ಕೃಷಿಕರ ಆದಾಯ ದ್ವಿಗುಣವಾಗಲೇ ಇಲ್ಲ –ಯಾಕೆ?

farmers grow but price fixed by others

ಸರಕಾರ ಕೃಷಿಕರ ಆದಾಯ ದುಪ್ಪಟ್ಟಾಗಬೇಕು ಎಂದು ಕಾರ್ಯಕ್ರಮಗಳನ್ನು ಹಾಕಿಕೊಂದಂತೆ ದೇಶದಲ್ಲಿ ರೈತರ ಆದಾಯ ಕುಂಠಿತವಾಗುತ್ತಲೇ  ಬರುತ್ತಿದೆ.
ಇತ್ತೀಚೆಗೆ ಎಲ್ಲೋ ಖ್ಯಾತ ರೈತ ಪರ ಹೋರಾಟಗಾರರಾದ ಶ್ರೀ ದೇವೇಂದ್ರ ಶರ್ಮ ಇವರು ಹೇಳಿಕೆಕೊಟ್ಟದ್ದು ಗಮನಿಸಿದ್ದೆ. ಇವರು ಹೇಳುತ್ತಾರೆ ಸರಕಾರ ಗ್ರಹಿಸಿದಂತೆ ಆದಾಯ ಹೆಚ್ಚಳವಾಗುವ ಬದಲಿಗೆ ಕಡಿಮೆಯೇ ಆಗುತ್ತಿದೆಯಂತೆ. ಅಷ್ಟೇ ಅಲ್ಲ. ಕೃಷಿಕರ ಆದಾಯವನ್ನು ಕೃಷಿ ನಿರ್ವಹಣೆಯೇ ತಿಂದು ಹಾಕುತ್ತಿದೆಯಂತೆ. ಈ ಬಗ್ಗೆ ಅವರು ಕೊಡುವ ಕೆಲವು ಲೆಕ್ಕಾಚಾರಗಳು ಹೀಗಿವೆ.

Farmer waiting for buyer

  • ನಮ್ಮ ದೇಶದಲ್ಲಿ ಕೃಷಿ ಹೊಲದ ಮಾಲಿಕನಿಗಿಂತ ಕೃಷಿ ಕೂಲಿ ಕಾರ್ಮಿಕ ಶ್ರೀಮಂತನಾಗಿದ್ದಾನೆ.
  • ಗ್ರಾಮ ಸುಭಿಕ್ಷೆಗೆ ಕೃಷಿಯೇ ಅಡಿಪಾಯ.
  • ಇಲ್ಲಿ ಕೃಷಿ ಹೊಲದ ಮಾಲಿಕರ ಆದಾಯ ದ್ವಿಗುಣ ಇಡೀ ಸಾಮಾಜಿಕ ಆರ್ಥಿಕ ಬಧ್ರತೆಗೆ ಮೂಲ.
  • ಈಗ ಕೆಲವು ವರ್ಷಗಳಿಂದ ಕೃಷಿ ಆದಾಯ ಕೃಷಿಕನ ಕೈಯಿಂದ ಬೇರೆಯವರ ಕೈಗೆ ಹೋಗಿ, ಕೃಷಿಕ ಸಾಲದ ಹೊರೆಯಲ್ಲಿ ಇದ್ದಾನೆ.
  • ಭಾರತದ ಆರ್ಥಿಕ ಸ್ಥಿತಿ:ವಿಶ್ವಬ್ಯಾಂಕ್ ಪ್ರಕಾರ, ಭಾರತದ 40% ಕ್ಕಿಂತ ಹೆಚ್ಚು ಉದ್ಯೋಗಿಗಳು ಕೃಷಿಯಲ್ಲಿ ತೊಡಗಿದ್ದಾರೆ.
  • ಗ್ರಾಮೀಣ ಕೃಷಿಕ ಕುಟುಂಬದ ಆದಾಯದ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳಿಲ್ಲ.
  • ಆದರೆ ಕೃಷಿ ಕಾರ್ಮಿಕರ  ವೇತನಗಳ ಕುರಿತಾದ ಮಾಹಿತಿಯಿದೆ.
  • ದೇಶದಲ್ಲಿ  2014 ಮತ್ತು 2019 ರ ನಡುವೆ ಕೃಷಿ ಹೊಲದ ಮಾಲಿಕನ ಆದಾಯದ ಏರಿಕೆ  ನಿಧಾನವಾಗುತ್ತಿದೆ.
  • ಕೃಷಿ ದೈನಂದಿನ ವೇತನ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಹಣದುಬ್ಬರ ಉಂಟಾಗಿದೆ.
  • ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ  ಹಣದುಬ್ಬರವು 2017 ರಲ್ಲಿ ಕೇವಲ 2.5% ಕ್ಕಿಂತ ಕಡಿಮೆ ಇದ್ದು 2019 ರಲ್ಲಿ ಸುಮಾರು 7.7% ಕ್ಕೆ ಏರಿದೆ ಎಂದು ಲೆಕ್ಕಾಚಾರ ತೋರಿಸುತ್ತದೆ.
  • ಇದು ವೇತನ ಹೆಚ್ಚಳಕ್ಕೆ ತುತ್ತಾಗಿದೆ.2013-16 ರ ತನಕ ದೇಶದಲ್ಲಿ ರೈತರ ಆದಾಯ ಏರಿಕೆಯ ಗತಿಯಲ್ಲಿ ಮುನ್ನಡೆಯುತ್ತಿತ್ತು.
  • 2018 ರಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಯ ವರದಿಯ ಪ್ರಕಾರ,ಮೂರು ವರ್ಷಗಳಲ್ಲಿ ರೈತರ ಆದಾಯವು ವರ್ಷಕ್ಕೆ ಕೇವಲ 2% ಹೆಚ್ಚಾಗಿದೆ.
  • ರೈತರ ಈ  ಆದಾಯವು ಕೃಷಿಯೇತರ ಕುಟುಂಬಗಳಿಗೆ ಹೋಲಿಸಿದರೆ ಕೇವಲ  ಮೂರನೇ ಒಂದು ಭಾಗಮಾತ್ರ.
  • ಇವರು ಹೇಳುವಂತೆ ರೈತರ ಆದಾಯವು ನೈಜವಾಗಿ ಸ್ಥಿರ ಅಥವಾ ಹಲವಾರು ದಶಕಗಳಿಂದ ಕುಸಿಯುತ್ತಲೇ ಇದೆ.
  • ಈಗಿನ ಹಣದುಬ್ಬರವನ್ನು ಗಮನಿಸಿದರೆ ತಿಂಗಳಿಗೆ ಒಂದೆರಡು ಸಾವಿರ [ರೂಪಾಯಿಗಳ] ಆದಾಯ ಹೆಚ್ಚಳವು ಯಾವುದೇ ವ್ಯತ್ಯಾಸವನ್ನು ಉಂಟು ಮಾಡುವುದಿಲ್ಲ.

Devendra Sharma

ಎಲ್ಲವೂ ವೆಚ್ಚಗಳಿಗೆ ಬೇಕು:

  • ಒಬ್ಬ ರೈತ ನೀರಾವರಿಗಾಗಿ ಮಾಡುವ ಖರ್ಚು ತನ್ನ ಅತೀ ದೊಡ್ಡ ಖರ್ಚಿನ ಬಬ್ತು ಆಗಿರುತ್ತದೆ.
  • ಒಂದು  ಕೊಳವೆ ವಾವಿಗಾಗಿ ರೈತ ಏನಿಲ್ಲವೆಂದರೂ 1-2 ಲಕ್ಷ ಖರ್ಚು ಮಾಡಬೇಕು.
  • ಇದು ಶಾಶ್ವತ  ಹೂಡಿಕೆ ಅಗಿರದೆ ವರ್ಷದ ಖಾತ್ರಿಯೂ ಇರುವುದಿಲ್ಲ.
  • ಕೃಷಿ ಪರಿಕರಗಳಾದ ನೀರಾವರಿ ವ್ಯವಸ್ಥೆಗಳು, ಗೊಬ್ಬರ, ಹಾಗೆಯೇ ಸಸ್ಯ ಸಂರಕ್ಷಗಳ ಬೆಲೆ ಹೆಚ್ಚುತ್ತಲೇ ಇದೆ.
  • ಇದರಲ್ಲಿ ಯಾವುದೂ ಕರಮುಕ್ತವಾಗಿ ಇಲ್ಲ.ಕೆಲಸಗಾರರ ಸಂಬಳ ವರ್ಷ ದಿಂದ ವರ್ಷಕ್ಕೆ 10-15% ದಂತೆ ಹೆಚ್ಚಾಗುತ್ತಿದೆ.
  • ಕೆಲಸದ ಅವಧಿ ನೈಪುಣ್ಯತೆ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಇದೆ.
  • ಇತೀಚೆಗೆ ಏರಿಕೆಯಾದ ಪಿ ವಿ ಸಿ ಪೈಪಿನ  ಬೆಲೆ ಹೆಚ್ಚಳ 40%  ದೇಶದ ರೈತರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
  • ಹಾಗೆಂದು  ರೈತರು ಬೆಳೆದ  ಉತ್ಪನ್ನಗಳಿಗೆ ಅವರು ಪಡೆಯುವ  ಬೆಲೆ ವಿಪರೀತ ಏರಿಳಿತದದ ಹಾದಿಯಲ್ಲೇ ಮುಂದುವರಿದಿದೆ.
  • ಇತ್ತೀಚಿನ ವರ್ಷಗಳಲ್ಲಿ, ಬರಗಾಲ- ಅತಿವೃಷ್ಟಿ ಮುಂತಾದ  ತೀವ್ರ ಹವಾಮಾನದ ವೈಪರೀತ್ಯಗಳು ರೈತರ ಆದಾಯವನ್ನೆಲ್ಲಾ  ಖರ್ಚಿಗೆ ಹೊಂದಾಣಿಕೆ ಮಾಡುವಂತೆ ಮಾಡಿದೆ.

ಸರ್ಕಾರದ ಲೆಕ್ಕಾಚಾರ ಹೀಗಿತ್ತು:

farmers are not getting remunerative price

  • 2022 ರ ವೇಳೆಗೆ ರೈತರ ಆದಾಯವು ದ್ವಿಗುಣವಾಗಲು, 2015 ರಿಂದ ಪ್ರತಿ ವರ್ಷ 10.4% ರಷ್ಟು ಹೆಚ್ಚಾಗಬೇಕು ಎಂದು ಸರ್ಕಾರಿ ಸಮಿತಿಯು 2017 ರಲ್ಲಿ ವರದಿ ಮಾಡಿದೆ.
  • ಆದರೆ ಅದು ಆಗುತ್ತಿಲ್ಲ.
  • ಕೃಷಿ ಕ್ಷೇತ್ರದಲ್ಲಿ 6.39 ಬಿಲಿಯನ್ ರೂಪಾಯಿಗಳನ್ನು ಹೂಡಿಕೆ ಮಾಡುವ ಅಗತ್ಯವಿದೆ ಎಂದು ಸರಕಾರ ಹೇಳುತ್ತಿದೆ.
  • ಆದರೆ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಪ್ರಮಾಣವೇ ಕುಸಿಯುತ್ತಿದೆ.
  • 2011-12 ರಲ್ಲಿ, ಶೇಕಡಾವಾರು ಕೃಷಿಯಲ್ಲಿ ಹೂಡಿಕೆ 8.5% ರಷ್ಟಿತ್ತು.
  • ಇದು 2013-14 ರಲ್ಲಿ 8.6% ಕ್ಕೆ ಏರಿತು ಮತ್ತು ನಂತರ ಕುಸಿಯಿತು,
  • 2015 ರಿಂದ 6% ಮತ್ತು 7% ರ ನಡುವೆ ಹೆಚ್ಚು ಕಡಿಮೆ ವ್ಯತ್ಯಾಸವಾಗದೆ ಇದೆ.

ರೈತರು ಸಾಲದಲ್ಲಿ ಮುಳುಗುತ್ತಿದ್ದಾರೆ:

  • ತೋರಿಕೆಗೆ ರೈತ ವೆಲ್ ಆಫ್. ಆದರೆ ಒಳಗೆ ಗೋಳಿಸೊಪ್ಪು ಮಾತ್ರ.
  • ದೇಶದಲ್ಲಿ ಸಾಲ ಇಲ್ಲದ ರೈತನೇ ಇಲ್ಲವೆಂದರೂ ತಪ್ಪಾಗಲಾರದು.
  • ಸಾಲದ ಮೇಲೆ ಸಾಲ ಮಾಡುತ್ತಾ, ಮೈಮೇಲೆಲ್ಲಾ ಸಾಲವನ್ನು ಮೆತ್ತಿಕೊಂಡವರಿದ್ದರೆ ಅದು ಕೃಷಿಕರು ಮಾತ್ರ.
  • ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2016 ರಲ್ಲಿ ನಡೆಸಿದ ಅಧಿಕೃತ ಸರ್ಕಾರಿ ಸಮೀಕ್ಷೆಯ ಪ್ರಕಾರ, ಈವರೆಗಿನ ಮೂರು ವರ್ಷಗಳಲ್ಲಿ, ರೈತರು ಹೊಣೆಗಾರರಾಗಿರುವ ಸಾಲದ ಸರಾಸರಿ ಪ್ರಮಾಣವು ದ್ವಿಗುಣಗೊಂಡಿದೆ.
  • ರಸಗೊಬ್ಬರಗಳು ಮತ್ತು ಬೀಜಗಳಿಗೆ ಸಬ್ಸಿಡಿಗಳು ಮತ್ತು ವಿಶೇಷ ಸಾಲ ಯೋಜನೆಗಳನ್ನು ತರುತ್ತಿದ್ದರೂ ಸಾಲ ರೈತನನ್ನು ಬೆಂಬಿಡದೆ ದೆವ್ವವಾಗಿ  ಕಾಡುತ್ತಿದೆ.
  • 2019 ರಲ್ಲಿ ಸರ್ಕಾರವು 80 ದಶಲಕ್ಷ ರೈತರನ್ನು ಗುರಿಯಾಗಿಸಿಕೊಂಡು ಪ್ರತೀ ರೈತರಿಗೂ ವಾರ್ಷಿಕ 6000 ರೂ. ನೇರ ನಗದು ವರ್ಗಾವಣೆ ಯೋಜನೆಯನ್ನು ಘೋಷಿಸಿತು .
  • ಅದರ ಜೊತೆಗೆಯೇ ಸರಕಾರ ಮಾಡದಿದ್ದರೂ, ವ್ಯವಸ್ಥೆ ಆ ಮೊತ್ತಕ್ಕೆ ಮಿಕ್ಕಿದಂತೆ ವಿದ್ಯುತ್, ಕೃಷಿ ಒಳ ಸುರಿ , ಡಿಜಿಟಲ್ ಸಂಪರ್ಕ ಎಂದು ಅದೂ ಕೂಡಾ ರೈತನಿಗೆ ಕೈಗೆ ಬರುತ್ತಿಲ್ಲ.

 ಸರಕಾರ ರೈತರ ಬಗ್ಗೆ ಕಳಕಳಿ ಹೊಂದಿದೆಯೇ – ತೋರಿಕೆಗೆ ಹೌದು. ಆದರೆ ಅದು ರೈತರನ್ನು ಎಲ್ಲೂ ಏಳಿಗೆಯಾಗಲು ಬಿಡುತ್ತಲೇ ಇಲ್ಲ. ದೇಶದಲ್ಲೀ ಈಗ ರೈತ ಬಡವ ,ಮುಂದೆಯೂ ರೈತ ಬಡವನಾಗಿಯೇ ಇರುವುವ ಪರಿಸ್ಥಿತಿ ಇದೆ.  ಸರಕಾರ ಸರಿಯಾದ ದಿಕ್ಕಿನಲ್ಲಿ ಹೋಗಲು ಹೇಳಿದರೂ ಸಮಯ ಸಂದರ್ಭಗಳು ರೈತರನ್ನು ಹಿಂದಕ್ಕೆ ತಳ್ಳುತ್ತಲೇ ಇವೆ.

error: Content is protected !!