ರೈತರ ಆದಾಯಕ್ಕೆ ಬ್ಲೇಡ್ ಹಾಕದಿದ್ದರೆ ಅದಾಯ ತಕ್ಷಣ ದ್ವಿಗುಣ.

ಭಾರತ ಸರಕಾರವು 2022 ವೇಳೆಗೆ  ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವುದು ನಮೆಗೆಲ್ಲಾ ಗೊತ್ತಿದೆ. ಇದಕ್ಕೆ ಸಾಕಷ್ಟು ತಯಾರಿಗಳು ಆಗುತ್ತಿದೆ. ಈಗ ನಡೆಯುತ್ತಿರುವ ಪೂರ್ವ ತಯಾರಿಯಲ್ಲಿ ಯಾಕೋ ಭಾರತ ರೈತರ ಆದಾಯವು ದ್ವಿಗುಣಗೊಂಡರೂ ಸಹ ಅದು ಅವನಿಗೆ ಉಳಿಯಲಿಕ್ಕಿಲ್ಲವೇನೋ ಅನ್ನಿಸುತ್ತಿದೆ.
Farmer selling his produce at road side in cheap rate

  • ರೈತರ ಆದಾಯ ದ್ವಿಗುಣವಾಗುವುದು (doubling farmers‘ income) ಅನಿವಾರ್ಯ. ಅದರ ಅಗತ್ಯ ಆಡಳಿತ ನಡೆಸುವ ನಮ್ಮ ಮುಖಂಡರಿಗೆ ತಿಳುವಳಿಕೆಗ ಬಂದುದೂ ಸಹ ಸ್ವಾಗತಾರ್ಹ.
  • ಯಾವಾಗಲೋ  ಅದನ್ನು ಸರಕಾರ  ಗಮನಿಸಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು  ಹಾಕಿಕೊಳ್ಳಬೇಕಿತ್ತು.
  • ಈಗಲಾದರೂ ಬೊಬ್ಬೆ ಪ್ರಾರಂಭವಾಗಿದೆ.
  • ಒಂದು ವೇಳೆ ಆದಾಯ ದ್ವಿಗುಣ ಆದರೆ, ಮತ್ತೆ ಹೊಸ ತಲೆಮಾರು ಕೃಷಿಯಲ್ಲಿ ಉಳಿಯಲು ಸಾಧ್ಯ.
  • ಇಲ್ಲವಾದರೆ ಕೆಲವೇ ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು  ಯಾರೂ ಆಯ್ಕೆ ಮಾಡಿಕೊಳ್ಳಲಾರರು.

ಪೂರ್ವ ತಯಾರಿ ಸರಿ ಇಲ್ಲ.

  • ಕೃಷಿಯಲ್ಲಿ ಆದಾಯವನ್ನು ದ್ವಿಗುಣಗೊಳಿಸುವುದು ಅಷ್ಟು ಸುಲಭವಲ್ಲ. ಈಗಿರುವ ಕೃಷಿ ಉತ್ಪನ್ನಗಳ ಬೆಲೆಯನ್ನು ದುಪ್ಪಟ್ಟು ಹೆಚ್ಚಿಸುವುದೇ? ಅದು ಸಾಧ್ಯವಿಲ್ಲ.
  • ಈಗಿನ ಉತ್ಪಾದನೆಯನ್ನು ಹೆಚ್ಚಿಸುವುದೇ ? ಅದು ಮಿಗತೆಯಾಗುತ್ತದೆ. ದರ ಬೀಳುತ್ತದೆ.
  • ಹಾಗಾದೆರೆ ಹೇಗೆ ಕೃಷಿ ಆದಾಯವನ್ನು ದ್ವಿಗುಣ ಗೊಳಿಸುವುದು?
  • ಕೃಷಿ ಆದಾಯವನು ದ್ವಿಗುಣಗೊಳಿಸಲು ಇರುವ ಏಕೈಕ ಉಪಾಯ ಕೃಷಿ ಪೂರಕ ಉದ್ದಿಮೆಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸುವುದು.
  • ಇದರಲ್ಲೂ ಖಂಡಿತವಾಗಿ ಕೃಷಿ ಉತ್ಪನಗಳಿಗೆ ಬೇಡಿಕೆ ಹೆಚ್ಚುತ್ತದೆ ಎನ್ನಲಾಗುವುದಿಲ್ಲ ಉದ್ದಿಮೆ ನಡೆಸುವವರು ದೇಶದ ರೈತರ ಕೈಯಿಂದ ಅಧಿಕ ಬೆಲೆಗೆ ಉತ್ಪನ್ನಗಳನ್ನು ಖರೀದಿಸಬೇಕಾಗಿಲ್ಲ.
  • ಆಮದು ಮಾಡಲೂ ಬಹುದು. ಇವೆಲ್ಲಾ ಚಕ್ರವ್ಯೂಹಗಳು ಸೃಷ್ಟಿಯಾಗುತ್ತಲೇ ಇರುತ್ತದೆ.

ಏನು ಪರಿಹಾರ:

Farmer engaged in land preparation by machinaries
ಟ್ರಾಕ್ಟರ್ ಉಳುಮೆ ಇತ್ಯಾದಿ ಕೆಲಸಗಳಿಗೆ ತಗಲುವ ಖರ್ಚು ವೆಚ್ಚಗಳೇ ರೈತನ ಆದಾಯವನ್ನು ವ್ಯಯಿಸುತ್ತದೆ.
  • ದೇಶದ ಕೃಷಿಕರು ಈಗ ಬೆಳೆ ಬೆಳೆಸಲು ವ್ಯಯಿಸುವ ಖರ್ಚನ್ನು ಕಡಿಮೆ ಮಾಡುವಂತಾದರೆ ಬಹುಶಃ ದುಪ್ಪಟ್ಟಲ್ಲದಿದ್ದರೂ ಅರ್ಧ ಪಟ್ಟಾದರೂ (50%) ಖರ್ಚು ಉಳಿತಾಯವಾಗಿ ಆದಾಯ ಹೆಚ್ಚಳವಾಗಬಹುದು.
  • ರೈತರು ಅಗತ್ಯವಾಗಿ ಬಳಕೆ ಮಾಡುವ ಕೀಟನಾಶಕ- ರೋಗ ನಾಶಕಗಳ ಮೇಲೆ ಸರಕಾರ 18% ಸರಕು ತೆರಿಗೆಯನ್ನು ವಿಧಿಸಿತ್ತದೆ.
  • ಅದೇ ರೀತಿಯಲ್ಲಿ ಖರೀದಿ ಮಾಡುವ ಯಂತ್ರೋಪಕರಣಗಳ ಮೇಲೆ ಯೂ 18% ತೆರಿಗೆಯನ್ನು ವಿಧಿಸುತ್ತದೆ.
  • ರಸ ಗೊಬ್ಬರಗಳ ಮೇಲೆ 5% ತೆರಿಗೆಯನ್ನು ವಿಧಿಸುತ್ತದೆ.
  • ಪೈಪುಗಳು ಫಿಟ್ಟಿಂಗುಗಳ ಮೇಲೆ 12% ತೆರಿಗೆಯನ್ನು ವಿಧಿಸುತ್ತದೆ.

ಇದೆಲ್ಲಾ ಒಂದೆಡೆಯಾದರೆ  ಈ ಉತ್ಪನ್ನಗಳ ಬೆಲೆಯ ಕಥೆಯೇ ಬೇರೆ. ದಿನದಿಂದ ದಿನಕ್ಕೆ ಇದರ ಬೆಲೆ ಹೆಚ್ಚಳವಾಗುತ್ತಲೇ ಇದೆ. ಕೀಟನಾಶಕ, ಶಿಲೀಂದ್ರ ನಾಶಕ, ರಸಗೊಬ್ಬರ ಮುಂತಾದ ಪ್ರತೀಯೊಂದು ಕೃಷಿ ಒಳಸುರಿಗಳ ಬೆಲೆ ಹೆಚ್ಚುತ್ತಲೇ ಇದೆ. ದೇಶೀಯ ತಯಾರಿಕೆಯ ಕೀಟ ನಾಶಕ ಶಿಲೀಂದ್ರ ನಾಶಕಗಳನ್ನು ಬ್ಯಾನ್ ಮಾಡಿ , ಅದರ ಬದಲಿಗೆ 5-6 ಪಟ್ಟು ಹೆಚ್ಚಿನ ಬೆಲೆಯುಳ್ಳ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ.

  • ಕಳೆದ ಹಲವಾರು ವರ್ಷಗಳಿಂದ ದೇಶದ ರೈತರಿಗೆ ಕೈಗೆಟಕುವ ಬೆಲೆಯಲ್ಲಿ  ಲಭ್ಯವಿರುತ್ತಿದ್ದ ಕೀಟನಾಶಕಗಳು ಈಗ ಯಾವುದೋ ಕಾರಣಗಳ ಮೇಲೆ ನೀಷೇಧಕ್ಕೊಳಪಟ್ಟಿದೆ. ರೈತರ ಜೇಬಿಗೆ ಕತ್ತರಿ ಹಾಕಲಾಗಿದೆ.

ಕೀಟಗಳು ಪ್ರಭಲವೋ – ಕೀಟನಾಶಕ ಕಳಪೆಯೋ?

  • ಈಗಿನ ಹೊಸ ಬೆಳವಣಿಗೆಯೆಂದರೆ  ಕೃಷಿ ರಾಸಾಯನಿಕಗಳಿಗೆ ಕೀಟಗಳು ಬಗ್ಗುತ್ತಿಲ್ಲ.
  • ಸೆಕೆಂಡ್ ಜನರೇಷನ್ ಪೆಸ್ಟಿಸೈಡ್ ಗಳು ಕಳಪೆಯೋ ರೈತನಿಗೆ ತಿಳಿಯುವುದು ಅಸಾದ್ಯವಾಗಿದೆ.
  • ಸೈನಿಕ ಹುಳವನ್ನು ನಿಯಂತ್ರಿಸಲಾಗುತ್ತಿಲ್ಲ.
  • ಜೈವಿಕ ತಂತ್ರಜ್ಞಾನ ಹೆಸರಿನಲ್ಲಿ ಮೋಸ ನಡೆಯುತ್ತಿದೆ.
  • ಡೊಸೇಜ್  ಹೆಚ್ಚಳವಾಗುತ್ತಿದೆ. ಅದಲ್ಲದಿದ್ದರೆ ಮತ್ತೊಂದನ್ನು ಆರಿಸುವ ಸ್ಥಿತಿ. ಎಲ್ಲೆಲ್ಲೂ ಕಳೆಪೆ ( quality of pesticides) , ಮತ್ತು ಮೋಸದ ವ್ಯವಹಾರಗಳೇ ತುಂಬಿದೆ.
  • ಇದರಿಂದ ಅಂತಿಮವಾಗಿ ಕೃಷಿಕನ ಆದಾಯಕ್ಕೆ ಕತ್ತರಿ ಬೀಳುವುದಾಗಿದೆ.

ಇದು ದುರದೃಷ್ಟ:

  • ಸರಕಾರದ ಆಡಳಿತ ವ್ಯವಸ್ಥೆ ರೈತರ ಹಿತವನ್ನು ಗಮನಿಸುವುದಿಲ್ಲ.
  • ಅದರ ಜೊತೆಗೆ ಕೃಷಿ ಸಂಶೋಧಕರೂ ಸಹ ಬಹುರಾಷ್ಟ್ರೀಯ ಕಂಪೆನಿಗಳ  ದಾಸರಾಗುತ್ತಿದ್ದು, ತಮ್ಮ ಶಿಫಾರಸುಗಳನ್ನು ದುಬಾರಿ ಬೆಲೆಯ ಉತ್ಪನ್ನಗಳತ್ತ  ಬದಲಿಸುತ್ತಿದ್ದಾರೆ.
  • ವೈದ್ಯರೂ ಮೆಡಿಕಲ್ ಶಾಪ್ ನವರ ಒಳ ಒಪ್ಪದಂತೆ ತಜ್ಞರು ಮತ್ತು ತಯಾರಕರ ಒಳ ಒಪ್ಪಂದ ( ವಿದೇಶ ಪ್ರವಾಸ, ಪ್ರಾಜೆಕ್ಟ್ ಆಮಿಶಕ್ಕೆ  ) ನಡೆಯುತ್ತಿದೆ.

Agriculture irrigation becoming costly

ಎಂ ಆರ್ ಪಿ ಎಂಬ ಬ್ಲೇಡ್:

  • ಭಾರತದಲ್ಲಿ ಎಂ ಆರ್ ಪಿ ಎಂಬ  ವ್ಯವಸ್ಥೆಗೆ ಯಾವ ಮಾನ ಮರ್ಯಾದೆಯೂ ಇಲ್ಲ.
  • ಒಂದೊಂದು  ಕೃಷಿ ಒಳಸುರಿ ಒಂದೊಂದು ಪ್ರದೇಶದಲ್ಲಿ ಒಂದೊಂದು ದರದಲ್ಲಿ ಮಾರಲ್ಪಡುತ್ತದೆ.
  • ಒಂದು ಉತ್ಪನ್ನವನ್ನು 40% ತನಕ ಕಡಿಮೆ  ಬೆಲೆಗೆ ಮಾರಾಟ ಮಾಡುವವರೂ ಇದ್ದಾರೆ.
  • ಅದನ್ನೇ ಎಂ ಆರ್ ಪಿ ದರಕ್ಕೇ ಮಾರಾಟ ಮಾಡುವವರೂ ಇದ್ದಾರೆ.
  • ಮೌನವಾಗಿ ಕೃಷಿಕರಿಗೆ ಕಳಪೆ ರಸಗೊಬ್ಬರಗಳನ್ನು ಪೂರೈಕೆ ಮಾಡುವುದದು ನಡೆಯುತ್ತಿರುವಂತೆ ಕಾಣುತ್ತಿದೆ.
  • ಆಮದು ಉತ್ಪನ್ನವಾದ ವಿಶೇಷ ರಸಗೊಬ್ಬರಗಳನ್ನು ಮಾರುಕಟ್ಟೆಗೆ ಪರಿಚಯಿಸಿ ರೈತರಿಂದ ಹೆಚ್ಚಿನ ಹಣ ಸುಲಿಗೆಗೆಯ ಹುನ್ನಾರ ಯಾರಿಗೂ ತಿಳಿಯದಂತೆ ನಡೆಯುತ್ತಿದೆ.

ಇದನ್ನು ಕೊಟ್ಟರೂ ಆದಾಯ ಹೆಚ್ಚುತ್ತದೆ:

  • ಕೃಷಿ ಎಂದ ಮಾತ್ರಕ್ಕೆ ಅದರಲ್ಲಿ ಬದುಕುವವರು ಕೃಷಿಕರು ಮಾತ್ರವಲ್ಲ. ಅವರಿಗಿಂತ ಹೆಚ್ಚು ಜನ ಅದನ್ನು ಅವಲಂಭಿಸಿ ಬದುಕುತ್ತಾರೆ.
  • ಇದು ದೇಶದ ಆರ್ಥ ವ್ಯವಸ್ಥೆಯ ಸುಸ್ಥಿರತೆಗೆ ಭದ್ರ ಬುನಾದಿ. ಇದನ್ನು ಅಡಳಿತ ಶಾಹಿಗಳು, ನೀತಿ ನಿಯಮಾವಳಿ ರೂಪಕರು ಅರಿಯಬೇಕು.

ಒಂದೆಕ್ರೆ ಹೊಲ ವಾರ್ಷಿಕ 100-150 ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುವ ಕ್ಷೇತ್ರವಾಗಿರುವುದು ಸತ್ಯವಾಗಿರುವಾಗ, ಈ ಕ್ಷೇತ್ರಕ್ಕೆ ಉದ್ಯೋಗ ಖಾತ್ರಿಯ  (Mahatma Gandhi National Rural Employment Guarantee)  ಪ್ರಥಮ ಆದ್ಯತೆಯನ್ನು ನೀಡುವ ಬದಲು ಅದನ್ನು ದುರ್ವ್ಯಯ ಮಾಡುವ ನಮ್ಮ ಸರಕಾರಕ್ಕೆ ಏನೆನ್ನಬೇಕೋ ತಿಳಿಯುವುದಿಲ್ಲ.

  • ಸರಕಾರ ನಿಜವಾಗಿ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಬಯಕೆ ಹೊಂದಿದೆಯೇ ಆದರೆ ಪ್ರತೀ ರೈತನಿಗೂ ಅವನ ಹಿಡುವಳಿಗೆ ಅನುಗುಣವಾಗಿ ಉದ್ಯೋಗ ಖಾತ್ರಿಯ ಹಣವನ್ನು ನೇರ ವರ್ಗಾವಣೆ ಮೂಲಕ ಹಂಚಿದರೆ  ರೈತರ ಆದಾಯದಲ್ಲಿ 50% ಉಳಿತಾಯವಾಗಲಿದೆ.
  • ಸರಕಾರ ಯಾವ ಜಾದೂ ಮಾಡಬೇಕಾಗಿಲ್ಲ. ಖರ್ಚನ್ನು ಕಡಿಮೆ ಮಾಡಿಸಿದರೆ  ಸ್ವಯಂ ಅಗಿ ಆದಾಯ ಹೆಚ್ಚಳವಾಗುತ್ತದೆ.
  • ಆದರೆ ಯಾರ ಕಿಸೆಯೂ ಭರ್ತಿಯಾಗುವುದಿಲ್ಲ.

ಸರಕಾರಕ್ಕೆ  ಕೃಷಿಕರ ಆದಾಅವನ್ನು ಹೆಚ್ಚಿಸುವ ನೈಜ ಕಳಕಳಿ ಇದ್ದರೆ ಅದಕ್ಕೆ ಅಗತ್ಯವಾಗುವ ಮೇಲೆ ತಿಳಿಸಲಾದ ಮೂಲಭೂತ ಸಂಗತಿಗಳನ್ನು ಅನುಷ್ಟಾನಕ್ಕೆ ತರಬೇಕು. ರೈತರ ಖರ್ಚು ಕಡಿಮೆಯಾಯಿತೆಂದರೆ ಅವನ ಆದಾಯ ಹೆಚ್ಚಳವಾಗುತ್ತದೆ. ಸರಕರಾದ ಜವಾಬ್ಧಾರಿಯೂ ಕಡಿಮೆಯಾಗುತ್ತದೆ
ಈ ವಿಚಾರ ನಿಮಗೆ ಒಪ್ಪಿಗೆಯಾದರೆ ಅದನ್ನು ಸಂಬಂಧಿಸಿದವರಿಗೆ ಸಂದೇಶ ತಲುಪುವ ತನಕ ಹಂಚಿಕೊಳ್ಳಿ.
End of the article:——————-
search words: farmers income# agriculture policy# Dubbling of farmers income# Agriculture inputs# employment in agriculture sector# pesticides# fertilizers# MRP of agriculture inputs# inferior qualities of agro chemicals#exploitation of farmers# Government policies on agriculture development#
 

Leave a Reply

Your email address will not be published. Required fields are marked *

error: Content is protected !!