ಈರುಳ್ಳಿ ಬೆಳೆಸುವವರಿಗೆ- ಇಲ್ಲಿದೆ ವಿಶೇಷ ತಳಿಗಳು!

ಈರುಳ್ಳಿ

ಈರುಳ್ಳಿ ನಮ್ಮ ದೇಶದ ಪ್ರಮುಖ  ತರಕಾರಿ ಬೆಳೆ. ಇದನ್ನು ಬಲ್ಬ್ ಕ್ರಾಪ್ ಎನ್ನುತ್ತಾರೆ. ಪ್ರಪಂಚದಲ್ಲೇ ಈರುಳ್ಳಿ ಬೆಳೆಯುವ ಎರಡನೇ ದೊಡ್ಡ ದೇಶ ನಮ್ಮದು. ಮಹಾರಾಷ್ಟ್ರ ಮೊದಲ ಸ್ಥಾನದಲ್ಲೂ  ಕರ್ನಾಟಕ ಎರಡನೇ ಅತೀ ದೊಡ್ಡ ಈರುಳ್ಳಿ ಬೆಳೆಯುವ ರಾಜ್ಯ. ಈರುಳ್ಳಿ ತಳಿ ಅಭಿವೃದ್ದಿಯಲ್ಲಿ  ಕರ್ನಾಟಕದ ಪಾಲು ಅತೀ ದೊಡ್ದದು. 

  • ಇದೇ ಕಾರಣಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ,ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯನ್ನು  ಈರುಳ್ಳಿ ತಳಿ ಅಭಿವೃದ್ದಿಗೆ ನಿಯೋಜಿಸಿದೆ.
  • ಇಲ್ಲಿ ಅರ್ಕಾ ಹೆಸರಿನ ಸುಮಾರು 10 ಬೇರೆ ಬೇರೆ ಗುಣದ ಈರುಳ್ಳಿ ತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ.
  • ಈರುಳ್ಳಿ ಬೆಳೆಯಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದ್ದು, ತಳಿ ಅಭಿವೃದ್ದಿಯೂ ನಡೆಯುತ್ತಿದೆ..

ಯಾಕೆ ಈ ತಳಿಗಳು ಉತ್ತಮ:

  • ಸಾಮಾನ್ಯವಾಗಿ ಈರುಳ್ಳಿ ಬೆಳೆಗಾರರು ಮಹಾರಾಷ್ಟ್ರದ ನಾಸಿಕ್, ಸತಾರ ಮುಂತಾದ ಕಡೆಗಳಿಂದ ಈರುಳ್ಳಿ ಬೀಜ ತಂದು ಬೆಳೆ ಬೆಳೆಸುತ್ತಾರೆ.
  • ಸರಕಾರೀ ಸ್ವಾಮ್ಯದ  ಸಂಶೋಧನಾ ಸಂಸ್ಥೆಗಳೂ ಅಲ್ಲದೆ ಬೇರೆ ಖಾಸಗಿ ಸಂಸ್ಥೆಗಳೂ  ತಳಿ ಅಭಿವೃದ್ದಿಯಲ್ಲಿ ತೂಡಗಿಸಿಕೊಂಡಿವೆ.
  •  ಕೆಲವರು ಅರ್ಕಾ, ಪೂಸಾ ತಳಿಗಳನ್ನು ಬೀಜೋತ್ಪಾದನೆ ಮಾಡುತ್ತಾರೆ  ಮತ್ತೆ ಕೆಲವರು ಖಾಸಗಿ ಕಂಪೆನಿಗಳ ತಳಿಗಳ ಬೀಜೋತ್ಪಾದನೆ ಮಾಡುತ್ತಾರೆ.
  • ಯಾವುದು ಲಾಭದಾಯಕವೋ ಅದನ್ನು ಅವರು ಬೀಜೋತ್ಪಾದನೆ ಮಾಡುತ್ತಾರೆ.
  •  ಕೆಲವು ನೋಟದಲ್ಲಿ ಉತ್ತಮವಾಗಿದ್ದರೂ ಕಾಪಿಡುವ ಶಕ್ತಿ, ರೋಗ ನಿರೋಧಕ ಶಕ್ತಿ ಇರುವುದಿಲ್ಲ.
  • ಆದರೆ ಸಂಶೋಧನಾ ಸಂಸ್ಥೆಗಳಿಂದ ಬಿಡುಗಡೆಯಾದ  ತಳಿಗಳು  ವಿಶೇಷ ಗುಣಗಳನ್ನು  ದೃಷ್ಟಿಯನ್ನಿಟ್ಟುಕೊಂಡು ಅಭಿವೃದ್ದಿ ಆದವುಗಳು.

ರೋಗ- ಕೀಟ ನಿರೋಧಕ ಶಕ್ತಿ, ಕಾಪಿಡುವ ಗುಣ, ಸ್ಥಳೀಯ ಬಳಕೆ, ರಪ್ತು ಮುಂತಾಗಳನ್ನು ಗಣನೆಗೆ ತೆಗೆದುಕೊಂಡೇ ತಳಿ ಅಭಿವೃದ್ದಿ ನಡೆಯುವ ಕಾರಣ ರೈತರಿಗೆ ಇದು ಲಾಭದಾಯಕ.

ನಿರ್ಜಲೀಕರಣಕ್ಕೆ ಸೂಕ್ತವಾದ ಬಿಳಿ ಈರುಳ್ಳಿ

ವಿಶೇಷ ತಳಿಗಳು!

  • ಅರ್ಕಾ ಕೀರ್ತಿಮಾನ್: ಈ ತಳಿಯು  ದುಂಡಗೆ ಗಾತ್ರದ ಸಾಧಾರಣ ಗಾತ್ರದ ಈರುಳ್ಳಿ.
  • ತಿಳಿ ಕೆಂಪು ಬಣ್ಣದ ಸಿಪ್ಪೆ.  ಒಂದೊಂದು ಈರುಳ್ಳಿ 120 -130 ಗ್ರಾಂ ತೂಗಬಲ್ಲುದು.
  • 4-5 ತಿಂಗಳ ಕಾಲ ಸಂಗ್ರಹಿಸಿಡಬಹುದಾದ ಉತ್ತಮ ತಳಿ.
  • 120 -130 ದಿನಗಳ ಮಳೆಗಾಲ ಮತ್ತು  ಚಳಿಗಾಲಕ್ಕೆ ಸೂಕ್ತ ತಳಿ.
  • ಹೆಕ್ಟೇರಿಗೆ  ಸರಾಸರಿ 47 ಟನ್ ಇಳುವರಿ.
  • ಅರ್ಕಾ ಲಾಲಿಮಾ F1 : ಇದು ಸಹ  ಧೀರ್ಘ ಕಾಲದ ತನಕ ದಾಸ್ತಾನು ಇಡಬಹುದಾದ ತಳಿ.
  • 130-140 ದಿನಗಳ ಈ ತಳಿ ಹೆಕ್ಟೇರಿಗೆ 50 ಟನ್ ಇಳುವರಿ ಕೊಡಬಲ್ಲುದು.
  • ಅರ್ಕಾ ಕಲ್ಯಾಣ್: ಇದು ಹಿರೇಹಳ್ಳಿ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆಯಾದ ತಳಿ.
  • ಬಳ್ಳಾರಿ ರೆಡ್ ತಳಿಗಿಂತ 42.80 % ಹೆಚ್ಚು ಇಳುವರಿ ಕೊಡುತ್ತದೆ.
  • ಇದಕ್ಕೆ ಕೆಂಪು ಎಲೆ ಮಚ್ಚೆ ರೋಗಕ್ಕೆ purple blotch disease  ನಿರೋಧಕ ಶಕ್ತಿ ಹೊಂದಿದೆ.
  • ಹೆಕ್ಟೇರಿಗೆ ಸರಾಸರಿ 47-50 ಟನ್   ಇಳುವರಿ ಕೊಡುತ್ತದೆ.
  • ಬೀಜೋತ್ಪಾದನೆಗೂ ಒಳ್ಳೆಯ ತಳಿ.
  • ಸ್ವಲ್ಪ ದೊಡ್ದ ಗಾತ್ರದ ಕಡು ಕೆಂಪು ವರ್ಣದ ತಳಿ.

ರಪ್ತು ಉದ್ದೇಶದ ತಳಿಗಳು:

  • ಅರ್ಕಾ ಬಿಂದು: ಇದನ್ನು ಗುಲಾಬಿ ಈರುಳ್ಳಿ ಎಂದೇ ಕರೆಯಲಾಗುತ್ತದೆ.
  • ಗಾತ್ರ ಸಣ್ಣದು. ಇದು ರಪ್ತು ಉದ್ದೇಶಕ್ಕೆ ಸೂಕ್ತವಾದ ತಳಿ.
  • ಸಂಸ್ಕರಣೆಗೂ ಸೂಕ್ತವಾದ ತಳಿ.
  • ಅರ್ಕಾ ವಿಶ್ವಾಸ್:  ಇದು ಸಣ್ಣ (40 ಗ್ರಾಂ)ಗಾತ್ರದ ಕೆಂಪು ಬಣ್ಣದ ಅಲ್ಪಾವಧಿ ಈರುಳ್ಳಿ ತಳಿ.
  •  ಬೆಳೆ ಅವಧಿ 115 ದಿನಗಳು. ರಪ್ತು ಉದ್ದೇಶಕ್ಕೆ  ಸೂಕ್ತವಾದ ತಳಿ.
  • ಹೆಕ್ಟೇರಿಗೆ ಸರಾಸರಿ 30 ಇಳುವರಿ. ಮಳೆಗಾಲ ಮತ್ತು ಚಳಿಗಾಲಕ್ಕೆ ಸೂಕ್ತ ತಳಿ.
  • ಅರ್ಕಾ ಭೀಮ್: ಇದು ದೊಡ್ಡ ಗಾತ್ರದ ಈರುಳ್ಳಿ.
  • ತಿಳಿ ಕೆಂಪು ಬಣ್ಣ.  ಸ್ವಲ್ಪ ಉದ್ದ  ಆಕಾರ.
  • 130 ದಿನಗಳಲ್ಲಿ ಹೆಕ್ಟೇರಿಗೆ  ಸರಾಸರಿ 130 ಟನ್ ಇಳುವರಿ ಕೊಡಬಲ್ಲುದು.
  • ಅರ್ಕಾ ಸೋನಾ: 130 ದಿನಗಳ   ದೊಡ್ದ ಗಾತ್ರದ  ತಿಳಿ ಪಿಂಕ್ ಬಣ್ಣದ ತಳಿ.
  • ದುಂಡಗೆ ಅಕಾರ 120 ಗ್ರಾಂನಿಂದ 140 ತನಕ ಇರುತ್ತದೆ.
  • ಹೆಕ್ಟೇರಿಗೆ  45 ಟನ್ ಇಳುವರಿ ಕೊಡಬಲ್ಲುದು.
  • ಚಳಿಗಾಲಕ್ಕೆ ಸೂಕ್ತ    ಮತ್ತು ರಪ್ತು ಉದ್ದೇಶಕ್ಕೆ  ಸೂಕ್ತವಾದ ತಳಿ.
  • ಅರ್ಕಾ ಉಜ್ವಲ್:  ಇದನ್ನು ಸಾಂಬಾರ್ ಈರುಳ್ಳಿ ಎಂದೇ ಕರೆಯುತ್ತಾರೆ.
  • ಇದು ಹೆಕ್ಟೇರಿಗೆ  30 ಟನ್ ಇಳುವರಿ ಕೊಡಬಲ್ಲುದು. ರಪ್ತು ಉದ್ದೇಶಕ್ಕೆ  ಸೂಕ್ತವಾದ ತಳಿ.
  • ಅರ್ಕಾ ಯೋಜಿತ್:  ಇದು ಬಿಳಿ ಬಣ್ಣದ  ಈರುಳ್ಳಿ. ನಿರ್ಜಲೀಕರಣ ಉದ್ದೇಶಕ್ಕೆಂದೇ  ಬಿಡುಗಡೆಯಾದ ತಳಿ.
  • 60-80 – ಗ್ರಾಂ ತೂಗುತ್ತದೆ. 110 -120 ದಿನಗಳ ಬೆಳೆ ಅವಧಿ.
  • ಹೆಕ್ಟೇರಿಗೆ   25 -30  ಟನ್ ಇಳುವರಿ ಕೊಡಬಲ್ಲುದು.
  • ಅರ್ಕಾ ಸ್ವಾದಿಷ್ಟಾ, : ಏಕ ಪ್ರಕಾರದ ಗಾತ್ರ. ಸಂಸ್ಕರೆಣೆಗೆ ಸೂಕ್ತ.
  • ಇದು ಸಣ್ಣ ಗಾತ್ರದ  30-40-  ಗ್ರಾಂ ತೂಗುವ ಬಿಳಿ ಇರುಳ್ಳಿ.
  • ಬಾಟಲಿಯಲ್ಲಿ ಶೇಖರಿಸಿಡುವುದಕ್ಕೆ ಸೂಕ್ತವಾದ ತಳಿ.
  • 115ದಿನಗಳ ಹೆಕ್ಟೇರಿಗೆ  16-18 ಟನ್ ಇಳುವರಿ ಕೊಡಬಲ್ಲ ತಳಿ.

 ಎಲ್ಲರೂ ಒಂದೇ ಉದ್ದೇಶಕ್ಕೆ ಬಳಕೆಯಾಗುವ ತಳಿಗಳನ್ನೇ ಬೆಳೆಸಿದರೆ ಒಮ್ಮೊಮ್ಮೆ ಬೆಲೆ ಉಸಿತವಾದಾಗ  ಭಾರೀ ನಷ್ಟ ಉಂಟಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ಉದ್ದೇಶಕ್ಕೆ ಸೂಕ್ತವಾದ ತಳಿಗಳನ್ನು ಬೆಳೆಸುವುದು ಸೂಕ್ತ.

Leave a Reply

Your email address will not be published. Required fields are marked *

error: Content is protected !!