ಕಬ್ಬು ಬೆಳೆಗೆ ಪೊಟ್ಯಾಶ್ ಗೊಬ್ಬರದ ಮಹತ್ವ

ಸಮರ್ಪಕ ಪೋಶಕಾಂಶ ದೊರೆತ ಕಬ್ಬು ಬೆಳೆ

ಕಬ್ಬಿನ ಬೆಳೆಗೆ ಪೊಟ್ಯಾಶಿಯಂನ ಅವಶ್ಯಕತೆ ಹೆಚ್ಚು.  ಪೊಟ್ಯಾಶಿಯಂ ಸತ್ವ ಕೊರತೆಯಾದ ಕಬ್ಬಿನ ಬೆಳೆಗೆ ಬೆಲೆ ಇಲ್ಲ.ಅದು ಕಬ್ಬು ಎನ್ನಿಸಿಕೊಳ್ಳಲಾರದು.ಸಾರಜನಕ ಕೊಡಿ. ರಂಜಕ ಕೊಡಿ ಆದರೆ ಪೊಟ್ಯಾಶಿಯಂ ಕೊಟ್ಟಾಗ  ಮಾತ್ರ ಅದರ ಪ್ರತಿಫಲ ಲಭ್ಯ. ಇದು ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವ ಪೊಷಕಾಂಶ.

 • ಹಿಂದೆ ನಮ್ಮಲ್ಲಿ ಸಕ್ಕರೆ ತಯಾರಿಕೆ ಇರಲಿಲ್ಲ. ಬೆಲ್ಲವೇ ಹೆಚ್ಚು.
 • ಉತ್ತಮ ಬೆಲ್ಲ ದೊರೆಯಬೇಕಾದರೆ  ಮಣ್ಣಿಗೆ ಬೂದಿ ಅಂಶ ಯಥೇಚ್ಚವಾಗಿ ಬೇಕು ಎಂದು ಹೊಲಕ್ಕೆ ರವದಿ ಮತ್ತು ಇನ್ನಿತರ ತ್ಯಾಜ್ಯಗಳನ್ನು ಹಾಕಿ ಅದನ್ನು ಸುಟ್ಟು ಪೊಟ್ಯಾಶಿಯಂ ಸತ್ವವನ್ನು ಹೊಂದಿಸಿಕೊಳ್ಳುತ್ತಿದ್ದರು.
 • ಕ್ರಮೇಣ ಪೊಟ್ಯಾಶ್ ಸತ್ವವನ್ನು ಒದಗಿಸುವ ರಾಸಾಯನಿಕ ಪೋಷಕ ಬಂತು.
 • ಅದನ್ನು ಕೆಲವು ನಿರ್ದಿಷ್ಟ ಹಂತದಲ್ಲಿ ಬೆಳೆಗಳಿಗೆ ಬಳಸಿದಾಗ ಕಬ್ಬಿನಲ್ಲಿ ಸಕ್ಕರೆ ರಿಕವರಿ ಉತ್ತಮವಾಗುತ್ತದೆ.
ಸಮತೋಲನ ಪ್ರಮಾಣದ ಪೋಷಕಾಂಶ ಬಳಸಿ ಬೆಳೆದ ಕಬ್ಬು
ಸಮತೋಲನ ಪ್ರಮಾಣದ ಪೋಷಕಾಂಶ ಬಳಸಿ ಬೆಳೆದ ಕಬ್ಬು

ಪೊಟ್ಯಾಶಿಯಂ ನ ಪಾತ್ರ:

 • ಒಂದು ಎಕ್ರೆ  ಕಬ್ಬು ಬೆಳೆಸಿ  100 ಟನ್ ಇಳುವರಿ ಪಡೆಯುವ  ಗುರಿ ಇದ್ದರೆ ಆ ಹೊಲಕ್ಕೆ ಸುಮಾರು 80 ಕಿಲೋ ಪೊಟ್ಯಾಶ್ ಬೇಕಾಗುತ್ತದೆ.
 •   ಯಾವ ಹೊಲದಲ್ಲಿ ಕಬ್ಬನ್ನು ಮತ್ತೆ ಮತ್ತೆ ಬೆಳೆಯಲಾಗುತ್ತದೆಯೋ ಅಂತಹ ಹೊಲಕ್ಕೆ  ಪೊಟ್ಯಾಶಿಯಂ ಪೋಷಕದ ಕೊರತೆ ಉಂಟಾಗುತ್ತದೆ.
 • 40:30:80  ಕಬ್ಬಿನ ಬೆಳೆಗೆ ಅಗತ್ಯವಾಗಿ  ಬೇಕಾಗುವ  NPK ಪ್ರಮಾಣ.

ಜೀವ ಕೋಶದ ರಚನೆ, ಆಹಾರ ಜೀರ್ಣವಾಗುವುದು, ದ್ಯುತಿ ಸಂಶ್ಲೇಷಣೆ ಕ್ರಿಯೆ, ಸಸಾರಜನಕದ ಸಂಯೋಜನೆ , ಸಕ್ಕರೆಯ ಚಲನೆ, ನೀರಿನ ಬಳಕೆ, ಸಮರ್ಪಕ ಬೇರು ವೃದ್ದಿ ಮತ್ತು ಇನ್ನೂ ಹಲವಾರು ಅಗತ್ಯ ಸಸ್ಯ ಚಟುವಟಿಕೆಗೆ ಪೊಟ್ಯಾಶಿಯಂ ಅವಶ್ಯಕವಾಗಿ ಬೇಕು.  

 • ಕಬ್ಬಿನ ಸಸ್ಯದಲ್ಲಿ ಬೇರೆ ಬೇರೆ ಭಾಗಗಳಲಿ ಪೊಟ್ಯಾಶಿಯಂ ನ ಸತ್ವ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
 • ನಾಟಿ ಮಾಡುವ ಸಮಯದಲ್ಲಿ ಮೊದಲ 6 ತಿಂಗಳ ತನಕ  ಪೊಟ್ಯಾಶ್ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
 • ಆ ನಂತರ ಅದು ಎಲ್ಲಿ ಬೇಕೋ ಅಲ್ಲೆಲ್ಲಾ ಉಳಿದು ಸಕ್ಕರೆ ಪ್ರಮಾಣ ಹೆಚ್ಚಲು ನೆರವಾಗುತ್ತದೆ. 
 • ಪೊಟ್ಯಾಶಿಯಂ ಒಂದು ಎಲೆ ಬೆಳೆದು  ಹಣ್ಣಾಗುವಾಗ ನಂತರದ ಎಲೆಗೆ ಬಂದು ಸೇರುತ್ತದೆ.
ಪೊಟ್ಯಾಶಿಯಂ ಬೇಕಾದಶ್ಟು ಸಿಕ್ಕಾಗ ದಂಟು ಹೀಗೆ ಬೆಳೆಯುತ್ತದೆ
ಪೊಟ್ಯಾಶಿಯಂ ಬೇಕಾದಶ್ಟು ಸಿಕ್ಕಾಗ ದಂಟು ಹೀಗೆ ಬೆಳೆಯುತ್ತದೆ
 • ಕಬ್ಬಿನಲ್ಲಿ ತುದಿ ಭಾಗದ ಎಲೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚು ಇರುತ್ತದೆ.
 • ಅದಕ್ಕಾಗಿಯೇ ಕಬ್ಬು ಕಠಾವು ಮಾಡುವಾಗ ತುದಿ  ಭಾಗವನ್ನು ಕತ್ತರಿಸಿ ಹೊಲಕ್ಕೆ ಹಾಕಿ, ಅದನ್ನು ಸರಿಯಾಗಿ ಕಳಿಯಿಸಿ ಕಾಂಪೋಸ್ಟು ಮಾಡಿದರೆ ಬೆಳೆಗೆ ಸಾಕಷ್ಟು ಪೊಟ್ಯಾಶಿಯಂ ಲಭ್ಯವಾಗುತ್ತದೆ.
 • ಇದರಲ್ಲಿ 5.10% ತನಕ ಪೊಟಾಶಿಯಂ ಸತ್ವ ಇರುತ್ತದೆ.

ಕಬ್ಬಿನಲ್ಲಿ ಎಲ್ಲೆಲ್ಲಿ ಪೊಟ್ಯಾಶಿಯಂ ಇದೆ:

 • ಕಬ್ಬಿನ ಚಿಗುರು ಮತ್ತು ವಿಭಜ್ಯೋತಕಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. 
 • ಬೆಳೆಯುವ ಎಲೆಗಳ ಕವಚದಲ್ಲಿ  ಮತ್ತು ಮುದುಡಿಕೊಂಡ ಕವಚದಲ್ಲಿ ಮತ್ತು ಬೆಳೆದ ಎಲೆಗಳಲ್ಲೂ ಪೊಟ್ಯಾಶ್ ಅಂಶ ಶೇಖರಣೆಯಾಗಿರುತ್ತದೆ.

ಗುಣಮಟ್ಟದ ಕಬ್ಬಿಗೆ ಪೊಟ್ಯಾಶಿಯಂ:

 • ಪೊಟ್ಯಾಶಿಯಂ ಸತ್ವವು  ಕೋಶಗಳನ್ನು ಗಟ್ಟಿ ಮಾಡುತ್ತದೆ.
 • ಸಸಿಗಳ ಊತಕಗಳ ಹೊರಚರ್ಮವನ್ನು ಗಟ್ಟಿಗೊಳಿಸಿ ಸಸ್ಯಗಳು ರೋಗಕ್ಕೆ ತುತ್ತಾಗದಂತೆ ತಡೆಯುತ್ತದೆ.
 • ಬೇರು ಹೆಚ್ಚುತ್ತದೆ.ನೀರನ್ನು ಆಳದಿಂದಲೂ ತೆಗೆದುಕೊಳ್ಳುತ್ತದೆ.
 • ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುತ್ತದೆ.
 • ನೀರು ಕಡಿಮೆ ಸಾಕಾಗುತ್ತದೆ. 

ಕೊರತೆ ಆದಾಗ:

 • ಕಬ್ಬಿನ ಬೆಳೆಗೆ ಪೊಟ್ಯಾಶ್ಯಂ ಯಾವುದೇ ಕಾರಣಕ್ಕೂ ಕೊರತೆ ಆಗ ಕೂಡದು.
 • ಆಗ ದ್ಯುತಿಸಶ್ಲೇಷಣ ಕ್ರಿಯೆಗೆ ಅಡ್ಡಿಯಾಗುತ್ತದೆ.
 • ಎಲೆಗಳ ಗಾತ್ರ ಮತ್ತು ಸಂಖ್ಯೆ ಕಡಿಮೆಯಾಗುತ್ತದೆ.
 • ಬೇಗ ಮಾಗುತ್ತದೆ.  ಕಡಿಮೆ ಬೆಳೆವಣಿಗೆಯನ್ನು ಹೊಂದಿ, ಹಳದಿ ಬಣ್ಣಕ್ಕೆ ತಿರುಗುತ್ತದೆ.
 • ವಯಸ್ಸಾದ ಎಲೆಗಳು ಕಿತ್ತಳೆ ಹಳದಿ ಬಣ್ಣದಲ್ಲಿ ಇರುತ್ತವೆ.  ಎಲೆಗಳು ಸರಿಯಾಗಿ ಬಿಡಿಸಿಕೊಳ್ಳದೆ ಇರುತ್ತವೆ.

ಎಷ್ಟು ಪೊಟ್ಯಾಶ್ ಬೇಕು:

ಕಬ್ಬು ಬೆಳೆ ಹೀಗೆ ಚೆನ್ನಾಗಿ ಬೆಳೆಯಲು ಅಗತ್ಯವಾಗಿ ಪೊಟ್ಯಾಶ್ ಬೇಕು

 • ಕಬ್ಬಿನ ಬೆಳೆಯ ಬಹುತೇಕ ತ್ಯಾಜ್ಯಗಳನ್ನು ಮರು ಬಳಕೆ ಮಾಡಿದರೆ 25 ರಿಂದ40% ಪೊಟ್ಯಾಶಿಯಂ ಕಡಿಮೆ ಮಾಡಬಹುದು.
 • ಕಾಕಂಬಿಯನ್ನು ಬಳಸಿದರೂ ಸಹ ಇಷ್ಟೇ ಪ್ರಮಾಣ ಕಡಿಮೆ ಮಾಡಬಹುದು.
 • ಪೊಟ್ಯಾಶಿಯಂ ನೀರಿನಲ್ಲಿ ಕರಗುವುದರಿಂದ ಕಾಕಂಬಿಯಲ್ಲಿ ಉಳಿಯುತ್ತದೆ.
 • ಆದ ಕಾರಣ  ಕಾಕಂಬಿಯನ್ನು  ಸಾಧ್ಯವಾದಷ್ಟು ಬಳಸಿ.
 • ಇದನ್ನು  ಬಳಸದೇ ಇದ್ದರೆ ಎಕ್ರೆಗೆ 75-80 ಕಿಲೋ ಗ್ರಾಂ ಪೊಟ್ಯಾಶಿಯಂ ಶಿಫಾರಸು ಮಾಡಲಾಗಿದೆ. 
 • ಸಾಕಷ್ಟು ಪ್ರಮಾಣದಲ್ಲಿ ಸಾರಜನಕ ಇದ್ದಾಗ ಮಾತ್ರ ಪೊಟ್ಯಾಶಿಯಂ ನ ಸದುಪಯೋಗ ಆಗುತ್ತದೆ. 
 • ಸಾರಜನಕದ ಜೊತೆಗೆ ಪೊಟ್ಯಾಶ್ ಕೊಡಬೇಕು.
 • ಕಬ್ಬಿನ ಸಸ್ಯದಲ್ಲಿ 7 ನೇ ಎಲೆಯ ಕೆಳಗಿನ ಎಲೆಗಳು ಬಾಡಿದಂತಿದ್ದರೆ ಪೊಟ್ಯಾಶ್ ಕಡಿಮೆಯಿದೆ ಎಂದರ್ಥ.  
 • ಪೊಟ್ಯಾಷ್ ಕಡಿಮೆಯಾದಾಗ ನೀರು ಎಷ್ಟು ಪೂರೈಕೆ ಮಾಡಿದರೂ ಎಲೆಗಳಲ್ಲಿ ಕೊರತೆಯಾದಂತೆ  ಕಾಣಿಸುತ್ತದೆ.
 • ಸೂಕ್ತ  ಪ್ರಮಾಣದಲ್ಲಿ ಪೊಟ್ಯಾಷ್ ಪೂರೈಸಿದಲ್ಲಿ ಕಬ್ಬಿನ ಸಕ್ಕರೆ ಪ್ರಮಾಣ ಉತ್ತಮವಾಗಿರುತ್ತದೆ.
 • ತೂಕ ಬರುತ್ತದೆ. ಉತ್ತಮ ಬೆಲೆಯೂ ಬರುತ್ತದೆ.

  ಯಾವ  ಪೊಟ್ಯಾಶ್  ಉತ್ತಮ :

 • ಪ್ರಾರಂಭಿಕ ಹಂತದಲ್ಲಿ ಮ್ಯುರೇಟ್ ಆಫ್ ಪೊಟ್ಯಾಷ್ ಗೊಬ್ಬರವನ್ನು ಕೊಡುವುದು ಅಗ್ಗವಾಗುತ್ತದೆ.
 • ಆದರೆ ಪೊಟ್ಯಾಶ್ ಇಳಿದು ಹೋಗಿ ನಷ್ಟವಾಗುವ ಕಾರಣ ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ.
 • ಬೆಳೆ ಮಾಗಲು 2- 3 ತಿಂಗಳು ಇರುವ ತನಕವೂ ಪೊಟ್ಯಾಷ್ ಗೊಬ್ಬರವನ್ನು  ಕೊಡುತ್ತಿರಬೇಕು.
 • ಕೊನೆಯ ಹಂತದಲ್ಲಿ ಸಲ್ಫೇಟ್ ಆಫ್ ಪೊಟ್ಯಾಷ್ SOP  ಗೊಬ್ಬರವನ್ನು ಕೊಡಿ.
 • ಎರಡೂ ಗೊಬ್ಬರವನ್ನು ಹನಿ ನೀರಾವರಿಯ ಮೂಲಕ ಒದಗಿಸಬಹುದು.

ಪೊಟ್ಯಾಶಿಯಂ  ಪೋಷಕವನ್ನು ಕೊಟ್ಟ ಕಬ್ಬಿನಲ್ಲಿ ಇಳುವರಿ ಹೆಚ್ಚಿ, ಬೆಳೆದ ರೈತರಿಗೆ ಲಾಭವನ್ನು ತಂದು ಕೊಡುತ್ತದೆ.

Leave a Reply

Your email address will not be published. Required fields are marked *

error: Content is protected !!