ಅಡಿಕೆಯ ಮಿಳ್ಳೆ ಉದುರುವುದಕ್ಕೆ ಇದು ಕಾರಣ.
ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವ ಸಮಸ್ಯೆ ಇದು. ಬೆಳೆಗಾರರು ಇದನ್ನು ಉಳಿಸಲು ಯಾವ ಉಪಚಾರಕ್ಕೂ ಸಿದ್ದರು. ಇದಕ್ಕೆ ಈ ತನಕ ಯಾರೂ ನಿಖರ ಕಾರಣವನ್ನು ನೀಡಿದವರಿಲ್ಲ. ಆದರೆ ಯಾರೂ ಪರಿಹಾರ ಇಲ್ಲ ಎಂದು ಹೇಳುವವರಿಲ್ಲ. ಇದರ ಬಗ್ಗೆ ಕೆಲವು ಯಾರೂ ಹೇಳದ ವಿಚಾರಗಳು ಇಲ್ಲಿವೆ. ಅಡಿಕೆಯ ಮರದ ಹೂ ಗೊಂಚಲಿನಲ್ಲಿ ಗಂಡು ಹಾಗೂ ಹೆಣ್ಣು ಹೂವುಗಳು ಇರುತ್ತವೆ. ಗಂಡು ಹೂವು ಉದುರಲಿಕ್ಕೇ ಇರುವುದು. ಹೆಣ್ಣು ಹೂವು ಮಾತ್ರ ಉದುರಬಾರದು. ಆದೆಲ್ಲವೂ ಉಳಿದರೆ ಅಡಿಕೆ ಫಸಲು ಉತ್ತಮವಾಗಿರುತ್ತದೆ. ಆದರೆ…