ಅಮಟೆ- ಇದಕ್ಕೆ ಭಾರೀ ಔಷಧೀಯ ಗುಣ ಇದೆ.
ನಮ್ಮ ಹಿರಿಯರ ಆಹಾರಾಭ್ಯಾಸಗಳಲ್ಲಿ ಬಹಳ ಶಿಸ್ತು, ಪೌಷ್ಠಿಕತೆ , ಔಷಧೀಯ ಮಹತ್ವ ಇತ್ತು. ಋತುಮಾನ ಆಧಾರಿತ ಆಹಾರವಸ್ತುಗಳನ್ನೇ ಬಳಸುವುದು ಅವರ ಕ್ರಮ. ಇಂತಹ ಆಹಾರಗಳಲ್ಲಿ ಕೆಸು, ಅಮಟೆ, ಮಾವು, ಕುಡಿ,ಸೊಪ್ಪು ಮುಂತಾದವು ಸೇರಿವೆ. ಹಿರಿಯರು ಉಚಿತವಾಗಿ ಲಭ್ಯವಿರುತ್ತಿದ್ದ ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಅದು ಉಚಿತವಾಗಿದ್ದರೂ ಆರೋಗ್ಯಕ್ಕೆ ಉತ್ತಮವಾಗಿತ್ತು. ಈಗ ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತುಗಳಲ್ಲಿ ಆರೋಗ್ಯವನ್ನು ಗಮನಿಸುವುದೇ ಇಲ್ಲ. ಹಿಂದೆ ಮಳೆಗಾಲವೆಂಬ ಕಷ್ಟದ ಸಮಯದಲ್ಲಿ ಅಡುಗೆಗೆ ಅಗ್ಗದಲ್ಲಿ ದೊರೆಯುವ ಹುಳಿ ಕಾಯಿ ಇದಾಗಿತ್ತು. ಏನಿದು…