ರೈತರನ್ನು ಸುಲಿಗೆ ಮಾಡುವ ವ್ಯವಸ್ಥೆ ಹೀಗಿದೆ !

ರೈತರು

ರೈತರು ಎಂದರೆ ಅವರು ಒಬ್ಬ ವ್ಯಾಪಾರಸ್ಥ ಕೊಟ್ಟದ್ದನ್ನು ನಂಬಿಕೆಯಲ್ಲಿ ತೆಗೆದುಕೊಳ್ಳುವ ಪ್ರವೃತ್ತಿಯವ. ಇದನ್ನು ನಗದೀಕರಣ ಮಾಡಿಕೊಳ್ಳುವವರೇ ಹೆಚ್ಚಿನವರು. ಕಳಪೆ ಗುಣಮಟ್ಟದ , ನಕಲಿ ಉತ್ಪನ್ನಗಳ ಮೂಲಕ ರೈತರನ್ನು ಸದಾ ಸುಲಿಗೆ ಮಾಡಲಾಗುತ್ತಿದೆ.

  • Finolex ಕಂಪೆನಿಯ ಯಾವುದಾದರೂ ಸಾಮಾಗ್ರಿ ಕೇಳಿದರೆ   Phinoleks ಕೊಡುತ್ತಾರೆ.
  • TCM ಬ್ರಾಂಡಿನ ಮೈಲು ತುತ್ತೆ ಕೇಳಿದರೆ VCM, ಕೊಡುತ್ತಾರೆ. .
  • Jain  ಕಂಪೆನಿಯ  ಉತ್ಪನ್ನ ಕೇಳಿದರೆ Lain  ಹೆಸರಿನ ಉತ್ಪನ್ನ ಮಾತ್ರ ಅಂಗಡಿಯಲ್ಲಿ  ಲಭ್ಯವಿರುತ್ತದೆ.
  • ನಮಗೆ ನೈಜ ಸಾಮಾಗ್ರಿ ಹುಡುಕಿಕೊಂಡು ಹೋಗಲು ಬಿಡುವಿಲ್ಲ. ನಮ್ಮ  ಅಗತ್ಯಗಳು ಸುಲಿಗೆಕೋರರ ಹೊಟ್ಟೆ ತುಂಬಿಸುತ್ತದೆ.

ಪರಿಸ್ಥಿತಿ:

  • ಕೃಷಿಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ  ಒದಗಿಸುತ್ತಾ ಇದ್ದ ಹಲವಾರು ಪ್ರತಿಷ್ಟಿತ  ಕೃಷಿ ಉತ್ಪನ್ನ ತಯಾರಿಕಾ ಸಂಸ್ಥೆಗಳು ಈಗ ಬಾಗಿಲು ಹಾಕುವ ಸ್ಥಿತಿಗೆ  ಬಂದಿವೆ. ಸಾವಿರಾರು ಜನ  ಉದ್ಯೋಗ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇವರೆಲ್ಲರ ವ್ಯವಹಾರವನ್ನು ಕಾಕಪೋಕಗಳೆಂಬ  ಕಳಪೆ ಗುಣಮಟ್ಟದ ಉತ್ಪನ್ನ ತಯಾರಿಕಾ ಸಂಸ್ಥೆಯವರು ಕಸಿದುಕೊಂಡಿದ್ದಾರೆ.
  • ಕೃಷಿ ಒಳಸುರಿ ಮಾರಾಟ ಅಂಗಡಿಯವನಲ್ಲಿ ನೀವು ಗುರುತಿಸಿದ ಉತ್ತಮ ಕಂಪೆನಿಯ  ಉತ್ಪನ್ನ ಇದೆಯಾ ಎಂದು ಏಳಿದರೆ ಅವರು ತಕ್ಷಣ ಹೇಳುತ್ತಾರೆ ಅದಕ್ಕಿಂತ ಉತ್ತಮವಾದ ಉತ್ಪನ್ನ ಇದು ಎಂದು ಯಾವುದಾದರೂ ಒಂದು ಕಳಪೆ ಉತ್ಪನ್ನವನ್ನು ಸ್ವಲ್ಪ ಕಡಿಮೆ ಬೆಲೆಗೆ ಕೊಡುತ್ತಾರೆ.
  • ರೈತನಿಗೆ ಆಯ್ಕೆಗಳಿಲ್ಲದೆ, ಖರೀದಿ ಮಾಡಿ, ಇವುಗಳನ್ನು ಅಳವಡಿಸಿಕೊಂಡು ಕೆಲವೇ ಸಮಯದಲ್ಲಿ ಹಾಳಾಗುತ್ತದೆ. ಪುನಹ ಮತ್ತೊಂದು ಅಂಗಡಿಯವನ ಬಳಿಗೆ ಹೋಗಿ ಬೇರೆ ಖರೀದಿಸುತ್ತಾನೆ.
  • ರೈತನಿಗೆ ಮತ್ತು ಮತ್ತೂ ಕಳಪೆ ಸಮಾಗ್ರಿಗಳನ್ನೇ ಸರಬರಾಜು ಮಾಡುತ್ತಾ ವ್ಯಾಪಾರಿ ಮತ್ತು ತಯಾರಕರು ಉದ್ದಾರವಾದರೆ, ಕೃಷಿಕನ ಆದಾಯ ಪೂರ್ತಿ ಇವರ ಪಾಲಾಗುತ್ತದೆ.
  • ಹಳ್ಳಿಯಿರಲಿ, ಪಟ್ಟಣ ಇರಲಿ,  ಬಹುತೇಕ ಎಲ್ಲಾ ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳಲ್ಲಿ ನೀವು ಹೋಗಿ ಯಾವುದೋ ನಿಮ್ಮ  ನಂಬಿಗೆಯ  ಕಂಪೆನಿಯ  ಉತ್ಪನ್ನ ಕೇಳಿದರೆ ಅವರು ಆ ಹೆಸರಿಗೆ ಹೋಲಿಕೆ ಇರುವ ಕಂಪೆನಿಯ ಉತ್ಪನ್ನ ಕೊಡುತ್ತಾರೆ.
  • ನಿಮ್ಮ ಆಯ್ಕೆಯ ಕಂಪೆನಿ ಬಗ್ಗೆ ಕೆಲವು ಸುಳ್ಳುಗಳನ್ನು ಹೇಳಿ ನಿಮ್ಮನ್ನು ನಂಬಿಸುತ್ತಾರೆ.

ಕೃಷಿಕರು ಬಳಸುವ ನೀರಾವರಿ ಸಾಮಾಗ್ರಿ, ರಸಗೊಬ್ಬರ, ಕೀಟನಾಶಕ, ರೋಗನಾಶಕ, ಕಳೆನಾಶಕ, ಉಪಕರಣ ಯಾವುದೇ ಸಾಮಾಗ್ರಿ  ಇದ್ದರೂ ಅದರ ಮೂಲ ತಯಾರಕರೆ ಹೆಸರಿಗೆ ಸಾಮ್ಯತೆ ಇರುವ  ಹೆಸರನ್ನಿಟ್ಟು, ಹೋಲಿಕೆಯ ಬಣ್ಣದ ಮೂಲಕ  ವ್ಯಾಪಾರಿಗಳಿಗೆ  ಭಾರೀ ಮಾರ್ಜಿನ್ ಕೊಟ್ಟು ನಮ್ಮನ್ನು ಸುಲಿಗೆ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ .

ಗುಣಮಟ್ಟ ಎಂಬುದಕ್ಕೆ ಬೆಲೆಯೇ ಇಲ್ಲ….

  • ಸುಮಾರು 25  ವರ್ಷದ ಹಿಂದೆ ಹನಿ ನೀರಾವರಿ ಅಳವಡಿಸಿಕೊಂಡವರು ಈಗಲೂ ಅದನ್ನು  ಉತ್ತಮವಾಗಿಯೇ ಉಳಿಸಿಕೊಂಡಿದ್ದಾರೆ. ಅದರ ಯಾವುದೇ ಭಾಗಗಳೂ ಹಾಳಾಗಿರುವುದಿಲ್ಲ.
  • ಯಾವುದೇ ತೊಂದರೆ  ನೀಡದೆ  ಕೆಲಸ ಮಾಡುತ್ತಿದೆ. ಅಂದಿನ ಕಾಲದ ಕ್ಲಾಪೆಟ್ ವಾಲ್ವ್ ಗಳು, ಸ್ಪ್ರಿಂಕ್ಲರ್  ಗಳು, ಬಾಲ್ ವಾಲ್ವ್ ಗಳು, ಡ್ರಿಪ್ಪರುಗಳು ಈಗಲೂ ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಮಾಡುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿರುವ  ಉತ್ಪನ್ನಗಳ ಬಾಳ್ವಿಕೆ 20  ವರ್ಷಗಳ ಬದಲು  2 ವರ್ಷಗಳು ಮಾತ್ರ.
  • ಪೈಪು ಒಡೆಯುತ್ತದೆ, ಜೋಡಣೆ ಬಿಡುತ್ತದೆ, ಇಲಿ,  ಗೆದ್ದಲು, ಹೆಗ್ಗಣ, ಹಂದಿಗಳೂ ಇವುಗಳನ್ನು ತಿನ್ನುತ್ತವೆ.
  • ಸ್ವಲ್ಪ ಬಲವಾಗಿ ನಡೆದರೆ  ನೆಲದಡಿಯ ಪೈಪು ಒಡೆಯುವುದೂ ಇಲ್ಲದಿಲ್ಲ. ಹಿಂದಿನವರು ಅಳವಡಿಸಿದ  ಕ್ಲಾಪೆಟ್ ವಾಲ್ವ್ ಗೆ ಇನ್ನೂ ಆಯುಷ್ಯ ಮುಗಿದಿಲ್ಲ.
  • ಆದರೆ ಈಗಿನ ಕ್ಲಾಪೆಟ್ ವಾಲ್ವ್ ಗಳಿಗೆ  ಬರೇ 1-2  ತಿಂಗಳ ಆಯುಷ್ಯ. ಎಲ್ಲಿಗೆ ಮುಟ್ಟಿತು ನಮ್ಮ ಸ್ಥಿತಿ.
  • ನೀರು  ಹರಿವನ್ನು ತಡೆಯುವ ವಾಲ್ವ್ ಗಳಲ್ಲಿ  ನೀರು ನಿಲ್ಲುವುದಿಲ್ಲ. ಹೋಗುತ್ತದೆ. ಯಾವುದೇ ವಾಲ್ವ್ ನ ಹಿಡಿಕೆ  ವರ್ಷ ತನಕವೂ ಬಾಳ್ವಿಕೆ  ಬರುವುದಿಲ್ಲ.

ಸುಮಾರು 20  ವರ್ಷಕ್ಕೆ ಹಿಂದೆ ಹನಿ  ನೀರಾವರಿ –

ಸ್ಪ್ರಿಂಕ್ಲರ್ ನೀರಾವರಿ, ಪೈಪು ಮತ್ತು ಜೋಡಣೆ ತಯಾರಿಕಾ ಕ್ಷೇತ್ರದಲ್ಲಿ ಈಗಿನಂತೆ ಹೆಜ್ಜೆ ಹೆಜ್ಜೆಗೆ ಒಬ್ಬರಂತೆ   ತಯಾರಕರು, ಮಾರಾಟಗಾರರು ಇರಲಿಲ್ಲ. ಕೆಲವೇ ಕೆಲವು ತಯಾರಕರು, ಅವರ ಮಾರಾಟಗಾರರು ಮಾತ್ರ ಇದ್ದರು.  ತಯಾರಕರಿಗೆ ಎಥಿಕ್ಸ್  ಇತ್ತು. ಈಗ ಅದು ಯಾವುದೂ ಇಲ್ಲ. ಇಂದು ಒಂದು ಕಂಪೆನಿ ಹೆಸರಿದ್ದಾದರೆ ಮುಂದಿನ ವರ್ಷ  ಹೆಸರೇ ಬೇರೆಯಾಗುತ್ತದೆ.
ಹಿಂದೆ ಮಾರಾಟಗಾರರು ಬರೇ ಮಾರಾಟ ಮಾಡುವುದು ಮಾತ್ರವಲ್ಲ. ಅಳವಡಿಕೆ ಮತ್ತು ಅಗತ್ಯ ನಿರ್ವಹಣೆಗಳನ್ನೂ ಮಾಡಿಕೊಡುತ್ತಿದ್ದರು. ಈಗ ಹಾಗಿಲ್ಲ,  ಮಾರಾಟ ಮಾತ್ರ. ಎಲ್ಲಾ ವ್ಯವಹಾರವೂ ತಯಾರಕರು ಕೊಡುವ ಹೆಚ್ಚಿನ  ಮಾರ್ಜಿನ್ ಮೇಲೆ ನಿಂತಿದೆ.

ಯಾಕೆ ಹೀಗಾಯಿತು:

  • ಗ್ರಾಹಕರನ್ನು  ಕಡಿಮೆ ಬೆಲೆ ಗೊತ್ತುಮಾಡಿ ಆಕರ್ಷಿಸುವ ಸಲುವಾಗಿ ಇದೆಲ್ಲಾ ನಡೆದಿದೆ. ಯಾವುದೋ ಕಂಪೆನಿಯಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ದುಡಿದ ಅನುಭವದಲ್ಲಿ ತಮ್ಮ ಹೊಸ ಸಂಸ್ಥೆ ಹುಟ್ಟು ಹಾಕಿದ್ದಾರೆ.
  • ಗ್ರಾಹಕರು ಯಾವಾಗಲೂ ಚೌಕಾಸಿ ಮಾಡಲಿಲ್ಲ. ಬದಲಿಗೆ  ಮಾರಾಟಗಾರರು ಮತ್ತು ತಯಾರಕರು ತಮ್ಮ ಲಾಭಕ್ಕಾಗಿ  ಗ್ರಾಹಕರನ್ನು ಮರುಳು ಮಾಡಿದ್ದಾರೆ.
  • ಮಾರಾಟಗಾರರು ತಮ್ಮ ಲಾಭಕ್ಕಾಗಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಕೊಟ್ಟು ಟೋಪಿ ಹಾಕಿದ್ದಾರೆ.
  • ಕೆಲವು ಮೂಲಗಳ ಪ್ರಕಾರ ಈಗ ಹನಿ ನೀರಾವರಿ ಉತ್ಪನ್ನಗಳಾದ ಪೈಪು ಮತ್ತು ಅದರ ಜೋಡಣೆಗಳನ್ನು ಯಾರೂ ತಯಾರಿ ಮಾಡುವುದಿಲ್ಲ. ಮಹಾರಾಷ್ಟ್ರದ ಕೊಲ್ಲಾಪುರ, ಸೋಲಾಪುರ, ನಾಶಿಕ್ ಮುಂತಾದ ಕಡೆ ನಿಮಗೆ ಬೇಕಾದ ಸೀಲ್ ಬ್ಯಾಚ್ ನಂಬ್ರ ಹಾಕಿ ಉತ್ಪನ್ನ ತಯಾರಿಸಿ ಕೊಡುವವರ ಮೂಲಕ ತಯಾರಿಸಿ  ಮಾರಾಟ ಮಾಡಲಾಗುತ್ತದೆ.

ಕೃಷಿಕರು ಏನು ಮಾಡಬೇಕು:

  • ಸಾಧ್ಯವಾದಷ್ಟು ಧೀರ್ಘ ಬಾಳ್ವಿಕೆ ಬರಬಲ್ಲ  ಪ್ರತಿಷ್ಟಿತ ಕಂಪೆನಿಗಳ ತಯಾರಿಕೆಯನ್ನೇ ಖರೀದಿ ಮಾಡಬೇಕು. ಇದಕ್ಕೆ ಹೇಳುವವರು ಕೇಳುವವರು ಇರುತ್ತಾರೆ.
  • ಯಾವುದೇ ಉತ್ಪನ್ನದಲ್ಲಿ ಬ್ಯಾಚ್ ನಂಬ್ರ, ತಯಾರಿಕಾ ದಿನಾಂಕ ಎಲ್ಲವೂ ಇರುತ್ತದೆ. ಬಿಡುವು ಮಾಡಿ ಆ ಬ್ಯಾಚ್ ನಂಬ್ರದ ಕಸ್ಟಮರ್ ಕ್ಯಾರ್ ಆಫೀಸರ್ ಗೆ ಕರೆ ಮಾಡಿ ವಿಚಾರಿಸಬೇಕು. ಆಗ ಆ ಉತ್ಪನ್ನದ ಅಸಲೀಯತೆ ತಿಳಿಯುತ್ತದೆ.
  • ಸ್ವಂತಿಕೆ ಇಲ್ಲದ ತಯಾರಕರಿಂದ ಉತ್ಪಾದನೆಯಾದ  ವಸ್ತುಗಳು.
  • ಕ್ಲಪೆಟ್ ವಾಲ್, ವಾಷರ್ ಹೀಗೆ ಇಂತಹ ಉತ್ಪನ್ನಗಳನ್ನೂ ತಯಾರಿಸುತ್ತಾರೆ

Leave a Reply

Your email address will not be published. Required fields are marked *

error: Content is protected !!