ಒರಿಜಿನಲ್ ಮಂಗಳ ಅಡಿಕೆ ಮರ ಹೀಗಿರುತ್ತದೆ.
ಮಂಗಳ ಅಡಿಕೆ ತಳಿ ಪ್ರಸ್ತುತ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಪರಿಚಯಿಸಲಾದ ತಳಿ ಎಂದೇ ಹೇಳಬಹುದು. 30 ವರ್ಷವಾದರೂ 35-40 ಅಡಿ ಎತ್ತರ. ಹೆಚ್ಚು ಪೋಷಕಾಂಶ ಕೊಟ್ಟಷ್ಟೂ ಹೆಚ್ಚು ಇಳುವರಿ. ಮರದಲ್ಲಿ 4-5 ಭರ್ತಿ ಕಾಯಿಗಳ ಗೊನೆ. ಅಡಿಕೆ ಬೆಳೆಯುವವರ ಅಂಗಳದ ತುಂಬಾ ಅಡಿಕೆ ಹರಡಿದ ಸಮೃದ್ಧಿ ಉಂಟಾದುದೇ ಈ ತಳಿ ಬಂದ ನಂತರ. ಆದರೆ ಈ ಮೂಲ ತಳಿ ಈಗ ಭಾರೀ ಅಪರೂಪವಾಗಿದೆ. ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಬಳಬೆಟ್ಟು ಗುತ್ತುವಿನ ಪ್ರಗತಿಪರ ಕೃಷಿಕರಾಗಿದ್ದ ದಿವಂಗತ…