
ಬಿದಿರು ಬೆಳೆದರೆ ಸಸಿಯೊಂದಕ್ಕೆ ಸರಕಾರ ರೂ. 120 ಕೊಡುತ್ತದೆ.
ಬಿದಿರು ಬೆಳೆಸಿ, ಭಾರೀ ಆದಾಯಗಳಿಸಿ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿರುವಾಗ ರೈತರಿಗೆ ಈ ವಿಚಾರದಲ್ಲಿ ಆಸಕ್ತಿ ಬರುವುದು ಸಹಜ. ಭಾರತ ಸರಕಾರ ಬಿದಿರು ಅಭಿವೃದಿಗೆ ಪ್ರತ್ಯೇಕ ಮಿಷನ್ ಸ್ಥಾಪಿಸಿದೆ. ಪ್ಲಾಸ್ಟಿಕ್ ಬದಲಿಗೆ ಬಿದಿರು ಬಳಕೆಗೆ ಬರಬೇಕು. ರೈತರಿಗೆ ಆದಾಯ ಸಿಗಬೇಕು. ಬಿದಿರಿನ ಮೂಲಕ ನೆಲ ಜಲ ಸಂರಕ್ಷಣೆಯೂ ಆಗಬೇಕು ಎಂಬುದು ಈ ಯೋಜನೆಯ ಉದ್ದೇಶ. ಆದರೆ ಬಿದಿರು ಕೃಷಿಗೂ ಒಂದು ಇತಿ ಮಿತಿ ಇದೆ. ಒಂದು ಕಾಲದಲ್ಲಿ ಬಿದಿರಿನ ಬಳಕೆ ಅಪರಿಮಿತವಾಗಿತ್ತು. ಬಿದಿರನ್ನು ಬಳಸಿ ಮನೆಯ ಚಾವಣಿಯನ್ನೂ ಮಾಡುತ್ತಿದ್ದರು….