ ಅವತಾರ, ವೆಬಿನಾರ್ ಗಳು. ಬೇರೆ ಕ್ಷೇತ್ರಗಳ ವಿಷಯ ನಮಗೆ ಅನಗತ್ಯ. ಆದರೆ ಕೃಷಿ ಕ್ಷೇತ್ರದಲ್ಲಿ ಈ ವೆಬಿನಾರ್ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ರೈತರಿಗೆ ತಿಳಿಯಬಯಸುತ್ತೇವೆ. ಇದು ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಗಿದೆ. ಮೇಲುನೋಟಕ್ಕೆ ಇದು ರೈತರ ಸೇವೆ ಎಂದು ಕಂಡರೂ ಇದರಲ್ಲಿ ಕೆಲವು ಪೇಪರ್ ವರ್ಕ್ ಮತ್ತು ಹಣ ಖರ್ಚು ಮಾಡುವ ದಂಧೆ ಇರಲೂ ಬಹುದು. ವೆಬಿನಾರ್ ಎಂದರೆ ಕೇವಲ ಸಂಬಂಧಿಸಿದವರು  ಮಾತ್ರ ತಮ್ಮ…

Read more

ರೈತರೇ ಭೂಮಿ ಮಾರಿದರೆ ಹಳ್ಳಕ್ಕೆ ಬಿದ್ದೀರಿ- ಜೋಕೆ.

ಕೃಷಿ  ಭೂಮಿಗೆ  ಬಂಗಾರದ ಬೆಲೆ ಬರಬಹುದು. ಅಥವಾ ವಜ್ರದ ಬೆಲೆ ಬರಬಹುದು. ಆದರೆ ಅದು ಮಾರಾಟದ ಸ್ವತ್ತು ಅಲ್ಲ. ಕೊಳ್ಳುವ ಜನ ನಿಮ್ಮನ್ನು ಹಳ್ಳಕೆ ತಳ್ಳಿ, ಅವರು ದೋಣಿಯಲ್ಲಿ ಪಯಣಿಸುತ್ತಾರೆ. ಮನುಷ್ಯನಿಗೆ ಶನಿ ಅಂಟುವ ಮೊದಲ ಚಿನ್ಹೆ ನಮ್ಮ ಅನ್ನದ ಮೂಲವನ್ನು  ಪರರಿಗೆ ಮಾರಾಟ ಮಾಡುವುದಕ್ಕೆ ಮನಸ್ಸು ಒಪ್ಪುವುದು.  ಭೂಮಿ ಮಾರಾಟದ ಸ್ವತ್ತು ಅಲ್ಲ: ಭೂಮಿ ಒಂದು ಸ್ತಿರ ಆಸ್ತಿಯೇ ಹೊರತು ಚಲಾವಣೆಯ ಆಸ್ತಿ ಅಲ್ಲ. ಆಸ್ತಿಗಳಲ್ಲಿ ನಗದೀಕರಣ ಮಾಡಬಹುದಾದ  ಅಸ್ತಿ ಮತ್ತು ನಗದೀಕರಣ ಮಾಡಲಾಗದ ಆಸ್ತಿ…

Read more

ರಾಜ್ಯದ ಹೊಸ ಭೂ ಸುಧಾರಣಾ ಕಾಯಿದೆ ಟುಸ್…

ಹಸುರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ, ನಮ್ಮೆಲ್ಲರ  ಮುಖ್ಯಮಂತ್ರಿಗಳು   ಮಾರ್ಚ್ ತಿಂಗಳಲ್ಲಿ  ವಿದೇಶಕ್ಕೆ ಹೋಗಿ ಬಂದು  ರೈತರಿಗೆ ಒಂದು ಶಾಕ್ನ ಸೂಚನೆ  ಕೊಟ್ಟಿದ್ದರು. ಆ ಶಾಕ್ ಈಗ ರಾಜ್ಯದ  ರೈತಾಪಿವರ್ಗದ  ಮೇಲೆಲ್ಲಾ ಹರಿಬಿಡಲಾಗಿದೆ. ಇದು ದುಡ್ಡಿಗಾಗಿ ಅಷ್ಟೇ: ಅಂದು  ( ಮಾರ್ಚ್ 15/2020 )  ಕರ್ನಾಟಕದ  ಮುಖ್ಯಮಂತ್ರಿಗಳು  ಕೃಷಿಕರಲ್ಲದವರು  ಮತ್ತು ಅಧಿಕ ಆದಾಯದ ಮೂಲ ಹೊಂದಿದವರು ಕೃಷಿ ಭೂಮಿ ಕೊಳ್ಳಲು ಅನುಕೂಲವಾಗುವ  ಶಾಸನ ತಿದುಪಡಿಯ ಪ್ರಸ್ತಾಪ ಮಾಡಿದ್ದರು. ಅದಕ್ಕೆ ದೇವರ ದಯೆ ಇರಲಿಲ್ಲವೆಂದು  ಕಾಣಿಸುತ್ತದೆ….

Read more

ಸ್ವಸ್ಥ ಆರೋಗ್ಯಕ್ಕೆ ಬೇಕು – ಸುರಕ್ಷಿತ ಆಹಾರ.

ನಾವು ತಿನ್ನುವ ಆಹಾರ ಸುರಕ್ಷಿತವಾಗಿದ್ದರೆ ಎಲ್ಲವೂ ಕ್ಷೇಮ. ಇಂದು ಆಗುತ್ತಿರುವ ಕೆಲವು ಅನಾಹುತಗಳಿಗೆ ಮೂಲ ಕಾರಣ ನಮ್ಮ ಆಹಾರ ಅಭ್ಯಾಸಗಳು. ಇದನ್ನು ಸ್ವಲ್ಪ ಸ್ವಲ್ಪವೇ ಸರಿ  ಮಾಡಿಕೊಂಡು ಬದುಕುವುದನ್ನು ಕಲಿಯೋಣ. ಈ ದಿನದಿಂದಲೇ  ಅದನ್ನು ಪ್ರಾರಂಭಿಸೊಣ. ಕೃಷಿ ಕ್ಷೇತ್ರದಲ್ಲಿ ಆಹಾರ ಉತ್ಪಾದನೆಯಾಗುವಾಗಲೇ ಅದು  ಆರೋಗ್ಯಕ್ಕೆ ಕಂಠಕವಾದ ಒಳಸುರಿಗಳಿಂದ ಕಲುಷಿತವಾಗುತ್ತದೆ. ಇನ್ನು ದಾಸ್ತಾನು ಕ್ಷೇತ್ರದಲ್ಲಿ ಇನ್ನಷ್ಟು ಅದು ಕಲುಷಿತವಾಗುತ್ತದೆ. ಮಾರಾಟ ಕ್ಷೇತ್ರದಲ್ಲಿ   ಎಲ್ಲಾ ಕಡೆಯಲ್ಲೂ ಕಲುಷಿತಗೊಂಡು ಅದು ಗ್ರಾಹಕನಿಗೆ ದೊರೆಯುತ್ತದೆ. ಅದು ಒಟ್ಟಾರೆ ಯಾಗಿ ಮನುಕುಲದ ದೇಹಾರೋಗ್ಯಕ್ಕೆ ಹಾನಿಕಾರಕ…

Read more

ಮಿಡತೆಗಳಿಗೆ ಅಂಜಬೇಕಾಗಿಲ್ಲ.

ಜನರಲ್ಲಿ ಭಯ ಮೂಡಿಸಿದ ಮಿಡತೆ ಹಾವಳಿ ಬಗ್ಗೆ ಹಿರಿಯ ಕೀಟ ಶಾಸ್ತ್ರಜ್ಞ, ಕರಾವಳಿ ಕರ್ನಾಟಕದ ಕೃಷಿ ತೋಟಗಾರಿಕಾ ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್ ಯು ಪಾಟೀಲ್ ರವರು ಹೇಳುವ ಮಾತುಗಳು ಇವು. ಮೇಲಿನ ಧ್ವನಿ ಮುದ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಶ್ರೀಯುತರು ವಿವರವಾಗಿ ಹೇಳಿದ್ದಾರೆ. ಈ ಮಿಡತೆಗಳಿಂದ ಯಾವ ಹಾನಿಯೂ ಉಂಟಾಗದು ಭಯಪಡುವ ಅಗತ್ಯ ಇಲ್ಲ.ಮಹಾರಾಷ್ಟ್ರ ದಾಟಿ ಬರುವುದೇ ಸಂದೇಹ. ಮಿಡತೆಗಳಲ್ಲಿ ಉದ್ದ ಮೀಸೆಯವು ಪರಭಕ್ಷಕಗಳು. ಗಿಡ್ಡ ಮೀಸೆಯವು ಮಾತ್ರ ಸ್ವಲ್ಪ ಹಸುರನ್ನು ತಿನ್ನುವವುಗಳು….

Read more
error: Content is protected !!