ಬೋರ್ ವೆಲ್ ಗೆ ನೀರು ಹುಡುಕುವಲ್ಲಿ ಇವರದ್ದೇ ಮೇಲುಗೈ

water over flow

ಇವರು ಭೂ ವಿಜ್ಞಾನ ಅಧ್ಯಯನ ಮಾಡಿದವರಲ್ಲ. ಆದರೆ ಇವರಿಗೆ ಭೂ ಗರ್ಭದಲ್ಲಿರುವ ಜಲ ಶೋಧನೆ ಕಲೆ ಗೊತ್ತಿದೆ. ಪ್ರಪಂಚದಾದ್ಯಂತ ಭೂ ಗರ್ಭ ಜಲ ಶೊಧನೆಯಲ್ಲಿ ಇವರದ್ದೇ ಮೇಲುಗೈ.
water divining in traditional way

ವಿಜ್ಞಾನ ಒಪ್ಪದಿದ್ದ ಪಾರಂಪರಿಕ ಜಲ ಶೋಧನಾ ವಿದ್ಯೆಯನ್ನು ಸಮಾಜ ಒಪ್ಪಿದೆ ಮತ್ತು ಗೌರವಿಸಿದೆ. ಅನಾದಿ ಕಾಲದಿಂದಲೂ ನೀರಿನ ಶೋಧನೆ ಎಂಬುದು ಕೆಲವು ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆಯುತ್ತಾ ಬಂದಿದೆ. ಈಗಲೂ ಇದರ ಸ್ಥಾನವನ್ನು ವೈಜ್ಞಾನಿಕ ವಿಧಾನ ಓವರ್ ಟೇಕ್ ಮಾಡಿಲ್ಲ. ಪ್ರತೀ ಹಳ್ಳಿಗಳಲ್ಲೂ ನೀರಿನ ಸೆಳೆಯನ್ನು ಗುರುತಿಸಿ ಇಲ್ಲಿ ಬಾವಿ ತೋಡಿ, ಇಂತಿಷ್ಟು ಆಳಕ್ಕೆ ನೀರು ಬರುತ್ತದೆ ಎಂದು ಹೇಳುವ ಜನ ಇದ್ದಾರೆ.

ನಮ್ಮ ದೇಶದಲ್ಲಿ  ಮಾತ್ರವಲ್ಲ:

  • ವಿಧಾನದ ನೀರು ಶೋಧನೆಗೆ ನೂರಾರು ವರ್ಷಗಳ ಇತಿಹಾಸ ಇದೆ. ಹಿಂದೆ ತೆರೆದ
  • ಬಾವಿಗಳಿಗೆಕೆರೆಗಳಿಗೆ ನೀರು ಹೇಳುತ್ತಿದ್ದರು. ಈಗ ಅವರಲ್ಲೇ ಕೆಲವರು ತಮ್ಮ ಜ್ಞಾನವನ್ನು ಅಂತರ್ಜಲ ಶೋಧಿಸಿಕೊಡುವ ವರೆಗೆ ಅಪ್ ಗ್ರೇಡ್ ಮಾಡಿಕೊಂಡಿದ್ದಾರೆ.
  • ಯಶಸ್ಸು ಮತ್ತು ವೈಫಲ್ಯಗಳೆಂಬುದು ವೈಜ್ಞಾನಿಕ ವಿಧಾನದಲ್ಲೂ ಇದೆ, ವಿಧಾನದಲ್ಲೂ ಇದೆ.
  • ಅಂತರ್ಜಲ , ಮೇಲು ಜಲ ಶೋಧನೆಯಲ್ಲಿ ಈಗಲೂ ಸಾಂಪ್ರದಾಯಿಕ ವಿಧಾನಗಳದ್ದೇ ಸಿಂಹಪಾಲು.
  • ನೀರು ಶೋಧಕರು ಸಮಾಜದಲ್ಲಿ ಗೌರವದ ಸ್ಥಾನವನ್ನೂ ಪಡೆದಿದ್ದಾರೆ.
  • ವಿಜ್ಞಾನ ಇದನ್ನು ಒಪ್ಪುವುದಿಲ್ಲ. ಆದರೆ ಸಮಾಜ ಇದನ್ನು  ಒಪ್ಪುತ್ತದೆ
  • ಒಂದು ಕಾಲದಲ್ಲಿ  ತೀರಾ ಸೇವೆಯಾಗಿದ್ದ, ನೀರು ಶೊಧನೆ ಈಗ ಸ್ವಲ್ಪ ವ್ಯಾವಹಾರಿಕವಾಗಿದೆ.
  • ಆದರೂ ಇಲ್ಲಿ ನಿರ್ಧರಿತ ಶುಲ್ಕ ಎಂಬುದಿಲ್ಲ.
  • ಯಾರು ನೀರಿನ ಶೋಧನೆ ಮಾಡಿದ್ದರಲ್ಲಿ ಅಧಿಕ ನೀರು ಬರುತ್ತದೆ, ಹೆಚ್ಚು ಯಶಸ್ಸು ಯಾರಿಗೆ ದೊರಕಿದೆ, ಅವರಿಗೆ ಅಧಿಕ ಬೇಡಿಕೆ.
  • ಅಂತವರನ್ನು ಯಾವುದೇ ಊರಿನಲ್ಲಿದ್ದರೂ ಜನ ಕರೆಸಿಕೊಳ್ಳುತ್ತಾರೆ.

ಜಲ ಶೋಧನೆಗಾಗಿ ಜನ ಚೈನು, ವಾಚು, ತೆಂಗಿನ ಕಾಯಿ, ಕೋಲು, ಕಬ್ಬಿಣದ ಸರಿಗೆ ಮುಂತಾದವುಗಳನ್ನು  ಬಳಕೆ ಮಾಡುತ್ತಾರೆ. ಅಪರೂಪದಲ್ಲಿ ಕೆಲವರು ಜ್ಯೋತಿಷ್ಯಾಧಾರದಲ್ಲೂ ನೀರು ಹೇಳುವುದಿದೆ. ನೋಡುವಾಗ , ಕೇಳುವಾಗ ಇದು ಒಂದು ತಮಾಷೆಯ ಸಂಗತಿಯಂತೆ  ಕಂಡರೂ  ಆ ಅನುಭವವನ್ನು ನಾವೂ ಅಭ್ಯಾಸ ಮಾಡಿದಾಗ ಅದರ ಬಗ್ಗೆ ಇದ್ದ ಅಪನಂಬಿಕೆ  ತೊಲಗುತ್ತದೆ.

  • ನೀರಿನ ಪಂಡಿತರಿಗೆ ನೀರಿನ ಸೆಳೆ ಇದ್ದಲ್ಲಿ ನಡುಕ, ಚೈನು ಅಲುಗಾಡುವಿಕೆ, ತೆಂಗಿನ ಕಾಯಿ ತಿರುಗುವಿಕೆ, ಕೋಲಿನ ಕೆಳಮುಖ ಚಲನೆ, ಮೇಲ್ಮುಖ ಚಲನೆಗಳ ಅನುಭವವಾಗುತ್ತದೆ.
  • ಅಭ್ಯಾಸ ಮಾಡಿದವರಿಗೂ ಆನುಭವಕ್ಕೆ  ಬರುವ ಕಾರಣ ಇದರಲ್ಲಿ ಯಾವುದೋ ಒಂದು ಅಜ್ಞಾತ ಶಕ್ತಿ ಇದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

water yield by traditional method

ನೀರು ಹೇಳುವವರ ಜೊತೆ ನಿಮ್ಮ ಸಹಕಾರ:

  • ನೀರಿನ ಪಂಡಿತರ ಮೂಲಕ ನೀರು ಹೇಳಿಸಿಕೊಳ್ಳುವಾಗ ಮೊದಲಾಗಿ ಅವರನ್ನು ನಿಮ್ಮ ಎಲ್ಲಾ ಸ್ಥಳದಲ್ಲೂ ಸುತ್ತಾಡಿಸಿ.
  • ಅವರಿಗೆ ಭೂ ಪರಿಸ್ಥಿಯ ಚಿತ್ರಣವನ್ನು ಕೊಡಬೇಕು.
  • ನಂತರ ನಮಗೆ ಎಲ್ಲಿ ನೀರಿನ ಮೂಲ ಇದ್ದರೆ ಅದರ ಬಳಕೆಗೆ ಅನುಕೂಲ ಎಂಬುದನ್ನು ತಿಳಿಸಬೇಕು.

ಸಾಮಾನ್ಯವಾಗಿ ನೀರು ಹೇಳುವ ಪಂಡಿತರು ಹುಲುಸಾಗಿ ಬೆಳೆದ ಮರಗಳು ಇದ್ದ ಸ್ಥಳದಲ್ಲಿ, ಹುತ್ತಗಳು ಇದ್ದ ಸ್ಥಳದಲ್ಲಿಎಲ್ಲಾ ಒಣಗಿ ಹೋದ ಕಡೆ ಹುಲ್ಲು ಕಡ್ಡಿಗಳು ಚಿಗುರಿಕೊಂಡಿದ್ದರೆ ಸ್ಥಳವನ್ನು ನೀರಿನ ಮೂಲ ಹುಡುಕಲು ಆಯ್ಕೆ ಮಾಡುತ್ತಾರೆ.

  • ಸ್ಥಳದಲ್ಲಿ ತಮ್ಮ ನೀರು ಶೋಧಕ ಸಾಧನವನ್ನು ಹಿಡಿದು ಒಡಾಡಿದಾಗ  ನೀರಿನ ಸೆಳೆತ ಇದ್ದಲ್ಲಿ ಸಾಧನದಲ್ಲಿ ಕಂಪನ ಉಂಟಾಗುತ್ತದೆ.
  • ಅಧಿಕ ಕಂಪನ ಇರುವಲ್ಲಿ ನೀರಿನ ಮೂಲವನ್ನು ಗುರುತು ಮಾಡುತ್ತಾರೆ.

ನೀರಿನ ಮೂಲ ಗುರುತಿಸುವಲ್ಲಿ ನೆರವಾಗುವ ಕೆಲವು ಭೂ ಪ್ರಕೃತಿಗಳು:

  • ಭೂಮಿಯ ಇಳಿಜಾರು ಅಥವಾ ಕಣಿವೆಗಳ ರಚನೆ ಜೋಡಣೆಯಾಗುವ ಸ್ಥಳದಲ್ಲಿ ನೀರಿನ ಮೂಲ ಇರುವ ಸಾಧ್ಯತೆ ಹೆಚ್ಚು.
  • ಎತ್ತರದ ಬೆಟ್ಟಗಳು ಅದಕ್ಕೆ ಸಂದಿಸುವ ಸಣ್ಣ ಸಣ್ಣ ಬೆಟ್ಟಗಳು, ಅವುಗಳೆಲ್ಲಾ ಒಟ್ಟು ಸೇರಿ ಒಂದು ಕಣಿವೆಯಾಗುವ ಕಡೆ(ಒಳ್ಬೆ) ಅಂತರ್ಜಲ  ಅಥವಾ ಮೇಲು ಜಲದ ಮೂಲ ಇರುತ್ತದೆ.
  • ಹೊಳೆ, ಹಳ್ಳದ ಬದಿಯಲ್ಲಿ ನೀರಿನ ಬಲವಾದ ಮೂಲ ಇರುತ್ತದೆ.
  • ಅತ್ತಿ, ಆಲ ಮುಂತಾದ ಕಡಿದಾಗ ನೀರು ತೊಟ್ಟಿಕ್ಕುವ ಮರಗಳು ಇರುವ ಕಡೆ ಅದರ ಬೆಳವಣಿಗೆ  ಉತ್ತಮವಾಗಿರುವ ಕಡೆ ನೀರಿನ ಮೂಲ ಇರುತ್ತದೆ.
  • ಕಣಿವೆ, ಹೊಳೆ ಹಳ್ಳದ ಬದಿಯಲ್ಲಿ ತೋಡಿದ ಬಾವಿಯಲ್ಲಿ ಕಡಿಮೆ ಆಳದಲ್ಲಿ ಅಧಿಕ ನೀರು ದೊರೆಯುವ ಸಾಧ್ಯತೆ ಇರುತ್ತದೆ
  • ಆದರೆ ಇಲ್ಲಿಯೂ ಸ್ಥಳದ ಆಯ್ಕೆ ಪ್ರಾಮುಖ್ಯ.

ಕೆರೆಗಳು, ದೊಡ್ದ  ಹಳ್ಳಗಳು ಇದ್ದು, ಅಲ್ಲಿ ನೀರು ಸಂಗ್ರಹವಾಗಿದ್ದರೆ, ಕೆರೆ ದಂಡೆ, ಅಥವಾ ಕೆರೆಯ ತಪ್ಪಲು ಪ್ರದೇಶದಲ್ಲಿ ನೀರು ಅಧಿಕ ಪ್ರಮಾಣದಲ್ಲಿ ನೆಲಕ್ಕೆ ಇಂಗಲ್ಪಟ್ಟು ನೀರಿನ  ಮೂಲ ಇರುತ್ತದೆ.

ನೀರು ಎಲ್ಲಿ ಇರುತ್ತದೆ;

  • ಬಂಡೆಗಳ ಎಡೆಯಲ್ಲಿ ಅಂದರೆ ಎರಡು ಬಂಡೆಗಳ ಸಂದಿಯಲ್ಲಿ ಅಂತರ್ಜಲ ಮೂಲ ಇರುತ್ತದೆ ಎನ್ನುತ್ತಾರೆ.
  • ಇತ್ತಿಚೆಗಿನ ದಿನಗಳಲ್ಲಿ  ತೋಡಿದ ಕೊಳವೆ ಬಾವಿಯೊಳಕ್ಕೆ  ಕ್ಯಾಮರಾ ಇಳಿಬಿಡುವ  ತಾಂತ್ರಿಕತೆಯೂ ಬಂದಿದೆ.
  • ಅಂಥಹ ಚಿತ್ರಗಳನ್ನು  ಗಮನಿಸಿದಾಗ ಕೆಲವೊಂದು ಅಂತರದ ಆಳದಲ್ಲಿ ನೀರು ಹೊರಕ್ಕೆ ಚಿಮ್ಮುವುದು  ಕಾಣುತ್ತದೆ
  • ಬಂಡೆಗಳು ಬದಲಾದಂತೆ ನೀರಿನ ಮೂಲ ಹೆಚ್ಚುತ್ತಾ ಹೊಗುತ್ತದೆ.
  • ನೀರು ಹೇಳುವವರು ಬಂಡೆಗಳ ರಚನೆಯನ್ನು ಗಮನಿಸಿ ಪ್ರಕಾರ ಇಂತಿಷ್ಟು ನೀರು ಸಿಗಬಹುದು ಎಂದು ಹೇಳುತ್ತಾರೆ
  • ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ದೊಡ್ಡ ದೊಡ್ಡ ಬಂಡೆಗಳ ಸಂದಿನ ಎಡೆಯಲ್ಲಿ ಸಂಗ್ರಹಿಸಲ್ಪಟ್ಟ ನೀರು ಬಂಡೆಯ ತೂಕದ ಮೇಲೆ ಅವಲಂಭಿತವಾಗಿ ಒತ್ತಡದಲ್ಲಿ ಹೊರಕ್ಕೆ ಚಿಮ್ಮುತ್ತದೆ.
  • ಕೆಲವು ಕಡೆ ಭೂಮಿಯ ಮೇಲೆ ನೀರಿನ ಚಿಲುಮೆಗಳು  ಮೇಲೇಳುವುದು ಸಹ ಹೀಗೆಯೇ.
  • ಬಿರುಕುಗಳು ಇರುವ ಕಲ್ಲು ಬಂಡೆಗಳ ಎಡೆಯಲ್ಲಿ ನೀರಿನ ಪ್ರಮಾಣ ಜಾಸ್ತಿ.
  • ದೊಡ್ಡ , ದೊಡ್ಡ ಬಂಡೆಗಳ  ಅಡಿಯಲ್ಲಿ ನೀರು ಇರಬಹುದಾದರೂ ಆದು ತೀರಾ ಆಳಕ್ಕೆ ಚಾಚಲ್ಪಟ್ಟಿರುವ ಕಾರಣ ಬಾವಿಯ ಆಳ ಅದಕ್ಕನುಗುಣವಾಗಿ ತುಂಬಾ ಕೆಳಕ್ಕೆ ಇಳಿಯಬೇಕಾಗುತ್ತದೆ.
  • ಕೆಲವು ಬಾವಿಗಳನ್ನು  ಕೊರೆಯುವಾಗ 500- 600 ಅಡಿ ಕೊರೆದರೂ ಕಲ್ಲಿನ ಹುಡಿ ಧೂಳೇ ಬರುತ್ತದೆ.
  • ಅದಕ್ಕೆ ಕಾರಣ ಬಂಡೆ ಅಷ್ಟು ದೊಡ್ಡದಾಗಿದ್ದು, ಅದರ ತಳ ಇನ್ನೂ ದೊರಕಿಲ್ಲ ಎಂಬುದಾಗಿರುತ್ತದೆ.

ಹೆಚ್ಚಾಗಿ ಪಾರಂಪರಿಕ ಜ್ಞಾನದಲ್ಲಿ ನೀರು ಹೇಳುವವರು ಮರಮಟ್ಟುಗಳು ಇರುವುದನ್ನು , ಕಣಿವೆಗಳು ಇರುವುದನ್ನು ಗಮನಿಸಿ ಮೂಲ ಶೋಧಿಸುತ್ತಾರೆ. ವೈಜ್ಞಾನಿಕವಾಗಿಯೂ ಈ ವಿಧಾನ ತಪ್ಪಲ್ಲ. ಇಂಥಹ ಕಡೆ ನೀರಿನ ಮೂಲ ಇರುತ್ತದೆ. ಹುತ್ತಗಳು ಇರುವಲ್ಲಿ ನೀರು ಇರುತ್ತದೆ ಎನ್ನುತ್ತಾರೆ. ಹುತ್ತಕ್ಕೂ ನೀರಿನ ಮೂಲಕ್ಕೂ ಸಂಬಂಧ ಇಲ್ಲವಾದರೂ ಮೇಲೆ ಹೇಳಿದ ಭೂ ಸ್ಥಿತಿಯಲ್ಲೇ ಹೆಚ್ಚು ಹುತ್ತಗಳು ಇರುವ ಕಾರಣ ನೀರಿನ ಮೂಲ ದೊರೆಯುತ್ತದೆ. 

  • ಆಧುನಿಕ ವೈಜ್ಞಾನಿಕ ಕಾಲದಲ್ಲೂ ಸಾಂಪ್ರದಾಯಿಕ ನೀರಿನ ಪಂಡಿತರ ಜ್ಞಾನದಲ್ಲಿ ಫಲಿತಾಂಶ ಉತ್ತಮವಾಗಿಯೇ ಇದೆ.
  • ನೀರು ಹೇಳುವ  ಜನ ತಮ್ಮ ಜ್ಞಾನವನ್ನು ಇತರರಿಗೆ ಕಲಿಸಿಕೊಟ್ಟು ಅದನ್ನು  ಇನ್ನೂ ಜೀವಂತವಾಗಿ ಇಟ್ಟಿದ್ದಾರೆ.
  • ಪಾರಂಪರಿಕ ಜ್ಞಾನಕ್ಕೆ ನಮ್ಮ ತಿಳುವಳಿಕೆ ಮತ್ತು  ವೈಜ್ಞಾನಿಕ ವಾಸ್ತವಿಕತೆಯನ್ನು ಸ್ವಲ್ಪ ಸ್ವಲ್ಪ ಬೆರೆಸಿದಾಗ ಇದು ಇನ್ನಷ್ಟು ಕರಾರುವಕ್ಕಾಗಬಹುದು.

ಬಾವಿ ಕೊರೆಸುವವರು ಅಂತರ್ಜಲದ ಬಗ್ಗೆ  ಒಂದಷ್ಟು ಜ್ಞಾನವನ್ನು ಓದಿ, ತಿಳಿದು ಸಂಪಾದಿಸಿಕೊಳ್ಳಿ. ನೀರು ಹೇಳುವವರೂ  ಭೂ ಗರ್ಭ ಶಾಸ್ತ್ರದ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನವನ್ನು  ಸಂಪಾದಿಸಿಕೊಂಡರೆ ನಮ್ಮ ಪಾರಂಪರಿಕ ಜ್ಞಾನ ವಿಜ್ಞಾನದ ತಳಹದಿಯ ಜ್ಞಾನಕ್ಕೆ ಸರಿ ಸಮಾನವಾಗಿ ಮುಂದುವರಿಯಬಹುದು.
 
 
 

Leave a Reply

Your email address will not be published. Required fields are marked *

error: Content is protected !!