ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ತಿಳಿಯಬೇಕಾದ ಮಾಹಿತಿ.

sprinkler installation

ಬಹುತೇಕ ಕರಾವಳಿ ಮಲೆನಾಡಿನ ಅಡಿಕೆ ತೋಟದ ಬೆಳೆಗಾರರ ಮೊದಲ ಆಯ್ಕೆ ಸ್ಪ್ರಿಂಕ್ಲರ್. ಈ  ವ್ಯವಸ್ಥೆ ಹೇಗಿದ್ದರೆ ಉತ್ತಮ ಇಲ್ಲಿದೆ ಮಾಹಿತಿ.
ಸ್ಪ್ರಿಂಕ್ಲರ್ ನೀರಾವರಿ ಎಂದರೆ ಹೇಳಿದಷ್ಟು ಸರಳ ಅಲ್ಲ. ಈ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದರೆ ಮಾತ್ರ ಅದರಲ್ಲಿ ಫಲ.ಹೆಸರೇ ಹೇಳುವಂತೆ ನೀರು ಮಳೆಯಂತೆ ಎಲ್ಲಾ ಕಡೆಗೂ ಸಿಂಚನವಾಗಬೇಕು. ಎಲ್ಲಾ ಭಾಗವೂ ಒದ್ದೆಯಾಗಬೇಕು. ಹೀಗೆ ಆಗಬೇಕಿದ್ದರೆ ಅದಕ್ಕೂ ಒಂದು ಡಿಸೈನ್ ಎಂಬುದು ಇದೆ. ಆ ಡಿಸೈನ್ ಪ್ರಕಾರ ಮಾಡಿದ್ದೇ ಆದರೆ ಸ್ರಿಂಕ್ಲರ್ ನೀರಾವರಿ ಉತ್ತಮ ಫಲ ಕೊಡುತ್ತದೆ.

ಸ್ಪ್ರಿಂಕ್ಲರ್ ನೀರಾವರಿ

  •  ಹರಿ ನೀರಾವರಿಯ ನಂತರ ಬಡ ನೀರಾವರಿ ವ್ಯವಸ್ಥೆ ಎಂದರೆ ಪರ್ಫೋ.
  • ಅಲ್ಯೂಮೀನಿಯಂ ಪೈಪಿಗೆ ಸಣ್ಣ ಸಣ್ಣ ತೂತುಗಳು ಇರುತ್ತಿದ್ದವು.
  • 20 ಅಡಿ ಉದ್ದದ ಈ ಪೈಪುಗಳನ್ನು ತೋಟದಲ್ಲಿ ಒಂದು ಕಡೆ ಜೋಡಿಸುವುದು.
  • ಪಂಪನ್ನು  ಚಾಲನೆ ಮಾಡುವುದು.ನೀರು ಒತ್ತಡ ಸಿಕ್ಕಿದಾಗ ತುತುಗಳ ಮೂಲಕ ಮಳೆಯೋಪಾದಿಯಲ್ಲಿ ಹೊರ ಹಾರುತ್ತದೆ.
  • ಅಷ್ಟು ಜಾಗ ಒದ್ದೆಯಾಗುತ್ತದೆ. ಮತ್ತೆ ಮತ್ತೊಂದು ಸಾಲಿಗೆ ಹಾಕುವುದು[
  • ಹಾಗೆಯೇ ಪಂಪು ಚಾಲೂ ಮಾಡುವುದು.ಇದು ಮೊದಲ ಶ್ರಮ ಉಳಿಸುವ ನೀರಾವರಿ ವ್ಯವಸ್ಥೆ.
  • ಇದರ ನಂತರ ಬಂದದ್ದು ಸ್ಪ್ರಿಂಕ್ಲರ್.ನಿರ್ದಿಷ್ಟ ಅಂತರದಲ್ಲಿ ಸ್ಪ್ರಿಂಕ್ಲರ್ ಪಾಯಿಂಟ್ ಗಳನ್ನು ಅಲ್ಯೂಮೀನಿಯಂ ಪೈಪುಗಳ ಮಧ್ಯೆ ಹಾಕಿ ನೀರಾವರಿ ಮಾಡಲಾಗುತ್ತಿತ್ತು.
  • ಪಿ ವಿಸಿ ಪೈಪುಗಳು ಬಂದ ನಂತರ ಅದರ ಚಿತ್ರಣವೇ ಬದಲಾಯಿತು.
  • ನೆಲದ ಅಡಿಯಲ್ಲಿ ಹಾಕಿ ಶಾಶ್ವತ ವ್ಯವಸ್ಥೆ ಆಯಿತು.

ಸ್ಪ್ರಿಂಕ್ಲರ್ ನೀರಾವರಿಯ ಅನುಕೂಲಗಳು:

  • ಸ್ಪ್ರಿಂಕ್ಲರ್ ನೀರಾವರಿಯಲ್ಲಿ ಹೊಲದ ಎಲ್ಲಾ  ಭಾಗವೂ ತೇವ ಭರಿತವಾಗುತ್ತದೆ.
  • ಸಾಮಾನ್ಯವಾಗಿ ಏಕದಳ ಸಸ್ಯಗಳಿಗೆ ನೆಲದ ಮೇಲ್ಭಾಗದಲ್ಲಿ ಬೇರು ಹಬ್ಬುವುದು.
  • ಅದು ಇಂತಹ ಜಾಗದಲ್ಲೇ ಹಬ್ಬುತ್ತದೆ ಎಂದು ಇಲ್ಲ.
  • ಎಲ್ಲಾ ದಿಕ್ಕುಗಳಲ್ಲೂ ಬೇರು ಹಬ್ಬುತ್ತದೆ.
  • ಈ ಬೇರುಗಳಿಗೆಲ್ಲಾ ಅಗತ್ಯವಾಗಿ ಬೇಕಾಗುವ ನೀರು ಮತ್ತು ಪೋಷಕಗಳು ಎಲ್ಲಾ ಭಾಗದಿಂದಲೂ ಲಭ್ಯವಾಗುತ್ತದೆ.
  • ಸಸ್ಯಗಳು ಹೇರಳವಾಗಿ ಆಹಾರವನ್ನು ಮತ್ತು ನೀರನ್ನು ಬಳಕೆ ಮಾಡುವ ಕಾರಣ ಹುಲುಸಾಗಿ ಬೆಳೆಯುತ್ತವೆ.
  • ಮಣ್ಣಿನಲ್ಲಿ ಎಲ್ಲಾ ಕಡೆಯಲ್ಲೂ ತೇವಾಂಶ ಇರುವ ಕಾರಣ  ಮಳೆಗಾಲದಲ್ಲಿ ಸಾವಯವ ವಸ್ತುಗಳು ಕರಗಿದಂತೆ ಬೇಸಿಗೆಯಲ್ಲೂ ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ತ್ವರಿತವಾಗಿ ಕೊಳೆತು ಗೊಬ್ಬರ ಆಗುತ್ತದೆ.
  • ಇದು ನಿರ್ವಹಣೆಗೆ ಸುಲಭ. ಖರ್ಚು ಸಹ ಸ್ವಲ್ಪ ಕಡಿಮೆಯಾಗುತ್ತದೆ.
  • ನೆಲದಲ್ಲಿ ಸಾಕಷ್ಟು ಹುಲ್ಲು ಇತ್ಯಾದಿ ಕಳೆಗಳು ಹುಟ್ಟಿ ನೆಲದ ಸವಕಳಿ ಕಡಿಮೆಯಾಗುತ್ತದೆ.
  • ನೆಲಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ಅದು ತಡೆಯುವ ಕಾರಣ ತೇವಾಂಶ ಆವೀಕರಣ ಸಹ ಕಡಿಮೆಯಾಗುತ್ತದೆ.
  • ತೋಟದ ನೆಲವೆಲ್ಲಾ ಹಸುರಾಗಿರುತ್ತದೆ.
  • ಇದೆಲ್ಲಕ್ಕಿಂತಲೂ ಹೆಚ್ಚಾಗಿ ಕೆಲವು ಬೆಳೆಗಳಿಗೆ ತಾಪಮಾನ ಹೆಚ್ಚಾದಾಗ ಆಗುವ ತೊಂದರೆಯನ್ನು ಈ ನೀರಾವರಿ ವ್ಯವಸ್ಥೆ ಕಡಿಮೆ ಮಾಡುತ್ತದೆ.
  • ತಾಪಮಾನ ಏರದತೆ, ಮತ್ತು ಸಾಕಷ್ಟು ಆರ್ಧ್ರತೆ ಇರುವಂತೆ ಮಾಡುತ್ತದೆ.
  • ಈ ಆರ್ಧ್ರತೆಯು ಎಲೆಗಳಿಗೆ ತಂಪನ್ನು ಕೊಡುತ್ತದೆ.
  • ಕೆಲವು ಹೆಚ್ಚಿನ ತಾಪಮಾನಕ್ಕೆ ತೊಂದರೆ ಉಂಟು ಮಾಡುವ ಕೀಟಗಳನ್ನೂ ನಿಯಂತ್ರಿಸುತ್ತದೆ.

ಸ್ಪ್ರಿಂಕ್ಲರ್ ನೀರಾವರಿ ಮಾಡುವಾಗ ನೀರು ಒತ್ತಡದಲ್ಲಿ ಚಿಮ್ಮಬೇಕು

ಸ್ಪ್ರಿಂಕ್ಲರ್ ನೀರಾವರಿಯ ಸೂಕ್ಷ್ಮಗಳು:

  • ನೀರು ಎಲ್ಲಾ ಕಡೆಗೂ ಸಿಂಚನ ಆಗುವಂತೆ ಸ್ಪ್ರಿಂಕರ್ ಗಳನ್ನು ನಡೆಸಬೇಕು.
  • ಲಭ್ಯವಿರುವ ಪಂಪು ನೀರು ತಲುಪಬೇಕಾದ ಜಾಗಕ್ಕೆ ತಲುಪುವಾಗ ಎಷ್ಟು ಪ್ರಮಾಣದಲ್ಲಿ ನೀರನ್ನ ಹೊರ ಹಾಕುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಅದಕ್ಕನುಗುಣವಾಗಿ ಸ್ಪ್ರಿಂಕ್ಲರನ್ನು ಹಾಕಬೇಕು.
  • ಸ್ಪ್ರಿಂಕ್ಲರ್ ಪಾಯಿಂಟ್ ಗಳನ್ನು ಹಾಕುವಾಗ ನಾವು ಬಳಕೆ ಮಾಡುವ ಸ್ರಿಂಕ್ಲರ್ ಒಂದು ಬದಿಗೆ ಎಷ್ಟು ದೂರದ ತನಕ ನೀರನ್ನು ಎಸೆಯುತ್ತದೆ ಅಷ್ಟೇ ದೂರದಲ್ಲಿ ಮತ್ತೊಂದು ಪಾಯಿಂಟ್ ಅನ್ನು ಅಳವಡಿಸಬೇಕು.
  • ಒಂದು ಪಾಯಿಂಟ್ ನ ಮೇಲೆ ಮತ್ತೊಂದು ಪಾಯಿಂಟ್ ನ ನೀರು ಬೀಳಬೇಕು, ಇದನ್ನು ಓವರ್ ಲ್ಯಾಪಿಂಗ್ ಎನ್ನುತ್ತಾರೆ.
  • ಸಾಮಾನ್ಯವಾಗಿ ಅಡಿಕೆ ತೋಟ ಹಾಗೂ ಇನ್ನಿತರ ಮರಮಟ್ಟು ಬೆಳೆಗಳ ತೋಟಗಳಲ್ಲಿ ನೀರಿ ಚಿಮ್ಮುವಾಗ ಒಂದು ಮರ ಅಡ್ಡ ಬಂದು ಅದಕ್ಕೆ ನೀರು ಹೊಡೆದಾಗ ಅದರ ಎದುರು ಬದಿಯಲ್ಲಿ 45 ಡಿಗ್ರಿ ಕೋನದಲ್ಲಿ ನೀರು ಬೀಳುವುದಿಲ್ಲ.
  • ಅದಕ್ಕೆ ನಂತರದ ಸಾಲನ್ನು ಹೊಂದಾಣಿಕೆ ಮಾಡಿಕೊಂಡು ಪಾಯಿಂಟ್ ಹಾಕಬೇಕು.
  • ಸ್ಪ್ರಿಂಕ್ಲರ್ ನೀರಾವರಿ ಮಾಡುವಾಗ ಬಳಸುವ ಸ್ಪ್ರಿಂಕ್ಲರ್ ನ ನೀರು ಹೊರ ಚೆಲ್ಲುವಿಕೆಯ ಪ್ರಮಾಣವನ್ನು ತಿಳಿದಿರಬೇಕು.
  • ಸಾಮಾನ್ಯವಾಗಿ ಬಳಕೆ ಮಾಡುವ ಮೆಟಲ್ ಅಥವಾ ಪ್ಲಾಸ್ಟಿಕ್ ನ 40 ಅಡಿಯ ಸ್ಪ್ರಿಂಕ್ಲರ್ ನಲ್ಲಿ ಗಂಟೆಗೆ 2200 ಲೀ. ನಷ್ಟು ನೀರು ಹೊರ ಚೆಲ್ಲುತ್ತದೆ.
  • ಈಗ ಗಂಟೆಗೆ 500 ಲೀ. ನೀರು ಹೊರಚೆಲ್ಲುವ ಸಣ್ಣ ಸ್ಪ್ರಿಂಕ್ಲರ್ ಗಳು ಬಂದಿವೆ.
  • ಇವು ಸಾಂಪ್ರದಾಯಿಕ ಸ್ಪ್ರಿಂಕ್ಲರ್ ಗಿಂತ 3-4 ಪಟ್ಟು ಹೆಚ್ಚು ಹಾಕಲಿಕ್ಕೆ ಆಗುತ್ತದೆ.
ಸ್ಪ್ರಿಂಕ್ಲರ್ ನಲ್ಲಿ ನೀರು ಪ್ರತೀ ಒಂದು ಸ್ಪ್ರಿಂಕ್ಲರ್ ಜೊತೆ ಓವರ್ ಲ್ಯಾಪ್ ಆಗಬೇಕು
ಸ್ಪ್ರಿಂಕ್ಲರ್ ನಲ್ಲಿ ನೀರು ಪ್ರತೀ ಒಂದು ಸ್ಪ್ರಿಂಕ್ಲರ್ ಜೊತೆ ಓವರ್ ಲ್ಯಾಪ್ ಆಗಬೇಕು
  • ನಿಮ್ಮ ಪಂಪು ಗಂಟೆಗೆ ಎಷ್ಟು ಲೀಟರ್ ನೀರನ್ನು ಹೊರ ಹಾಕುತ್ತದೆ ಅದಕ್ಕೆ ಸರಿಯಾಗಿ ಸ್ಪ್ರಿಂಕ್ಲರನ್ನು ಅಳವಡಿಸಬೇಕು.
  • ಸ್ಪ್ರಿಂಕ್ಲರ್ ನಲ್ಲಿ ನೀರು ಎಸೆಯುವಾಗ ನೀರು ಹುಡಿಯಾಗಿ  (Drop size)ಬೀಳಬೇಕು.
  • ಅಂದರೆ ನೀರು ರಭಸದಿಂದ ಹೊರ ಚೆಲ್ಲಲ್ಪಡಬೇಕು.
  • ದೂರದಿಂದ ಕಾಣುವಾಗ ಇಬ್ಬನಿ ಬಿದ್ದಂತೆ ಕಾಣಬೇಕು, drops between 0.5 and 4.0 mm in size
  • ನೀರು ಬೀಳುವಾಗ ಎಡೆಯಲ್ಲಿ ಯಾರಾದರೂ ಇದ್ದರೆ ಅವರು ಅಸ್ಪಷ್ಟವಾಗಿ ಕಾಣುವಂತೆ ನೀರಾವರಿ ಮಾಡಬೇಕು.
  • ಆಗ ಸ್ಪ್ರಿಂಕ್ಲರ್ ನೀರಿನ ಫಲಿತಾಂಶ ಹೆಚ್ಚು.
  • ಈ ನೀರಿನಲ್ಲಿ  ಉಂಟಾದ ಆರ್ಧ್ರತೆಯಲ್ಲಿ ಸ್ವಲ್ಪ ಎಲೆಗಳ ಮೂಲಕವೂ ಸಸ್ಯಗಳಿಗೆ  ಲಭ್ಯವಾಗುತ್ತದೆ.
  • ಲೆಕ್ಕಕ್ಕಿಂತ ಹೆಚ್ಚು ಸ್ಪ್ರಿಂಕ್ಲರ್ ಅಳವಡಿಸಿದಾಗ ನೀರು ಸರಿಯಾಗಿ ಬೀಳುವುದಿಲ್ಲ.
  • ನೆಲಕ್ಕೆ ಘಾಸಿಯಾಗುತ್ತದೆ.

ಹೇಗೆ ಅಳವಡಿಸಬೇಕು:

wetting pattern

  • ಸಮತಟ್ಟಾದ ಜಾಗದಲ್ಲಿ ಎಲ್ಲಾ ಪಾಯಿಂಟ್ ಗಳನ್ನು ಒಂದೇ ರೀತಿಯ ಎತ್ತರದಲ್ಲಿರುವಂತೆ ಅಳವಡಿಸಬೇಕು.
  • ಎತ್ತರ ತಗ್ಗಿನ ಸ್ಥಳದಲ್ಲಿ ಪೈಪುಗಳ ಉದ್ದವನ್ನು ಹೊಂದಾಣಿಕೆ ಮಾಡಿ ಒಂದೇ ಎತ್ತರಕ್ಕಿರುವಂತೆ  ಮಾಡಿದರೆ ಉತ್ತಮ
  • ಬದಿ ಬದಿಯ ಸಸ್ಯಗಳಿಗೆ ಸಮರ್ಪಕ ವಾಗಿ ನೀರಾವರಿ ಆಗುವುದಿಲ್ಲ.
  • ಅದಕ್ಕೆ ಆ ಭಾಗಕ್ಕೆ ನೀರು ಬೀಳುವಂತೆ ಮಿನಿ ಸ್ಪ್ರಿಂಕ್ಲರ್ ಗಳನ್ನು ಅಥವಾ ಸೂಕ್ಷ್ಮ ಮಿಸ್ಟ್ ಗಳನ್ನು ಅಳವಡಿಸಬೇಕು.
  • ಯಾವಾಗಲೂ ಸ್ಪ್ರಿಂಕ್ಲರ್ ಸಿಕ್ಕಿಸುವ  ವಾಲ್ ( ಕ್ಲಪೆಟ್ ವಾಲ್ವ್) ಗೆ ಸ್ಪ್ರಿಂಕ್ಲಲ್ ತೆಗೆದ ತರುವಾಯ ಕ್ಯಾಪ್ ಹಾಕಬೇಕು.
  • ಇಲ್ಲವಾದರೆ ಕಪ್ಪೆ ಅಥವಾ ಯಾವುದಾದರೂ ಕಸ ಕಡ್ಡಿಗಳು ಒಳಗೆ ಇದ್ದರೆ , ಗಮನಿಸದೆ ಇದ್ದರೆ ಸ್ಪ್ರಿಂಕ್ಲರ್ ಸರಿಯಾಗಿ ಕೆಲಸ ಮಾಡಲಾರದು.

ಅನನುಕೂಲಗಳು:

  • ಕೆಲವು ನೀರು ಹಿಡಿದಿಟ್ಟುಕೊಳ್ಳುವ ಮಣ್ಣು (ಕಪ್ಪು ಹತ್ತಿ ಅಂಟು ಮಣ್ಣು) ಇರುವಲ್ಲಿಗೆ ಈ ನೀರಾವರಿ ವ್ಯವಸ್ಥೆ ಸೂಕ್ತವಲ್ಲ.
  • ಅಲ್ಲಿ ನೀರು ಹೆಚ್ಚು ಸಮಯ ಅರದೆ ನೀರು ನಿಂತ ಸ್ಥಿತಿ ಉಂಟಾಗಬಹುದು.
  • 1600  ಚದರ ಅಡಿ  ವಿಸ್ತೀರ್ಣವನ್ನು ಒಂದು ಗಂಟೆ ಕಾಲ ಒದ್ದೆ ಮಾಡಲು  2000 ಲೀಟರ್ ನೀರು ಬೇಕು.
  • ಮಿತ ನೀರಾವರಿಯಲ್ಲಿ ಆದರೆ ಅಲ್ಲಿರುವ ಸಸ್ಯಗಳ ಪ್ರಮಾಣ ಮತ್ತು ಅದಕ್ಕೆ ಬೇಕಾಗುವ ನೀರಿನ ಪ್ರಮಾಣ ಲೆಕ್ಕಾಚಾರ ಹಾಕಿದಾಗ ಕಡಿಮೆ ನೀರು ಸಾಕು.
  •  ಸ್ಪ್ರಿಂಕ್ಲರ್ ನೀರನ್ನು ವಾರಕ್ಕೆ ಎರಡು ಸಲ  ಮಾತ್ರ ಚಾಲನೆ ಮಾಡುತ್ತಾರೆ.
  • ಇತರ ಮಿತ ನೀರಾವರಿಯನ್ನು ದಿನಾ ಮಾಡಬೇಕು.
  • ಅದನ್ನು ನೊಡಿದಾಗ ಅಂತಹ ನೀರಿನ ನಷ್ಟ ಉಂಟಾಗುವುದಿಲ್ಲ.
  • ನೆಲದಲ್ಲಿ ಹುಲ್ಲುಕಳೆ ಬರುತ್ತದೆ. ಕಿರಿ ಕಿರಿಯಾಗುತ್ತದೆ.
  • ಪೋಷಕಾಂಶ ವ್ಯಯವಾಗುತ್ತದೆ. ಆದರೆ ಹಸು ಸಾಕಾಣಿಕೆ ಇದ್ದರೆ ಅವುಗಳಿಗೆ ಮೇವು ಆಗುತ್ತದೆ.
  • ನಂತರ ಅದರ ಸಗಣಿ ಮಣ್ಣಿಗೆ ಮರಳಿ ಸಿಗುತ್ತದೆ.
  • ಅಡಿಕೆ ತೋಟ ಅಥವಾ ಇನ್ಯಾವುದೇ ಹೊಲದಲ್ಲಿ ಸ್ಪ್ರಿಂಕ್ಲರ್ ನೀರಾವರಿ ಮಾಡಿದಾಗ ವೈವಿದ್ಯಮಯ ಹುಲ್ಲು ಸಸ್ಯಗಳು ಹುಟ್ಟುತ್ತವೆ.
  • ಇಲ್ಲವಾದರೆ ಅವು ಒಣಗಿ ಸತ್ತು ಹೋಗುತ್ತವೆ. ಕಳೆ ಹುಲ್ಲುಗಳೂ ಸಹ ಕೆಲವು ಮಣ್ಣಿನ ರಚನೆ ಸುಧಾರಣೆಗೆ ಅಗತ್ಯ

ಮರಳು ಮಿಶ್ರ ಮಣ್ಣಿಗೆ ಸ್ಪ್ರಿಂಕ್ಲರ್ ನೀರಾವರಿ ಉತ್ತಮ ಫಲಿತಾಂಶ ಕೊಡುತ್ತದೆ. ಅಂಟು ಮಣ್ಣಿರುವಲ್ಲಿಗೆ ಹನಿ ನೀರಾವರಿಯೇ ಸೂಕ್ತ. ಆದರೆ ನೀರು ಹೆಚ್ಚು ಆವೀಕರಣ ಆಗದಂತೆ ತಡೆಯಲು ಬುಡಕ್ಕೆ ಮಲ್ಚಿಂಗ್ ಮಾಡಬೇಕು. ಲೆಕ್ಕಕ್ಕಿಂತ ಹೆಚ್ಚು ನೀರಾವರಿ ಮಾಡುವುದು ನೈಸರ್ಗಿಕ ಸಂಪನ್ಮೂಲದ ಅಪವ್ಯಯವಾಗುತ್ತದೆ

error: Content is protected !!