ಅಲಂಕಾರಕ್ಕಾಗಿ ಮೀನು ಸಾಕುವುದೇ ಅಕ್ವೇರಿಯಂ. ಇದು ಕೃಷಿಕರಿಗೆ ಹೊಂದುವ ಉಪ ವೃತ್ತಿ.
ಪುರಾತನ ಕಾಲದಿಂದಲೂ ಜನ ಆನಂದಕ್ಕಾಗಿ ಮೀನು ಸಾಕಣೆ ಮಾಡುತ್ತಿದ್ದರು. ರಾಜ ಮಹಾರಾಜರ ಕಾಲದಿದಲೂ ಇದು ಇತ್ತು ಎನುತ್ತಾರೆ. ಈಗ ಅಕ್ವೇರಿಯಂ ಮನೆಗೆ ಒಂದು ವಾಸ್ತು ಜೊತೆಗೆ ಪ್ರತಿಷ್ಟೆಯ ವಿಚಾರ.
- ಅಕ್ವೇರಿಯಂ ಅಥವಾ ಬಣ್ಣದ ಮೀನಿನ ವ್ಯವಹಾರ ಎಂದರೆ ಸಣ್ಣದೇನಲ್ಲ.
- ಪ್ರಪಂಚದಲ್ಲಿ ಇದು 30,000 ಕೋಟಿಯ ವ್ಯವಹಾರ.
- ಇದರಲ್ಲಿ ಭಾರತದ ಪಾಲು 0.008 % ಮಾತ್ರ. ಅವಕಾಶ ಮಾತ್ರ.
ನಮ್ಮ ದೇಶದಲ್ಲಿ ಅಕ್ವೇರಿಯಂ ಒಳಗೆ ಸಾಕಬಹುದಾದ ನೂರಕ್ಕೂ ಹೆಚ್ಚು ಮೀನು ಪ್ರಭೇಧಗಳಿವೆ. ನಮ್ಮ ರಾಜ್ಯದ ಪಶ್ಚಿಮ ಘಟ್ಟದ ನದಿ, ಹಳ್ಳ,ಗಳಲ್ಲಿ ಅಕ್ವೇರಿಯಂ ನಲ್ಲಿ ಸಾಕಬಹುದಾದ ಹಲವಾರು ಮೀನಿನ ಪ್ರಭೇಧಗಳು ಇವೆ.
- ಮೀನು ಮನೆ ಅಥವಾ ಅಕ್ವೇರಿಯಂ ಒಳಗೆ ಬಣ್ಣದ ಮೀನುಗಳನ್ನು ಸಾಕಲಾಗುತ್ತದೆ.
- ಇದು ಮನಃ ಶಾಂತಿಗೆ ಮತ್ತು ಮತ್ತು ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತದೆ.
- ಮೀನುಗಳನ್ನು ಗಾಜಿನ ಮನೆ ಮಾಡಿ ನೈಸರ್ಗಿಕವಾಗಿ ಅವು ಹೇಗೆ ಬದುಕುತ್ತವೆಯೋ ಅದೇ ಪರಿಸ್ಥಿಯನ್ನು ಅದರ ಒಳಗೆ ನಿರ್ಮಿಸಿಕೊಡಲಾಗುತ್ತದೆ.
ಪ್ರಯೋಜನಗಳು:
- ಮೀನು ಒಂದು ಸುಂದರವಾದ ಅಲಂಕಾರಿಕ ಜಲಚರ.
- ಇವುಗಳು ನಮ್ಮ ಕಣ್ಣಮುಂದೆಯೇ ತಮ್ಮ ಚಟುವಟಿಕೆಗಳನ್ನು ಮಾಡುತ್ತಾ ಇದ್ದಗ ಅದನ್ನು ನೋಡಿ ಅನಂದಿಸುವುದು ಪರಮಾನಂದವೆನಿಸುತ್ತದೆ.
- ಇದರ ವೀಕ್ಷಣೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವುದೆಂದು ಕಂಡು ಬಂದಿದೆ.
- ಮನೆಯ ಸೌಂದರ್ಯ ಹೆಚ್ಚುತ್ತದೆ.
- ಇದು ಮಕ್ಕಳ ಜ್ಞಾನ ವೃದ್ದಿಗೆ ಸಹಕಾರಿ ಹಿರಿಯರು ಕಿರಿಯರು ಎಲ್ಲರೂ ನೋಡಿ ಅನಂದಿಸುವಂತದ್ದು.
ಅಕ್ವೇರಿಯಂ ರಚನೆ ಹೇಗೆ:
- ಗಟ್ಟಿಯಾದ (un breakable)ಗಾಜಿನ ತುಂಡುಗಳನ್ನು ಜೊಡಿಸಿ ಮನೆ ನಿರ್ಮಾಣ ಮಾಡಲಾಗುತ್ತದೆ.
- ಮೀನುಗಳ ಸಂಖ್ಯೆಗನುಗುಣವಾಗಿ ಸಣ್ಣ – ದೊಡ್ದ ಮನೆ ಮಾಡಿಕೊಳ್ಳಬೇಕು.
- ಈ ಗಾಜುಗಳನ್ನು ವಿಶಿಷ್ಟ ಅಂಟಿನ ಮೂಲಕ ಜೋಡಿಸಲಾಗುತ್ತದೆ.
- ನೀರು , ಜಲ ಸಸ್ಯಗಳು, ಸಮತೋಲನದಲ್ಲಿದ್ದರೆ ಮೀನುಗಳು ಹೆಚ್ಚು ಕಾಲ ಬದುಕಬಲ್ಲವು .
- ಇದಕ್ಕಾಗಿ ಇದರ ಒಳಗೆ ಅಲಂಕಾರಿಕ ಕಲ್ಲುಗಳು, ದೊಡ್ದ ಗಾತ್ರದ ಮರಳು, ನೀರಿನಲ್ಲಿ ಬೆಳೆಯುವ ಪಾಚಿಯಂತಹ ಕೆಲವು ಸಸ್ಯಗಳು, ಕೆಲವು ಮರ ತುಂಡುಗಳನ್ನು ಇಡಲೇ ಬೇಕಾಗುತ್ತದೆ.
- ಇದು ಮೀನುಗಳಿಗೆ ವಿರಮಿಸಲು ಅಗತ್ಯ.
- ಅಕ್ವೇರಿಯಂ ಮೇಲೆ ವಿದ್ಯುತ್ ಬಲ್ಬ್ ಹಾಕಲೇ ಬೇಕು.
- ಇದು ನೀರಿನಿಂದ 4-5 ಇಂಚು ಮೇಲೆ ಇರಬೇಕು.
- ಚಳಿಗಾಲದಲ್ಲಿ ಹೆಚ್ಚು ಚಳಿ ಆಗದಂತೆ ಅಗತ್ಯವಿದ್ದರೆ ಹೀಟರುಗಳನ್ನು ಅಳವಡಿಸಬೇಕು.
- ಯಾವಾಗಲೂ ಮೀನನ್ನು ಕೈಯಿಂದ ಮುಟ್ಟಬಾರದು. ಅದಕ್ಕೆ ಹ್ಯಾಂಡ್ ನೆಟ್ ಬಳಸಬೇಕು.
ತಿಂಗಳಿಗೊಮ್ಮೆ ನೀರನ್ನು ಬದಲಿಸಬೇಕಾಗುತ್ತದೆ. ಆಮ್ಲಜನಕ ಸರಬರಾಜು ಮಾಡಬೇಕಾಗುತ್ತದೆ. ಎರೇಟರುಗಳನ್ನು ಅಕ್ವೇರಿಯಂ ನಿಂದ ಮೇಲೆ ಇಡಬೇಕು. ದಿನಾ ಸಿದ್ದಪಡಿಸಿದ ಆಹಾರ ಕೊಡಬೇಕಾಗುತ್ತದೆ.
- ಅಗ್ಯತ್ಯ ಇರುವಾಗ ಪರೀನತರ ಸಲಹೆಯ ಮೇರೆಗೆ ಪೊಟಾಶ್ಯೀಯಂ ಪರಮಾಂಗನೇಟ್ ಟೆಟ್ರಾ ಮೈಸಿನ್ ಮಿಥೇಲ್ ಬ್ಲೂ. ಉಪ್ಪು ಮುಂತಾದ ರಾಸಾಯನಿಕ ಪದಾರ್ಥ ಬಳಸಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು’.
ಅಕ್ವೇರಿಯಂ ಗೆ ಸೂಕ್ತ ಮೀನುಗಳು:
- ಗಪ್ಪಿ ಮೀನು
- ಮೋಲಿ ಮೀನು
- ಸ್ವೋರ್ಡ್ ಟೈಲ್ ಮೀನು.
- ಪ್ಲಾಟಿ ಮೀನು – ಇವು ಮರಿಹಾಕುವ ಮೀನುಗಳು.
- ಮೊಟ್ಟೆ ಇಡುವ ಮೀನುಗಳು
- ಗೋಲ್ಡ್ ಫಿಶ್ ಕೋಯಿ ಕಾರ್ಪ್
- ಟೈಗರ್ ಬಾರ್ಬ್
- ಟೆಟ್ರಾ ಡೇನಿಯೋ
- ಏಂಜೆಲ್
- ಫೈಟರ್
- ಗೌರಮಿ
- ಚಿಕ್ಲೆಟ್ – ಇವು ಚಾಲ್ತಿಯಲ್ಲಿರುವವುಗಳು.
ವೃತ್ತಿ ಮಾಡುವವರಿಗೆ ಹೇರಳ ಅವಕಾಶ ಇದೆ:
- ಅಕ್ವೇರಿಯಂ ಮೀನು ಸಾಕಾಣಿಕೆಗೆ ಪೂರಕವಾಗಿ ಸ್ವ ಉದ್ಯೋಗ ಮಾಡುವರೇ ಸರಕಾರದಿಂದ ಸಹಾಯಧನವೂ ಇದೆ. ತರಬೇತಿಯೂ ಇದೆ.
- ಮೀನು ಮರಿ ಉತ್ಪಾದನೆಗೆ ಘಟಕದ ವರ್ಗಕ್ಕನ್ನುಗುಣವಾಗಿ 0.75 ಲಕ್ಷ ,2 ಲಕ್ಷ 7.5 ಲಕ್ಷ ಹಾಗೂ ರಚಿಸಲ್ಪಟ್ತ ಮಾರುಕಟ್ಟೆ ಸಂಘ ಕ್ಕೆ ಪ್ರೋತ್ಸಾಹ ಧನವಾಗಿ 5, ಲಕ್ಶ ತನಕ ಸಹಾಯಧನ ಇದೆ.
- ಇದಕ್ಕೆ ಬೆಂಬಲವಾಗಿ ಕೇಂದ್ರ ಸರಕಾರದ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ದಿ ಮಂಡಳಿ, ಹೈದರಾಬಾದ್ NFDB ಹಾಗೂ ಸಾಗರೋತ್ತರ ರಪ್ತು ಅಭಿವೃದ್ದಿ ಪ್ರಾಧಿಕಾರ MPEDA ಇವೆ. ತರಬೇತಿಗೆ ಸ್ಥಳೀಯ ಮೀನುಗಾರಿಕಾ ಇಲಾಖೆ ಇದೆ.
- ಮೀನುಗಾರಿಕಾ ಕಾಲೇಜಿನಲ್ಲೂ ತರಬೇತಿ ಸೌಲಭ್ಯ ಇದೆ.
- ಅಕ್ವೇರಿಯಂ ಮೀನುಗಳ ರಪ್ತುಗಾಗಿ ಸರಕಾರ ಸಾಕಷ್ಟು ವಿದೇಶೀ ವಿನಿಮಯವನ್ನು ವ್ಯಯಿಸುತ್ತಿದೆ.
- ಅದನ್ನು ಉಳಿಸಲು ಇದು ಪ್ರೋತ್ಸಾಹ.
ಅಕ್ವೇರಿಯಂ ತಯಾರಿಸಿ ಮಾರಾಟ ಮಾಡುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಬಹಳ ಜನ ಆರ್ಥಿಕವಾಗಿ ಮೇಲೆ ಬಂದಿದ್ದಾರೆ.