ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ.
ಚಾಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಹಿಮ್ಮುಖವಾಗಿದೆ ಎಂಬ ಸುದ್ದಿ. ಹಾಗೆಂದು ದೊಡ್ಡ ಇಳಿಕೆ ಆಗಿಲ್ಲ. ದರ ಮೇಲೆ ಏರಲಿಲ್ಲ ಎಂದಷ್ಟೇ ಹೇಳಬಹುದು. ಕ್ಯಾಂಪ್ಕೋ ತನ್ನ ಸೂಚಿತ ಮಾಮೂಲಿ ದರವನ್ನೇ ಮುಂದುವರಿಸಿದೆ. ಆದರೆ ಗುಣಮಟ್ಟದ ಹೆಸರಿನಲ್ಲಿ ಅಡಿಕೆ ಖರೀದಿಯಲ್ಲಿ ಸ್ವಲ್ಪ ಹಿಮ್ಮುಖ ಅಷ್ಟೇ. ಒಳ್ಳೆಯ ಅಡಿಕೆಗೆ ಖಾಸಗಿಯವರು 48,000-48500 ತನಕ ಖರೀದಿ ಮಾಡುತ್ತಿದ್ದಾರೆ. ಪರಿಸ್ಥಿತಿ ಪಿತೃ ಪಕ್ಷ ಮುಗಿಯುವ ತನಕ ಹೀಗೇ ಮುಂದುವರಿಯಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ. ಅಡಿಕೆಗೆ ಬೇಡಿಕೆ ಇದೆ. ಬೆಲೆಯೂ ಬರುತ್ತದೆ….