ಅಡಿಕೆ ಬೆಳೆಯ ಭವಿಷ್ಯದ ಸ್ಥಿತಿ ಏನಾಗಬಹುದು?
ಅಡಿಕೆ ಬೆಳೆ ವಿಸ್ತರಣೆ ಆಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಅಡಿಕೆಗೆ ಬೆಲೆ ಇಲ್ಲದೆ ರೈತ ಕಂಗಾಲಾಗಬೇಕಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. ಆದರೆ ಅಂತದ್ದೇನೂ ಆಗುವುದಿಲ್ಲ.ಅಡಿಕೆ ಬೆಳೆ ಪ್ರದೇಶ ಹೆಚ್ಚಾದರೂ ಅದಕ್ಕನುಗುಣವಾಗಿ ಉತ್ಪಾದನೆ ಹೆಚ್ಚಳವಾಗುವುದಿಲ್ಲ. ಯಾಕೆ ಗೊತ್ತೇ? ಹಿಂದೆ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಇದ್ದುದು ಕಣಿವೆಯಂತಹ ತಗ್ಗು ಭಾಗಗಳಲ್ಲಿ ಮಾತ್ರ. ಆಗ ಖುಷ್ಕಿ ಭೂಮಿಯಲ್ಲಿ ಅಡಿಕೆ ಬೆಳೆದರೆ ಜನ ಅದೆಲ್ಲಾ ಆಗುವ ಹೋಗವಂತದ್ದೇ ಎಂದು ಹೇಳುತ್ತಿದ್ದರು. ಪರಿಸ್ಥಿತಿ ಬದಲಾವಣೆ ಆಯಿತು. ಒಂದೆಡೆ ಭತ್ತದ ಗದ್ದೆಗಳೂ ಅಡಿಕೆ…