ಅಡಿಕೆಗೆ ಬೇಸಿಗೆಯಲ್ಲಿ ಗೊಬ್ಬರ ಕೊಟ್ಟರೆ ಭಾರೀ ಪ್ರಯೋಜನ.
ಅಡಿಕೆ ತೆಂಗು ಗೆ ಹಾಗೆಯೇ ಯಾವುದೇ ಧೀರ್ಘಾವಧಿ ಬೆಳೆಗಳಿಗೆ ಪೋಷಕಗಳನ್ನು ಬೇಸಿಗೆಯಲ್ಲಿ ಕೊಡುವುದು ಅಧಿಕ ಇಳುವರಿ ದೃಷ್ಟಿಯಿಂದ ಉತ್ತಮ. ಇದರಲ್ಲಿ ಬೆಳೆಗಳಿಗೆ ಯಾವುದೇ ಹಾನಿ ಇರುವುದಿಲ್ಲ. ನಾವು ಕೊಡುವ ಪೋಷಕವನ್ನು ಸಸ್ಯಗಳು ಹೀರಿಕೊಳ್ಳಲು ಬೇರಿನ ಭಾಗದಲ್ಲಿ ತೇವಾಂಶ ಇರಬೇಕು. ಇದರ ಫಲಿತಾಂಶ ಅಧ್ಭುತ. ಮನುಷ್ಯ ಪ್ರಾಣಿ ಯಾವುದೇ ಜೀವಿಗಳ ಶರೀರದ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಯ ಆಗುವುದು ಬೆವರುವ ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ಹಸಿವು ಹೆಚ್ಚು. ತಿಂದದ್ದು ಬೇಗ ಜೀರ್ಣ ಆಗುತ್ತದೆ. ಶರೀರ ಹೆಚ್ಚು ಶಕ್ತಿಯನ್ನು…