ಸೃಷ್ಟಿಯ ವ್ಯವಸ್ಥೆಗಳನ್ನು ನಾವು ಕಲ್ಪನೆ ಮಾಡುವುದೂ ಸಾಧ್ಯವಿಲ್ಲ ಸೃಷ್ಟಿಗೆ ಸೃಷ್ಟಿಯೇ ಸರಿಸಾಠಿ. ಇದರ ಕುರಿತಾದ ಕೆಲವು ಸಾಕ್ಷ್ಯಗಳು ಇಲ್ಲಿವೆ.
ಹೀಗೇ ಒಮ್ಮೆ ಬಿಡುವು ಮಾಡಿಕೊಂಡು ಕತ್ತೆಲೆ ಆದ ನಂತರ ನಿಮ್ಮ ಹೊಲಕ್ಕೆ ಹೋಗಿ ನೆಲಮಟ್ಟದಲ್ಲಿ ಟಾರ್ಚ್ ಲೈಟ್ ಬಿಟ್ಟು ನೋಡಿ, ಸ್ವಲ್ಪ ಹೊತ್ತು ಗಮನ ಇಟ್ಟು ಟಾರ್ಚ್ ಬೆಳೆಕು ಬೀಳುವ ಕಡೆಯೆಲ್ಲಾ ನೋಡಿ. ಏನು ಕಾಣುತ್ತದೆ ಎಂದು ಗಮನಿಸಿ. ಮತ್ತೇನೂ ಕಾಣುವುದಿಲ್ಲ. ನೆಲದಲ್ಲಿ ಟಾರ್ಚ್ ಲೈಟಿನ ಬೆಳೆಕಿಗೆ ಪ್ರತಿಫಲನ ಕೊಡುವ ಮಿಣುಕು ಕಾಣಿಸುತ್ತದೆ. ಹಾಗೆಯೇ ಒಂದು ಮಿಣುಕಿನ ಹತ್ತಿರ ಹೋಗಿ ತುಂಬಾ ಸಮೀಪದಿಂದ ಗಮನಿಸಿ. ಹೆದರಬೇಡಿ. ಅದು ಯಾವುದೇ ದೆವ್ವ ಆಗಿರುವುದಿಲ್ಲ. ಹತ್ತಿರ ಟಾರ್ಚ್ ಬೆಳಕು ಹರಿಸಿ ನೋಡಿದರೆ ಕಾಣುವುದು ಒಂದು ಜಾತಿಯ ಜೇಡ.
- ಇಷ್ಟು ಮಾತ್ರವಲ್ಲ.ಒಮ್ಮೆ ಟಾರ್ಚ್ ಲೈಟ್ ಬಿಟ್ಟಾಗ ಬೆಳಕು ಪ್ರತಿಫಲನಗೊಳ್ಳುತ್ತದೆ.
- ಹತ್ತಿರ ಹೋದಾಗ ಏನೂ ಇರುವುದಿಲ್ಲ
- ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನೆಲದಲ್ಲಿ ಸಣ್ಣ ತೂತು ಇರುತ್ತದೆ.
- ಈ ತೂತು ಸವೆದಿರುತ್ತದೆ.
- ಟಾರ್ಚ್ ಲೈಟನ್ನು ನಂದಿಸಿ.
- ಹಾಗೆಯೇ ಸುಮ್ಮನೆ ಸ್ವಲ್ಪ ಹೊತ್ತು ಕುಳಿತಿರಿ.
- ತಕ್ಷಣ ಅದೇ ಗುರಿಗೆ ಟಾರ್ಚ್ ಲೈಟನ್ನು ಬಿಡಿ.
- ಆಗ ತರಾತುರಿಯಲ್ಲಿ ಒಂದು ಜೇಡ ತೂತಿನ ಒಳಗೆ ಸರಿಯುತ್ತದೆ.
ಏನೆಲ್ಲಾ ಸೃಷ್ಟಿಯ ವೈಚಿತ್ರ್ಯಗಳಿವೆ ಗೊತ್ತೇ?
- ಬೆಳಗ್ಗೆ ಎದ್ದು ಹಲ್ಲುಜ್ಜುತ್ತಾ ಈ ಇಬ್ಬನಿ ಬೀಳುವ ಸಮಯದಲ್ಲಿ ತೋಟ ಸುತ್ತಾಡಿ.
- ನೆಲವನ್ನು ಕೂಲಂಕುಶವಾಗಿ ಗಮನಿಸುತ್ತಾ ಹೋಗಿ.ನೆಲದಲ್ಲೆಲ್ಲಾ ಬಲೆ ಕಟ್ಟಿರುವುದು ಕಂಡು ಬರುತ್ತದೆ.
- ಅಲ್ಲಲ್ಲಿ ಬಲೆಗಳು ನೆಲಮಟ್ಟದಲ್ಲಿ ಇರುವುದನ್ನು ಕಂಡರೆ ನಿಮಗೇನೂ ಅನ್ನಿಸುವುದಿಲ್ಲ.
- ಆದರೆ ಸೂಕ್ಷ್ಮವಾಗಿ ಕೆಲವು ಬಲೆಗಳನ್ನು ಗಮನಿಸುತ್ತಾ ಹೋಗಿ.
- ಆಗ ನಿಮಗೆ ಸೃಷ್ಟಿಯ ವೈಚಿತ್ರ್ಯಗಳ ಅರಿವು ಉಂಟಾಗುತ್ತದೆ.
- ಈ ಬಲೆಗಳ ಕೆಳಭಾಗದಲ್ಲಿ ಒಂದು ಜೇಡ ಹೊಂಚು ಹಾಕಿ ಕುಳಿತಿರುತ್ತದೆ.
- ಈ ಜೇಡ ಕೆಲಸ ಇಲ್ಲದ್ದಕ್ಕೆ ಈ ರೀತಿ ಮಾಡುತ್ತದೆ ಎಂದೆಣಿಸದಿರಿ.
- ಇದು ನೆಲಮಟ್ಟದಲ್ಲಿ ಜಿಗಿದು ಹೋಗುವ ಕೆಲವು ಕೀಟ ಹುಳು ಹುಪ್ಪಟೆಗಳನ್ನು ಭಕ್ಷಿಸುವುದಕ್ಕೊಸ್ಕರ ಈ ರೀತಿ ಬಲೆ ಕಟ್ಟಿ ಹೊಂಚು ಹಾಕುತ್ತಿರುತ್ತದೆ.
- ಬರೇ ಇಷ್ಟೇ ಅಲ್ಲ. ತಲೆ ಎತ್ತಿ ಮೇಲೆ ನೊಡಿ.
- ನೆಲದ ಮೇಲೆಯೂ ಎಲ್ಲೆಲ್ಲೂ ಬಲೆಗಳನ್ನು ಕಾಣುತ್ತೀರಿ.
- ನೀವು ಓಡಾಡುವಾಗ ನಿಮ್ಮ ಮುಖ, ತೆಲೆ, ಕೈಗೆ ಈ ಬಲೆಗಳು ಕಿರಿ ಕಿರಿಯನ್ನು ಉಂಟು ಮಾಡಬಹುದು.
- ಆದರೆ ಅದು ನಮಗೆ ತೊಂದರೆ ಮಾಡಲು ಬಲೆ ಕಟ್ಟಿದ್ದಲ್ಲ.
- ನಮಗೆ ಉಪಕಾರ ಮಾಡಲು ಬಲೆ ಕಟ್ಟಿ ಕಾಯುತ್ತಾ ಕುಳಿತಿರುತ್ತವೆ.
- ಈ ಬಲೆಗಳನ್ನು ನಾವು ಸರಿಸಿದರೆ ಅವುಗಳು ಮತ್ತೆ ಕೆಲಸವನ್ನು ಪ್ರಾರಂಭಿಸಿ ಮತ್ತೆ ಬಲೆ ಹೆಣೆಯಬೇಕು.
- ಇವು ನೆಲಮಟ್ಟದಿಂದ ಮೇಲ್ಭಾಗದಲ್ಲಿ ಹಾರಾಡುವ ಕೀಟಗಳನ್ನು ಹಿಡಿದು ಬಂಧಿಸುವ ಸಲುವಾಗಿ ಹೆಣೆದ ಬೆಲೆಗಳು.
ಇನೂ ಮೇಲೆ ತಲೆ ಎತ್ತಿ ನೋಡಿ.ನಿಮ್ಮ ತಲೆಗೆಲ್ಲೂ ತಾಗದಂತೆ ದೈತ್ಯ ಬಲೆ ಕಟ್ಟಿ ಒಂದು ಮೂಲೆಯಲ್ಲಿ ಹೊಂಚು ಹಾಕುತ್ತಿರುವ ಜೇಡವನ್ನು ಗಮನಿಸಿ. ಇದು ಸಹ ಮಾಡುವುದು ರೈತರಿಗೆ ಉಪಕಾರವನ್ನೇ. ಆ ಮಟ್ಟದಲ್ಲಿ ಹಾರಾಡುವ ಕೀಟಗಳಾದ ಪತಂಗ, ದುಂಬಿಗಳನ್ನು ಬಂಧಿಸಿ ಅವುಗಳನ್ನು ಈ ಬಲೆಯ ಮೇಣದಲ್ಲಿ ಮತ್ತೆ ಹಾರದಂತೆ ಮಾಡುತ್ತವೆ. ಅದನ್ನು ನಂತರ ಅವು ಭಕ್ಷಣೆ ಮಾಡುತ್ತವೆ.
ಸೃಷ್ಟಿಯಲ್ಲಿ ಇಷ್ಟೇಲ್ಲಾ ಇದೆಯೇ?
- ಹೌದು ಸೃಷ್ಟಿ ಯಾರ ಲೆಕ್ಕಾಚಾರಕ್ಕೂ ನಿಲುಕದ ಒಂದು ವ್ಯವಸ್ಥೆ. ಇಲ್ಲಿ ಎಲ್ಲಾ ಇದೆ.
- ಒಂದರ ಸಂತತಿಯನ್ನಿ ಒಂದು ನಿಯಂತ್ರಣಕ್ಕೆ ತರುವ ಎಲ್ಲಾ ಮೆಕ್ಯಾನಿಸಂ ಇಲ್ಲಿದೆ.
- ಅದು ಅನಾದಿ ಕಾಲದಿಂದಲೂ ನಡೆಯುತ್ತಾ ಇದೆ. ಈಗಲೂ ಇದೆ.
- ಆದರೆ ಕೆಲವು ನಮ್ಮ ಬೆಳೆ ಸಂರಕ್ಷಣಾ ವಿಧಾನಗಳು ಇವುಗಳ ಕಾರ್ಯ ಚಟುವಟಿಕೆಗೆ ತೊಂದರೆ ಮಾಡಿವೆ.
- ಇವುಗಳ ಸಂತತಿ ನಾಶಕ್ಕೂ ಕಾರಣ ವಾಗಿವೆ.
- ಇವೆಲ್ಲಾ ಒಂದು ಪರಭಕ್ಷಕ ಜೀವಿಗಳಾಗಿದ್ದು, ಬೆಳೆಗೆ ಹಾನಿ ಮಾಡುವ ಕೀಟಗಳನ್ನು ಇವು ಬಕ್ಷಿಸುತ್ತವೆ.
- ಅವುಗಳ ಸಂತತಿಯನ್ನು ಎಷ್ಟು ಬೇಕೋ ಆಷ್ಟು ಮಾತ್ರ ಉಳಿಯುವಂತೆ ಮಾಡಲು ಇದು ಸಹಕರಿಸುತ್ತದೆ.
ರೈತರೇ ಆಗಲಿ ಇನ್ಯಾರೇ ಆಗಲಿ, ನೆಲದಲ್ಲಿ ಬಲೆ ಇದ್ದರೆ ಅದನ್ನು ಹಾಗೇ ಬಿಡಿ. ಇದು ಹಾನಿ ಮಾಡುವಂತದ್ದಲ್ಲ. ಇದು ನಮಗೆ ಉಪಕಾರ ಮಾಡುವಂತದ್ದು. ಮಳೆಗಾಲ ಕಳೆದು ಚಳಿಗಾಲ ಬರುವಾಗ ( ಹುಲ್ಲು ಒಣಗುವಾಗ) ಕೀಟಗಳು ಹೆಚ್ಚು. ಆ ಸಮಯದಲ್ಲಿ ಈ ಬಲೆಗಳ ಸಮೇತ ಅದನ್ನು ತಿನ್ನಲು ಹೊಂಚು ಹಾಕುವ ಭಕ್ಷಕಗಳ ಸಂಖ್ಯೆಯೂ ಹೆಚ್ಚು.