ಕೂಳೆ ಬೆಳೆ ಬೆಳೆದರ ಖರ್ಚು ತುಂಬಾ ಕಡಿಮೆಯಾಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಇಳುವರಿ ಚೆನ್ನಾಗಿಯೇ ಬರುತ್ತದೆ. ನಮ್ಮ ದೇಶದಲ್ಲಿ ಕೆಲವು ರೈತರು ಕೂಳೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದರೆ ಬಹಳ ಜನ ಕಡಿಮೆ ಇಳುವರಿ ಪಡೆಯುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಕೂಳೆ ಬೆಳೆಯಲ್ಲಿ ಮೂಲ ಬೆಳೆಗಿಂತ ಹೆಚ್ಚು ಇಳುವರಿ ಪಡೆಯುತ್ತಾರೆ. ನಮಗೂ ಸರಿಯಾದ ಬೇಸಾಯ ಕ್ರ ಮ ಅನುಸರಿಸಿದರೆ 2-3 ಕೂಳೆ ಬೆಳೆಯನ್ನು ಬೆಳೆಸಲು ಸಾಧ್ಯವಿದೆ.
- ನಮ್ಮಲ್ಲಿ ಸಾಮಾನ್ಯವಾಗಿ ತುಂಬಾ ಸೋಮಾರಿಗಳು ಮಾತ್ರ ಕೂಳೆ ಬೆಳೆ ಬೆಳೆಯುವುದು ಎಂಬ ಭಾವನೆ ಇದೆ.
- ಇದು ಸರಿಯಲ್ಲ. ಕೂಳೆ ಬೆಳೆಯನ್ನು ಯಶಸ್ವಿಯಾಗಿ ಬೆಳೆಯುವವರು ಬುಧ್ಹಿವಂತ ಕೃಷಿಕರು ಎನ್ನಬಹುದು.
- ಖರ್ಚು ಕಡಿಮೆಮಾಡಿ ಉತ್ತಮ ಬೆಳೆ ಬೆಳೆಯುವುದೇ ಬುದ್ಧಿವಂತಿಕೆ.
- ಮಾರೀಶಿಯಸ್ ನಲ್ಲಿ 80% ರೈತರು ಒಂದು ಬೆಳೆಯಿಂದ 5-6 ಕೂಳೆ ಬೆಳೆ ಬೆಳೆಸುತ್ತಾರೆ.
- ನಮ್ಮಲ್ಲಿ ಕೂಳೆ ಬೆಳೆ ಬೆಳೆಸುವವರಿದ್ದರೂ 1-2 ಬೆಳೆ ಮಾತ್ರ.
ಕೂಳೆ ಬೆಳೆಯ ಅನುಕೂಲಗಳು:
- ಕೂಳೆ ಬೆಳೆಯಲ್ಲಿ ಉತ್ಪಾದನಾ ಖರ್ಚು ಕಡಿಮೆ. ಭೂಮಿ ಸಿದ್ದತೆ ಇಲ್ಲ.
- ನಾಟಿ ಇಲ್ಲ. ಬಿತ್ತನೆ ಕಡ್ಡಿ ಬೇಕಾಗಿಲ್ಲ. ಅಷ್ಟೂ ಖರ್ಚು ಉಳಿತಾಯವಾಗುತ್ತದೆ.
- ಒಟ್ಟಾರೆ ಕಬ್ಬಿನ ಬೇಸಾಯದಲ್ಲಿ 25-30% ಖರ್ಚು ಉಳಿತಾಯವಾಗುತ್ತದೆ.
- ಬೆಳೆ ಬೇಗ ಬೆಳೆಯುತ್ತದೆ.
- ಸಕ್ಕರೆ ಕಾರ್ಖಾನೆಗೆ ಅರೆಯಲು ಬೇಗ ಕಬ್ಬು ದೊರೆಯುತ್ತದೆ.
- ರೈತರಿಗೆ ಖರ್ಚು ಕಡಿಮೆಯಾದ ಕಾರಣ ಬೆಲೆ ಸ್ವಲ್ಪ ಕಡಿಮೆ ದೊರೆತರೂ ಲಾಭವಾಗುತ್ತದೆ.
- ಬೇಗೆ ಬೆಳೆ ಕಠಾವಾಗುವ ಕಾರಣ ಬೇರೆ ಬೆಲೆಗಳಿಗೆ ಹೆಚ್ಚಿನ ಗಮನ ಕೊಡಲು ಅನುಕೂಲವಾಗುತ್ತದೆ.
- ಎಲ್ಲಕ್ಕೂ ಮಿಗಿಲಾಗಿ ಬೆಳೆಗಾರರಿಗೆ ಸ್ವಲ್ಪ ಬಿಡುವು ಸಿಗುತ್ತದೆ.
ಮಣ್ಣು ಬೆಳೆ ಬೆಳೆದಂತೆ ಜೈವಿಕವಾಗಿ ಸಂಪಧ್ಭರಿತವಾಗುತ್ತದೆ. ಆದ ಕಾರಣ ಕೂಳೆ ಬೆಳೆಯಲ್ಲಿ ಮೂಲ ಬೆಳೆಗಿಂತ ಹೆಚ್ಚು ಇಳುವರಿ ದೊರೆಯಬೇಕು. ಎರಡನೇ ಬೆಳೆಯಲ್ಲಿ ಸಕ್ಕರೆ ರಿಕವರಿ ಶೇಕಡಾವರು ಹೆಚ್ಚು ಇರುತ್ತದೆ. ಇದರಿಂದ ಬೆಲೆಯೂ ಹೆಚ್ಚು ಸುಗುತ್ತದೆ.
ರೈತರಿಗೆ ಯಾಕೆ ನಷ್ಟವಾಗುತ್ತದೆ:
- ಹೆಚ್ಚಿನ ಕಬ್ಬು ಬೆಳೆಗಾರರು ಕೂಳೆ ಬೆಳೆಯನ್ನು ಒಂದು ಹೆಚ್ಚುವರಿ ಬೆಳೆ ಎಂದು ಪರಿಗಣಿಸಿ ಹೆಚ್ಚಿನ ಆರೈಕೆ ಮಾಡುವುದಿಲ್ಲ.
- ಕೂಳೆ ಬೆಳೆಯಲ್ಲಿ ಮೂಲ ಬೆಳೆಯನ್ನು ಸಮರ್ಪಕವಾಗಿ ಸವರುವಿಕೆ ಮುಖ್ಯ. ಅದರಲ್ಲಿ ನಿರ್ಲಕ್ಷ್ಯ ಮಾಡಬಾರದು.
- ಸರಿಯಾಗಿ ಸವರುವಿಕೆ ಅನುಸರಿಸಬೇಕು. ಮೊದಲ ಕೂಳೆಗೆ ನೆಟ್ಟ ಕಬ್ಬಿನ ದಂಟಿನ ಕಣ್ಣಿನಲ್ಲಿ ಬಂದ ಮೊಳಕೆಯ ದಂಟನ್ನು ಉಳಿಸಿ ಸವರಬೇಕು.
- ಎರಡನೇ ಕೂಳೆಗೆ ನಂತರ ಬಂದ ಕಬ್ಬಿನ ಕೆಳ ದಂಟನ್ನು ಉಳಿಸಬೇಕು.
- ಆಗ ಅದರಲ್ಲಿ ಆರೋಗ್ಯಕರ ಮೊಳಕೆಗಳು ಬರುತ್ತವೆ.
- ಇದನ್ನು Stubble shaving ಎನ್ನುತ್ತಾರೆ.
- ಮೊದಲ ಬೆಳೆಯನ್ನು ಕಠಾವು ಮಾಡಿ ಬುಡ ಭಾಗವನ್ನು ಯಂತ್ರಗಳ ಮೂಲಕ ಸ್ವಲ್ಪ ಹೆರೆಸಿದರೆ ಉತ್ತಮ ಮೊಳಕೆಗಳು ಬರುತ್ತವೆ.
- ಸವರಿದಾಗ ಮಣ್ಣು ಸಡಿಲವಾಗಿ ಬೇರು ಬರಲು ಅನುಕೂಲವಾಗುತ್ತದೆ.
ಪ್ರಾರಂಭದ ಬೆಳೆಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಕೂಳೆ ಬೆಳೆಗೆ ಬಿಡಬೇಕು. ಮೊದಲ ಬೆಳೆಗೆ ಕೀಟಗಳು , ರೋಗಗಳು ಬಂದಿದ್ದಲ್ಲಿ ಅಂತಹ ಬೆಳೆಯನ್ನು ಕೂಳೆಗೆ ಬಿಡಬಾರದು. ಮಣ್ಣಿನ ಫಲವತ್ತೆತೆ ಹೊಂದಿ ಕೂಳೆ ಬೆಳೆಯನ್ನು ಆಯ್ಕೆ ಮಾಡಬೇಕು. ಉತ್ತಮ ಫಲವತ್ತಾದ ಮಣ್ಣು ಆಗಿದ್ದರೆ ಮಾತ್ರ ಕೂಳೆ ಬೆಳೆ ಮಾಡಬಹುದು. ಯಾಕೆಂದರೆ ಅಲ್ಲಿ ಸಂಗ್ರಹಿತ ಪೋಷಕಗಳು ಇರುತ್ತವೆ.
- ಮೊದಲಾಗಿ ರೈತರು ಇದು ಒಂದು ಉಚಿತ ಬೆಳೆ ಎಂಬ ಮನೋಭಾವನೆಯನ್ನು ಬಿಟ್ಟು ಕೂಳೆ ಬೆಳೆಯನ್ನು ಬೆಳೆಯಾಗಿ ಸ್ವೀಕರಿಸುವ ಮನೋಭಾವನೆ ಹೊಂದಿರಬೇಕು.
ಕೂಳೆ ಬೆಳೆ ನಿರ್ವಹಣೆ:
- ಮೊದಲ ಬೆಳೆಯ ಸ್ಥಿತಿಯನ್ನು ಗಮನಿಸಿ ಆ ಬೆಳೆಯ ಎಲ್ಲಾ ತ್ಯಾಜ್ಯಗಳನ್ನು ಹೊಲದಲ್ಲೇ ಹಾಕದೆ ಅದನ್ನು ಕಾಂಪೋಸ್ಟು ಮಾಡಬೇಕು.
- ತೆಳುವಾಗಿ ರವದಿಯನ್ನು ಹೊಲದಲ್ಲಿ ಹರಡಿ (ಒಟ್ಟು ರವದಿಯಲ್ಲಿ 10% ಮಾತ್ರ)ಸುಟ್ಟರೆ ಮಣ್ಣಿನ ಮೇಲ್ಭಾಗದಲ್ಲಿ ಇರುವ ಕೀಟಗಳು ಸಾಯುತ್ತವೆ.
- ಇದು ಹೊಸ ಮೊಳಕೆಯನ್ನು ಸಧೃಢವಾಗಿ ಬೆಳೆಯಲು ಸಹಕರಿಸುತ್ತದೆ.
- ರವದಿಯಲ್ಲಿ ಕೀಟಗಳಿದ್ದರೆ, ಮಣ್ಣಿನಲ್ಲಿ ಗೆದ್ದಳು ಇದ್ದರೆ, ಬೇರು ಹುಳ ಇತ್ಯಾದಿ ಭಕ್ಷಕಗಳಿದ್ದರೆ , ಮೊಳಕೆ ಬರಲು ಅಡ್ಡಿಯಾಗುವಷ್ಟು ತೇವಾಂಶ ಹೆಚ್ಚು ಇದ್ದರೆ ರವದಿಯನ್ನು ಸುಡುವುದು ಸೂಕ್ತ.
- ಹೆಚ್ಚಿನ ಕಡೆ ಸ್ವಲ್ಪ ರವದಿಯನ್ನು ಸುಟ್ಟ ಬೆಳೆ ಚೆನ್ನಾಗಿ ಬಂದ ವರದಿ ಇದೆ.
- ಒಂದು ಬೆಳೆ ಆದ ನಂತರ ಹೊಲಕ್ಕೆ ಸಾಕಷ್ಟು ಸಾವಯವ ಗೊಬ್ಬರವನ್ನು ಪೂರೈಕೆ ಮಾಡಬೇಕು.
- ಜೊತೆಗೆ ರಾಸಾಯನಿಕ ಗೊಬ್ಬರ ಕೊಡಬೇಕು. ಸಾವಯವ ಅಂಶ ಇಲ್ಲದಿದ್ದರೆ ಕೂಳೆ ಬೆಳೆಗೆ ರೋಗಗಳು ಹೆಚ್ಚಾಗುತ್ತವೆ.
- ಸಕ್ಕರೆ ಕಾರ್ಖಾನೆಯ ತ್ಯಾಜ್ಯಗಳನ್ನು ಹಾಕಿ ಕೆಲವು ಜೈವಿಕ ಜಂತುಹುಳ, ಬೇರು ಹುಳ ನಾಶಕವನ್ನು ಸಾವಯ ಗೊಬ್ಬರದೊಂದಿಗೆ ಸೇರಿಸಿ ಬಳಕೆ ಮಾಡಬೇಕು.
- ತಳಿ ಆಯ್ಕೆ ಕೂಳೆ ಬೆಳೆಗೆ ಅತೀ ಪ್ರಾಮುಖ್ಯವಾದ ಸಂಗತಿ. ಕೆಲವು ಉತ್ತಮ ಮೊಳಕೆ ಬರುವ ತಳಿಗಳಿದ್ದು, ಅದನ್ನು ಮಾತ್ರ ಕೂಳೆ ಬೆಳೆಗೆ ಆಯ್ಕೆ ಮಾಡಬೇಕು.
ಕೂಳೆಬೆಳೆಗೆ ಹೊಂದುವ ತಳಿಗಳೆಂದರೆ Co 8013, Co 6907, Co 8014, 85A261, 87A298, 90A272, 92A123, 81V48, 91V83, 93V297, 97V60 and 83R23 ಅಲ್ಪಾವಧಿ ತಳಿಗಳು ಮತ್ತು 83V18, 89V74, 93A145, 94A109, Co 7219, Co 7805, Co 7706 and Co 86032 ಮಧ್ಯಮಾವಧಿ ತಳಿಗಳನ್ನು ಆರಿಸಬೇಕು.
- ಕೂಳೆ ಬೆಳೆ ಬೆಳೆಯುವಾಗ ಅಲ್ಲಲ್ಲಿ ಖಾಲಿ ಉಳಿಯುವುದು ಒಂದು ಸಮಸ್ಯೆಯಾಗಿರುತ್ತದೆ.
- ಇಂತಹ ಸಮಸ್ಯೆ ನಿವಾರಣೆಗೆ ಮೊದಲೇ ಕಬ್ಬಿನ ಸಸಿಗಳನ್ನು ಪಾಲಿ ಬ್ಯಾಗ್ ಗಳಲ್ಲಿ ತಯಾರಿಸಿಟ್ಟುಕೊಂಡು ಅದನ್ನು ಅಲ್ಲಲ್ಲಿ ನಾಟಿ ಮಾಡಬೇಕು.
ಇಂದಿನ ಬೆಳೆ ಖರ್ಚು. ಮತ್ತು ಸಕ್ಕರೆ ಕಾರ್ಖಾನೆಯವರು ರೈತರಿಗೆ ಹಣ ಪಾವತಿಗೆ ಮಾಡುವ ವಿಳಂಬ, ಹಾಗೂ ಕೆಲಸಗಾರರ ಮಜೂರಿ ಮುಂತಾದ ದುಬಾರಿ ಖರ್ಚು ವೆಚ್ಚಗಳನ್ನು ಉಳಿತಾಯ ಮಾಡಲು ಕೂಳೆ ಬೆಳೆ ಉತ್ತಮ ವಿಧಾನ. ಇದರಲ್ಲಿ ಏನಿಲ್ಲವೆಂದರೂ ಒಟ್ಟಾರೆ ಖರ್ಚಿನಲ್ಲಿ ಶೇ.20 ಉಳಿತಾಯವಾಗುತ್ತದೆ. ಅದು ಲಾಭದ್ದು.
end of the article: —————————————————————
search words: sugarcane cultivation# Raton management# Raton crop# sugarcane # sugarcane varieties# Raton varieties of sugarcane#