ಕೃಷಿಕರು ತಮ್ಮ ವೃತ್ತಿಕ್ಷೇತ್ರದಲ್ಲಿ ಪ್ರೌಢತೆ ಬೆಳೆಸಿಕೊಳ್ಳದಿದ್ದರೆ ಉಳಿಗಾಲ ಇಲ್ಲ.
ಒಬ್ಬ ಮೆಕ್ಯಾನಿಕ್ ಶಿಕ್ಷಣ ಕಡಿಮೆಯಾದರೂ ಸಹ ತನ್ನ ವೃತ್ತಿ ಕ್ಷೇತ್ರದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳುತ್ತಾ ಮುಂದುವರಿಯುತ್ತಿರುತ್ತಾನೆ. ಇಂತಹ ಪಾರ್ಟ್ ಹಾಳಾದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂಬುದಾಗಿ ನಿಖರವಾಗಿ ಹೇಳುತ್ತಾನೆ. ಆದರೆ ನಮ್ಮ ಕೃಷಿಕರು ಈ ವಿಷಯದಲ್ಲಿ ಇನ್ನೂ ಪ್ರೌಢರಾಗಿಲ್ಲ. ಪ್ರತೀಯೊಂದು ವಿಚಾರಕ್ಕೂ ಇನ್ನೊಬ್ಬನಲ್ಲಿ ಕೇಳುವ, ಅವನ ಸಂಭಾವನೆ ರಹಿತ ಉಚಿತ ಸಲಹೆ ಕೇಳುವ ಬಹಳಶ್ಟು ಸಂದೇಹಗಳಲ್ಲೇ ಮುಂದುವರಿಯುವ ಮನೋಸ್ಥಿತಿ ನಮ್ಮ ಕೃಷಿಕ ವರ್ಗದಲ್ಲಿ ಕಾಣಿಸುತ್ತಿದೆ. ಹತ್ತು ಜನರ ಅಭಿಪ್ರಾಯ ಕೇಳಿ ತನಗೆ ತೋಚಿದಂತೆ ಅದನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ…