Amarantus an short term vegetable

50,000ಖರ್ಚು ಮಾಡಿ 1 ತಿಂಗಳಲ್ಲಿ 1 ಲಕ್ಷ ಗಳಿಸುವ ಬೆಳೆ.

ಕೆಲವು ಅಲ್ಪಾವಧಿ ಬೆಳೆಗಳು ಸ್ವಲ್ಪ  ಹೆಚ್ಚಿನ ಲಾಭ ತಂದು ಕೊಡುತ್ತವೆ. ಅಂತದ್ದರಲ್ಲಿ ಒಂದು ಹರಿವೆ. ಸೊಪ್ಪು ತರಕಾರಿಗಳಿಗೆ ಕೆಲವು ಸೀಸನ್ ಗಳಲ್ಲಿ ಭಾರೀ ಬೇಡಿಕೆ. ಆ ಸೀಸನ್ ತಿಳಿದುಕೊಂಡು ಅದಕ್ಕನುಗುಣವಾಗಿ ಬೆಳೆ ಬೆಳೆದರೆ ಲಾಭವಾಗುತ್ತದೆ. ಇದನ್ನು ಮಾರುಕಟ್ಟೆಯಲ್ಲಿ  ತಿಳಿದುಕೊಂಡು ಸುರೇಶ್ ರವರು ಮಳೆಗಾಲದಲ್ಲಿ ಮತ್ತು ಮಳೆಗಾಲ ಮುಗಿಯುವ ಈ ಸಮಯದಲ್ಲಿ ಹರಿವೆ ಬೆಳೆದಿದ್ದಾರೆ. ಎರಡನೇ ಬೆಳೆ ಕಿತ್ತು ಆಗಿದೆ. ಮೂರನೇ ಬೆಳೆಯನ್ನು ಇನ್ನೇನು ಒಂದು ವಾರದಲ್ಲಿ ಬಿತ್ತನೆ ಮಾಡಲಿದ್ದಾರೆ. ಮಳೆಗಾಲ ಕಳೆದ ತಕ್ಷಣ  ಹರಿವೆ, ಬಸಳೆ ಮುಂತಾದ…

Read more
ಮಡಹಾಗಲ ಕಾಯಿ ತುಂಬಿದ ಬುಟ್ಟಿ.

ಹೆಚ್ಚಿನ ಬೆಲೆಯಿರುವ ಸುಲಭವಾಗಿ ಬೆಳೆಯುವ ತರಕಾರಿ.

ಮಡಹಾಗಲ ಎಂಬುದು ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ  ಹಾಗೆಯೇ ಅಂಡಮಾನ್ ನಿಕೋಬಾರ್ ಮುಂತಾದ ಕಡೆ ಇದು ವೈವಿಧ್ಯಮಯ ತಳಿಗಳಾಗಿ ಬೆಳೆಯಲ್ಪಡುತ್ತವೆ. ಪ್ರಾದೇಶಿಕವಾಗಿ ಇದರಲ್ಲಿ ತಳಿಗಳು ಭಿನ್ನವಾಗಿದ್ದು, ಈಶಾನ್ಯ ರಾಜ್ಯಗಳಾದ ಅಸ್ಸಾಂ , ತ್ರಿಪುರಾ, ಒಡಿಸ್ಸಾ, ಪಶ್ಚಿಮ ಬಂಗಾಳ ಮುಂತಾದ  ಕಡೆ ಇದರ ವಾಣಿಜ್ಯ ಬೇಸಾಯ ನಡೆಯುತ್ತದೆ. ಇಲ್ಲಿ ಸ್ವಲ್ಪ ದೊಡ್ದ ಗಾತ್ರದ ಅಧಿಕ ಇಳುವರಿಯ ತಳಿಗಳೂ ಇವೆ. ಕಾಡುಹೀರೆ, ಅಥವಾ ಅಥವಾ ಕಾಡು ಹಾಗಲ ಎಂದು ಸ್ಥಳೀಯ ಜನ ಕರೆಯುವ ಇದರ ಹೆಸರು…

Read more
ಹೂ ಬಿಟ್ಟದ್ದೆಲ್ಲಾ ಕಾಯಿಯಾಗುವ ಉತ್ತಮ ತರಕಾರಿ ತೊಂಡೆ

ಮಂಗಗಳ ಕಾಟ ಇಲ್ಲದ ಲಾಭದ ತರಕಾರಿ ಬೆಳೆ ಇದು.

ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ. ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ  ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ  ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು.  ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್  ತನಕ ಬೆಳೆ  ಬೆಳೆಸಬಹುದು. 100 ಚದರ ಅಡಿಯ…

Read more
ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
ಹಳದಿ ಎಲೆ ರೋಗ ಬಾಧಿತ ಬೆಂಡೆ ಎಲೆ

ಬೆಂಡೆಯ ಹಳದಿ ಎಲೆ ರೋಗಕ್ಕೆ ಮದ್ದು ಇಲ್ಲ.

ಬೆಂಡೆ, ಅಪರೂಪದಲ್ಲಿ ಕುಂಬಳ ಜಾತಿಯ ಸಸ್ಯಗಳಿಗೆ ಬರುವ ಪ್ರಾಮುಖ್ಯ ರೋಗ ಎಂದರೆ ಎಲೆ ಹಳದಿಯಾಗುವ ವೈರಸ್ ರೋಗ. ವೈರಸ್ ಎಂಬುದಕ್ಕೆ ಕನ್ನಡದಲ್ಲಿ ನಂಜಾಣು ಎಂದು ಹೇಳಲಾಗುತ್ತದೆ. ನಂಜಾಣು ಎನ್ನುವುದು ಅತೀ ಸೂಕ್ಷ್ಮ ಜೀವಿಯಾಗಿದ್ದು, ಇದನ್ನು ಸರಿಯಾಗಿ ಅಭ್ಯಸಿಸಿ ಅದಕ್ಕೆ ಪ್ರತ್ಯಔಷಧಿ ತಯಾರಿಸಲು ತುಂಬಾ ಕಷ್ಟ. ಏನಿದ್ದರೂ ನಿರೋಧಕ ಶಕ್ತಿ ಹೊಂದಿದ ತಳಿಯನ್ನು  ಆಯ್ಕೆ ಮಾಡಬೇಕು ಅಷ್ಟೇ. ಬೆಂಡೆಯ ಎಲೆ ಹಳದಿ ರೋಗ ಇಂತದ್ದೇ ಆಗಿದೆ. ಬಿಳಿ ಅಷ್ಟಪಟ್ಟಿ ಬೆಂಡೆ, ಅಥವಾ ಈಗ ಹೊಸತಾಗಿ ಕರೆಯಲಾಗುವ ‘ಕಾರ್ಲ ಬೆಂಡೆ’ ಅಥವಾ…

Read more

ಬೆಂಡೆ ಬೆಳೆಯಬೇಕೆಂದಿರುವಿರೇ? ಸ್ವಲ್ಪ ಓದಿ.

ಬೆಂಡೆ ಬೆಳೆಯಲ್ಲಿ ನಿಮ್ಮ ಕೈ ಮೀರಿ ಅಗುವ ನಷ್ಟ ಎಂದರೆ ಎಲೆ ಹಳದಿಯಾಗುವಿಕೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ. ಇದಕ್ಕೆ ಕಾರಣ ಒಂದು ವೈರಸ್. ಈ ರೋಗ ಬಂದರೆ ಅದಕ್ಕೆ ಔಷಧಿ ಇಲ್ಲ. ಯಾವ ಗಿಡಕ್ಕೆ  ಯಾವಾಗ ಬರುತ್ತದೆ ಎಂಬುದೂ ಹೇಳಲಿಕ್ಕೆ  ಸಾಧ್ಯವಿಲ್ಲ. ಹೀಗಿರುವಾಗ ಬೆಂಡೆ ಬೆಳೆಸಬೇಕೆಂಬ ಆಸಕ್ತಿ ಇದ್ದರೆ , ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳನ್ನೇ ಬೆಳೆಸಿ. ಆಗ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗದು. ಈ ರೋಗಕ್ಕೆ ಔಷಧಿ ಇಲ್ಲದ…

Read more

ಸ್ವಾವಲಂಬಿ ಬದುಕಿಗೆ ಮನೆಯಂಗಳದಲ್ಲಿ ತರಕಾರಿ.

ಅವರವರು ಬೆಳೆದ ತರಕಾರಿ ಹಣ್ಣು  ಹಂಪಲುಗಳನ್ನು ಅವರವರೇ ಬಳಸಿದರೆ  ಅದರಷ್ಟು ಆರೋಗ್ಯಕ್ಕೆ ಒಳ್ಳೆಯದು ಬೇರೊಂದಿಲ್ಲ. ನಾವು ಅಂಗಡಿಯಿಂದ ತರುವ ತರಕಾರಿ ಹಣ್ಣು  ಹಂಪಲುಗಳು ಎಷ್ಟೆಂದರೂ ಅಷ್ಟೇ. ಅದರ ಗಾತ್ರ ದೊಡ್ದದಾಗಲು ನೋಟ ಆಕರ್ಷಕವಾಗಿರಲು ಲೆಕ್ಕಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ,ನಿಷೇಧಿತ ರಕ್ಷಕಗಳನ್ನು  ಬಳಕೆ  ಮಾಡಲಾಗುತ್ತದೆ ಎನ್ನುತ್ತಾರೆ. ಎಂದೋ ಕೊಯಿದ, ಎಲ್ಲಿಂದಲೋ ತಂದ ತರಕಾರಿ ಹಣ್ಣು ಹಂಪಲುಗಳಲ್ಲಿ ಶಿಲೀಂದ್ರ ಬೆಳೆದಿರುವುದೂ ಇದೆ. ವಿಷ ರಾಸಾಯನಿಕ ಬಳಸಿದ ಉಳಿಕೆ ಅಂಶ ಇರುವುದೂ ಇದೆ. ಇದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅವರವರೇ…

Read more

ಬೂದು ಕುಂಬಳ -ಸರ್ವ ರೋಗ ನಿವಾರಕ.

ಶರೀರದಲ್ಲಿ ಬೊಜ್ಜು ಇದೆಯೇ, ರಕ್ತದೊತ್ತಡ, ಮಧು ಮೇಹ , ಅಲ್ಲದೇ ಹೊಟ್ಟೆ ಸಂಬಂಧಿತ ತಾವುದೇ ಸಮಸ್ಯೆಗಳಿದ್ದರೂ ಕುಂಬಳ ಕಾಯಿಗೆ ಅದನ್ನು ಸರಿಪಡಿಸುವ ಶಕ್ತಿ ಇದೆ. ಇದರ ಜ್ಯೂಸ್ ದಿನಾ ಒಂದು ಲೋಟ ಕುಡಿದರೆ ನೀವು ಧೀರ್ಘಾಯುಶಿಗಳಾಗುತ್ತೀರಿ. ಬೂದಿ ಕುಂಬಳದ ರಸವನ್ನು ಕುಡಿಸಿ ಪ್ರಕೃತಿ ಚಿಕಿತ್ಸೆಯಲ್ಲಿ ಆರೋಗ್ಯ ಸಮಸ್ಯೆ ಸರಿಪಡಿಸಲಾಗುತ್ತದೆ. ಏಷ್ಯಾದ  ಜಾವಾ ಮೂಲದ ತರಕಾರಿ ಇದು. ತರಕಾರಿಯೂ ಧೀರ್ಘಾಯುಶಿ. ತಿಂದವರೂ ಧೀರ್ಘಾಯುಶಿಗಳು. ಚಪ್ಪರದ ಮೇಲೆ, ನೆಲದ ಮೇಲೆ  ಹಬ್ಬಿ ಬೆಳೆಯುವ ಬಳ್ಳಿ ಸಸ್ಯ. ಸೋರೆಕಾಯಿ ಕುಟುಂಬಕ್ಕೆ ಸೇರಿರುವ…

Read more

ಹೀರೇ ಕಾಯಿಯಲ್ಲಿ ಅಧಿಕ ಇಳುವರಿ ಪಡೆಯುವುದು ಹೀಗೆ.

ಹೀರೇ ಕಾಯಿಗೆ ಪ್ರಮುಖ ತರಕಾರಿ ಬೆಳೆಯಾಗಿದ್ದು, ದೇಶದ ಎಲ್ಲಾ ಕಡೆ ಬೆಳೆಯಲ್ಪಡುತ್ತದೆ. ವ್ಯವಸ್ಥಿತವಾಗಿ ಬೆಳೆದರೆ ಇದರಲ್ಲಿ ಒಳ್ಳೆಯ ಆದಾಯ ಇದೆ. ಇದು ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲೆಲ್ಲಾ ಬೆಳೆಯಲ್ಪಡುವ  ತರಕಾರಿ.  ಇದು ಅತ್ಯಧಿಕ ಪೋಷಕಾಂಶಗಳನ್ನು ಪಡೆದ ತರಕಾರಿಯಾಗಿದೆ.. ಹೇಗೆ ಬೆಳೆಯುವುದು: ಎಲ್ಲಾ ನಮೂನೆಯ  ಮಣ್ಣಿನಲ್ಲೂ ಬೆಳೆಯಬಹುದಾದ ಬೆಳೆ ಇದು.  ಮಣ್ಣನ್ನು ಸಡಿಲ ಮಾಡಿಕೊಂಡು ಬೆಳೆಯಬೇಕು. ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಗುಣ ಇರಬೇಕು. ಮಣ್ಣು ಮತ್ತು ಸಾವಯವ ಗೊಬ್ಬರ  ಸಮ ಪ್ರಮಾಣದಲ್ಲಿ ಇರಬೇಕು. ಮಳೆಗಾಲದಲ್ಲಿ ಎತ್ತರಿಸಿದ ಸಾಲು ಉತ್ತಮ….

Read more

ಹಾಗಲಕಾಯಿ ಯಾಕೆ ಕೊಳೆಯುತ್ತದೆ?

ಹಾಗಲಕಾಯಿ ಹಾಳಾಗುವುದಕ್ಕೆ ಕಣ್ಣು ದೃಷ್ಟಿ ಕಾರಣ ಎಂದು ಕೆಲವರು ಚಪ್ಪಲಿ, ಕಸಬರಿಕೆ ಕಟ್ಟುತ್ತಾರೆ.  ಆದರೂ ಕಾಯಿ ಹಾಳಾಗುವುದು ನಿಲ್ಲುವುದಿಲ್ಲ. ಕೊನೆಗೆ ನಮ್ಮಲ್ಲಿ ಹಾಗಲಕಾಯಿ ಆಗುವುದಿಲ್ಲ ಎಂದು ತೀರ್ಮಾನಕ್ಕೆ  ಬರುತ್ತಾರೆ. ಇದು ಯಾವ ಕಣ್ಣು ದೃಷ್ಟಿಯೂ ಅಲ್ಲ. ಕಾರಣ ಒಂದು ಕೀಟ ಅಷ್ಟೇ.. ಹಾಗಲಕಾಯಿಯ  ಕಹಿಗೂ ಕೀಟ ಬರುತ್ತದೆಯೇ ? ಇದು ಎಲ್ಲರ ಪ್ರಶ್ಣೆ. ನಿಜವಾಗಿಯೂ ಕಹಿ ಇದ್ದರೂ ಬರುತ್ತದೆ. ಸಿಹಿ ಇದ್ದರೂ ಬರುತ್ತದೆ. ಅದು ಹಣ್ಣು ತರಕಾರಿಗಳಿಗೆ ತೊಂದರೆ ಮಾಡುವ ಒಂದು ಕೀಟ. ಯಾವ ಕೀಟ: ಜೇನು…

Read more
error: Content is protected !!