ಉತ್ತರ ಭಾರತದ ಚಳಿ – ರಾಶಿ 50,000!- ಚಾಲಿ ಅನುಮಾನ.
ಉತ್ತರ ಭಾರತದಲ್ಲಿ ಚಳಿ ಹೆಚ್ಚಾದಾಗ ಸಂಸ್ಕರಣಾ ಉದ್ದಿಮೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯದ ಕಾರಣ ರಾಶಿ ಮತ್ತು ಚಾಲಿ ಎರಡಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಈಗ ಚಳಿ ಕಡಿಮೆಯಾಗಲಿಲ್ಲವಾದರೂ ಕೆಂಪಡಿಕೆ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದೆ. ಚಾಲಿ ಸ್ಟಾಕು ಹೆಚ್ಚು ಇರುವ ಕಾರಣ ತಕ್ಷಣಕ್ಕೆ ಅನುಮಾನ ಎನ್ನುತ್ತಾರೆ. ಚಳಿ ಇದ್ದರೂ ಅಡಿಕೆಗೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ. ಬೆಲೆ ಚೇತರಿಕೆಯ ಹಾದಿಯಲ್ಲಿದೆ. ಗುಟ್ಕಾ ಇತ್ಯಾದಿ ಅಡಿಕೆ ಸೇರಿಸಿದ ಉತ್ಪನ್ನ ತಯಾರಿಸುವಾಗ ಅವು ತೇವಾಂಶ ಎಳೆದುಕೊಳ್ಳಬಾರದು. ವಿಶೇಷ ಚಳಿ, ಇಬ್ಬನಿ ಇದ್ದಾಗ ಅವುಗಳ ಸಂಸ್ಕರಣೆಗೆ…