ಜೈವಿಕ ಗೊಬ್ಬರಗಳ ಮಾರಾಟ ಮತ್ತು ನಂಬಿಕಾರ್ಹತೆ.
ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಈ ಜೈವಿಕ ಉತ್ಪನ್ನಗಳು ಒಳ್ಳೆಯ ಉತ್ಪನ್ನಗಳಾದರೂ ನಾಯಿಕೊಡೆಗಳಂತೆ ತಯಾರಕರು ಹುಟ್ಟಿಕೊಳ್ಳುತ್ತಿದ್ದಾರೆ.ಜೊತೆಗೆ ದರ ಸ್ಪರ್ಧೆ ಇರುವಾಗ ಗ್ರಾಹಕರಿಗೆ ಇದು ಒಂದು ಗೊಂದಲದ ಗೂಡಾಗಿದೆ. ಯಾವುದು ಉತ್ತಮ, ಯಾವುದು ಕಳಪೆ ಎಂದು ಅರಿಯುವುದಕ್ಕೆ ಅಸಾಧ್ಯವಾದ ಈ ಉತ್ಪನ್ನಗಳಲ್ಲಿ ಹೇಗಾದರೂ ನಂಬಿಕೆ ಇಡುವುದು ತಿಳಿಯದಾಗಿದೆ. ಜೈವಿಕ ಗೊಬ್ಬರ ಅಥವಾ ಜೀವಾಣುಗಳು ಎಂದರೆ ಅದು ಕಣ್ಣಿಗೆ ಕಾಣದ ಜೀವಿಗಳು.ಇದರಲ್ಲಿ ಕೆಲವು ಪೋಷಕ ಒದಗಿಸುವಂತವುಗಳು ಮತ್ತೆ ಕೆಲವು ಕೀಟ ರೋಗ…