ಕೃಷಿಯ ವ್ಯವಸ್ಥೆಯೊಳಗೆ ಆದಾಯ ಹೆಚ್ಚಿಸಿಕೊಳ್ಳಲು ಎಷ್ಟೊಂದು ಅವಕಾಶಗಳಿವೆ. ಇದನ್ನು ಬಳಸಿಕೊಂಡು ರೈತರು ತಮ್ಮ ಈಗಿನ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಲು ಸಾಧ್ಯವಿದೆ. ಕೃಷಿ ಬರೇ ಕೃಷಿಕರನ್ನು ಮಾತ್ರ ಬದುಕಿಸುವುದಲ್ಲ. ಸಮಾಜದಲ್ಲಿ ಬಹಳಷ್ಟು ಜನರಿಗೆ ಬದುಕು ನೀಡುವಂತದ್ದು !
- ರೇಶ್ಮೆ ವ್ಯವಸಾಯ ನಮ್ಮ ದೇಶದ ಅಸಂಖ್ಯಾತ ರೈತರಿಗೆ ಬದುಕು ನೀಡಿದ ಬೆಳೆ.
- ಹಿಪ್ಪು ನೇರಳೆ ಬೆಳೆ ಬೆಳೆಸಿ, ಅದರಲ್ಲಿ ಹುಳು ಸಾಕಿ ಅದರ ಗೂಡುಗಳನ್ನು ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಸಂಪಾದನೆ ಮಾಡುವುದು ಒಂದಾದರೆ,
- ಇದೇ ಗೂಡುಗಳಿಂದ ಬೇರೆ ಬೇರೆ ಅಲಂಕಾರದ ಕಲಾ ಕೆಲಸಗಳನ್ನು ಮಾಡುವುದು ಇನ್ನೊಂದು ಲಾಭದಾಯಕ ವೃತ್ತಿಯಾಗಿದೆ.
- ಕೃಷಿ ವಿಶ್ವ ವಿಧ್ಯಾನಿಲಯದ ರೇಶ್ಮೆ ಕೃಷಿ ವಿಭಾಗದವರು ಇದನ್ನು ಮಾಡಿ ತೋರಿಸಿದ್ದಾರೆ.
ಯಾವುದೇ ವೃತ್ತಿಯಲ್ಲಿ ಬಹು ಬಗೆಯ ಅವಕಾಶಗಳನ್ನು ರೈತ ಅಥವಾ ರೈತ ಕುಟುಂಬದ ಯಾರೇ ಆದರೂ ಕಂಡು ಕೊಂಡಾಗ ಅಲ್ಲಿ ಆದಾಯ ಹೆಚ್ಚುತ್ತದೆ.
- ಒಂದು ವೇಳೆ ರೇಶ್ಮೆ ಗೂಡುಗಳು ಒಡೆದು ಹಾಳಾಯಿತು ಎಂದಿಟ್ಟುಕೊಳ್ಳೋಣ.
- ಮಾರುಕಟ್ಟೆಗೆ ಒಯ್ದರೆ ಅದಕ್ಕೆ ಬೆಲೆ ಇರುವುದಿಲ್ಲ.
- ಅಂಥಹ ಗೂಡುಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆ ಬರುವಂತೆ ಮೌಲ್ಯವರ್ಧನೆ ಮಾಡಬಹುದು.
ಬಹು ಬಗೆಯ ಉತ್ಪನ್ನಗಳು:
- ರೇಶ್ನೆ ಗೂಡುಗಳಿಂದ ಅಸಂಖ್ಯಾತ ವಸ್ತುಗಳನ್ನು ತಯಾರಿಸಬಹುದು.
- ಇದಕ್ಕೆ ವಿಶೇಷ ಮಾರುಕಟ್ಟೆ ಇದೆ.
- ಈಗ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಸಾಮಾಗ್ರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.
- ಆದ ಕಾರಣ ಇಂತಹ ಉತ್ಪನಗಳಿಗೆ ಬೇಡಿಕೆ ಚೆನ್ನಾಗಿರುತ್ತದೆ.
ರೇಶ್ಮೆ ಗೂಡುಗಳಿಂದ ಬೇರೆ ಬೇರೆ ವಿನ್ಯಾಸದ ಹಾರಗಳನ್ನು ತಯಾರಿಸಬಹುದು. ಇದು ಶುದ್ಧ ನೈಸರ್ಗಿಕ ಉತ್ಪನ್ನವಾದ ಕಾರಣ ಇದಕ್ಕೆ ಅದರದ್ದೇ ಆದ ಸೊಬಗು ಇದೆ. ದೀರ್ಘ ಬಾಳ್ವಿಕೆಯೂ ಇದೆ. ಸಭೆ ಸಮಾರಂಭಗಳ ಅತಿಥಿ ಸತ್ಕಾರಗಳಿಗೆ ಇದು ಉತ್ತಮ.
ಹೂ ಗುಚ್ಚಗಳು- ಹೂದಾನಿಗಳು:
- ವೈವಿಧ್ಯ ಮಯ ಹೂ ಗುಚ್ಚಗಳನ್ನು ರೇಶ್ನೆ ಗೂಡುಗಳ ಮೂಲಕ ತಯಾರಿಸಬಹುದು.
- ಇದು ನೈಸರ್ಗಿಕ ಹೂವುಗಳಿಗೆ ಯಾವ ರೀತಿಯಾಲ್ಲೂ ಕಡಿಮೆ ಇಲ್ಲ ಎನ್ನುವಷ್ಟು ಉತ್ತಮವಾಗಿರುತ್ತದೆ.
- ಇದು ಬಾಡುವುದಿಲ್ಲ. ಹಳೆಯದಾಗುವುದಿಲ್ಲ. ಮನೆಯಲ್ಲಿ ಶೋಕೇಸ್ ಗಳಲ್ಲಿ ಇಡಲು ಉತ್ತಮ.
- ಸಭೆ ಸಮಾರಂಭಗಳಲ್ಲಿ ಇದನ್ನು ಅತಿಥಿ ಸತ್ಕಾರಕ್ಕೂ ಬಳಕೆ ಮಾಡಬಹುದು.
ಬಳಕೆ:
- ರೇಶ್ಮೆಗೂಡಿನಿಂದ ತಯಾರಿಸಲ್ಪಟ್ಟ ಉತ್ಪನ್ನಗಳು ಈಗ ಹೆಚ್ಚಿನ ಕಡೆಯಲ್ಲಿ ಬಳಕೆಯಗುತ್ತಿದೆ.
- ಅದ್ಧೂರಿಯ ಸಭೆ ಸಮಾರಂಭಗಳನ್ನು ನಡೆಸುವವರು ಈ ಉತ್ಪನ್ನಗಳನ್ನೇ ಹೆಚ್ಚು ಬಯಸುತ್ತಾರೆ.
- ಇದು ಇನ್ನು ಮುಂದಿನ ದಿನಗಳಲ್ಲಿ ನೈಸರ್ಗಿಕ ಬೆಳೆಯುವ ಹೂವುಗಳ ಮಾರುಕಟ್ಟೆಗೆ ನೇರ ಪೈಪೋಟಿ ನೀಡಿದರೂ ಅಚ್ಚರಿ ಇಲ್ಲ.
ಉದ್ಯೋಗಾವಕಾಶ:
- ಮುಂದೆ ಇಂಥಹ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವ ವೃತ್ತಿಗೆ ಹೆಚ್ಚಿನ ಮಹತ್ವ ಬರಲಿದೆ.
- ಹೊರ ಊರಿನಲ್ಲಿ ಯಾವುದೋ ವೃತ್ತಿಗೆ ಹೋಗುವ ಬದಲು ಕೆಲವರಾದರೂ ಇಂಥಹ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
- ಮನೆಯಲ್ಲಿದ್ದೇ ಮಾಡಬಹುದಾದ ವೃತ್ತಿ.
- ಇದು ರೇಶ್ಮೆ ಗೂಡಿಗೆ ಹೆಚ್ಚಿನ ಬೇಡಿಕೆ ಮತ್ತು ಮಾರುಕಟ್ಟೆ ಧಾರಣೆಯನ್ನು ಹೆಚ್ಚಿಸಲೂ ಸಹಕಾರಿಯಾಗಬಲ್ಲುದು.
ಹಳ್ಳಿ- ಪಟ್ಟಣದ ಆಸಕ್ತ ಯುವಕ ಯುವತಿಯರು ಇಂಥಹ ಕಸೂತಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಅವರ ಆದಾಯಕ್ಕೂ ಉತ್ತಮ. ಕೃಷಿ ಉತ್ಪನ್ನದ ಬೇಡಿಕೆ ಹೆಚ್ಚಳಕ್ಕೂ ಉತ್ತಮ.