ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .
ಹೆಚ್ಚಿನವರ ಅಡಿಕೆ ತೋಟದಲ್ಲಿ ಎಳೆಯ ಕಾಯಿ ಒಡೆದು ಬೀಳುವ ಸಮಸ್ಯೆ ಇದೆ. ಎಲ್ಲರೂ ಸೂಕ್ತ ಪರಿಹಾರಕ್ಕಾಗಿ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಯಾವ ಪರಿಹಾರ ಕೈಗೊಂಡರೂ ಕಾಯಿ ಒಡೆಯುವಿಕೆ ಅಥವಾ ಅಂಡೋಡಕ ಮಾತ್ರ ಕಡಿಮೆ ಆಗುವುದೇ ಇಲ್ಲ. ಕೆಲವರ ಅಡಿಕೆ ತೋಟಗಳಲ್ಲಿ 10-15 % ಫಸಲು ಅಂಡೋಡಕದಿಂದ ಹಾಳಾಗುತ್ತದೆ. ಕಾಯಿ ಬಲಿತಂತೆ ಬುಡದಲ್ಲಿ ಉದುರಿಬಿದ್ದ ರಾಶಿ ರಾಶಿ ಹಾಳಾದ ಅಡಿಕೆ ಕಾಣಸಿಗುತ್ತದೆ. ಕೆಲವರು ಬೋರಾನ್ ಕೊರತೆಯಿಂದ ಹೀಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಸತುವಿನ ಕೊರತೆಯಿಂದ ಹೀಗೆ ಆಗುತ್ತದೆ…