ವೀಳ್ಯದೆಲೆ ಬೆಳೆಗಾರರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಉತ್ತರ.
ವೀಳ್ಯದೆಲೆ ಬೇಸಾಯ ವಾರದ ಆದಾಯದ ಬೆಳೆಯಾಗಿದ್ದು ಸಾಕಷ್ಟು ರೈತರು ನಿತ್ಯ ಖರ್ಚಿನ ಬೆಳೆಯಾಗಿ ಇದನ್ನು ಬೆಳೆಸುತ್ತಾರೆ. ಕರ್ನಾಟಕದಲ್ಲಿಇದರ ವಿಸ್ತೀರ್ಣ 8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯಲ್ಲಿ ಇತ್ತೀಚೆಗೆ ಕೆಲವು ರೋಗಗಳು ಬೆಳೆಗಾರರನ್ನು ಸೋಲಿಸುತ್ತಿದೆ. ಎಲೆ ಚುಕ್ಕೆ ರೋಗ, ಎಲೆ ಮುರುಟು ರೋಗ, ಹಾಗೆಯೇ ಎಲೆಯ ಸೊರಗು ರೋಗ, ಜೊತೆಗೆ ಬುಡ ಕೊಳೆಯುವ ರೋಗ ಹೆಚ್ಚಿನ ವೀಲ್ಯದೆಲೆ ಬೇಸಾಯಗಾರರು ಅನುಭವಿಸುತ್ತಿರುವ ಸಮಸ್ಯೆ. ಇಂತಹ ವೀಳ್ಯದೆಲೆಗೆ ಮಾರುಕಟ್ಟೆ ಮೌಲ್ಯ ಇರುವುದಿಲ್ಲ. ಕರ್ನಾಟಕದ ಪ್ರಮುಖ ವೀಳ್ಯದೆಲೆ…