Areca leaf for cow fodder

ಜಾನುವಾರುಗಳಿಗೆ ಅಡಿಕೆ ಹಾಳೆ ಉತ್ತಮ ಮೇವು ಯಾಕೆ?.

ಜಾನುವಾರುಗಳ ಹೊಟ್ಟೆ ತುಂಬಿಸಲು ಗಟ್ಟಿ ಮೇವು ಬೇಕು. ಅದಕ್ಕೆ ಅಡಿಕೆ ಮರದ ಹಸಿ ಹಾಳೆ ಉತ್ಯುತ್ತಮ. ಜಾನುವಾರು ಸಾಕುವವರು ಪಶುಗಳಿಗೆ ಹಸಿ ಹುಲ್ಲು ಹಾಕುತ್ತೇವೆ. ಆದರೆ ಈ ಹಸಿ ಹುಲ್ಲಿನಲ್ಲಿ  ನಾರಿನ ಅಂಶ (Fiber) ಮತ್ತು ಘನ ಅಂಶ(Solids) ಕಡಿಮೆ. ಆದರೆ ಅಡಿಕೆ ಹಾಳೆಯಂತಹ ಕೃಷಿ ತ್ಯಾಜ್ಯಗಳಲ್ಲಿ ಈ ಅಂಶ ಉತ್ತಮವಾಗಿದೆ. ಇದನ್ನು ಹಸಿ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿ ಕೊಟ್ಟರೂ ಹೊಟ್ಟೆ ತುಂಬುತ್ತದೆ. ದೇಹದ ಚಯಾಪಚಯ ಕ್ರಿಯೆಗೂ ಇದು ಸಹಕಾರಿಯಾಗುತ್ತದೆ. ಮಲೆನಾಡು, ಅರೆಮಲೆನಾಡು, ಹಾಗೂ ಕರಾವಳಿ ಪ್ರದೇಶದಲ್ಲಿ…

Read more

ತುಂಟ ಹಸುಗಳನ್ನು ಸಾಧು ಮಾಡುವ ಕೆಲವು ವಿಧಾನಗಳು.

ಕೆಲವು ನಾಟಿ ಹಸುಗಳು ತುಂಟ ಸ್ವಭಾವದವುಗಳಾಗಿರುತ್ತವೆ. ಹಾಲು ಕರೆಯುವಾಗ ಹಿಂದೆ ಹೋದರೆ ಕಾಲಿನಿಂದ ಒದೆಯುವುದು, ಹಾಯುವುದು ಹಾಗೆಯೇ ಹುಚ್ಚುಕಟ್ಟುವುದು ಮಾಡುವುದು ಸಾಮಾನ್ಯ. ಇದನ್ನು  ಸಾಧು ( ಹದಕ್ಕೆ) ತರಲು ಕೆಲವು ಉಪಾಯಗಳನ್ನು ಅನುಸರಿಸಬೇಕು. ಮನೆ ಬಳಕೆಯ ಹಾಲಿಗೆ ಹಸು ಸಾಕುವವರಿಗೆ ನಾಟಿ ಅಥವಾ ನಾಟಿಯಲ್ಲಿ ಮಿಶ್ರ ತಳಿಯ ಹಸುಗಳು ಉತ್ತಮ. ಇವುಗಳನ್ನು ಸಾಕುವುದು ಸುಲಭ. ರೋಗ ರುಜಿನಗಳಿಲ್ಲ. ಕಳೆ ಗಿಡಗಳಿಂದಾದಿಯಾಗಿ ಬಹುತೇಕ ಮೇವನ್ನು ತಿನ್ನುತ್ತದೆ.  ಅಧಿಕ ಆಹಾರ ಬಯಸದ ಕಾರಣ ಸುಮಾರು 7-8  ಕರು ಹಾಕುತ್ತದೆ. ಕೆಲವೊಂದು…

Read more
ಗ್ರಾಮೀಣ ಪಶು ಸಂಗೋಪನೆ

ಪಶು ಸಂಗೋಪನೆಯಿಂದ -ಆರೋಗ್ಯ ಮತ್ತು ಗೊಬ್ಬರದ ಲಾಭ.

ಹಿಂದಿನಿಂದಲೂ  ಕೃಷಿ ಮಾಡುವವರು  ಹಸು ಸಾಕಾಣಿಕೆ ಮಾಡುತ್ತಿದ್ದರು. ಈಗಲೂ ಹೆಚ್ಚಿನ ಜನ ಕೃಷಿಗೆ ಗೊಬ್ಬರ ಬೇಕು ಎಂಬ ಉದ್ದೇಶಕ್ಕಾಗಿ ಹಸು ಸಕಾಣೆ ಮಾಡುತ್ತಾರೆ. ಕೆಲವು ಜನ ಹಸು ಸಾಕಣೆ ಇಲ್ಲದೆ ಕೃಷಿ ಮಾಡಬಹುದು ಎನ್ನುವ ವಾದದವರೂ ಇದ್ದಾರೆ. ಮಣ್ಣಿನ ಫಲವತ್ತೆತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಅಗತ್ಯ. ಮಿತವ್ಯಯದಲ್ಲಿ ಸಾವಯವ ಗೊಬ್ಬರ ಆಗುವುದಿದ್ದರೆ ಅದು ಹಸುವಿನ ತ್ಯಾಜ್ಯಗಳಿಂದ ಮಾತ್ರ. ಅಲ್ಲದೆ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರಕ್ಕೂ ಹಸು ಸಾಕಾಣಿಕೆ ಅಗತ್ಯ. ಒಂದೇ ದಿನದಲ್ಲಿ ಗೊಬ್ಬರ ಆಗಬೇಕೇ,…

Read more
error: Content is protected !!