ಅಡಿಕೆ- ಸ್ಥಳೀಯ ತಳಿಗಳೇ ಶೇಷ್ಟ – ಯಾಕೆ ಗೊತ್ತಾ?
ಅಡಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲಿ ಹಲವಾರು ತಳಿಗಳು ಪರಿಚಯಿಸಲ್ಪಟ್ಟಿವೆ. ಹೊಸತರಲ್ಲಿ ಭಾರೀ ಸದ್ದು ಗದ್ದಲ ಏರ್ಪಡಿಸಿ, ಮತ್ತೆ ಮತ್ತೆ ಹೊಸ ತಳಿಗಳ ಪ್ರವೇಶಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳ, ಶ್ರೀಮಂಗಳ, ಮೋಹಿತ್ ನಗರ,ಸುಮಂಗಳ, ರತ್ನಗಿರಿ, ಸೈಗಾನ್, ಮಧುರಮಂಗಳ, ಶತಮಂಗಳ ಹೀಗೆಲ್ಲಾ ಪಟ್ಟಿಯೇ ಇದೆ. 1972 ರಿಂದ ಹಲವಾರು ಹೊಸ ಹೊಸ ತಳಿಗಳನ್ನು ಪರಿಚಯಿಸಲಾಗಿದೆ.ಅವೆಲ್ಲವೂ ಕೆಲವೇ ಸಮಯದಲ್ಲಿ ತಳಿ ಮಿಶ್ರಣ ದಿಂದ ತನ್ನ ಮೂಲ ಗುಣ ಕಳೆದುಕೊಂಡಿವೆ.ಆದರೆ ಸ್ಥಳೀಯ ತಳಿಮಾತ್ರ ಅನಾದಿ ಕಾಲದಿಂದ ಹೇಗಿದೆಯೊ ಹಾಗೆಯೇ ಮೌನವಾಗಿ…