ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?
ಕಳೆದ ಒಂದು ತಿಂಗಳಿಂದ ಕೆಂಪಡಿಕೆ ಧಾರಣೆ ಶೇ.40 ರಷ್ಟು ಕಡಿಮೆಯಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಇದ್ದುದು, ಇಳಿಕೆಯಾಗುತ್ತಾ ಸಪ್ಟೆಂಬರ್ ಕೊನೆಗೆ 6600 ಕ್ಕೆ ಕುಸಿಯಿತು. ಹಾಗೆಯೇ ಕಡಿಮೆಯಾಗುತ್ತಾ ಈಗ 5200-5000 ಕ್ಕೆ ಇಳಿದಿದೆ.ವರ್ತಮಾನ ಪರಿಸ್ಥಿತಿಯಲ್ಲಿ ಇನ್ನೂ ಇಳಿಕೆಯ ಸಾದ್ಯತೆಗಳು ಕಾಣಿಸುತ್ತಿದೆ. ಹಾಗೆಯೇ ಧಾರಣೆ 55,000 ಕ್ಕೆ ಏರಿದ್ದು, ಈಗ ಸರಾಸರಿ-40,000 ದ ಸಮೀಪಕ್ಕೆ ಬಂದಿದೆ. ಎಲ್ಲಾ ಅಡಿಕೆ ಬೆಳೆಗಾರರ ಕುತೂಹಲ ಧಾರಣೆ ಯಾವಾಗ ಏರಬಹುದು ಎಂಬುದು ಒಂದೇ. ಅಡಿಕೆ ಚೇಣಿ ವಹಿಸಿಕೊಳ್ಳುವವರು…