ಅಡಿಕೆ ಮರದ ಸಿಂಗಾರ ತಿನ್ನುವ ಸಿಂಬಳದಹುಳು ನಿಯಂತ್ರಣ
ಸಿಂಬಳದ ಹುಳುವಿನ ಉಪಟಳ ಇಬ್ಬನಿ ಬೀಳುವ ಚಳಿಗಾಲದಲ್ಲಿ ಹೆಚ್ಚು. ಈ ಹುಳುಗಳು ನೆಲದಲ್ಲಿ ಇರುತ್ತವೆ. ಅವು ಆಹಾರ ಹುಡುಕುತ್ತಾ ಮರವನ್ನು ಏರಿ ಅಲ್ಲಿ ಎಳೆ ಹೂ ಗೊಂಚಲನ್ನು ತಿನ್ನುತ್ತವೆ. ಬರೇ ಅಡಿಕೆ ಹೂ ಗೊಂಚಲು ಮಾತ್ರವಲ್ಲ ಇವು ಆಹಾರವಾಗಿ ಹಣ್ಣು ತರಕಾರಿಗಳನ್ನೂ ತಿನ್ನುತ್ತವೆ. ಇದನ್ನು ನಿಯಂತ್ರಿಸದೆ ಇದ್ದರೆ ಒಂದೆರಡು ಸಿಂಗಾರ ಹಾಳಾಗುತ್ತದೆ. ಇಳುವರಿ ನಷ್ಟವಾಗುತ್ತದೆ. ಬಸವನ ಹುಳುಗಳು, ಸಿಂಬಳದ ಹುಳುಗಳು , ಮಳೆಗಾಲದಲ್ಲಿ ನೆಲದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಇರುತ್ತವೆ. ಹಾವಸೆ ಇತ್ಯಾದಿಗಳು ಇದರ ಆಹಾರ. ಅದನ್ನು ತಿನ್ನುತ್ತಾ…