ಆರೋಗ್ಯಕರ ಉಪ್ಪಿನಕಾಯಿಗೆ -ಕರಂಡೆ
ಹಿಂದೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಕರಂಡೆ ಕಾಯಿ/ ಹಣ್ಣುಗ ಳು ಈಗ ಮಾಯವಾಗಿವೆ. ಹಿಂದೆ ಕರಂಡೆ ಬೇಕಿದ್ದರೆ ಒಂದು ತಾಸು ಗುಡ್ಡಕ್ಕೆ ಹೋದರೆ ಅಲ್ಲಿ ಬೇಕಾದರೂ ಕರಂಡೆ ಕಾಯಿ ತರುತ್ತಿದ್ದರು. ಈಗ ಹಳ್ಳಿಯ ಜನ ಪೇಟೆಗೆ ಕರಂಡೆ ಕಾಯಿ ತರಲು ಹೋಗುವಂತಾಗಿದೆ. ಈಗ ಯಾವ ಗುಡ್ದದಲ್ಲೂ ಕರಂಡೆ ಗಿಡಗಳೇ ಕಾಣಿಸುತ್ತಿಲ್ಲ. ಕರಂಡೆಯ ಉಪ್ಪಿನಕಾಯಿ ಧೀರ್ಘ ಬಾಳ್ವಿಕೆ ಬರುವಂತದ್ದು. ಕರಂಡೆ ಹಿನ್ನೆಲೆ: ಕರಂಡೆ (Karronda) ಸಸ್ಯ ಗುಡ್ಡದಲ್ಲಿ ನೀರಿಲ್ಲದೆ ಬೆಳೆಯುವ ಪೊದೆ. ಇದು ಬಹುವಾರ್ಷಿಕ ಸಸ್ಯವಾಗಿದ್ದು, ಕುರುಚಲು ಗಿಡಗಳು ಬೆಳೆಯುವ ಗುಡ್ದದಲ್ಲಿ ಮುಳ್ಳಿನ…