
2 ವರ್ಷದ ಅಡಿಕೆ ಸಸಿಗಳಿಗೆ ಗೊಬ್ಬರದ ಪ್ರಮಾಣ.
ಮೊದಲ ವರ್ಷ ಅಡಿಕೆ ಸಸಿ ನೆಡುವಾಗ ಅಲ್ಪ ಸ್ವಲ್ಪವಾದರೂ ಕೊಟ್ಟಿಗೆ ಗೊಬ್ಬರ ಕೊಡುತ್ತೇವೆ. ಮಣ್ಣಿನಲ್ಲೂ ಸ್ವಲ್ಪ ಸಾರಾಂಶ ಇರುತ್ತದೆ. ಬೇರುಗಳೂ ಹೆಚ್ಚು ಬೆಳೆದಿರುವುದಿಲ್ಲ. ಹಾಗಿರುವಾಗ NPK ಸಮನಾಗಿ ಇರುವ ಕಾಂಪ್ಲೆಕ್ಸ್ ಗೊಬ್ಬರ ಕೊಡುವುದು ಸಾಕಾಗುತ್ತದೆ. ಸಸಿ ಬೆಳೆದಂತೆ ಬೇರು ಹೆಚ್ಚು ಬೆಳೆದು, ಮಣ್ಣಿನಲ್ಲಿ ಸಾರಾಂಶಗಳು ಕಡಿಮೆ ಆದಂತೆ ಗೊಬ್ಬರವನ್ನು ಹೆಚ್ಚು ಕೊಡಬೇಕಾಗುತ್ತದೆ. ಎರಡನೇ ವರ್ಷದ ತರುವಾಯ ಶಿಫಾರಸಿನಂತೆ NPK ಪ್ರಮಾಣವನ್ನು ಕೊಡುವುದರಿಂದಾ ಆರೋಗ್ಯಕರ ಬೆಳವಣಿಗೆ ಉಂಟಾಗುತ್ತದೆ. ಗೊಬ್ಬರವನ್ನು ಮಳೆಗಾಲ ಪೂರ್ವದಲ್ಲಿ ಕೊಡುವುದು ಅವಶ್ಯಕ. ಆ ನಂತರ ಮಳೆಗಾಲ…