ಅಕಾಲಿಕ ಮಳೆ- ಮುಂದಿನ ತೊಂದರೆಗಳು ಮತ್ತು ಮುಂಜಾಗ್ರತೆ.

flood in channel

ಯಾರೂ ಗ್ರಹಿಸಿರದ ಈ ಸಮಯದಲ್ಲಿ ಮಳೆಯಾಗಿದೆ. ರೈತರಿಗೆ ಬಹಳ ತೊಂದರೆ ಆಗಿದೆ.
ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಲ್ಲೆಲ್ಲಾ ಅಕಾಲಿಕ ಮಳೆಯಾಗುತ್ತಿದೆ.ಬರೇ ಕರ್ನಾಟಕ ಮಾತ್ರವಲ್ಲ  ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮುಂತಾದ ರಾಜ್ಯಗಳಲ್ಲಿಯೂ ಮಳೆ ಸುರಿಯುತ್ತಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಇದಕ್ಕೆ ಕಾರಣವಾಗಿದ್ದು, ಈ ಮಳೆ ಇನ್ನೂ ಮುಂದಿನ 3 ದಿನಗಳ ತನಕ ವೂ ಮುಂದುವರಿದು ಪ್ರಮಾಣ ಹೆಚ್ಚಾಗಲಿದೆ. The weather is expected to remain more or less the same for the next few days, with most parts of Karnataka predicted to get rain till January 10. ಈ ಸಮಯದಲ್ಲಿ ಮಳೆ ಕೆಲವು ವರ್ಷಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿತ್ತಾದರೂ ಈ ರೀತಿಯಲ್ಲಿ ಮಳೆ ನೆರೆಯೋಪಾದಿಯಲ್ಲಿ ಬಂದುದು ಒಂದು ವಿಶೇಷ.

Rain drops on roof top

 • ಫೆಬ್ರವರಿ ಕೊನೆಗೆ ಮತ್ತೆ ಮಳೆಯ ಮುನ್ಸೂಚನೆ ಇದೆ. ಮಾರ್ಚ್ ಎಪ್ರಿಲ್ ಮಳೆ  ಸೂಚನೆ ಇಲ್ಲ.
 • ಋತುಮಾನದ ಬದಲಾವಣೆ ಕೃಷಿಯ ಮೇಲೆ ಒಂದಷ್ಟು ನಷ್ಟವನ್ನು ತಂದೊಡ್ಡಲಿದೆ.
 • ಚಳಿ ಇರಬೇಕಾದ ಈ ಸಮಯ ಮಳೆ ಬಂದಿದೆ ಇನ್ನು ಯಾವಾಗ ಚಳಿ ಬರಲಿದೆಯೋ ಯಾವಾಗ ಬಿಸಿಲು ಬರಲಿದೆಯೋ ಮಳೆ ಜುಲೈ ತಿಂಗಳಲ್ಲೋ, ಅಗಸ್ಟ್ ನಲ್ಲೋ ಕಾದು ನೋಡೋಣ.
 • ಹವಾಮಾನದ ಬದಲಾವಣೆ ಎಂದರೆ ಇದು:ತಜ್ಞರು ಹವಾಮಾನದ ಬದಲಾವಣೆ ಆಗುತ್ತಿದೆ.
 • ಮಳೆ – ಚಳಿ, ಸೆಖೆ ಕಾಲಗಳು ಬದಲಾಗುತ್ತವೆ ಎಂಬುದಾಗಿ ಕಳೆದ ಎರಡು ವರ್ಷಗಳ ಹಿಂದೆಯೇ ಹೇಳಿದ್ದುಂಟು.
 • ನಿಜವಾಗಿಯೂ ಹವಾಮಾನದ ಬದಲಾವಣೆ ಪ್ರಾರಂಭವಾಗಿದೆ.
 • ಇದಕ್ಕೆ ನಾವು ಹೊಂದಾಣಿಕೆಯಾಗಲೇ ಬೇಕು.
 • ಬಹುಷಃ ಈ ವರ್ಷ ಚಳಿಗಾಲ ಮತ್ತೆ ಮಕರ ಸಂಕ್ರಮಣ ಕಳೆದ ನಂತರ ಕುಂಭ ಮಾಸ ಮುಗಿಯುವ ತನಕವೂ ಮುಂದುವರಿಯುವ ಸಾಧ್ಯತೆ ಇದೆ.
 • ಎಪ್ರೀಲ್ ಮೇ ತಿಂಗಳಲ್ಲಿ ತಾಪಮಾನ ತುಂಬಾ ಏರಿಕೆಯಾಗಲಿದೆ.
 • ಆಷಾಢದ ವರೆಗೂ ಬೇಸಿಗೆ ಕಾಲ ಮುಂದುವರಿಯುವ ಸಾಧ್ಯತೆ ಇದೆ.
 • ರೈತಾಪಿ ವರ್ಗ ಹವಾಮಾನ ಚಕ್ರ ಬದಲಾದಂತೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
 • ಹವಾಮಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಬದಲಾಗಬೇಕು.

ಎಲ್ಲವೂ ಖರ್ಚಿನ ಬಾಬ್ತು:

 • ಇನ್ನು ರೈತರು ಮಳೆ ಬೆಳೆಗೆ ಸಿದ್ದತೆಯನ್ನು ಮಾಡಿಕೊಳ್ಳಲೇ ಬೇಕು.
 • ಅಡಿಕೆ ಬೆಳೆಗಾರರು ಇನ್ನು ಸೂರ್ಯನ ಬೆಳಕಿನಲ್ಲಿ ಅಡಿಕೆ ಒಣಗಿಸುವ ಧೈರ್ಯವನ್ನು ಮಾಡುವಂತಿಲ್ಲ.
 • ಅದಕ್ಕೆ ಒಣಗು ಮನೆಗಳನ್ನು ಸಿದ್ದ ಇಟ್ಟುಕೊಂಡೆ ಮುಂದುವರಿಯಬೇಕು.
 • ಬಹುತೇಕ ಬೆಳೆಗಳಿಗೆ ಕೀಟ ಬಾಧೆ ಹಾಗು ರೋಗ ಬಾಧೆಗಳು ಹೆಚ್ಚಾಗಲಿವೆ.
 • ಇದರಿಂದ ರಕ್ಷಣೆ ಪಡೆಯಲು ರೈತರು ಹೆಚ್ಚು ಹೆಚ್ಚು ಕೀಟನಾಶಕ- ರೋಗನಾಶಕಗಳನ್ನು ಬಳಸಬೇಕಾಗುತ್ತದೆ.
 • ಹೊಸ ಹೊಸ ರೋಗಗಳು, ಸಾಮಾನ್ಯ ಕೀಟಗಳು ಪ್ರಭಲ ಕೀಟಗಳಾಗುವುದು ಇವೆಲ್ಲಾ ಹವಾಮಾನ ವೈಪರೀತ್ಯದ ಪರಿಣಾಮಗಳಾಗಿವೆ.

un seasonal rain in costal Karnataka

ಹವಾಮಾನ ಬದಲಾವಣೆಯಿಂದಾದ ಪರಿಣಾಮ:

 • ಸಾಮಾನ್ಯವಾಗಿ ಚಳಿಗಾಲದಲ್ಲಿ ( ಹುಲ್ಲು ಕಳೆಗಳು ಒಣಗುವ ಸಮಯದಲ್ಲಿ) ಕೀಟಗಳ ಸಂಖ್ಯ್ಯೆ ಅತ್ಯಧಿಕವಾಗಿರುತ್ತದೆ.
 • ಅದನ್ನು ಹೀಗೆಯೂ ಗ್ರಹಿಸಬಹುದು. ಅವುಗಳಿಗೆ ಆಶ್ರಯ ಸಸ್ಯಗಳು ಕಡಿಮೆಯಾಗಿ ಅವು ಬೆಳೆಗಳ ಮೇಲೆ ಎರಗುತ್ತವೆ.
 • ಆ ಸಮಯದಲ್ಲಿ ಅದರ ಪರಭಕ್ಷಕಗಳ ಸಂತತಿಯೂ ಹೆಚ್ಚಾಗುತ್ತದೆ.
 • ಈ ಸಮಯದಲ್ಲಿ ಮಳೆ ಬಂದರೆ  ಪ್ರಕೃತಿಯಲ್ಲಿ ಪರಭಕ್ಷಕಗಳು ನಾಶವಾಗುತ್ತವೆ.
 • ಇಂದು ಕೃಷಿಯಲ್ಲಿ ಕೀಟ  ಸಮಸ್ಯೆಗಳು ಹೆಚ್ಚಾಗಲು ಇದು ಪ್ರಮುಖ ಕಾರಣ.
 • ಉದಾಹರಣೆಗೆ. ಜೇಡರ ಬಲೆಗಳು ಮಳೆಯ ಹೊಡೆತೆಕ್ಕೆ ನಾಶವಾದರೆ ಅದೆಷ್ಟೊ ಜಿಗಿ ಹುಳ, ಕೀಟ, ಪತಂಗಗಳು ಪ್ರಭಲವಾಗುತ್ತವೆ.

ಕೃಷಿ ಉತ್ಪನ್ನ ಹಾಳಾಗಿದೆ:

All agriculture produces will damageed

 • ಕರಾವಳಿ ಮಲೆನಾಡಿನಲ್ಲಿ ಅಡಿಕೆ ಕೊಯಿಲು ಮತ್ತು ಒಣಗುವ ಸಮಯ.
 • ಇದಕ್ಕೆಲ್ಲಾ ಈ ಮಳೆ ಭಾರೀ ತೊಂದರೆ ಉಂಟುಮಾಡಿದೆ.
 • ಒಣಗಿಸಲು ಇಟ್ಟ ಬೇಯಿಸಿದ ಕೆಂಪಡಿಕೆ ಬೂಸ್ಟ್ ಬರುವಂತಾಗಿದೆ.
 • ಗೋಟು ಅಡಿಕೆ ಒದ್ದೆಯಾಗಿ ಅನಿವಾರ್ಯವಾಗಿ ಸುಲಿದು ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ.
 • ಕಾಫೀ ಬೆಳೆಗಾರರ ಕಾಫಿ ಒಣಗಲು ತೊಂದರೆ ಆಗಿದೆ.
 • ಸುಗ್ಗಿ ಭತ್ತದ ಬೆಳೆಯಲ್ಲಿ ತೆನೆ ಕೂಡುವ ಹಂತ ಆದ ಕಾರಣ ನೀರು ನಿಂತು ಜಳ್ಳು ಆಗುವ ಸಾಧ್ಯತೆ ಇದೆ.
 • ರಾಜ್ಯದಾದ್ಯಂತ ಕಲ್ಲಂಗಡಿ, ಕರಬೂಜ, ತರಾಕಾರಿ  ಬೆಳೆ ನೀರು ಹೆಚ್ಚಾಗಿ ಕೊಳೆಯುವ ಹಂತಕ್ಕೆ ಬಂದಿದೆ.
 • ಬಹುತೇಕ ಬೆಳೆಗಳಲ್ಲಿ  ಪರಾಗಸ್ಪರ್ಷಕ್ಕೆ ಅಡ್ದಿಯಾಗಿ ಬೆಳೆ ನಷ್ಟವಾಗಿದೆ.

ಇದು ರೈತರ ಆರ್ಥಿಕ ಪರಿಸ್ಥಿತಿ ಮೇಲೆ ಭಾರಿ ತೊಂದರೆ ಉಂಟು ಮಾಡಲಿದ್ದು, ಬಹುಷಃ 2021 ರೈತರಿಗೆ ಫಲಾಪ್ರದ ವರ್ಷವಾಗುವುದಿಲ್ಲವೋ ಎಂಬ ಆತಂಕ ಉಂಟಾಗಿದೆ.

ಪ್ರಾಕೃತಿಕ ರಕ್ಷಣೆಯನ್ನು ಉಳಿಸಿ:

 • ಅಕಾಲದಲ್ಲಿ ಮಳೆ, ಅತಿಯಾದ ಚಳಿ, ಮಿತಿ ಮೀರಿದ ಸೆಖೆ ಎಲ್ಲವೂ ಬೆಳೆಗಳಿಗೆ ತೊಂದರೆ.
 • ಬೆಳೆ ಬೆಳೆಸುವ ರೈತರು ತಮ್ಮ ಜೀವನೋಪಾಯಕ್ಕಾಗಿ ಇದನ್ನು ಮಾಡುವ ಕಾರಣ ಅನಿವಾರ್ಯವಾಗಿ ಕೀಟನಾಶಕ ರೋಗ ನಾಶಕಗಳನ್ನು ಬಳಕೆ ಮಾಡಬೇಕಾಗುತ್ತದೆ.
 • ಆದರೆ ಇದನ್ನು ಬಳಕೆ ಮಾಡುವಾಗ ಸಾಧ್ಯವಾದಷ್ಟು ಪ್ರಭಲ ಅತಿ ಪ್ರಭಲ ಕೀಟನಾಶಕಗಳನ್ನು ಬಳಸ ಬೇಡಿ.
 • ಸ್ಥಳೀಯ  ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಸಂಶೋಧನಾ ಕೇಂದ್ರಗಳ ಕೀಟ ಶಾಸ್ತ್ರಜ್ಞರು ಮತ್ತು ರೋಗ ಶಾಸ್ತಜ್ಞರ ಸಲಹೆಯನ್ನು ತಪ್ಪದೆ ಪಡೆದು ಬಳಕೆಮಾಡಿ.
 • ಈಗಾಗಲೇ ಕೀಟ ನಾಶಕ – ರೋಗ ನಾಶಕಗಳಿಗೆ ಹಲವಾರು ಕೀಟಗಳು, ರೋಗ ಕಾರಕಗಳು ನಿರೋಧಕ ಶಕ್ತಿ ಪಡೆದಿವೆ.
 • ಇದು ಇನ್ನೂ ಹೆಚ್ಚಾಗದಂತೆ ಜಾಗರೂಕತೆ ವಹಿಸಿ.

ಪರಭಕ್ಷಕ ಕೀಟಗಳು, ಜೀವಾಣುಗಳು ನಾಶವಾಗದಂತೆ ಬೇಸಾಯ ಕ್ರಮ ಅನುಸರಿಸಿ. ಈ ವರ್ಷದ  ಹವಾಮಾನದಂತೆ ಪ್ರತೀ ತಿಂಗಳೂ ಮಳೆಯಾಗುವ ಸೂಚನೆ ಇದ್ದು, ರೈತರು ಸಾಧ್ಯವಾದಷ್ಟು ಹವಾಮಾನ ಮುನ್ಸೂಚನೆಯನ್ನು ಕೇಳಿ ತಿಳಿದು ಕೃಷಿ ಕಾರ್ಯಗಳಾದ ಕೊಯಿಲು, ಬಿತ್ತನೆ ಮುಂತಾದವುಗಳನ್ನು ಮಾಡುವುದು ಸೂಕ್ತ.

error: Content is protected !!