ಪೊಟ್ಯಾಶಿಯಂ ಎಂಬ ಪೋಷಕವು ಎಲ್ಲಾ ಬೆಳೆಗಳಿಗೂ ಅವಶ್ಯಕವಾಗಿ ಬೇಕಾಗುವಂತದ್ದು. ಇದು ರಾಸಾಯನಿಕ ಇರಲಿ, ಸಾವಯವ ಇರಲಿ, ಸಸ್ಯಗಳಿಗೆ ಇದು ಬೇಕೇ ಬೇಕು. ಸಾವಯವ ಎಂಬ ಮಡಿವಂತಿಕೆಯಲ್ಲಿ ಇದನ್ನು ಹಾಕುವುದಕ್ಕೆ ಹಿಂಜರಿಯಬೇಡಿ. ಇದು ರಾಕ್ ಫೋಸ್ಫೇಟ್ ಎಂಬ ಖನಿಜ ಗೊಬ್ಬರದಂತೆ ಒಂದು. ಇದರಿಂದ ಹಾನಿ ಇಲ್ಲ.
- ಪೊಟ್ಯಾಶ್ ಎಂಬ ಪೋಷಕವು ಸಸ್ಯ ಬೆಳೆವಣಿಗೆಯ ಶಕ್ತಿ (Energy) ಎಂಬುದಾಗಿ ಈ ಹಿಂದೆಯೇ ಹೇಳಲಾಗಿದೆ.
- ಇದನ್ನು ಬಳಸದೆ ಇದ್ದರೆ ಬೆಳೆ ಅಪೂರ್ಣ.ಬಳಸುವಾಗ ಯಾವುದು, ಹೇಗೆ ಎಂಬುದನ್ನು ಪ್ರತೀಯೊಬ್ಬ ರೈತನೂ ಅರಿತಿರಬೇಕು.
- ಪೊಟಾಶಿಯಂ ಗೊಬ್ಬರವು ಸಾರಜನಕದಂತೆ ಗಾಳಿಯಲ್ಲಿ ಆವಿಯಾಗುವುದಿಲ್ಲ.
- ರಂಜಕದಂತೆ ಕರಗದೆ ಚಲಿಸದೆ ಇರುವುದಿಲ್ಲ.
- ಇದು ವಿಶಿಷ್ಟ ನಮೂನೆಯದ್ದಾಗಿದ್ದು, ಮರಳು ಮಿಶ್ರಿತ ಅಧಿಕ ಮಳೆಯಾಗುವ ಕಡೆ ಇಳಿದು ಹೋಗಿ leaching ನೀರಿನೊಂದಿಗೆ ಸೇರಿಕೊಳ್ಳುತ್ತದೆ.
- ಇಂಥಹ ಸ್ಥಿತಿಯನ್ನು ಅರಿತುಕೊಂಡು ರೈತರು ಪೊಟ್ಯಾಶಿಯಂ ಪೋಷಕವನ್ನು ಬಳಕೆ ಮಾಡಬೇಕು.
ಪೋಟ್ಯಾಶಿಯಂ ಗೊಬ್ಬರವನ್ನು ಬಳಸುವಾಗ ಮಣ್ಣಿನ ಗುಣ, ಮಣ್ಣಿನಲ್ಲಿ ಮೇಲುಸ್ತರದಲ್ಲಿ ಚಲಿಸುವ ಪೊಟ್ಯಾಶಿಯಂ ಅಂಶ, ತೇವಾಂಶ, ಬೆಳೆ ಮತ್ತು ಅಪೇಕ್ಷಿತ ಇಳುವರಿಯ ಮೇಲೆ ಹೊಂದಾಣಿಕೆ ಮಾಡಿಕೊಂಡು ಬಳಕೆ ಮಾಡಬೇಕು. ಇವುಗಳು ನಿಮ್ಮ ಆಯ್ಕೆಗೆ ಇರುವ ಪೊಟ್ಯಾಶಿಯಂ ಒದಗಿಸುವ ಗೊಬ್ಬರಗಳು.
ಮ್ಯುರೇಟ್ ಆಫ್ ಪೊಟ್ಯಾಶ್:MOP
- ಇದು ಜಗತ್ತಿನಾದ್ಯಂತ 80-90% ಪ್ರಮಾಣದಲ್ಲಿ ಬಳಕೆಯಾಗುವ ಪೊಟ್ಯಾಶ್ ಪೋಷಕವಾಗಿರುತ್ತದೆ.
- ಇದನ್ನು ಪೊಟ್ಯಾಶಿಯಂ ಕ್ಲೋರೈಡ್ KCL ಎನ್ನುತ್ತಾರೆ. ಇದು ಸಂಪೂರ್ಣವಾಗಿ ನೀರಿನಲ್ಲಿ ಕರಗುತ್ತದೆ.
- ಇದರ ರಸಸಾರ ತಟಸ್ಥವಾಗಿರುತ್ತದೆ.
- ಇದರ ಮೂಲದ ಬಗ್ಗೆ ಹೇಳುವುದೇ ಆದರೆ ಅಮೆರಿಕಾ, ಪ್ರಾನ್ಸ್,ಕೆನಡಾ,ಮೆಕ್ಸಿಕೊ ರಶ್ಯಾ ಮುಂತಾದ ದೇಶಗಳಲ್ಲಿ ಪೊಟ್ಯಾಶಿಯಂ ಕ್ಲೋರೈಡ್ ನಿಕ್ಷೇಪ(KCL ಖನಿಜ) ಇದೆ.
- ಇದನ್ನು ಆಗೆದು ಸಂಸ್ಕರಿಸಿ ಹುಡಿ ಮಾಡಿ ಚೀಲದಲ್ಲಿ ತುಂಬಿ ಕೊಡಲಾಗುತ್ತದೆ.
- ಇದನ್ನು ನಾವು ಆಮದು ಮಾಡಿಕೊಳ್ಳುತ್ತೇವೆ.
- ಆದ ಕಾರಣವೇ ನಾವು ಖರೀದಿಸುವ ಚೀಲದಲ್ಲಿ Imported potash ಎಂದು ಬರೆದಿರುತ್ತದೆ.
ಇದು ಕೆಲವು ಮೂಲದಲ್ಲಿ ಪಿಂಕ್ ಬಣ್ಣದಲ್ಲಿರುತ್ತದೆ. ಮತ್ತೆ ಕೆಲವು ಮೂಲದಲ್ಲಿ ಬಿಳಿ ಇರುತ್ತದೆ. ಪಿಂಕ್ ಬಣ್ಣದ ನಾವೆಲ್ಲಾ ಬಳಸುವ ಮ್ಯುರೇಟ್ ಆಫ್ ಪೊಟ್ಯಾಶ್ ಸ್ವಲ್ಪ ಕೆಳದರ್ಜೆಯ ಖನಿಜದ ಉತ್ಪನ್ನವಾಗಿರುತ್ತದೆ. ಇದನ್ನು ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆ ಮಾಡಬಹುದು. ಆಲೂಗಡ್ಡೆ, ತಂಬಾಕು, ಅವರೆ ಮುಂತಾದ ಬೆಳೆಗಳಿಗೆ ಇದನ್ನು ಹಾಕಬಾರದು.
- MOP ಯಲ್ಲಿ 60% ಪೊಟ್ಯಾಶಿಯಂ ಇರುತ್ತದೆ. ಉಳಿದವು ಕ್ಲೋರಿನ ಅಂಶ.
- ಕಾಂಪ್ಲೆಕ್ಸ್ ಗೊಬ್ಬರಕ್ಕೂ ಇದನ್ನೇ ಬಳಕೆ ಮಾಡುತ್ತಾರೆ.
- ಪೊಟ್ಯಾಶಿಯಂ ಪೋಷಕದಲ್ಲಿ ಇದು ಇರುವುದರಲ್ಲಿ ಅಗ್ಗದ ಮೂಲವಾಗಿರುತ್ತದೆ. ಇದನ್ನು ಬೀಜದೊಂದಿಗೆ ಹಾಕಬಾರದು.
- ಮೊಳಕೆ ಬರಲು ಅಡ್ಡಿಯಾಗುತ್ತದೆ.
ಸಲ್ಫೇಟ್ ಅಫ್ ಪೊಟ್ಯಾಶ್:
- ಇದರಲ್ಲಿ ಕ್ಲೋರಿನ್ ಅಂಶ ಇರುವುದಿಲ್ಲ. ಬದಲಿಗೆ ಗಂಧಕ ಅಂಶ ಇರುತ್ತದೆ.
- ಅದಕ್ಕಾಗಿಯೇ ಇದನ್ನು ಸಲ್ಫೇಟ್ ಆಪ್ ಪೊಟ್ಯಾಶ್ (SOP)ಎಂದು ಕರೆಯುತ್ತಾರೆ.
- ಇದನ್ನು ತಯಾರಿಸುವ ವಿಧಾನ ಸ್ವಲ್ಪ ಖರ್ಚಿನ ಬಾಬ್ತು ಆದ ಕಾರಣ ಇದು ಸ್ವಲ್ಪ ದುಬಾರಿಯಾಗಿರುತ್ತದೆ.
- ಪೊಟ್ಯಾಶಿಯಂ ಕ್ಲೋರಿಡ್ ಖನಿಜದ ಹುಡಿಯನ್ನು ಸಲ್ಫ್ಯೂರಿಕ್ ಅಸಿಡ್ ಮೂಲಕ ಉಪಚರಿಸಿ 600 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿದಾಗ ಸಲ್ಫೇಟ್ ಆಪ್ ಪೊಟ್ಯಾಶ್ ಸಿಗುತ್ತದೆ.
- ಇದು ಬಿಳಿಯಾಗಿ ಧೂಳಿನ ತರಹ ಇರುತ್ತದೆ.
- ಇದರಲ್ಲಿ 50% ಪೊಟ್ಯಾಶ್ ಮತ್ತು ನೀರಿನಲ್ಲಿ ಕರಗಬಲ್ಲ ಗಂಧಕದ ಅಂಶ 17% ದಷ್ಟು ಇರುತ್ತದೆ.
ಇದನ್ನು ಬೀಜ ಬಿತ್ತುವ ಸಮಯದಲ್ಲೂ ಮಣ್ಣಿಗೆ ಸೇರಿಸಬಹುದು. ಉಪ್ಪಿನ ಅಂಶ ಮತ್ತು ಕ್ಲೋರಡ್ ಅಂಶ ಇಲ್ಲದ ಮಣ್ಣು ನೀರು ಮೂಲಕ್ಕೆ saline or sodic and where irrigation water may have high chloride levels SOP is the preferred form of potassium to use. ಇದನ್ನು ಬಳಸಲು ಶಿಫಾರಸು ಮಾಡುತ್ತಾರೆ.
- ಇದರಿಂದ ಬೇರುಗಳಿಗೆ ಹಾನಿ ಉಂಟಾಗುವುದಿಲ್ಲ. ಸಾಮಾನ್ಯವಾಗಿ ಇದು ಫಲದ ಗುಣಮಟ್ಟವನ್ನು ಉತ್ತಮಪಡಿಸುವ ಪೋಷಕ.
- ಇದರಲ್ಲಿ ಇರುವ ಗಂಧಕ ಬೆಳೆಗಳ ಗುಣಮಟ್ಟವನ್ನು ಮತ್ತು ರೋಗ- ಕೀಟ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಇದು ಸಹ ತಟಸ್ಥ ಸ್ಥಿತಿಯ ಪೋಷಕವಾಗಿರುತ್ತದೆ.
- ಕಡಿಮೆ ಪ್ರಮಾಣದಲ್ಲಿ ಹೆಚ್ಚು ಕಂತುಗಳಲ್ಲಿ ಕೊಡಬೇಕು.
- ಇದು ಬಳಕೆ ಮಾಡಿದ ಕೆಲವೇ ದಿನಗಳಲ್ಲಿ ಫಲಿತಾಂಶ ತೋರಿಸುತ್ತದೆ. ಸಿಂಪರಣೆಗೂ ಬಳಕೆ ಮಾಡಬಹುದು.
ನಾವು ಹೇಳುವ “ಸರ್ಕಾರಿ ಗೊಬ್ಬರ”, “ರಾಸಾಯನಿಕ ಗೊಬ್ಬರ” ಇದೆಲ್ಲಾ ನಾವು ಇಟ್ಟ ಹೆಸರುಗಳು. ಅದರ ನಿಜವಾದ ಹೆಸರು “ರಸಗೊಬ್ಬರ”. ಅಂದರೆ ಹೆಚ್ಚು ಪ್ರಮಾಣದಲ್ಲಿ ಸತ್ವಾಂಶ ಹೊಂದಿರುವ ತೀಕ್ಷ್ಣ ಗೊಬ್ಬರ. ಯಾವುದರಲ್ಲಿ ಅಧಿಕ ಸಾರ ಇರುತ್ತದೆಯೋ ಅದು ರಸ ಗೊಬ್ಬರ. ರಾಸಾಯನಿಕ ಎಂದರೆ ಅದು ಕೆಲವು ರಾಸಾಯನಿಕ ಸಂಯೋಜನೆಯಿಂದ ತಯಾರಿಸಿದ್ದು.
ಬೂದಿಯೂ ಪೊಟ್ಯಾಶ್ ಗೊಬ್ಬರ:
- ಮರ ಸುಟ್ಟ ಬೂದಿಯಲ್ಲಿ 3-12% ದಷ್ಟು ನೈಸರ್ಗಿಕ ಪೊಟ್ಯಾಶ್ ಇರುತ್ತದೆ.ಸುಣ್ಣದ ಅಂಶ 15-30% ದಷ್ಟೂ ಹಾಗೂ ಪೊಟ್ಯಾಶಿಯಂ ಅಂಶ 13 % ತನಕವೂ ಇರುತ್ತದೆ.
- ಅಲ್ಪ ಪ್ರಮಾಣದಲ್ಲಿ ಶೇ.1 ರಂಜಕವೂ ಇದೆ. ಅತ್ಯಲ್ಪ ಪ್ರಮಾಣದಲ್ಲಿ ಕಬ್ಬಿಣ, ತಾಮ್ರ, ಮೆಗ್ನಿಶಿಯಂ,ಸತು, ಮ್ಯಾಂಗನೀಸ್ ಇರುತ್ತದೆ.
- ಇದನ್ನು ಮಣ್ಣಿಗೆ ಸೇರಿಸಿದಾಗ ನಿಧಾನವಾಗಿ ಪೊಟ್ಯಾಶಿಯಂ ಸತ್ವವನ್ನು ಬಿಡುಗಡೆ ಮಾಡುತ್ತಿರುತ್ತದೆ.
- ತಂಬಾಕಿನ ಗಿಡವನ್ನು ಬೇರು ಸಮೇತ ಸುಟ್ಟಾಗ ದೊರೆಯುವ ಬೂದಿಯಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿರುತ್ತದೆ..ಇದನ್ನು 7-12% ತನಕ ಎಂದು ಗುರುತಿಸಲಾಗಿದೆ.
- ಸಮುದ್ರ ಪಾಚಿಯಲ್ಲಿ ಸುಮಾರು 9 % ದಷ್ಟು ಪೊಟ್ಯಾಶಿಯಂ ಅಂಶ ಇದೆ.
- ಕೆಲವು ಬೆಳೆ ಉಳಿಕೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚು ಇರುತ್ತದೆ( ತೆಂಗಿನ ಒಣ ಗರಿ, ಅಡಿಕೆ ಸೋಗೆ, ಲಂಟಾನ ಸೊಪ್ಪು, ಎಕ್ಕದ ಸೊಪ್ಪು, ಕನಪ್ಪಟೆ ಸೊಪ್ಪು ಇತ್ಯಾದಿ) ಹತ್ತಿ ಕಾಳಿನ ಹಿಂಡಿಯಲ್ಲಿ , ತೆಂಗಿನ ಹಿಂಡಿಯಲ್ಲಿ ಪೊಟ್ಯಾಶ್ ಅಂಶ ಹೆಚ್ಚು ಇರುತ್ತದೆ.
ರಾಸಾಯನಿಕ ಎಂದು ಹೆಳುವಂತದ್ದರ ಮೂಲವೂ ಸಹ ನಿಸರ್ಗವೇ ಆಗಿರುತ್ತದೆ. ತೀಕ್ಷ್ಣ ಗುಣದ ಗೊಬ್ಬರಗಳನ್ನು ಬಳಸಿದಾಗ ಬೇರಿಗೆ ಹಾನಿ ಆಗುವ ಸಾಧ್ಯತೆ ಇರುತ್ತದೆ. ಇದನ್ನು ವಿಭಜಿತ ಕಂತುಗಳಲ್ಲಿ ಹಾಕಬೇಕು. ಲಭ್ಯತೆ ಇದ್ದಾಗ ಬೂದಿ, ಹಿಂಡಿ ಇತ್ಯಾದಿಗಳಿಂದಲೇ ಪೊಟ್ಯಾಶ್ ಪೋಷಕದ ಅವಶ್ಯಕತೆಯನ್ನು ನೀಗಿಸಬಹುದು.
end of the article:—————————————————
search words: wood Ash # high potash in wood ash# organic potash # calcium and potash source# best use of wood ash# nutrients in wood ash# high yiled # good quqlity yield #