ಈರುಳ್ಳಿ ಬೆಳೆಯುವವರು ಗಮನಿಸಬೇಕಾದ ಅಂಶಗಳು.
ಮುಂಗಾರು ಮಳೆ ಬೇಗ ಪ್ರಾರಂಭವಾಗುವುದರಲ್ಲಿದೆ. ಈರುಳ್ಳಿ ಬೆಳೆಗಾರರು ಈಗಲೇ ಸಿದ್ದತೆ ಮಾಡಿಕೊಳ್ಳುವುದು ಉತ್ತಮ. ಈರುಳ್ಳಿ ಬೆಳೆ ರಾಜ್ಯದ ಚಿತ್ರದುರ್ಗ, ಗದಗ, ಬಿಜಾಪುರ, ಬಾಗಲಕೊಟೆ ಮುಂತಾದ ಕಡೆ ಮುಂಗಾರು ಹಂಗಾಮಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಬೆಳೆಗಾರರು ಮಣ್ಣಿನಲ್ಲಿ ಇರುವ ಪೋಷಕಾಂಶಗಳನ್ನು ತಿಳಿದುಕೊಂಡು, ಅದಕ್ಕನುಗುಣವಾಗಿ ಪೋಷಕಾಂಶಗಳನ್ನು ಕೊಡಬೇಕು. ಹೆಚ್ಚು ಬೇಡಿಕೆ ಇರುವ ತಳಿಗಳನ್ನು ಆಯ್ಕೆ ಮಾಡಿ. ರೋಗ ಕೀಟ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಸುರಕ್ಷಿತ ಬೆಳೆ ವಿಧಾನಗಳನ್ನು ಆಳವಡಿಸಿಕೊಂಡು ಬೆಳೆದರೆ ಲಾಭವಾಗುತ್ತದೆ. ಇತ್ತೀಚೆಗೆ ಮಳೆ ಮತ್ತು ವಾತಾವರಣ ಕೃಷಿಗೆ ಪೂರಕವಾಗಿಲ್ಲ. ಆದ ಕಾರಣ…