ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ.

ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ

ಚಾಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಹಿಮ್ಮುಖವಾಗಿದೆ ಎಂಬ ಸುದ್ದಿ. ಹಾಗೆಂದು ದೊಡ್ಡ ಇಳಿಕೆ ಆಗಿಲ್ಲ. ದರ ಮೇಲೆ ಏರಲಿಲ್ಲ ಎಂದಷ್ಟೇ ಹೇಳಬಹುದು. ಕ್ಯಾಂಪ್ಕೋ ತನ್ನ ಸೂಚಿತ ಮಾಮೂಲಿ ದರವನ್ನೇ ಮುಂದುವರಿಸಿದೆ. ಆದರೆ ಗುಣಮಟ್ಟದ ಹೆಸರಿನಲ್ಲಿ ಅಡಿಕೆ ಖರೀದಿಯಲ್ಲಿ  ಸ್ವಲ್ಪ ಹಿಮ್ಮುಖ ಅಷ್ಟೇ. ಒಳ್ಳೆಯ ಅಡಿಕೆಗೆ ಖಾಸಗಿಯವರು 48,000-48500  ತನಕ ಖರೀದಿ ಮಾಡುತ್ತಿದ್ದಾರೆ. ಪರಿಸ್ಥಿತಿ  ಪಿತೃ ಪಕ್ಷ ಮುಗಿಯುವ ತನಕ ಹೀಗೇ ಮುಂದುವರಿಯಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ. ಅಡಿಕೆಗೆ ಬೇಡಿಕೆ ಇದೆ. ಬೆಲೆಯೂ ಬರುತ್ತದೆ. ಕೆಂಪು ರಾಶಿ ಆಡಿಕೆಗೆ ಯಾವ ಆತಂಕವೂ ಇಲ್ಲ.

ಅಡಿಕೆ ದಾರಣೆ ಚೌತಿ ಸುಮಾರಿಗೆ ಹೊಸತಕ್ಕೆ 500 ರೂ. ಅಗುವ ಮುನ್ಸೂಚನೆ ಇತ್ತಾದರೂ ಆ ಮಟ್ಟಕ್ಕೆ ಬೆಲೆ ಏರಿಕೆ ಆಗಲಿಲ್ಲ. ಚೌತಿ ಕಳೆಯಿತು, ಇನ್ನು 8 ದಿನಗಳಲ್ಲಿ ಪಿತೃಪಕ್ಷ ಪ್ರಾರಂಭವಾಗುತ್ತದೆ. 15 ದಿನಗಳಲ್ಲಿ ನವರಾತ್ರೆ ಪ್ರಾರಂಭ.  ನವರಾತ್ರೆ ಉತ್ತರ ಭಾರತದ ಅತೀ ದೊಡ್ಡ ಹಬ್ಬ. ಈ ಸಮಯದಲ್ಲಿ ಅಡಿಕೆಗೆ ಬೇಡಿಕೆ ಬಂದೇ ಬರುತ್ತದೆ. ಹಾಗಾದ ಕಾರಣ ಈಗ ದರ ಇಳಿಕೆ ಆದದ್ದು  ತಾತ್ಕಾಲಿಕ. ಸಧ್ಯವೇ ದರ ಮತ್ತೆ ಚೇತರಿಕೆ ಆಗಲಿದೆ ಎಂಬ ಭರವಸೆ ಇದೆ. ಗುಜರಾತ್ ನಲ್ಲಿ ಚೌತಿ ನಂತರ ಪಿತೃಪಕ್ಷ ಮುಗಿಯುವ ತನಕ ನಮ್ಮಲ್ಲಿ ಆಷಾಢ ಇದ್ದಂತೆ (ಸಮೂರ್ಥ) ಶುಭ ಕಾರ್ಯಗಳು ಕಡಿಮೆ. ಹಾಗಾಗಿ ಭಾರೀ ಮುತುವರ್ಜಿಯ ಖರೀದಿ ಇರುವುದಿಲ್ಲ. ಇದು ಮಾರುಕಟ್ಟೆಯ ಮೇಲೆ ಅಂತಹ ಪರಿಣಾಮವನ್ನು ಉಂಟು ಮಾಡುವುದಿಲ್ಲವಾದರೂ ದರ ಏರಿಕೆ ಆಗುವುದಿಲ್ಲ.

ಕೆಂಪಡಿಕೆ ಮಾರುಕಟ್ಟೆ:

 • ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ಪ ಕಂಪನ ಉಂಟಾದರೂ ಕೆಂಪಡಿಕೆಯ ಮಾರುಕಟ್ಟೆಯಲ್ಲಿ ಹಾಗೇನೂ ಆಗಲಿಲ್ಲ.
 • ಸರಾಸರಿ ದರ 53500 ತನಕ ಖರೀದಿ ನಡೆಯುತ್ತಿದೆ. ಏರಿಕೆ ಇಲ್ಲ. ಇಳಿಕೆಯೂ ಇಲ್ಲ.
 • ಶುಕ್ರವಾರ ಹೊಸನಗರ ಮಾರುಕಟ್ಟೆಯಲ್ಲಿ ಸರಾಸರಿ 54300 ರೂ. ಮತ್ತು ಗರಿಷ್ಟ 55000 ತನಕ ಇತ್ತು.
 • ಈ ದರಕ್ಕೆ  ಗರಿಷ್ಟ ಪ್ರಮಾಣದಲ್ಲಿ 6893 ಚೀಲ ಅಡಿಕೆ ಮಾರಾಟವಾಗಿದೆ. 
 • ಹಾಗಾಗಿ ಈ ವಾರದಲ್ಲಿ ಕೆಂಪಡಿಕೆ  ಸ್ವಲ್ಪ ಏರಿಕೆ ಆಗಬಹುದು ಎಂಬ  ನಂಬಿಕೆ ಇದೆ. 
 • ತೀರ್ಥಹಳ್ಳಿಯಲ್ಲೂ  ಸರಾಸರಿ ದರ ಮತ್ತು ಗರಿಷ್ಟ ದರಕ್ಕೆ  ಬಹಳ ವ್ಯತ್ಯಾಸ ಇಲ್ಲದೆ ಸರಾಸರಿ 54190 ಮತ್ತು ಗರಿಷ್ಟ 54660 ರೂ. ಇತ್ತು.
 • ಇಲ್ಲಿ ಅಡಿಕೆ ಮಾರುಕಟ್ಟೆಗ ಬಂದ ಪ್ರಮಾಣ ತುಂಬಾ ಕಡಿಮೆ ಇತ್ತು.
 • ಆಗಸ್ಟ್ ತಿಂಗಳ ಮೊದಲ ದಿನ, ಚೌತಿ ಹಬ್ಬದ ಸಂಭ್ರಮದಲ್ಲಿ ಜನ ಇರುವ ಕಾರಣ ಇಂದಿನ ಮಾರುಕಟ್ಟೆ ಧಾರಣೆ  ಅಷ್ಟಕ್ಕಷ್ಟೇ.
 • ಇಂದು ಏರಿಕೆಯೂ ಆಗದು. ಇಳಿಕೆಯೂ ಆಗದು.
 • ಶಿವಮೊಗ್ಗದಲ್ಲಿ ಮಾತ್ರ ಇಂದು ಮಾರುಕಟ್ಟೆ ಟೆಂಡರ್ ಆಗಿದ್ದು, ಅತೀ ಕಡಿಮೆ ಪ್ರಮಾಣದಲ್ಲಿ ಅಡಿಕೆ ಮಾರಾಟಕ್ಕೆ ಬಂದಿದೆ.
ಕೆಂಪಡಿಕೆ ರಾಶಿ

ಬುಧವಾರದ ನಂತರ ನಡೇಯುವ ವ್ಯಾಪಾರ ದರದ ನಿಖರ ಚಿತ್ರಣವನ್ನು ನೀಡಬಹುದು. ಕೆಂಪಡಿಕೆ ಬಹಳ ಕಡಿಮೆ ಇದೆ. ಹಾಗೆಂದು ಈ ತಿಂಗಳು ದರ ಇಳಿಕೆ ಆಗುವ ಸಾಧ್ಯತೆ ಇಲ್ಲವಾದರೂ ಏರಿಕೆಯೂ ಆಗುವ ಸಾಧ್ಯತೆ ಇಲ್ಲ. ಉತ್ತರ ಭಾರತದ ಬೇಡಿಕೆ ಹೊಂದಿ ಇಲ್ಲಿ ದರ ಏರಿಳಿತ ಉಂಟಾಗುತ್ತದೆ.

 • ಹಿಂದೆ ಅಡಿಕೆ ದರ ಇಂತಹ ಸಮಯಕ್ಕೆ ಏರಿಕೆಯಾಗುತ್ತದೆ, ಇಂತಹ ಸಮಯಕ್ಕೆ ಇಳಿಕೆಯಾಗುತ್ತದೆ ಎಂದು ಕೆಲವು ಅಂದಾಜುಗಳಿತ್ತು.
 • ಈಗ ಕಾಲ ಬದಲಾಗಿದೆ. ನಮ್ಮ ಅಂದಾಜುಗಳಿಗೆ ಸರಿಯಾಗಿ ದರ ಏರಿಳಿತ ಆಗುವುದೇ ಇಲ್ಲ.
 • ತದ್ವಿರುದ್ಧವಾಗಿಯೇ ಆಗುವುದು.ಶೇರು ಪೇಟೆಯ ನಡೆಯನ್ನು ಯಾರಿಗೂ ಕರಾರುವಕ್ಕಾಗಿ ತಿಳಿಯಲು ಸಾಧ್ಯವಿಲ್ಲವೋ ಹಾಗೆಯೇ ಅಡಿಕೆ ಮಾರುಕಟ್ಟೆಯೂ ಸಹ. ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕೆಂದುಕೇಳುವಾಗ ದರ ತೇಜಿಯಾಗುತ್ತದೆ.
 • ನಾವು ಕೇಳಿದಾಗ ದರ ಕುಸಿಯುತ್ತದೆ. ಸರಾಗವಾಗಿ ಕಳುಹಿಸಿದ ಮಾಲಿಗೆ ಹಣ ಬರುತ್ತಿದ್ದರೆ ದರ ಸ್ಥಿರವಾಗಿರುತ್ತದೆ. 
 • ತಡವಾಗುವುದು, ಚರ್ಚೆಗಳು ಏರ್ಪಟ್ಟರೆ ದರ ಕೆಳಕ್ಕೆ ಇಳಿಯುತ್ತದೆ.
 • ಬಹುತೇಕ ಎಲ್ಲಾ ವ್ಯಾಪಾರಿಗಳ  ಅಡಿಕೆಯೂ  ಈಗ ಮುಂಗಡ ಪಾವತಿಸಿದ ನಂತರ ಮಾರಾಟವಾಗುವ ಸ್ಥಿತಿ ಇಲ್ಲ.
 • ಕಳುಹಿಸಿದ ನಂತರ ಅದಕ್ಕೆ ಪಾವತಿ ಬರುತ್ತದೆ. ಸ್ವಲ್ಪ 50% ಮುಂಗಡ ಸಿಗಬಹುದು.
 • ಉಳಿದದ್ದು ನಂತರವೇ ಸಿಗುವುದು. ಅಡಿಕೆ ಮಾರುಕಟ್ಟೆಯಲ್ಲಿ  50% ಕ್ಕೂ ಹೆಚ್ಚು ತೆರಿಗೆ ತಪ್ಪಿಸಿ ವ್ಯವಹಾರ ನಡೆಯುವುದು ಮಾಮೂಲಿ ವಿಷಯ.
 • ಈ ವ್ಯವಹಾರದ ತಂಟೆಗೆ ಯಾರೇ ಹೋದರೂ ಅಡಿಕೆಗೆ ಬೇಡಿಕೆ ಕಡಿಮೆಯಾಗುತ್ತದೆ.
 • ಬೆಲೆ ಕುಸಿಯುತ್ತದೆ. ಅಡಿಕೆ ಬದಲಿಗೆ ಹುಅಸೆ ಬೀಜ ಹಾಕಿದರೂ ಗುಟ್ಕಾ ತಯಾರಾಗುತ್ತದೆ. 
 • ಈ ವಿಷಯ ಗೊತ್ತಿದ್ದೇ ಇದರ ತಂಟೆಗೆ ಯಾರೂ ಹೋಗುವುದಿಲ್ಲ.

ಚಾಲಿ ಮಾರುಕಟ್ಟೆ:

 • ಚಾಲಿ ಕಳೆದ ವಾರ ಏರಿಕೆ ಕಂಡಿರುವುದು ಉತ್ತರ ಭಾರತದ ಬೇಡಿಕೆಯಿಂದಾಗಿ.
 • ಈಗ ಬೇಡಿಕೆ ಇಲ್ಲದಿಲ್ಲ. ಇಲ್ಲಿಯೂ ಹಬ್ಬ ಇತ್ಯಾದಿ ಇರುವ ಕಾರಣ ಯಾರೂ ಅಡಿಕೆ ಮಾರಾಟಕ್ಕೂ ಮುಂದಾಗುತ್ತಿಲ್ಲ.
 • ಹಾಗಾಗಿ ದರ  ಸ್ಥಿರವಾಗಿದೆ. ಮೊನ್ನೆ ಏರಿಕೆ ಆದಾಗಲೂ ಮಾರುಕಟ್ಟೆಗೆ ಬಂದ ಅಡಿಕೆಯ ಪ್ರಮಾಣ ಅಷ್ಟಕ್ಕಷ್ಟೇ.
 • ಒಡೆದ ಪಟೋರಾ ಅಡಿಕೆ, ಉಳ್ಳಿಗಡ್ಡೆ, ಕರಿಗೋಟು ಹೊರತಾಗಿ ಉತ್ತಮ ಅಡಿಕೆ ಬಂದದ್ದು ತುಂಬಾ  ಕಡಿಮೆ.
 • ದಾಸ್ತಾನು ಇಟ್ಟವರು ತಮ್ಮ ಸ್ಟಾಕನ್ನು ಸ್ವಲ್ಪ ಖಾಲಿ ಮಾಡಿಕೊಂಡಿದ್ದಾರೆ.
 • ಈಗ ಖರೀದಿಸಿದ ಅಡಿಕೆಯನ್ನು ಸ್ವಲ್ಪ ಹೆಚ್ಚಿನ ದರಕ್ಕೆ ಮಾರಾಟ ಮಾಡಲೇಬೇಕಾಗಿರುವ ಕಾರಣ ದರ ಸ್ವಲ್ಪ ಸಮಯ ಹೀಗೇ ಮುಂದುವರಿದು, ಮತ್ತೆ ಏರಿಕೆ ಕಾಣಲಿದೆ.
 • ಕೆಲವು ಮೂಲಗಳ ಪ್ರಕಾರ  ಅಕ್ಟೋಬರ್ ಸುಮಾರಿಗೆ 500 ಆಗುವ ಸಾಧ್ಯತೆ ಇದೆ. 
 • ಅದರ ನಂತರ ಬಹಳ ಸಮಯದ ತನಕ  ಅದೇ ದರ ಮುಂದುವರಿದು, ಸ್ಥಿರತೆ ಉಂಟಾಗಲಿದೆ ಎನ್ನುತ್ತಾರೆ.

ಚಾಲಿ ದರ  ಎಲ್ಲಿ ಎಷ್ಟು:

 • ಬಂಟ್ವಾಳ- ಹಳತು:  46000, 56000, 51000
 • ಕರಿಕೋಕಾ: 12500, 25000, 22500
 • ಹೊಸತು: 27500, 47500, 44500
 • ಬೆಳ್ತಂಗಡಿ -ಹೊಸತು: 28000, 48000, 36000
 • ಕಾರ್ಕಳ- ಹಳೆಯದು: 46000, 56000, 55000
 • ಹೊಸತು: 40000, 47500, 43000
 • ಕುಮಟಾ- ಹಳೇ ಚಾಲಿ: 43000, 48019, 47379
 • ಹೊಸ ಚಾಲಿ: 38099, 42599, 42119
 • ಕುಂದಾಪುರ- ಹೊಸತು:, 40000, 47500, 47000
 • ಹಳತು: 42500, 56500, 49000
 • ಪುತ್ತೂರು ಕರಿಕೋಕಾ: 11000, 26000, 18500
 • ಹಳತು: 34500, 47500, 41000
 • ಹೊಸತು: 34500, 47500, 41000
 • ಸಾಗರ ಚಾಲಿ:, 34119, 41126, 40599
 • ಯಲ್ಲಾಪುರ- ಚಾಲಿ: 37819, 43390, 41899
 • ಹೊಸನಗರ ಚಾಲಿ: 37099, 39099, 38299
 • ಸಿರ್ಸಿ- ಚಾಲಿ: 39519, 43808, 41790
 • ಸಿದ್ದಾಪುರ ಚಾಲಿ: 38619, 42939, 42699
 • ಕರಿಕೋಕಾ: 25000, 26000, 25500
 • ಉಳ್ಲಿ ಗಡ್ದೆ: 22,000-26,000
 • ಫಟೋರಾ; 35,000-39,000

ಕೆಂಪಡಿಕೆ ಧಾರಣೆ ಎಲ್ಲಿ ಎಷ್ಟು:

 • ಬಧ್ರಾವತಿ- ರಾಶಿ: 45199, 54601, 51416
 • ಚೆನ್ನಗಿರಿ- ರಾಶಿ: 49099, 53799, 52509
 • ದಾವಣಗೆರೆ- ರಾಶಿ:45082, 54519, 53418
 • ಹೊಳಲ್ಕೆರೆ- ರಾಶಿ: 51099, 52459, 52215
 • ಹೊಸನಗರ- ಕೆಂಪುಗೋಟು: 37311, 40169, 39899
 • ರಾಶಿ: 6893, 48609, 55091, 54369
 • ಕುಮಟಾ- ಚಿಪ್ಪು: 24569, 32809, 32029
 • ಸಾಗರ ರಾಶಿ: 34269, 54009, 53499
 • ಕೋಕಾ 14989, 37699, 36099
 • ಕೆಂಪುಗೋಟು: 28099, 39459, 38599
 • ಸಿಪ್ಪೆಗೋಟು: 6269, 23109, 22200
 • ಶಿವಮೊಗ್ಗ -ರಾಶಿ: 48199, 54559, 53269
 • ಸರಕು: 56109, 79100, 72600
 • ಬೆಟ್ಟೆ: 50099, 55369, 54419
 • ಗೊರಬಲು, 18752, 39009, 38159
 • ಸಿದ್ದಾಪುರ- ಬಿಳೇ ಗೋಟು: 28009, 34589, 33989
 • ಕೋಕಾ: 26199, 34689, 33699
 • ಕೆಂಪುಗೋಟು, 31911, 33389, 31911
 • ರಾಶಿ: 49599, 52309, 51609
 • ತಟ್ಟೆ ಬೆಟ್ಟೆ: 44109, 49889, 46699
 • ಸಿರಾ ಇತರ: 9000, 50000, 47797
 • ಸಿರ್ಸಿ- ಬೆಟ್ಟೆ 41209, 47518, 44327
 • ಬಿಳೇಗೋಟು: 28739, 35656, 32911
 • ರಾಶಿ: 48116, 51119, 49921
 • ತೀರ್ಥಹಳ್ಳಿ: 49019, 56139, 54899
 • ಇಡಿ:, 42199, 54399, 53899
 • ಗೊರಬಲು: 30099, 42019, 39869
 • ರಾಶಿ: 38166, 54669, 54119
 • ಸರಕು: 53099, 81060, 72099
 • ತುಮಕೂರು -ರಾಶಿ:, 50200, 53800, 51500
 • ಯಲ್ಲಾಪುರ -ಅಪಿ:, 60008, 60008, 60008
 • ಬಿಳೇಗೋಟು: 28212, 34373, 32799
 • ಕೋಕಾ:  23399, 32699, 27599
 • ಕೆಂಪುಗೋಟು: 35719, 35719, 35719
 • ರಾಶಿ: 49899, 55808, 52889
 • ತಟ್ಟೆ ಬೆಟ್ಟೆ: 37226, 48739, 44299

ತೀರ್ಥಹಳ್ಳಿಯಲ್ಲಿ ಭಾನುವಾರ ಕೇವಲ 28 ಚೀಲ ಮಾತ್ರ ಮಾರಾಟಕ್ಕೆ ಬಂದಿದೆ.  ಯಲ್ಲಾಪುರದಲ್ಲಿ 29 ಚೀಲ, ಸಿರ್ಸಿಯಲ್ಲಿ 28 ಚೀಲ, ಸಿದ್ದಾಪುರದಲ್ಲಿ 51 ಚೀಲ, ಬಧ್ರಾವತಿಯಲ್ಲಿ 2796 ಚೀಲ, ಚೆನ್ನಗಿರಿಯಲ್ಲಿ 1787 ಚೀಲ,   ಸಾಗರದಲ್ಲಿ 399 ಚೀಲ, ಹೊಸನಗರ ಮಾತ್ರ ಗರಿಷ್ಟ ಮಾರಾಟಕ್ಕೆ ಬಂದಿದೆ. ಕೆಂಪಡಿಕೆ ತೇಜಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಮಾರಾಟ ಮುಂದೂಡುತ್ತಿದ್ದಾರೆ.

ಕರಿಮೆಣಸು 12

ಕರಿಮೆಣಸು ಧಾರಣೆ:

 • ಕರಿಮೆಣಸು ಧಾರಣೆ ಇಳಿಕೆಯೂ ಇಲ್ಲದೆ, ಏರಿಕೆಯೂ ಇಲ್ಲದೆ ಮುಂದುವರಿದಿದೆ.
 • ಬಹುಷಃ ಇದು ಮುಂದಿನ ತಿಂಗಳ ತನಕವೂ ಹೀಗೇ ಮುಂದುವರಿಯುವ ಸಾಧ್ಯತೆ ಕಂಡು ಬರುತ್ತಿದೆ.
 • ಕ್ವಿಂಟಾಲಿಗೆ ಅತ್ಯಧಿಕ ದರ 49500 – ಸರಾಸರಿ ಬೆಲೆ 48500 ತನಕ ಇದೆ.
 • ಲೀಟರ್ ತೂಕ 550 ಗ್ರಾಂ ಗಿಂತ ಮೇಲೆ ಇದ್ದರೆ, ತೇವಾಂಶ ಮಾಪನ 0.9 ರ ಆಸುಪಾಸಿನಲ್ಲಿದ್ದರೆ ಕಿಲೋ 495 ತನಕ ಲಭ್ಯ.
 • ಸಾಮಾಜಿಕ ಮಾದ್ಯಮಗಳಲ್ಲಿ BLACK PEPPER TRADING  MARKET ಎಂಬ ಫೇಸ್ ಬುಕ್ ಖಾತೆ ಇದ್ದು, ಅದರಲ್ಲಿ ಹಲವು ರೈತರು ತಮ್ಮ ಮೆಣಸಿನ ಗುಣಮಟ್ಟದ  ವಿವರ ಹಾಕಿ ಮಾರಾಟ ಮಾಡುತ್ತಾರೆ.

ಹಳೆ ಅಡಿಕೆಗೆ ಇನ್ನು ಬೆಲೆ ಏರಿಕೆ ಆಗುವುದಿಲ್ಲ. ಹೊಸತಕ್ಕೆ ದರ ಏರುತ್ತದೆ. ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿಕೊಳ್ಳುವುದು ಸೂಕ್ತ. ಉತ್ತಮ ಅಡಿಕೆಯನ್ನು ದಾಸ್ತಾನು ಇಡಿ. ಕರಿ ಗೋಟು, ಪಟೋರಾ, ಬಿಲೇ ಗೋಟು ಇತ್ಯಾದಿಗಳನ್ನು ಮಾರಾಟ ಮಾಡಿ. ಇವು ಬೇಗ ಹಾಳಾಗುತ್ತದೆ.  ಇದಕ್ಕೆ ಉಗ್ರಾಣ ಕೀಟ ಬಂದರೆ ಉತ್ತಮ ಅಡಿಕೆಗೂ ಪ್ರಸಾರವಾಗುತ್ತದೆ. ನಾಳೆ ಮಂಗಳೂರಿಗೆ ಪ್ರಧಾನಿಗಳು ಭೇಟಿ ಕೊಡುವ ಕಾರ್ಯಕ್ರಮ ಇದೆ. ಈ ಸಮಯದಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಸ್ಥಳೀಯ ಮುಖಂಡರು ಕೆಲವು ಮನವಿ ಸಲ್ಲಿಸುವ ಸಾಧ್ಯತೆ ಇದೆ.ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಲ್ಲಿ  ಅಡಿಕೆಗೆ ಸ್ವಲ್ಪ ದರ ಏರಿದರೂ ಏರಬಹುದು. 

Leave a Reply

Your email address will not be published. Required fields are marked *

error: Content is protected !!