ಮಳೆ ಬಂತೆಂದು ಚಿಂತೆ ಮಾಡಬೇಡಿ. ಇದರಿಂದ ಬೆಳೆ ನಷ್ಟ ಆಗದು.
ಈಗ ಮಳೆ ಬಂದು ಅಡಿಕೆಯಲ್ಲಿ ಮುಂದಿನ ಫಸಲು ಕಡಿಮೆಯಾಗಿ ನಷ್ಟ ಆಗಬಹುದು ಎಂದು ಆತಂಕದಲ್ಲಿರುವ ಬೆಳೆಗಾರರಿಗೆ ಇದು ಕಿವಿ ಮಾತು.ಬೆಳೆ ನಷ್ಟ ಆಗದು. ಅನುಕೂಲವೇ ಆಗುವುದು. ಎಪ್ರೀಲ್ ತಿಂಗಳಲ್ಲಿ ಮಳೆ ಬರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವಾದರೂ ಹಿಂದೆ ಬಹುತೇಕ ವಿಶೇಷ ದಿನಗಳ ಸಂದರ್ಭದಲ್ಲಿ ಮಳೆ ಆಗುತ್ತಿತ್ತು. ಕಳೆದ ವರ್ಷ ಇದಕ್ಕಿಂತಲೂ ಬೇಗ ಮಳೆ ಬಂದಿದೆ. ಆದರೆ ಫಸಲಿಗೆ ತೊಂದರೆ ಆಗಿರಲಿಲ್ಲ. ಈ ವರ್ಷ ಎಪ್ರೀಲ್ ನಲ್ಲಿ ಮಳೆ ಧಾರಾಕಾರವಾಗಿ ಬಂದಿದೆ. ತಾಪಮಾನ ತುಂಬಾ ಇಳಿಕೆಯಾಗಿದೆ. ಇಂತಹ ವಾತಾವರಣದಿಂದ…