ಕರಾವಳಿಯಲ್ಲಿ ಅಡಿಕೆ ಖರೀದಿಯ ಪ್ರಮುಖ ಸಂಸ್ಥೆ ಕ್ಯಾಂಪ್ಕೋ ಇಂದು ಹಳೆ ಸುಪಾರಿ, ಡಬ್ಬಲ್ ಚೋಲ್ ಗಳಿಗೆ ಏಕಾಏಕಿ 10 ರೂ. ಏರಿಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡಿದೆ. ಖಾಸಗಿಯವರು ನಾವೂ ಸ್ಪರ್ಧೆಗೆ ಸಿದ್ದರಿದ್ದೇವೆ ಎಂದು ತೋರಿಸಿದ್ದಾರೆ. ಕ್ಯಾಂಪ್ಕೋ ಹೊಸ ಸುಪಾರಿ ಕ್ವಿಂಟಾಲಿಗೆ 43,500, ಖಾಸಗಿ 45,000, ಹಳೆ ಅಡಿಕೆ ಕ್ಯಾಂಪ್ಕೋ 42,500- ಡಬ್ಬಲ್ ಚೋಲ್ 43,000 ಖಾಸಗಿ 54,000 ದರದಲ್ಲಿ ಖರೀದಿ ನಡೆದಿದೆ. ಶಿರಸಿಯಲ್ಲಿ ಕೆಂಪಡಿಕೆ (ರಾಶಿ) ಮತ್ತೆ ಬೆಲೆ ಏರಿಕೆಯಾಗಿದೆ. ಬಹುಷಃ ಈ ವಾರ ಮತ್ತೆ ಪುನಹ 500 ರೂ. ಜಂಪ್ ಆಗುವ ಸಾಧ್ಯತೆ ಇದ್ದು,ಒಂದು ವಾರ ಬಿಸಿಲು ಮುಂದುವರಿದೆರೆ, ಹೊಸ ಅಡಿಕೆಗೆ ಕ್ಯಾ.45,000 ಖಾಸಗಿ:46,000 ಆಗುವ ಸಾಧ್ಯತೆ ಇದೆ ಎಂಬುದಾಗಿ ಸುದ್ದಿ ಇದೆ.
ಗೂಬೆ ಕೂಗುವುದು ಜಾಸ್ತಿಯಾಗುತ್ತಿದೆ. ಗೂಬೆಯ ಕೂಗಿದರೆ ಅಡಿಕೆಗೆ ಬೆಲೆ ಏರುತ್ತದೆ ಎಂಬುದು ಹಿಂದಿನವರಿಂದ ಬಂದ ಮಾತು.ಆಮದು ಇಲ್ಲದೆ ಅಡಿಕೆ ಕೊರತೆ ಸೃಷ್ಟಿಯಾಗಿದೆ ಎಂಬುದೇ ಅಡಿಕೆ ಮಾರುಕಟ್ಟೆ ಜಿಗಿತಕ್ಕೆ ಕಾರಣ. ಹೊಸ ಅಡಿಕೆ ಮಾರುಕಟ್ಟೆಗೆ ಬರಲಿಲ್ಲ ಎಂಬ ಕಾರಣಕ್ಕೆ ಬೆಲೆ ಏರಿದ್ದಲ್ಲ. ಈ ಹಿಂದೆಯೂ ಈ ಸಮಯಕ್ಕೆ ಹೆಚ್ಚು ಹೊಸ ಅಡಿಕೆ ಬರುತ್ತಿರಲಿಲ್ಲ. ಕೆಂಪಡಿಕೆಗೂ ಬೇಡಿಕೆ ಹೆಚ್ಚುತ್ತಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಇಂದು 47,200 ಅಧಿಕ ದರ, ಶಿರಸಿಯಲ್ಲಿ 50,399 ಯಲ್ಲಾಪುರದಲ್ಲಿ ಗರಿಷ್ಟ 53,999 ಸರಾಸರಿ 51,390, ಸಿದ್ದಾಪುರದಲ್ಲಿ ಗರಿಷ್ಟ 48,599 ಸರಾಸರಿ 47,299, ಚೆನ್ನಗಿರಿಯಲ್ಲಿ ಗರಿಷ್ಟ 47,019 ಸರಾಸರಿ 46,557 ಇತ್ತು. ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ಬಾರೀ ವ್ಯತ್ಯಾಸ ಇಲ್ಲದ ಕಾರಣ ಬೇಡಿಕೆ ಉತ್ತಮವಾಗಿದೆ.
ಈ ವರ್ಷ ಕೆಂಪಡಿಕೆಗೆ ಬೆಲೆ ಇಳಿಕೆಯಾಗುವ ಯಾವ ಸಾಧ್ಯತೆಯೂ ಇಲ್ಲ. ಕೆಂಪಡಿಕೆ ವಾಡಿಕೆಗಿಂತ ಕಡಿಮೆ ಎನ್ನುತ್ತಾರೆ. ಒಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಈ ವರ್ಷ ಶುಭ ವರ್ಷ. ಹೀಗೇ ದರ ಮುಂದುವರಿಯಲಿ. ಭಾರೀ ಏರಿಕೆ ಆಗದೆ ಸ್ಥಿರತೆ ಇರಲಿ ಎಂದು ಆಶಿಸೋಣ.
ಇಂದು ಅಡಿಕೆ ಧಾರಣೆ: ಕ್ವಿಂಟಾಲು.
- ಬಂಟ್ವಾಳ: 06/12/2021, Coca, 19, 12500, 25000, 22500
- BANTWALA, 06/12/2021, New Variety, 1, 27500, 43500, 41000
- BANTWALA, 06/12/2021, Old Variety, 20, 46000, 52500, 50000
- BELTHANGADI, 30/11/2021, Old Variety, 100, 47000, 51500, 50000
- ಬೆಳ್ತಂಗಡಿ: 04/12/2021, New Variety, 25, 29500, 43500, 36000
- BELTHANGADI, 01/12/2021, Coca, 3, 24000, 28000, 25000
- ಬೆಂಗಳೂರು: 06/12/2021, Other, 104, 45000, 48000, 46500
- ಭಧ್ರಾವತಿ: 03/12/2021, Rashi, 436, 45099, 46999, 46676
- ಚನ್ನಗಿರಿ: 04/12/2021, Rashi, 3116, 45699, 47019, 46557
- ಚಿತ್ರದುರ್ಗ: 06/12/2021, Api, 2, 46839, 47269, 47000
- CHITRADURGA, 06/12/2021, Bette, 125, 39919, 40389, 40149
- CHITRADURGA, 06/12/2021, Kempugotu, 180, 31009, 31410, 31200
- CHITRADURGA, 06/12/2021, Rashi, 65, 46339, 46779, 46559
- ದಾವಣಗೆರೆ: 04/12/2021, Rashi, 279, 43699, 46599, 45490
- HOLALKERE, 30/11/2021, Rashi, 733, 44899, 46139, 45278
- ಹೊನ್ನಾಳಿ: 06/12/2021, Rashi, 6, 46399, 46399, 46399
- ಹೊಸನಗರ: 03/12/2021, Bilegotu, 2, 28799, 28799, 28799
- HOSANAGAR, 03/12/2021, Chali, 2, 43599, 43599, 43599
- HOSANAGAR, 03/12/2021, Kempugotu, 39, 36329, 39999, 38699
- HOSANAGAR, 03/12/2021, Rashi, 761, 44799, 47709, 47399
- ಹುಲಿಯಾರು: 02/12/2021, Red, 23, 42304, 42304, 42304
- ಕಾರ್ಕಳ: 06/12/2021, New Variety, 12, 38000, 43500, 41000
- KARKALA, 06/12/2021, Old Variety, 5, 45000, 52500, 48000
- ಕಾಸರಗೋಡು: 06/12/2021 New 42,200-45,000
- KASARAGODU:06/12/2021 OLD 52,500-54,000 (PERLA – BADIYADKA)
- KASARAGODU:06/12/2021 DC 52,500-54,500 (PERLA – BADIYADKA)
- KASARAGODU:06/12/2021 FATOR 42,500-48,000(PERLA – BADIYADKA)
- ಕೊಪ್ಪ: 01/12/2021, Bette, 2, 40000, 48000, 46000
- KOPPA, 01/12/2021, Gorabalu, 7, 28000, 37500, 35000
- KOPPA, 01/12/2021, Rashi, 24, 40000, 46100, 44100
- ಕುಮ್ಟಾ: 06/12/2021, Chippu, 30, 24569, 40601, 39879
- KUMTA, 06/12/2021, Coca, 20, 20869, 38019, 37689
- KUMTA, 06/12/2021, Factory, 100, 12999, 18429, 17919
- KUMTA, 06/12/2021, Hale Chali, 100, 47269, 50149, 49729
- KUMTA, 06/12/2021, Hosa Chali, 75, 38099, 41549, 41019
- ಕುಂದಾಪುರ: 03/12/2021, Hale Chali, 1, 50000, 51500, 51000
- KUNDAPUR, 03/12/2021, Hosa Chali, 9, 37500, 43500, 43000
- ಮಡಿಕೇರಿ: 30/11/2021, Raw, 49, 48930, 48930, 48930
- ಮಂಗಳೂರು: 06/12/2021, Coca, 189, 22780, 30000, 26450
- ಪುತ್ತೂರು: 06/12/2021, Old Variety —-, 49500, 535000, 52500
- PUTTUR, 06/12/2021, New Variety, 53, 27500, 43500, 35500
- ಸಾಗರ: 06/12/2021, Bilegotu, 47, 24899, 38699, 33899
- SAGAR, 06/12/2021, Chali, 250, 36199, 48699, 47699
- SAGAR, 06/12/2021, Coca, 78, 26099, 36144, 34099
- SAGAR, 06/12/2021, Kempugotu, 1, 35699, 37889, 35699
- SAGAR, 06/12/2021, Rashi, 104, 40699, 48399, 46799
- SAGAR, 06/12/2021, Sippegotu, 31, 5690, 26852, 18189
- ಶಿಕಾರಿಪುರ: 30/11/2021, Red, 48, 38000, 45200, 41700
- ಶಿವಮೊಗ್ಗ: 06/12/2021, Bette, 31, 48009, 54009, 52700
- SHIVAMOGGA, 06/12/2021, Gorabalu, 733, 17560, 38469, 37800
- SHIVAMOGGA, 06/12/2021, Rashi, 1825, 41009, 47299, 46809
- SHIVAMOGGA, 06/12/2021, Saraku, 9, 51599, 73199, 67000
- ಸಿದ್ದಾಪುರ: 06/12/2021, Bilegotu, 15, 32109, 43699, 39209
- SIDDAPURA, 06/12/2021, Chali, 90, 46808, 50799, 50339
- SIDDAPURA, 06/12/2021, Coca, 8, 22899, 37399, 34099
- SIDDAPURA, 06/12/2021, Hosa Chali, 2, 30699, 38699, 36808
- SIDDAPURA, 06/12/2021, Kempugotu, 1, 26899, 28899, 28899
- SIDDAPURA, 06/12/2021, Rashi, 17, 42099, 48599, 47299
- SIDDAPURA, 06/12/2021, Tattibettee, 3, 33699, 43299, 38899
- ಸಿರಾ: 30/11/2021, Other, 263, 9000, 48000, 44625
- ಸಿರ್ಸಿ: 06/12/2021, Bette, 4, 44009, 44599, 44239
- SIRSI, 06/12/2021, Bilegotu, 15, 25299, 44280, 40961
- SIRSI, 06/12/2021, Chali, 103, 46399, 50899, 50364
- SIRSI, 06/12/2021, Rashi, 21, 46899, 50399, 49630
- ಸುಳ್ಯ: 06/12/2021, New Variety, 61, 29000, 43500, 30500
- SULYA, 06/12/2021, Old Variety, 120, 45000, 52500, 48500
- SULYA, 06/12/2021, KARIGOTU, 30,000-31,500
- SULYA, 06/12/2021, ULLI 30,100-33,000
- ತೀರ್ಥಹಳ್ಳಿ: 05/12/2021, Bette, 67, 46366, 52159, 50559
- TIRTHAHALLI, 05/12/2021, EDI, 104, 45009, 47399, 46899
- TIRTHAHALLI, 05/12/2021, Gorabalu, 258, 32009, 38255, 37599
- TIRTHAHALLI, 05/12/2021, Rashi, 649, 43569, 47399, 47099
- TIRTHAHALLI, 05/12/2021, Saraku, 47, 50009, 73060, 67099
- ತುಮಕೂರು: 06/12/2021, Rashi, 56, 45100, 46200, 45600
- ಯಲ್ಲಾಪುರ: 06/12/2021, Bilegotu, 1, 32914, 42169, 40211
- YELLAPURA, 06/12/2021, Chali, 60, 44619, 50620, 48899
- YELLAPURA, 06/12/2021, Coca, 5, 22899, 34899, 30679
- YELLAPURA, 06/12/2021, Kempugotu, 1, 30110, 33901, 31899
- YELLAPURA, 06/12/2021, Rashi, 65, 46179, 53999, 51390
- YELLAPURA, 06/12/2021, Tattibettee, 4, 38350, 45400, 43319
ಕರಿಮೆಣಸು:
ಕರಿಮೆಣಸು ಏರಿದ್ದು ಸ್ವಲ್ಪ ಇಳಿದಿದೆ. ಆದರೆ ಅಲ್ಲಿಗೆ ಸ್ಥಿರವಾಗಿದೆ. ಇನ್ನು ಇಳಿಕೆ ಆಗಲಾರದು ಎನ್ನಲಾಗುತ್ತದೆ. ಹೊಸ ಬೆಳೆ ಕಡಿಮೆ ಇದೆ. ಹಿಂದೆ ಬಂದ ವಿದೇಶೀ ಮೆಣಸು ಮುಗಿದ ತರುವಾಯ ಮತ್ತೆ ಏರಿಕೆ ಕಾಣಲಿದೆ. ದಾಸ್ತಾನು ಇಟ್ಟವರು ಈಗ ಮಾರಾಟ ಮಾಡಬೇಡಿ. ಬೆಲೆ 60,000 ತಲುಪುವ ಸಾದ್ಯತೆಗಳಿದ್ದು, ಇನ್ನು ಎಲ್ಲಾ ಕಡೆ ಕೊಯಿಲು ಮುಗಿಯುವ ವರೆಗೆ ಎಪ್ರೀಲ್ 2022 ತನಕ ಕಾಯುವುದು ಸೂಕ್ತ.
ಇಂದಿನ ಧಾರಣೆ:ಕಿಲೋ.
- ಬಂಟ್ವಾಳ:500.00-510.00
- ಬೆಳ್ತಂಗಡಿ:500.00-515.00
- ಮಂಗಳೂರು:500.00-515.00
- ಕಾರ್ಕಳ:500.00-515.00
- ಪುತ್ತೂರು:500.00-510.00
- ಬದಿಯಡ್ಕ:500.00-530.00
- ಮೂಡಿಗೆರೆ:520.00-525.00-530.00
- ಸಕಲೇಶಪುರ: 520.00-530.00
- ಹಾಸನ: 500.00-520.00
- ಮಡಿಕೇರಿ:510.00-525.00
- ಕಳಸ:500.00-520.00
- ಚಿಕ್ಕಮಗಳೂರು:510.00-525.00
- ತೀರ್ಥಹಳ್ಳಿ:500.00-530.00
- ಸಾಗರ:500.00-520.00
- ಶಿರಸಿ:482.00-530.00
- ಸಿದ್ದಾಪುರ: 490.00-510.00
- ಬಿಳಿ ಮೆಣಸು: 600.00-625.00
- ಆಯ್ದ ಮೆಣಸು:550.00.
ಶಿರಸಿ ಸಿದ್ದಾಪುರದಲ್ಲಿ ಭಾರೀ ಮೇಲೇರಿದ್ದ ಮೆಣಸಿನ ಧಾರಣೆ ಇಳಿಕೆಯಾಗಿದೆ.ಕೊಚ್ಚಿ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ ಎನ್ನಲಾಗುತ್ತಿದೆಯಾದರೂ ಅಲ್ಲಿ ತುಸು ಇಳಿಕೆಯಾಗಿ ಅಲ್ಲಿಗೆ ಸ್ಥಿರವಾಗಿದೆ. ಹಾಗಾಗಿ ಬಾರೀ ಹಿಂದೆ ಬರುವ ಸಾಧ್ಯತೆ ಇಲ್ಲ.
ಕೊಬ್ಬರಿ ಧಾರಣೆ:ಕ್ವಿಂಟಾಲು.
ಕೊಬ್ಬರಿ ಧಾರಣೆ ತಿಪಟೂರಿನಲ್ಲಿ ತುಸು ಏರಿಕೆಯಾಗಿದೆ. ಮಾರುಕಟ್ಟೆ ಅಸ್ತಿರವಾಗಿದೆ.
- ತಿಪಟೂರು: 17610
- ಮಂಗಳೂರು: ಎಣ್ಣೆ-9000- 14700
- ತುರುವೇಕೆರೆ:17500-17600
- ಚನ್ನರಾಯಪಟ್ನ:17200-17500
- ತೆಂಗಿನ ಕಾಯಿ: ಕಿಲೋ.32-33
ಹಸಿ ಶುಂಠಿ: ಕ್ವಿಂಟಾಲು.
- ಬೇಲೂರು, 03/12/2021, Green Ginger, 1000, 1000, 1000
- ಬೆಂಗಳೂರು: 06/12/2021, Green Ginger, 1500, 1800, 1650
- ಚಿಕ್ಕಬಳ್ಳಾಪುರ: 04/12/2021, Green Ginger, 2000, 2500, 2250
- ಚಿಂತಾಮಣಿ: 02/12/2021, Green Ginger, 3000, 4000, 3500
- ಹಾಸನ: 04/12/2021, Green Ginger, 900, 900, 900
- ಕೋಲಾರ: 06/12/2021, Green Ginger, 2500, 3500, 3000
- ಮೈಸೂರು: 06/12/2021, Green Ginger, 4800, 5000, 4900
- ರಾಮನಗರ: 06/12/2021, Green Ginger, 2400, 3200, 2800
- ಶಿವಮೊಗ್ಗ: 03/12/2021, Green Ginger, 2200, 2400, 2300
- ಟಿ ನರಸಿಪುರ: 05/12/2021, Green Ginger, 2000, 2000, 2000
ಕಾಫೀ ಧಾರಣೆ:50 ಕಿಲೋ.
- ಅರೇಬಿಕಾ ಪಾರ್ಚ್ ಮೆಂಟ್:14200-14700
- ಅರೇಬಿಕಾ ಚೆರಿ:6200-6250
- ರೋಬಸ್ಟಾ ಪಾರ್ಚ್ ಮೆಂಟ್:6200
- ರೋಬಸ್ಟಾ ಚೆರಿ:3600
ಏಲಕ್ಕಿ ಧಾರಣೆ: ಕಿಲೋ
- ತೋಟದ ಏಲಕ್ಕಿ:600-700
- ರಾಶಿ:800-850
- ಜರಡಿ:1000-1050
- ಆಯ್ದದ್ದು:1200-1300
- ಹಸಿರು ಉತ್ತಮ:1300-1400
ಜಾಯೀ ಸಾಂಬಾರ:ಕಿಲೋ
- ಜಾಯಿ ಕಾಯಿ:200-210
- ಜಾಯೀ ಪತ್ರೆ:800-1100
ರಬ್ಬರ್ ಧಾರಣೆ: ಕಿಲೋ.
- ಗ್ರೇಡ್:1X.190.00
- RSS 5:176.00
- RSS 4:182.00
- RSS 3:182.50
- LOT:170.00
- SCRAP:112-120
ಅಡಿಕೆ ಬೆಳೆಗಾರರು ಸ್ವಲ್ಪ ಸ್ವಲ್ಪ ಹಳೆ ಅಡಿಕೆ, ಡಬ್ಬಲ್ ಚೋಳು ಮಾರಾಟ ಮಾಡಲು ಇದು ಸೂಕ್ತ ಕಾಲ. ಹೊಸ ಅಡಿಕೆ ದಾಸ್ತಾನು ಇಡಿ. ಮೆಣಸು ಬೆಳೆಗಾರರು ಕಾಯುವುದು ಒಳ್ಳೆಯದು. ಕಾಫಿಗೆ ಈ ವರ್ಷ ಬೆಲೆ ಏರಲಿದೆ. ತೆಂಗಿನ ಕಾಯಿಯ ಇಳುವರಿ ಕಡಿಮೆ ಇದ್ದು, ಬೆಲೆ ಏರಿಕೆ ಆಗಬಹುದು.ಆದರೆ ದಾಸ್ತಾನು ಕಷ್ಟ. ರಬ್ಬರ್ ಧಾರಣೆ ಏರಲಿದೆ.