ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ ವರ್ಜ್ಯ

ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ  ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು  ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು.

ಬುಡ ಬುಡಿಸುವುದು ಹಳೆ ಪದ್ದತಿ:

  • ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು.
  • ಅದರಲ್ಲಿ ಒಂದು ಬುಡ ಬಿಡಿಸುವುದು. ಬುಡ ಭಾಗದಲ್ಲಿ ಹರಡಿರುವ ಕಸ ಬೇರುಗಳು ತುಂಡಾದರೆ ಬೇರೆ ಬೇರು ಬರುತ್ತದೆ,
  • ಮೇಲ್ಭಾಗದಲ್ಲಿ  ಬೇರು ಬಂದು ಗಿಡಕ್ಕೆ ತೊಂದರೆ ಆಗುತ್ತದೆ ಎಂದು ಬುಡ ಬಿಡಿಸಿ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹಾಕಿ ಮತ್ತೆ ಮುಚ್ಚಿ ಬುಡುತ್ತಿದ್ದರು.
  • ಅದು ಅವರ ತಿಳುವಳಿಕೆ ಮಟ್ಟಕ್ಕೆ ಸೂಕ್ತವಾಗಿತ್ತು.
  • ಆದರೆ ವೈಜ್ಞಾನಿಕವಾಗಿ ಏಕದಳ ಸಸ್ಯಗಳಾದ ಅಡಿಕೆ, ತೆಂಗು ಮರಗಳ ಬುಡ ಭಾಗವನ್ನು ಯಾವುದೇ ರೀತಿಯಲ್ಲಿ ತೊಂದರೆ ಮಾಡದೆ
  • ಮೇಲು ಭಾಗಕ್ಕೇ ಪೋಷಕಗಳನ್ನು ಹಾಕುತ್ತಾ ಬಂದರೆ ಮರದ ಬೆಳೆವಣಿಗೆಗೆ ಯಾವ ತೊಂದರೆಯೂ ಉಂಟಾಗುವುದಿಲ್ಲ.

ಬೇರುಗಳು ಮತ್ತು ಅದರ ಬೆಳೆವಣಿಗೆ:

  • ಅಡಿಕೆ ಮರಗಳ ಬೇರುಗಳು ಕಾಂಡ ಭಾಗದಿಂದ ಹುಟ್ಟಿಕೊಳ್ಳುತ್ತವೆ.
  • ಪ್ರತೀ ವರ್ಷ ಕಾಂಡದ ಭಾಗದಿಂದ ಮೇಲೆ ಮೇಲೆ ಬೇರುಗಳ ಹುಟ್ಟು ಆಗುತ್ತಲೇ ಇರುತ್ತದೆ. 
  • ಕೆಳಭಾಗದ  ಬೇರುಗಳು ಮರಕ್ಕೆ ಆಧಾರವಾಗಿ ಉಳಿಯುತ್ತವೆ.
  • ಕ್ರಮೇಣ ಅವು ಸಾಯುತ್ತವೆ ಸಹ. ಹೊಸತಾಗಿ ಹುಟ್ಟಿಕೊಳ್ಳುವ ಬೇರುಗಳು  ಬೆಣ್ಣೆಯ ತಿಳಿ ಹಳದಿ ಬಣ್ಣದಲ್ಲಿರುತ್ತವೆ.
  • ಕೆಳ ಭಾಗದ ಬೇರುಗಳ ಹೊರ ತೊಗಟೆ ತಿಳಿ ಕೆಂಪು ಬಣ್ಣದಲ್ಲಿರುತ್ತವೆ.
  • ತಿಳಿ ಕೆಂಪು ಬಣ್ಣದ ಬೇರುಗಳು ಮರಕ್ಕೆ ಆಧಾರವಾದರೆ  ಬಿಳಿ ಬಣ್ಣದ ಬೇರುಗಳು ಆಹಾರ ಸಂಗ್ರಹಿಸಿಕೊಡುವ ಬೇರುಗಳಾಗಿರುತ್ತವೆ.
  • ಇದು ಬೆಳೆಯುತ್ತಾ ಎಷ್ಟು ಮೆದು, ಮತ್ತು ಪೋಷಕಾಂಶ ಯುಕ್ತ ಮಣ್ಣು ಇರುತ್ತದೆಯೋ ಆ ತನಕ ಮುಂದೆ ಮುಂದೆ ಹೋಗುತ್ತದೆ.
  • ಮೇಲು ಭಾಗದಲ್ಲಿ ಬೆಳೆಯುತ್ತಿರುವ ಬೇರಿಗೆ ಅಗೆದು ತೊಂದರೆ ಮಾಡಬಾರದು, ಬದಲಿಗೆ ಸಾವಯವ ತ್ಯಾಜ್ಯಗಳನ್ನು ಮುಚ್ಚಿಗೆ ಮಾಡಿ ಬೇರಿನ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು.
ನೆಲದ ಮಣ್ಣು ಕೊಚ್ಚಣೆ ಆಗದಂತೆ ತಡೆಯಲು ಹೀಗೆ ಮಾಡಿದರೆ ಉತ್ತಮ
ನೆಲದ ಮಣ್ಣು ಕೊಚ್ಚಣೆ ಆಗದಂತೆ ತಡೆಯಲು ಹೀಗೆ ಮಾಡಿದರೆ ಉತ್ತಮ

ಜನ ತಿಳಿದುಕೊಂಡಿರುವುದು ತಪ್ಪು:

  • ಅಡಿಕೆ, ತೆಂಗು ಮರದ ಬೇರುಗಳು ಮೇಲೆ ಬರಕೂಡದು. ಅದು ಕೆಳಗಿನ ಮಣ್ಣಿನಲ್ಲಿ ಕೆಳಕ್ಕೆ ಇಳಿಯಬೇಕು ಎಂದು.
  • ಈ ಮರಗಳಲ್ಲಿ ಅದು ಪ್ರಕೃತಿಗೆ ವಿರೋಧ. ಬೇರುಗಳು ಮೇಲೆ ಬಂದಷ್ಟು(ನೆಲಮಟ್ಟದಿಂದ ಮೇಲೆ ಅಲ್ಲ) ಅದರ ಆರೋಗ್ಯ ಉತ್ತಮವಾಗುತ್ತದೆ.
  • ಮೇಲೆ ಬಂದ ಬೇರುಗಳಿಗೆ ತೊಂದರೆ ಆದರೆ ಅದು ಮರದ  ಬೆಳವಣಿಗೆಯ ಮೇಲೆ ತೊಂದರೆ ಉಂಟು ಮಾಡುತ್ತದೆ.
  • ಅಡಿಕೆ ತೆಂಗಿನ ಮರದ ಬುಡದ ಮಣ್ಣು ಕೊಚ್ಚಣೆ ಆಗಬಾರದು.
  • ನಮ್ಮಲ್ಲಿ ಮಳೆಯ ಹೊಡೆಯಕ್ಕೆ ಎಂತಹ ಮಣ್ಣೂ ಸಹ ಕೊಚ್ಚಣೆ ಆಗು ಮೇಲು ಮಣ್ಣು ತೊಳೆದು ಹೋಗುವ ಕಾರಣ ಫಲವತ್ತತೆ ಕಡಿಮೆಯಾಗುತ್ತದೆ.
  • ಹೊಲದಲ್ಲಿ ಸಾವಯವ ಅಂಶ ಕ್ಷೀಣಿಸಿ, ರಸಗೊಬ್ಬರದ ಬಳಕೆ ಮಾಡಿದರೂ ಅದರ ಯೋಗ್ಯ ಫಲ ದೊರೆಯುವುದಿಲ್ಲ.
  • ಯಾವುದೇ ಕಾರಣಕ್ಕೆ ಬುಡ ಕೆರೆದು ಗಾಯ ಮಾಡಿ ಮಳೆ ಹನಿ, ಸ್ಪ್ರಿಂಕ್ಲರ್ ನೀರ ಹನಿಗೆ ಮಣ್ಣು ಕೊಚ್ಚಣೆಯಾಗದಂತೆ ತಡೆದರೆ ಗೊಬ್ಬರ ಉಳಿತಾಯ ಮಾಡಬಹುದು, ಮಣ್ಣಿನ ಸ್ಥಿತಿಯನ್ನು ಸುಧಾರಿಸಬಹುದು.

ಬುಡ ಭಾಗಕ್ಕೆ ಸಾವಯವ ವಸ್ತುಗಳನ್ನು ಹಾಕದೆ ಇಡೀ ನೆಲಕ್ಕೆ ಹಾಕಿದರೆ ಮರದ ಬುಡಭಾಗ ಏರಿಕೆಯಾಗುವುದು ತಪ್ಪುತ್ತದೆ.  ಹರಿಯುವ ಬೇರುಗಳಿಗೆ ಅನುಕೂಲವಾಗುತ್ತದೆ. ಮಣ್ಣು ಕೆರೆಯುವ ಬದಲು ಸ್ವಲ್ಪ ಸ್ವ 3-4 ಇಂಚು ( ಸಾವಯವ ತ್ಯಾಜ್ಯಗಳ ಮೇಲೆ ಮಣ್ಣು ಹಾಕಿದರೂ ಉತ್ತಮ.

ಕರಿಮೆಣಸು ಮತ್ತು ಅಗತೆ:

  •  ಕರಿಮೆಣಸಿಗೆ ಕೂದಲಿನ ತರಹದ ಬೇರುಗಳಿರುತ್ತವೆ. ಈ ಬೇರುಗಳು ಸಹ ಮೇಲ್ಭಾಗದಲ್ಲೇ ಹಬ್ಬುವಂತವುಗಳು.
  • ಇವುಗಳಿಗೆ ಮಳೆಗಾಲದಲ್ಲಿ  ಮಳೆ ಹನಿ ಮತ್ತು, ಅಧಿಕ ತೇವಾಂಶದಿಂದ ಸಾಕಷ್ಟು ಹಾನಿ ಉಂಟಾಗಿರುತ್ತದೆ.
  • ಮತ್ತೆ ಮಳೆಗಾಲ ಕಳೆಯುವಾಗ  ಗೊಬ್ಬರ ಕೊಡಲು ಅಗತೆ ಮಾಡಿದರೆ ಅದು ಗಾಯದ ಮೇಲೆ ಬರೆ ಎಳೆದಂತೆ ಆಗಿ ಬಳ್ಳಿ ಸಾಯಲೂ ಬಹುದು. ಬಾಡಲೂ ಬಹುದು. ಇರುವ ಕೆರೆಗಳು ಉದುರಬಹುದು.

ರೈತರು ಯಾವುದೇ ಕಾರಣಕ್ಕೆ ತೆಂಗು ,ಅಡಿಕೆ ಮರಗಳ ಬುಡ ಬಿಡಿಸುವುದು ಬೇಕಾಗಿಲ್ಲ ಏನೆಲ್ಲಾ ಸಾವಯವ ತ್ಯಾಜ್ಯಗಳು, ಗೊಬ್ಬರಗಳು ಇದೆಯೋ ಅದನ್ನೆಲ್ಲಾ  ಇಡೀ ತೋಟದ ನೆಲಕ್ಕೆ ಹರಡಿ ಹಾಕಿ, ತೀಕ್ಷ್ಣ ಗೊಬ್ಬರಗಳನ್ನು ಅಡಿ  ಭಾಗಕ್ಕೆ ಹಾಕಿ, ಅದರ ಮೇಲೆ ಅಮೋನೀಕರಣ ಉಂಟಾಗದ ಸಾವಯವ ತ್ಯಾಜ್ಯ ಹಾಕಿ ಮುಚ್ಚಿ. ಮರ ಉತ್ತಮವಾಗಿ ಬೆಳೆಯುತ್ತದೆ. ವರ್ಷ ವರ್ಷ ಇಳುವರಿ ಹೆಚ್ಚುತ್ತದೆ. ಮಣ್ಣುಸಡಿಲವಾಗಿ ಎರೆಹುಳು ಹೆಚ್ಚುತ್ತದೆ.
ಕೃಷಿಯಲ್ಲಿ ಬೇರುಗಳಿಗೆ ಹಾನಿ ಮಾಡುವುದು ಸೂಕ್ತವಲ್ಲ.ಉತ್ತಮ ಫಸಲು ಮತ್ತು ಮರದ ಆರೋಗ್ಯಕ್ಕೆ ಬೇರೇ ಸರ್ವಸ್ವ. ಇದರಲ್ಲಿ ಒಂದು ಬೇರೂ ಸಹ ತುಂಡಾಗದಂತೆ ರಕ್ಷಿಸಿರಿ. ಮರದ ಲಕ್ಷಣಗಳಿಗೆ ಅನುಗುಣವಾಗಿ ಬೇಸಾಯ ಕ್ರಮ ಅನುಸರಿಸುವುದು ಪ್ರಾಮುಖ್ಯ ಸಂಗತಿ.
End of the article:———————–
Search words: Cultivation# root system of mono cot plants# Araca nut garden# coconut garden# pepper garden# inter cultivation# digging in garden# root damage and its result#

One thought on “ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

  1. ಚೆನ್ನಾಗಿ ಹೇಳಿದ್ದೀರಿ
    ತುಂಬಾ ಉಪಯುಕ್ತವಾದ ಮಾಹಿತಿ
    ಧನ್ಯವಾದಗಳು

Leave a Reply

Your email address will not be published. Required fields are marked *

error: Content is protected !!