
ಅಡಿಕೆ ಮರಗಳು ಆರೋಗ್ಯವಾಗಿರಬೇಕಾದರೆ ಬಸಿಗಾಲುವೆ ಅಗತ್ಯ.
ಬಸಿಗಾಲುವೆ ಇಲ್ಲದ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಮಣ್ಣಿನಲ್ಲಿ ನೀರು ಇರಲಿ. ಆದರೆ ಆದು ಗಿಡಗಳ ನಿಂತು ಹಳಸಲು ಆಗಬಾರದು. ಅದನ್ನು ತಡೆಯಲು ಬಸಿಗಾಲುವೆಯೇ ಪರಿಹಾರ. ಬಸಿಗಾಲುವೆ ಮಾಡದ ತೋಟ ಅದು ತೋಟವೇ ಅಲ್ಲ. ನೀರು ಬಸಿಯುವುದಕ್ಕೆ ಮಾತ್ರವಲ್ಲದೆ ಬೇರುಗಳ ಶ್ವಾಸೋಚ್ವಾಸಕ್ಕೂ ಬಸಿ ಗಾಲುವೆ ಬೇಕು. ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಎಷ್ಟು ಪೋಷಕಾಂಶ ಕೊಟ್ಟರೂ ಸ್ಪಂದಿಸದೇ ವರ್ಷದಿಂದ ವರ್ಷ ಇಳುವರಿ ಕಡಿಮೆಯಾಗುವುದು ಉಂಟೇ? ಸಸಿ/ ಮರಗಳ ಶಿರ ಭಾಗ ಸಪುರವಾಗುತ್ತಾ ಬರುತ್ತದೆಯೇ? ಗಿಡ…