ಶುಂಠಿ ಸಸಿಗಳು ಯಾಕೆ ಕೊಳೆಯುತ್ತಿವೆ – ಏನು ಪರಿಹಾರ
ಶುಂಠಿ ಬೆಳೆಯ ಅತೀ ದೊಡ್ದ ಸಮಸ್ಯೆ ಎಂದರೆ ಎಲೆ ಕೊಳೆ ಮತ್ತು ಕಾಂಡ ಕೊಳೆ ರೋಗ. ಇದರಿಂದಾಗಿ 25 % ದಿಂದ 75% ತನಕವೂ ಬೆಳೆ ಹಾಳಾಗುತ್ತದೆ. ಇದರ ಮೂಲ ಗಡ್ಡೆ, ವಾತಾವರಣ ಮತ್ತು ನೀರು. ಇದನ್ನು ಮುನ್ನೆಚ್ಚರಿಕೆ ಕ್ರಮದಲ್ಲೇ ನಿಯಂತ್ರಣ ಮಾಡಬೇಕು. ಶುಂಠಿ ಗಡ್ಡೆ ನಾಟಿ ಮಾಡಿದಲ್ಲಿ ಕೆಲವು ಗಡ್ಡೆಗಳು ಮೊಳಕೆ ಬಾರದೇ ಅಲ್ಲಿಗೆ ಕೊಳೆತು ಹೋಗುವುದಿದೆ. ಮತ್ತೆ ಕೆಲವು ಬಲವಿಲ್ಲದ ಮೊಳಕೆಗಳು, ಇನ್ನು ಕೆಲವು 4-5 ಎಲೆ ಬಂದ ನಂತರ ಹಳದಿಯಾಗುವುದು. ಸಸ್ಯಗಳು ಬೆಳೆಯುತ್ತಿದ್ದಂತೇ …