ಕಬ್ಬಿನ ಬೆಳೆಯಲ್ಲಿ 25 % ಹೆಚ್ಚು ಇಳುವರಿ ಪಡೆಯುವ ವಿಧಾನ.

[et_pb_section][et_pb_row][et_pb_column type=”4_4″][et_pb_text]ಕಬ್ಬು ಬೆಳೆಗಾರರು ಸಾಮಾನ್ಯವಾಗಿ ಬಿತ್ತನೆ ಮಾಡಿದ ನಂತರ ಗೊಬ್ಬರ ನೀರನ್ನು ಚಾಚೂ ತಪ್ಪದೆ ಕೊಡುತ್ತಾರೆ, ಆದರೆ ಕೆಲವು ಅಗತ್ಯ ನಿರ್ವಹಣೆ ಮಾಡುವುದಿಲ್ಲ. ಕಬ್ಬಿನ  ಸಸ್ಯ ಬೆಳೆಯುತ್ತಿದ್ದಂತೆ ಒಣ ರವದಿಯನ್ನು ತೆಗೆಯುತ್ತಿದ್ದರೆ, ಆಳೆತ್ತರ ಬೆಳೆದ ನಂತರ ಕಬ್ಬನ್ನು ಕಟ್ಟುತ್ತಿದ್ದರೆ ಬೆಳೆಯಲ್ಲಿ 25 % ಹೆಚ್ಚು ಇಳುವರಿ ಪಡೆಯಬಹುದು. stem straightening is good
  • ಕಬ್ಬಿನ ಸಸ್ಯವು ಎಷ್ಟು  ಎತ್ತರ  ಬೆಳೆಯಬಹುದು. ಗರಿಷ್ಟ 15-16 ಅಡಿ ತನಕವೂ ಕಬ್ಬಿನ ದಂಟನ್ನು ಬೆಳೆಸಿದವರಿದ್ದಾರೆ.
  • ಒಂದೊಂದು ಕಬ್ಬಿನ ದಂಟು 10 ಕಿಲೋ ತನಕ ತೂಗುತ್ತದೆ
  • ,.ಇಂತಹ ಕಬ್ಬಿನ ಬೆಳೆಯನ್ನು ಜಮಖಂಡಿ ತಾಲೂಕಿನ  ರವಕವಿಯ ಸಿದ್ರಾಮಪ್ಪ ಭೀಮಪ್ಪ ಕಮಲದಿನ್ನಿ ಇವರು ವರ್ಷಂಪ್ರತೀ ಬೆಳೆಯುತ್ತಾರೆ.
  • ಇವರು ಎಕ್ರೆಗೆ ಸರಾಸರಿ 100 ಟನ್ ಗೂ ಹೆಚ್ಚು ಇಳುವರಿಯನ್ನು ಪಡೆಯುತ್ತಾರೆ.
  • ಇದೆಲ್ಲಾ ಬಹುತೇಕ ವ್ಯವಸ್ಥಿತ ನಿರ್ವಹಣೆಯಿಂದ ಆಗಿದೆ.
  • ನಿರ್ವಹಣೆ ಎಂದರೆ ಒಣ ರವದಿ ತೆಗೆಯುವುದು ಮತ್ತು ಪರಸ್ಪರ  ಸಾಲುಗಳನ್ನು ಆದರಿಸಿ ಕಬ್ಬು ಕಟ್ಟುವುದು.

ಕಬ್ಬು ಕಟ್ಟುವುದರ ಅನುಕೂಲಗಳು:

Gaping between rows is important
  • ಕಬ್ಬು ಬೆಳೆದ ಮೇಲೆ ಗಾಳಿ  ಮಳೆಗೆ ಅಡ್ಡ ಬಿದ್ದೇ ಬೀಳುತ್ತದೆ. ಅಡ್ದ ಬಿದ್ದರೆ ಗಂಟುಗಳಲ್ಲಿ ಬೇರು ಬರುತ್ತದೆ.
  • ಹಾಗೆಯೇ ಮೊಳಕೆಗಳೂ ಬರುತ್ತದೆ.
  • ಇದರಿಂದ ಮುಂದಿನ ಬೆಳವಣಿಗೆ ಕುಂಠಿತವಾಗುತ್ತದೆ.
  • ಕಬ್ಬಿನಲ್ಲಿ ಸಕ್ಕರೆ ಅಂಶ ಸಹ ಕಡಿಮೆಯಾಗುತ್ತದೆ.
  • ಮಾರಾಟ ಮಾಡುವಾಗ ಉತ್ತಮ ಬೆಲೆಯೂ ಬರಲಾರದು.
  • ಅಡ್ಡ ಬಿದ್ದ ಕಬ್ಬಿಗೆ ಕಾಂಡ ಕೆಂಪಗಾಗುವ ರೋಗ ಸಹ ಬರುವುದಿದೆ.
ಹಾಗೆಂದು ಕಬ್ಬನ್ನು ಅಲ್ಲಲ್ಲಿ  ಕಟ್ಟಿ ಅದಕ್ಕೆ ಆಧಾರ ನೆಟ್ಟು  ನೇರವಾಗಿ ನಿಲ್ಲಿಸುವುದು ಉತ್ಪಾದನೆಗಿಂತ ಹೆಚ್ಚು ಖರ್ಚಾಗಬಹುದು. ಅದು ಈಗಿನ ಕೆಲಸಗಾರರ  ವೇತನದಲ್ಲಿ  ಕಷ್ಟಸಾಧ್ಯ. ಅದರ ಬದಲಿಗೆ ಜೋಡಿ ಸಾಲುಗಳನ್ನು ಪರಸ್ಪರ ಒಟ್ಟು ಸೆರಿಸಿ ಕಟ್ಟುವುದು ಉಪಯುಕ್ತ. ಇದರಲ್ಲಿ ಪರಸ್ಪರ ಕಬ್ಬಿನ ದಂಟುಗಳು ಆಧರಿಸಲ್ಪಟ್ಟು ಅಡ್ಡ ಬೀಳಲಾರದು..
  • ಈ ರೀತಿ ಮಾಡುವುದರಿಂದ ಕಬ್ಬಿನ ಉದ್ದ ಹೆಚ್ಚಾಗುತ್ತದೆ. ತೂಕವೂ ಹೆಚ್ಚು ಬರುತ್ತದೆ. ಹೊಲ ನಿರ್ವಹಣೆಗೆ ಬಹಳ ಅನುಕೂಲವಾಗುತ್ತದೆ.
After a stage make like this

 ರವದಿ ತೆಗೆಯುವುದರಿಂದ ಬೆಳೆ ಕೀಟ ಮುಕ್ತ:

  • ಸಾಮಾನ್ಯವಾಗಿ  ಹೆಚ್ಚಿನ ಕಬ್ಬು ಬೆಳೆಗಾರರು ನೆಟ್ಟ ನಂತರ ರವದಿಯನ್ನು ತೆಗೆಯುವುದೇ ಇಲ್ಲ.
  • ಒಣ ರವದಿಯನ್ನು  6-7 ತಿಂಗಳ ತನಕ ತೆಗೆಯುತ್ತಾ ಇದ್ದರೆ  ಕಬ್ಬಿನ ಇಳುವರಿ ಹೆಚ್ಚಳವಾಗುತ್ತದೆ.
  • ಕಬ್ಬಿನ ಬೆಳೆಗೆ ಬರುವ ಪ್ರಮುಖ ಕೀಟಗಳಾದ  ಗಿಣ್ಣು ಕೊರೆಯುವ ಹುಳ,  ಮತ್ತು ಸುಳಿ ಕೊರೆಯುವ ಹುಳದ ತೊಂದರೆ ಸಾಕಷ್ಟು ಕಡಿಮೆಯಾಗುತ್ತದೆ.
  • ಸಾಮಾನ್ಯವಾಗಿ ಗಿಣ್ಣು ಕೊರೆಯುವ ಹುಳಗಳು ಒಣ ರವದಿಯ ಆಸರೆಯಲ್ಲಿ ಇದ್ದುಕೊಂಡು  ಗಂಟನ್ನು ಕೊರೆದು ಬಹಳ ಬೆಳೆ ಹಾನಿ ಮಾಡುತ್ತದೆ.
  • ರವದಿಯೇ ಇಲ್ಲದಿದ್ದ ಪಕ್ಷದಲ್ಲಿ ಈ ಸಮಸ್ಯೆ ತುಂಬಾ  ಕಡಿಮೆಯಾಗುತ್ತದೆ.
  • ಸುಳಿ ಕೊರೆಯುವ  ಹುಳದ ಪತಂಗಗಳನ್ನು ಮೊಟ್ಟೆಗಳನ್ನು ಗುರುತಿಸಿ ನಾಶ ಮಾಡಲು ಒಣ ರವದಿ ತೆಗೆದರೆ ಅನುಕೂಲವಾಗುತ್ತದೆ.
  • ಒಣ ರವದಿಯನ್ನು ತೆಗೆಯುತ್ತಿದ್ದರೆ  ಹೊಲದಲ್ಲಿ ಸಂಚರಿಸಲು ಅನುಕೂಲವಾಗುತ್ತದೆ.
  • ಕೆಲವು ಕೀಟ ಹಾಗೂ ಎಲೆ ನುಶಿ ಮುಂತಾದ ಕೀಟಗಳ ಪತ್ತೆಗೂ ಅನುಕೂಲವಾಗುತ್ತದೆ.
ಕಬ್ಬಿನ ರವದಿ ತೆಗೆಯದೆ ಇದ್ದರೆ ಕಾಂಡಕ್ಕೆ ಸಮರ್ಪಕವಾಗಿ ಬಿಸಿಲು ಬೀಳುವುದಿಲ್ಲ. ಅಂತಹ ಕಬ್ಬು ನೆರಳಿನಲ್ಲಿ ಬೆಳೆದ ಕಬ್ಬಿನ ತರಹ ಕಡಿಮೆ ಗುಣಮಟ್ಟದ್ದಾಗಿರುತ್ತದೆ. ಇಷ್ಟಲ್ಲದೆ ಕೆಲವೊಮ್ಮೆ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ಖರೀದಿ ಮಾಡುವುದು ತಡವಾದರೆ ಕಬ್ಬು ಹೂ ಬಿಡುವ ಸಂಭವ ಇರುತ್ತದೆ. ಹೂ ಬಿಡುವುದನ್ನು ತಡೆಯಲು ಬಲಿತ ಕಬ್ಬಿನ ತುದಿ ಭಾಗದ ಎಲೆಗಳನ್ನು ತೆಗೆಯಬೇಕಾಗುತ್ತದೆ.
  • ಹೀಗೆ ತೆಗೆಯಲು ಕಬ್ಬನ್ನು ಸ್ವಲ್ಪವಾದರೂ ಕಟ್ಟಿರಬೇಕು. ರವದಿ ಸ್ವಚ್ಚವಾಗಿದ್ದರೆ ಮಾತ್ರ ಪರಿವೀಕ್ಷಣೆ  ಸಾಧ್ಯ. ಕಬ್ಬಿನ ಬೆಳೆಗೆ ಹೆಚ್ಚಿನ ಬೆಳಕು ಬೀಳುವುದರಿಂದ ಹೂ ಬಿಡುವಿಕೆಯನ್ನು ತಡೆಗಟ್ಟಬಹುದು.
  • ಅದಕ್ಕೂ ಕಬ್ಬು ಕಟ್ಟುವುದು ಮತ್ತು ರವದಿ ತೆಗೆಯುವುದು ಸಹಕಾರಿ.
15feet above sugarcane, in good maintenance ರವದಿಯನ್ನು ಪೂರ್ತಿಯಾಗಿ ತೆಗೆಯಬೇಕಾಗಿಲ್ಲ. ಸುಮಾರು 6-7 ತಿಂಗಳ ತನಕ ಬುಡದಿಂದ ಒನ ರವದಿಯನ್ನು ತೆಗೆಯುತ್ತಾ ಇದ್ದರೆ ಸಾಕು, ಬುಡ ಭಾಗ ಸುಮಾರು 4-5 ಅಡಿ ತನಕ ಕಾಂಡದಲ್ಲಿ ಒಣ ಗರಿ ಇಲ್ಲದಿದ್ದರೆ ಸಾಕಾಗುತ್ತದೆ. ಕಬ್ಬು ಹೆಚ್ಚು ಹೆಚ್ಚು ಬೆಳೆಯುವುದಕ್ಕಿಂತ ಎಕ್ರೆವಾರು ಗರಿಷ್ಟ ಉತ್ಪಾದನೆ ಪಡೆಯುವುದು ಉತ್ತಮ. ಕಬ್ಬಿನಲ್ಲಿ ಉತ್ತಮ ಬೇಸಾಯ ಕ್ರಮದಲ್ಲಿ ಎಕ್ರೆಗೆ 100 ಟನ್ ಗಳಿಗಿಂತ ಹೆಚ್ಚು ಇಳುವರಿ ಪಡೆಯಬಹುದು. ಇಷ್ಟಕ್ಕೂ ಸ್ವಚ್ಚ ಮತ್ತು  ಗುಣಮಟ್ಟದ ಕಬ್ಬಿಗೆ ಕಾರ್ಖಾನೆಗೆ ನೇರ ಎಂಟ್ರಿ ಇರುವ ಕಾರಣ ಗುಣಮಟ್ಟ ಪಾಲನೆ ಕಡೆಗೆ ಬೆಳೆಗಾರರು ಹೆಚ್ಚಿನ ಆಸ್ತೆ ವಹಿಸಬೇಕು. end of the article:——————————————————— search words: Sugarcane cultivation# high yield technique # Sugarcane Trash removal method# sugarcane pest management # sugarcane growing technique# sugarcane yield# sugar recovery# Sugarcane flower stopping# Flower delaying #[/et_pb_text][/et_pb_column][/et_pb_row][/et_pb_section]

Leave a Reply

Your email address will not be published. Required fields are marked *

error: Content is protected !!