ಆಫ್ರಿಕನ್ ಬಸವನ ಹುಳುವಿನ ಅಪಾಯ-ನಿಯಂತ್ರಣ.
ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಆಫ್ರಿಕನ್ ಬಸವನ ಹುಳ Giant African Snail (Lissachatina fulica) ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರ ಹೊಲದಲ್ಲಿ, ಮನೆ, ಶೆಡ್ ಎಲ್ಲೆಂದರಲ್ಲಿ ಈ ಹುಳ ಹರಿದಾಡುವ ಸ್ಥಿತಿ ಉಂಟಾಗಿದೆ. ಹಿಡುದು ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತಲೇ ಇದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗದೆ ಕಂಗಾಲಾಗಿದ್ದಾರೆ ರೈತರು ಮತ್ತು ಇತರ ಜನ ಸಮುದಾಯ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತುಕೊಳ್ಳುತ್ತದೆ.ಹಗಲು ನಾಲ್ಕು- ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ,…